ಭಾವನೆಗಳು ಮೂಕವಾಗಿರುವಾಗ
ಮನಸ ಮುದಿಸುವ
ಕನಸ ಹೊದಿಸುವ
ಮಾತೊಂದ ಹೇಳುವುದೆಂತು?
ಮಂಜು ಕವಿದಿರುವಾಗ
ಸಂಜೆ ಕತ್ತಲಡವಿಯಲಿ
ತಡ-ತಡವಿ ಎಡವಿ ಮುನ್ನಡೆವಾಗ
ಕಲ್ಲಮುಳ್ಳಹಾದಿಯಲಿ
ಹುಲ್ಲಮೆತ್ತೆಯೆಂದೆಣಿಸಿ
ನಿನ್ನ ಬಳಿಗೋಡಿ ಬರುವುದೆಂತು?
ಕಣ್ಣರೆಪ್ಪೆಯು ನೀನು
ಮನದ ಮಿಡಿತವು ನೀನು
ಬರಿದೇ ಉಬ್ಬಿಸಿ ಕಣ್ಣಮುಚ್ಚಿರುವಾಗ
ಮನದ ಹಾಡನು
ಎವೆಯ ಕನಸನುಚಿತ್ತ ಚಿತ್ರವನು ನಾ ಬಿಡಿಸಲೆಂತು?