ಎತ್ತು ಎಳೆವುದು ಬಂಡಿ
ನನ್ನ ನಿಮ್ಮ ಬಂಡಿಯ
ಎಳೆದಿವೆ ಜೋಡಿ ಎತ್ತು
ಏನೇ ಹೇರಲಿ
ಯಾರೇ ಏರಲಿ
ಹೇಳುವುದು ಬಂಡಿ - ಹತ್ತು
ಗಾಲಿಯೆರಡರ ಉರುಳು
ಕಾಲಚಕ್ರದ ತಿರುಳು
ಹುಲ್ಲು ಮೇವು ನೀರಕುಡಿಸಿರೆ
ಲೆಕ್ಕಿಸದೆ ಏರು ಇಳಿಜಾರು
ಎಳೆವುದು ನಡೆಯಲು ನಿಮ್ಮ ಕಾರುಬಾರು
ಮರದ ಚಕ್ರಕೆ ಲೋಹದ ಅಚ್ಚು
ಈಗ ಗಾಳಿ ಚಕ್ರದ ಗಾಲಿಯೇ ಮೆಚ್ಚು
ಕಾಲದ ಜೊತೆಗೆ ಗಾಲಿಯೂ ಬದಲು
ಎತ್ತುಹೋಗಿ ಬಂದಿದೆ ಯಂತ್ರದ ನಕಲು
ಎಳೆದವು ಭಾರವ ಬಹುಕಾಲ ಎತ್ತುಗಳು
ತಲೆಮಾರು ಕಂಡವು ಚಕ್ರದ ಉರುಳುಗಳು
ಚಕ್ಕಡಿಗಳು ಆಗುತಿವೆ ಸವಕಲು
ಭಾರಎಳೆದ ಎತ್ತು ಬದಕಲು