Sunday, September 30, 2012

ಕವಿಗೋಳ್

(John Keats, Pic Source: Web ಚಿತ್ರ : ಅಂತರ್ಜಾಲದ ಕೃಪೆ)
 
 

ಕವಿಗೋಳ್
 
ಕವಿಗಳು ಬಯ್ತಾರೆ ನ್ಯೂಟನನ್ನ
ಕಾಮನ್ಬಿಲ್ಲಂದಾನೇ ಕೆಡಿಸ್ಬಿಟ್ನಣ್ಣ
ಗುಂಡ ಅಂದ, ಏನ್ಬಣ್ಣ ಬಳುದ್ನಾ ಅವ್ನು?
ಕಲ್ಪ್ನೆ ಮಾಡಾಕಾಗ್ದೋವ್ನು ಇಂಗೆ
ಗೂಬೆ ಕೂಡ್ಸಿದ್ರೆ ಇಜ್ಞಾನಿಗಳ್ಮೇಲೆ ಎಂಗೆ?
 
ಇನ್ನೊಬ್ಬ ಅಂತಾನೆ ರುದ್ಯಾ ಪಂಪಂತೆ
ರಕ್ತಾನ ಪುಟ್ಬಾಲಿಲ್ದೇನೆ ಎತ್ತಾದಂತೆ
ಕವಿ ಯಾಕೋ ಒಸಿ ಅಚ್ಕಂಡವ್ನೆ ಮನ್ಸಿಗೆ
ರುದ್ಯದ್ ಮಾತ್ ಎಂಗ್ತರ್ಲಿ ನಾ ಕನ್ಸಿಗೆ?
 
ನಮ್ರಾಮಣ್ಣ ಅಂದ ಬೆಳಕ್ನಾಗೆ ಏಳ್ಬಣ್ಣ
ನೋಡ್ಬೇಕಂದ್ರೆ ಕೊಡ್ತೀನಿ ಪ್ರಿಜ಼ಂ ಕಣ್ಣ
ಕವಿ ಕೂತ ತಲೆಮ್ಯಾಲೆ ಕೈ ಒತ್ಕೊಂಡು
ಗುಲಾಬಿನಾ ಎಂಗಪ್ಪಾ ಕೊಡ್ಲಿ ಕಿತ್ಕಂಡು?
 
ನಮ್ ಜಲ್ನಯ್ನಾ ಯೋಳ್ತಾರೆ ಇನ್ನೊಂದಿಸ್ಯಾ
ಸ್ವಾತಿ ಅನಿ ಅಲ್ಲೋ ಮಾಡೋದ್ಮುತ್ತು ಬಸ್ಯಾ
ಮಳ್ಕಣ ಸೇರ್ಕಂಡ್ರೆ ಚಿಪ್ನಾಗೆ, ಆಗೋದು ಮುತ್ತು
ಕವಿಗೋಳ್, ಎಂಗ್ಮುಗ್ಸೋದು ಈ ಕವ್ನದ್ ಸುತ್ತು

Sunday, September 16, 2012

ನಮ್ಮ ಗಣಪತಿ ಹಬ್ಬ

ಬ್ಲಾಗ್/ಮುಖ ಪುಸ್ತಕ  ಸ್ನೇಹಿತರೇ,
ಎಲ್ಲರಿಗೂ ವಿಘ್ನವಿನಾಶಕ/ಏಕದಂತ/ಮೂಷಿಕವಾಹನ/ಗಣನಾಯಕ/ಗಣಪತಿ ಬಪ್ಪ
ಶುಭ ಶುಭ ಶುಭವನ್ನೇ ಉಂಟು ಮಾಡಲಿ ಬರಲಿರುವ ಎಲ್ಲ ವಿಘ್ನಗಳನ್ನೂ ನಿವಾರಿಸಲಿ.
ಈ ಹಬ್ಬದ ಸಂದರ್ಭದಲ್ಲಿ ನನ್ನದೊಂದು ಪುಟ್ಟ (ಉದ್ದ) ಕವನ.

 

Tuesday, September 4, 2012

ದಿಲ್ ಕೊ ದೇಖೋ ಚೆಹರಾ ನ ದೇಖೋ



“ಹಾಯ್ ಡೂಡ್” ಹೌ ಆರ್ ಯೂ...?

What yaar what are you doing this evening….??

What Daa…looking smartaaaa!!!!! Accept my friendship….

ಇವು ಖಾಸಾ ಸ್ನೇಹಿತನ ಫೇಸ್ ಬುಕ್ ಗೆ ಬರ್ತಿದ್ದ ಚಟ್ಪಟಾ ಮೆಸೇಜ್ ಗಳು....

ಹೊಟ್ಟೆ ಉರಿಯೊಲ್ವಾ..?? ಅದೂ ಸುಂದರ ಹುಡುಗಿಯರು, ಲಲನೆಯರು, ಜಸ್ಟ್ ಮ್ಯಾರೀಡ್ ಹುಡ್ಗೀರು, ದಿಲ್ದಾರ್ ಆಂಟಿಗಳು.... ಅಬ್ಬಬ್ಬಬ್ಬಾ....!!!!

ಗಾಯದ ಮೇಲೆ ಬರೆ ಅನ್ನೋ ಹಾಗೆ ...

ನನಗೊಬ್ರು ಮೆಸೇಜ್ ಹಾಕಿದ್ರು “ಅಂಕಲ್ ನಿಮ್ಮ ಕವನಗಳು ತುಂಬಾ ಚನ್ನಾಗಿರುತ್ತವೆ, ಆದ್ರೆ ನೀವು ಹಾಕೋ ಕೆಲ ರಸಿಕ ಕವನ-ಚುಟ್ಕಗಳು ನಿಮ್ಮಂತಹ ವಯಸ್ಸಾದವರಿಗೆ ಒಪ್ಪೊಲ್ಲ... ಆದರೂ ಯಂಗ್ ಆಗಿದ್ದಾಗ ನಿಮ್ಮ ಕರಾಮತ್ತು ಜೋರಾಗಿದ್ದಿರಬಹುದು ಅನ್ನೋದು ಮಾತ್ರಾ ಊಹಿಸ್ಕೋಬಹುದು...!!!

ಛೆ ಛೇ... “ಯಂಗ್ ಆಗಿದ್ದಾಗ..??!!” ಅಂದ್ರೆ ಹೆಂಗಾಗ್ಬೇಡ ನನಗೆ...??

ಅಲ್ಲ, ನನ್ನ ಸ್ನೇಹಿತ ಅಬ್ಬಬಾ ಅಂದ್ರೆ ನನಗಿಂತ ಒಂದು ಮೂರ್ನಾಲ್ಕು ವರ್ಷ ಚಿಕ್ಕವನಪ್ಪಾ.., ಹಂಗಂತ ನನ್ನ ಅಂಕಲ್ ಮಾಡಿ... ಅವನನ್ನ “Dude” ಸಿಂಹಾಸನಕ್ಕೆ ಏರ್ಸೋದು ಸರಿನಾ...?? ನೀವೇ ಹೇಳಿ...!!!

ನನಗೆ ನನ್ನ ಸ್ನೇಹಿತನ ಈ ಅಪಾರ ಜನ (ಜನಾನ) ಮನ್ನಣೆ, ಲವ್ವು ಸಿಕ್ತಾ ಇರೋದರ ಗುಟ್ಟು ಅವನೇ ಬಿಟ್ಕೊಟ್ಟ. ಎತ್ತರಕ್ಕೆ ಗಡದ್ದಾಗಿರೋ ಇವನನ್ನ ನೋಡಿರೋರು...ಸಾರ್ ನೀವು ಸಿನಿಮಾದಲ್ಲಿ ’ವಿಲನ್’ ಪಾತ್ರ ಯಾಕೆ ಮಾಡಬಾರದು ಅಂತ ಕೇಳಿದ್ರಂತೆ.... ಅದೂ ಅವನೇ ಹೇಳಿದ್ದು...

ಅಬ್ಬಾ..!! ಹೊಟ್ಟೆಗೆ ಹಾಲು ಸುರಿದಂತೆ ಆಯ್ತು.. ಉರಿನೂ ಕಮ್ಮಿ ಆಯ್ತು ಅನ್ನಿ...,

ವಿಷಯ ಏನು ಗೊತ್ತಾ..?? ಅವನು ತನ್ನ ಪ್ರೊಫೈಲಲ್ಲಿ – ಅತ್ಗೆ ತದ್ರೂಪು ಇವ್ನ ಗೆಟಪ್ಪು (ಇವ ನಾನು ತಲೆ ಎತ್ತಿ ನೋಡೋ ಹಾಗೆ ಎತ್ತರದ ಆಳು...ಇದೂ ಕಾರಣಾನೇ ನನ್ನ ಹೊಟ್ಟೆ ಉರಿಗೆ..ಊಂ...)

ಇರುವ ತನ್ನ ಮಗನ ಫೋಟೋ ಹಾಕಿದ್ದ. ಅದೇ ತಡ...

ತಕಳಪ್ಪಾ ಎಲ್ಲಾ ಕಡೆಯಿಂದ ಫ್ರೆಂಡ್ ರಿಕ್ವೆಸ್ಟೂ... ಅದ್ರಲ್ಲಿ ೬೦% ಹುಡ್ಗೀರಾದ್ರೆ, ೩೦% ಯಂಗ್ ಆಂಟೀರ್ದು... ಇನ್ನು ೧೦% ನಮ್ಮಂಥೋರದ್ದು...!! ಯಾಕೆ ಹೇಳಿ..?? ಇವನ ನೆಪದಿಂದಾದ್ರೂ ಲಲನೆಯರು ನನ್ನ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡ್ಕೋತಾರೋ ಅನ್ನೋ ಆಸೆಗೆ... ಊಂ....!!

ಹಾಗೇ ಸುಮಾರು ಜನಕ್ಕೆ (ಜನಾನಕ್ಕೆ) ನಾನು ಇಸಿ ಫ್ರೆಂಡು ಅಂತ ಹೇಳ್ಕೊಂಡೇ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಸ್ಕೊಂಡಿದ್ದೀನಿ... (ಅಂದಹಾಗೆ, ಜನಾನಾ ಅಂದ್ರೆ ಸ್ತ್ರೀ ಸಮೂಹ)


ಈ ಜನಾನೇ ಹೀಗೆ...

ಮುದ್ದಾದ ಮುಖ (ಗೋರಾ ಗಾಲ್) ನೋಡಿದ್ರೆ ಗೋಲ್ ಆಗಿ ಬಿಡ್ತಾರೆ.

ಅಲ್ಲ ರೀ, ಕರಿಯ ಕೃಷ್ಣನ್ನ ಗೋಪಿಯರು ಮುತ್ಕೋತಾಯಿದ್ರು ಅಂದ್ರೆ ಹ್ಯಂಗ್ರೀ ನಂಬೋದು...?? ನನ್ನ ನೋಡಿದ್ರೆ ದೂರ ಓಡ್ತಾರೆ...!!!??

ಹೋಗ್ಲಿ ಬಿಡಿ, ಆದರೆ ಈ ನನ್ ಸ್ನೇಹಿತ ಗುಣದಲ್ಲಿ ಅಪರಂಜಿ ಅದ್ರಲ್ಲಿ ಎರಡು ಮಾತಿಲ್ಲ... ಊಂ..

ಅದು ಅಪರಿಚಿತ ಆದ್ರೂ ಕಷ್ಟದಲ್ಲಿದ್ರೆ ಕರಗ್ತಾನೆ, ಸಹಾಯಕ್ಕೆ ಮುಂದಾಗ್ತಾನೆ. ಅಪಘಾತ ಆಗಿ ರಸ್ತೆಲಿ ಒದ್ದಾಡೋರನ್ನ ಕಂಡು ಅವ್ರ ಪ್ರಲಾಪವನ್ನ, ಅವಸ್ಥೆ ನ ವೀಡಿಯೋ, ಫೋಟೋ ಮಾಡಿ ಅಪ್ ಲೋಡ್ ಮಾಡೋ ಆಸಕ್ತಿ ಇರೋ ಜಗಳ ಮಧ್ಯೆ ಇವನು ಅಪವಾದ. ತಕ್ಷಣ ತನ್ನ ಕಾರ್ ನಿಲ್ಲಿಸ್ತಾನೆ, ಗಾಯಾಳನ್ನ ಆಸ್ಪತ್ರೆಗೆ ಸೇರ್ಸಿ ಅವರಿಗೆ ಚಿಕಿತ್ಸೆ ಆಗಿ ಯಾರಾದ್ರೂ ಅವರ ಕಡೆಯವರು ಅವರನ್ನ ನೋಡ್ಕೊಳ್ಳೋಕೆ ಬರೋವರೆಗೆ ಕಾಳಜಿ ವಹಿಸ್ತಾನೆ!! ಊಂ...!! ಇದಲ್ವೇ ಮಾನವತೆ ಮೆರೆಯೋ ಗುಣ..??

ಈಗ ಮೊನ್ನೆ ಪ್ರೊಫೈಲ್ ಚೇಂಜ್ ಮಾಡವ್ನೆ... ನನಗೆ ಇನ್ನೂ..ಭರ್ತಿ ಸಮಾಧಾನ ಆಯ್ತು..ಆಗ..

ಆದರೆ ಇವನ ಫ್ರೆಂಡ್ ರಿಕ್ವೆಸ್ಟ್ ನಿಂತಿಲ್ಲಾರೀ.... ಊಂ..!!!!

ಇನ್ನೂ ಖುಷ್ ನನಗೆ ಈಗ, ಯಾಕೆ ?? ಮನುಷ್ಯ ಅಂತಹವನ್ರೀ, ಮನಸಿಗೆ ಹತ್ತಿರ ಆಗ್ಬಿಡ್ತಾನೆ ಮೊದಲನೇ ಸಲ ಭೇಟಿ ಆದರೂ...!! ಇನ್ನು ಫ್ರೆಂಡ್ ರಿಕ್ವೆಸ್ಟ್ ಅತಿಶಯೋಕ್ತಿ ಆಲ್ಲ ಅಲ್ವಾ???

ಅವನ್ನ ನೋಡಿದ್ರೆ ಮತ್ತೆ ಇನ್ನೊಬ್ಬ ಬ್ಲಾಗ್ ಠಕ್ಕ ಇದ್ದಾನೆ, ಏನು ನಯ?? ಏನು ನಾಜೂಕು ??? ಏನು ಜ್ಞಾನ ಪ್ರದರ್ಶನ...!!! ಅಬ್ಬಬಬ್ಬಾ ,,,, ಅಷ್ಟೇ ನಯ ವಂಚಕ, (ಇವನ ಹುಡುಕಾಟಕ್ಕೂ ನನ್ನ ಸ್ನೇಹಿತ ಹಲವರಿಗೆ ಹೆಲ್ಪ್ ಮಾಡ್ತಿದ್ದಾನೆ ಅನ್ನೋ ವಿಷಯ ಬೇರೆ...) ಇವನ ಬಗ್ಗೆ ನೆನಪಿಸ್ಕೊಂಡ್ರೆ...

ನನಗೆ ನೆನಪಾಗೋ.. ಹಿಂದಿ ಹಾಡು....

“ದಿಲ್ ಕೊ ದೇಖೋ ಚೆಹರಾ ನ ದೇಖೋ

ಚೆಹರೋಂನೆ ಲಾಖೋಂಕೊ ಲೂಟಾ...

ದಿಲ್ ಸಚ್ಚಾ ಔರ್ ಚೆಹ್ರಾ ಝೂಟಾ...”