Tuesday, March 15, 2016

ಒಂಭತ್ತು ರನ್ನಿಗೆ ಆಲೌಟ್

ಒಂಭತ್ತು ರನ್ನಿಗೆ ಆಲೌಟ್
ಈ ದಿನ (15 ಮಾರ್ಚ್ 2016) ನಮ್ಮವರು (Blue Brigade-team India) ಸೋತದ್ದು ನನಗೆ ನನ್ನ 1987 ರ ನಮ್ಮ ತಂಡದ ಸೋಲು ನೆನಪಾಗುತ್ತಿದೆ.
ಮಣಿಪುರದಲ್ಲಿ ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿದ ದಿನಗಳು. ನಾವು ಎಂಟು ಜನ ಅದರಲ್ಲಿ ನಾಲ್ವರು ಯುವ ವಿಜ್ಞಾನಿಗಳು ನಾಲ್ವರು ಮಧ್ಯವಯಸ್ಕ ವಿಜ್ಞಾನಿಗಳು. ಎದುರಿಗಿನ ತಂಡ 7 ರಿಂದ 12 ನೇ ತರಗತಿ ಶಾಲಾಮಕ್ಕಳು.
ಮಳೆಯಾಗಿತ್ತು... ನಮ್ಮ ಮೈದಾನ ಇದ್ದ ಜಾಗವನ್ನು ಕಡಲೆ ಬೀಜ ಬಿತ್ತಬೇಕು ಅಂತ ಒಮ್ಮೆ ಹಗುರವಾಗಿ ಕೆತ್ತಿ ಉಳಲಾಗಿತ್ತು.. ಮಳೆಯಾಗಿದ್ದರಿಂದ ಉತ್ತ ಉಬ್ಬುಗಳು ತಗ್ಗಿದ್ದವು. ಅಲ್ಲಿಯೇ ಆಡುವುದೆಂದು ಉನ್ನತ ಸಮಿತಿ (ಹಿಹಿಹಿ) ನಿರ್ಧಾರ ಆಯ್ತು.
ಹುಡುಗರ ತಂಡ ನೆಟ್ ಪ್ರಾಕ್ಟೀಸ್ ಮಾಡ್ತಾ ಬಾಲ್ ಅನ್ನ ಕಾಲುವೆಗೆ ಹೊಡೆದಿದ್ದರು.. ಬಾಲು ಒದ್ದೆ...ಪಿಚ ಪಿಚ... ಇದ್ದದ್ದು ಒಂದೇ... ಆದರೂ ಆಡಬೇಕು ಅಂತ ತೀರ್ಮಾನ !!
ಹುಡುಗರ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿಯಿತು...
ನೀವು ನಂಬೊಲ್ಲ... ಐದು ಓವರಲ್ಲಿ 15 ರನ್ನಿಗೆ ಆಲೌಟ್...!!!! :) :) :)
ಸರಿ ನಮ್ಮ ಟೀಂ.. ಸಕ್ಕತ್ ಕಾಂಫಿಡೆಂಟೂ...ಅಂದ್ರೆ ಕಾಂಫಿಡೆಂಟೂ...
ನಾನು ಓಪನರ್ರು... ನನ್ನ ಜೊತೆ ದೆಹಲಿಯ ನನ್ನ ಬ್ಯಾಚ್ ಮೇಟ್ ಗುಪ್ತಾ... (ಎಲ್ರೂ ನಾವಿಬ್ಬರೇ ಚಚ್ಚಿ ಹಾಕ್ತೇವೆ ಎರಡೇ ಓವರ್ ಗೆ ಅಂತ... ಎಲ್ಲಾ ಚಾನಲ್ ಗಳಲ್ಲೂ ಗುಲ್ಲು)
ಎಸ್ಸೆಸ್ಸೆಲ್ಸಿ ಹುಡುಗ ಬಹಳ ಫಾಸ್ಟ್ ಬೌಲರ್ರು... ಬಾಲ್ ಹಾಕ್ದ್...
ಬ್ಯಾಟ್ ಗೆ ಸಿಗಲೇ ಇಲ್ಲ ಬಾಲು...ವಿಕೆಟ್ ಗೆ ಸಿಕ್ತು...ನಾನು ಮೊದಲ ಬಾಲ್ ಔಟ್...!!
ಇನ್ನೊಬ್ಬ ಬಂದ ಒಂದ್ರನ್ನು ತಗೊಂಡ ಮೂರನೇ ಬಾಲ್ ಗೆ ಗುಪ್ತಾ.... ಬೌಲ್ಡ್!!!!...
"ಲೇ..ಆಜಾದಾ..ಬಾಲ್ ಯಾಕೋ ಪುಟೀತಾನೇ ಇಲ್ಲ.... ಪಿಚ್ ಪಿಚ್.... ಛೇ.." ಅಂತ ಹೊಸ ಬ್ಯಾಟ್ಸಮನ್ನಿಗೆ 
"ಹುಶಾರಮ್ಮ ಬಾಲ್ ಜಾಸ್ತಿ ಮೇಲಕ್ಕೇ ಏಳೊಲ್ಲ" ಅಂದ..
ಹೋದವ - ನಾಲ್ಕನೇ ಬಾಲಿಗೆ ಔಟ್... 1 for 3..
ಹೆಂಗೋ ಒಂದು ಓವರ್ ಆಯ್ತು,.. ರನ್ ಅಷ್ಟೇ...ಒಂದೇ....
ಎರಡನೇ ಓವರ್..ಇನ್ನೊಬ್ಬ ನಮ್ಮ ಫ್ರೆಂಡೂ... 7ನೇ ಕ್ಲಾಸಿನ ಪುಟಾಣಿ ಒಬ್ಬ ಸ್ಪಿನ್ನರ್ರು..
ಮೊದಲ ಬಾಲು - .. ಫೋರ್... ಅಬ್ಬಬ್ಬಾ 5 for 3, ಎರಡನೇ ಬಾಲ್ ...ಮತ್ತೆ ಫೋರ್... ಯಪ್ಪಾ....ಎರಡೇ ಓವರ್ ಗೆ ಮುಗ್ಸೋ ಹಾಗೆ ಕಾಣುತ್ತೆ..ಅಂದ್ಕೊಂಡ್ವಿ...
12 ನೇ ಕ್ಯಾಪ್ಟನ್ನು ..7 ರ ಪೋರನ್ನ ಕರೆದು ಕಿವಿಯಲ್ಲಿ ... ಪಿಸಿಕ್ ಪಿಸಿಕ್ ಪಿಸಿಕ್...
ಆ ಪೋರ...ಓಕೆ, ಓಕೆ..ಓಕೆ..ಅಂದ
ಮೂರನೇ ಬಾಲ್....ಎರಡು ಫೋರ್ ಹೊಡೆದ ನಮ್ಮ ಸೈಂಟಿಸ್ಟೂ - ಬೈಲ್ಡ್...!!! :( 
9 for 4.
ನಾಲ್ಕನೇ ಬಾಲು.... ಹೊಸದಾಗಿ ಬಂದ 45 ರ ವಯಸಿನ ಧಾಂಡಿಗ...ಅಲ್ಲಲ್ಲ ದಾಂಡಿಗ ಸೈಂಟಿಸ್ಟ್..ಸಿಕ್ಸ್ ಹೊಡ್ದು ಮುಗಿಸ್ತೀನಿ ..ಅಂತ ಮುಂದಕ್ಕೆ ಹೋಗಿ ಬೀಸ್ದ ಬ್ಯಾಟೂ... ಬ್ಯಾಟಿಗೆ ಸಿಗಲಿಲ್ಲ... ವಿಕೆಟ್ಗೂ ಸಿಗಲಿಲ್ಲ...ಆದ್ರೆ ಕೀಪರ್ ಗೆ ಸಿಕ್ತು..ಅವ್ನೋ ಗೂಟ್ ಮೂರೂ ಕಿತ್ತ್ ಹಾಕ್ದ.... ಹ್ಯಾಪ್ ಮೋರೆ ಹಾಕ್ಕ್ಕೊಂಡ್ ಬಂದ ನಮ್ಮ ಸೈಂಟಿಸ್ಟೂ..
9 for 5..
ಐದನೇ ಬಾಲಿಗೆ 9 for 6,
ಆರನೇ ಬಾಲಿಗೆ, 9 for 7
7 ನೇ ಕ್ಲಾಸಿನ ಪೋರ...ಹೀರೋ... 8 ರನ್ನಿತ್ತು 4 ವಿಕೆಟ್ ಪಡೆದ ಹೀರೋ...(ಅದ್ರಲ್ಲಿ ಅವ್ರಪ್ಪನ ವಿಕೆಟ್ಟೂ ಇತ್ತು!!!)
ಆಲೌಟ್ ಆದ ನಾವು 16 ರನ್ ಇರ್ಲಿ...ಡಬಲ್ ಫಿಗರ್ರೂ ಮುಟ್ಲಿಲ್ಲ..
ಆಗಿದ್ದಿಷ್ಟೇ... ಬಾಲ್ ಅವರು ಆಡುವಾಗ ಸ್ವಲ್ಪ ಪುಟೀತಿತ್ತು... ನಾವು ಆಡೋ ಹೊತ್ತಿಗೆ ಪಿಚ್ ಪಿಚ್... !!!
ಎರಡು ಫೋರ್ ಸಿಕ್ಕಿದ್ದು... ಆ 7 ರ ಪೋರ...ಫುಲ್ ಟಾಸ್ ಹಾಕಿದ್ರಿಂದ... ಅದಕ್ಕೇ ಹುಶಾರಾದ ಕ್ಯಾಪ್ಟನ್ ಅವನ ಕಿವಿಯಲ್ಲಿ ಪಿಸಿಕ್ ಪಿಸಿಕ್ ಪಿಸಿಕ್ ಮಾಡಿದ್ದು...
"ಲೋ ಸುಮ್ನೆ ಅವರ ಬ್ಯಾಟಿಗೆ ಸಿಗದಷ್ಟು ದೂರಕ್ಕೆ ಒಂದು ಪಿಚ್ ಹಾಕಿಸು..ಅಷ್ಟೇ..ನೋಡು ಬೌಲ್ಡ್ ಆಗ್ತಾರೆ"