ಕಪ್ಪು
ಸುಂದರಿ..
ಕಪ್ಪು
ಸುಂದರಿ..
ನನ್ನ ಒಲವಿನ
ಕಿನ್ನರಿ..
ಕಪ್ಪು
ಕಪ್ಪು ಎಂದೇಕೆ
ಮುಖವ ಹಿಂಡುವಿರಿ...??
ಆಹಾ ಆ ಮೊದಲ
ನೋಟ..
ಆ
ವೈಯ್ಯಾರದ ಮೈಮಾಟ..!!
ಮಿರುಗುವ
ಮುದ್ದು ಬರುವ ಮೊಗ
ಹೊಳಪಲಿ
ಕಳೆದಳೆದ ಅಂಗಾಂಗ..
ಕೈ
ಇಟ್ಟರೆ ಜಾರುವ ನುಣುಪು
ನಿಂತರೂ
ನಡೆದರೂ ಎಂಥ ಒನಪು?!!
ಏಕೋ ಏನೋ
ಮೈಮರೆತೆ
ನೋಡ
ನೋಡುತ್ತಲೇ ನಿಂತೆ
ಚಿವುಟಿದಳು
ನನ್ನವಳು ಪಕ್ಕೆ..
ನನ್ನ
ಕಣ್ಣಿಗೆ ಕಟ್ಟಿತ್ತು ಆ ಕಪ್ಪು ಚುಕ್ಕೆ
ಹೊರಟೆ
ನನ್ನವಳ ಬಿಟ್ಟು ಅವಳ ಜೊತೆ
ಮೊಡದ
ಮೇಲೆ, ಆಗಸದಲಿ ತೇಲಿದಂತೆ
ನನ್ನ
ಕಪ್ಪು ಸುಂದರಿಯ ಜೊತೆ ನನ್ನ ನೋಡಿ
ದಾರಿಹೋಕರಿಗೂ
ಈರ್ಷೆ, ಮಾಡಿದಳು ಮೋಡಿ
ಒಮ್ಮೆ
ಒಂದು ಸುತ್ತಾಡಿ ಬಂದೆ ಜೊತೆ
ಈಗ ನನ್ನವಳಿಗೂ
ನಮ್ಮಗಳಿಗೂ ಹಿತೆ
ಒಂದೇ
ದಿನದಲ್ಲಿ ನನಗೆ ಬಹುಪ್ರಿಯೆ
ನಮ್ಮನೆಯವರೂ
ತೋರಿದ್ದಾರೆ ದಯೆ
ಎಲ್ಲಾ
ಹೋಗ್ತೀವಿ ಜೊತೆಯಾಗಿ ಒಟ್ಟಿಗೆ
ಕಪ್ಪು
ಸುಂದರಿ ಬಹುಪ್ರಿಯೆ ನಮ್ಮ ಮಟ್ಟಿಗೆ
.........??????...........
ಉತ್ತರಕ್ಕೆ... ಈ ಲಿಂಕನ್ನು ಕ್ಲಿಕ್ ಮಾಡಿ....