ಆಗಲಿ ಸಾರ್ಥಕ ಕನಸಲ್ಲಿ ವಿಹರಿಸಿದ್ದಿಲ್ಲಿ ಮನಸ-ಮನಸು ಬೆಸೆದು ಕೈ-ಕೈ ಹಿಡಿದು, ಸಂಜೆ ಕತ್ತಲಾದದ್ದೂ ಅರಿಯದ ಮನ ಮುದಗೊಂಡದ್ದೂ ಇಲ್ಲಿ. ಅದೇ ಈ ಒಂಟಿ ಮರ ಈ ಒಂಟಿ ಬೆಂಚು ನಮ್ಮಿಬ್ಬರನು ಜಂಟಿಮಾಡಿ ಹಿತ ನೆಳಲ ನೀಡಿ ಬಿಡಿಸದ ಬಂಧ ಬೆಸೆದದ್ದೂ ಇಲ್ಲಿ. ನಮ್ಮಂತೆ ಎಷ್ಟು ಮನ ಮಿಡಿದಿವೆಯೋ ಇಲ್ಲಿ..? ಎಷ್ಟು ಒಂಟಿಗಳು ಸೇರಿ ಜಂಟಿಯಾಗಿವೆಯೋ ಇಲ್ಲಿ..? ಟೊಂಗೆ ನೀಡಿವೆ ಎಲೆ-ಹಸಿರು ಕೆಳ-ಮೇಲ್ ನೆಲಸಿದವಗೆ ಉಸಿರು ಬೇರು ಹಿಡಿದಿವೆ ಮಣ್ಣ ಕೊರೆತ ನೆಳಲು ತಣ್ಣನೆ ತಂಪು. ಸಾರ್ಥಕವಾದರೆ ಸಾಕು ನಮ್ಮೀ ಬಾಳು ಈ ಒಂಟಿ ಮರದಂತೆ, ಅದರ ಹಸಿರೆಲೆಯಂತೆ, ಬೇರಂತೆ ನೆಳಲಂತೆ.. ಕಡೇ ಪಕ್ಷ ಈ ಬೆಂಚಂತೆ.. | Destiny Oh the light! Sunny and so bright to see the twinkle the magic of magnets and hope so up right, I could see in your Sparkling sight… No wonder, we sat With hand-in hand Under the lonely tree With green and shadow Like the magic wand. I still feel the virgin Warmth of our breath On that lonely bench Where we longed to sit The day’s gone and So the sunny light But the souls and feelings We hold and nurtured Are always verdant Like the tree, the Sun, The shadow and the Lonely Bench | पेड् तलॆ-प्यार् पलॆ वॊह् शीतल् सी साया झुलस्तॆ किर्णोंकॊ रोकॆ फैलाकॆ बाहे दूर् तक् ममता की आंचल् सा मॆह्कॆ अकेले थे दोनों, मैं तुम् और् अकॆला था बॆंच् बना हसीं मिलन का ऎह् मंच् अकॆलोंका साथ्, पिया का ऎह् हाथ्, मौसम् की बात् टहल्ना यूं साथ्.. पंची जानॆ कितने पर्देस् गयॆ अप्नॆ बच्चोंकॆ भी घर् बस् गयॆ पर् हम् सॆ न छूठा न पेढ् हम् सॆ रूठा न बना बॆंच् कभी झूठा वही साया, वही पेढ्, वही बॆंच् ऎक् बंधन् सा अनूठा. |
Wednesday, October 12, 2011
ತ್ರಿವಳಿ ----THREE More for the PIC
Subscribe to:
Posts (Atom)