ವಾಹ್-ವೈರಾಣು
ಏನು ಹೇಳಲಿ ಇದೊಂದು ಜೀವಿ
ಅತಿಸೂಕ್ಷ್ಮ ಇದುವೇ ವೈರಾಣು
ಬೇಕು ಇದರ ಬದುಕಿಗೆ ಜೀವಕೋಶ
ಇಲ್ಲವೇ ಬೇಕು ಕಡೇ ಪಕ್ಷ ಜೀವಾಣು
ಡಿ ಅಥವಾ ಆರ್ ಎನ್ ಎ ಇದರ ಜೀವಾಳ
ಜೀವಕೋಶದ ಒಳಗೆ ಸಿಗುತ್ತದೆ ಬಂಡವಾಳ
ತನ್ನ ಡಿ ಅಥವಾ ಆರ್ ಎನ್ ಎ ಹೊರ ಕವಚ
ಅದಕೇ ಒಳಹೋಗಲು ಹಾಕುವುದು ಹೊಂಚ
ಬಂಡವಾಳ ಅತಿಥೇಯ ಜೀವಿಯಿಂದ ಕದ್ದು
ಸಂಕೇತ ತನ್ನದು ಕೆಲಸ ಜೀವಕೋಶದ್ದು
ಹೊದಿಸುತ್ತೆ ತಯಾರಾದ ಪ್ರೋಟೀನ್ ಪದರ
ಮರಿ ವೈರಾಣು ಹೊರಬರುತ್ತೆ ಕೊಟ್ಟು ಗುದ್ದು
ಇಲ್ಲವಾದರೆ ಉಡೆದು ಜೀವಕೋಶದ ಉದರ
ಮರಿ ವೈರಾಣು ಮುಂದುವರೆಸುತ್ತೆ ಸತತ ಕ್ರಿಯೆ
ಪಕ್ಕದ ಜೀವ ಕೋಶಕ್ಕೆ ಹೊಕ್ಕು ಮತ್ತದೇ ಮಾಯೆ
ಸಾವಿರಾರು ಮರಿ ವೈರಾಣುಗಳು ಹುಟ್ಟುವುದು ದಿಟ
ಜೀವಕೋಶ ತೋರದಿದ್ದರೆ ಅದನು ತಡೆಯುವ ಹಟ
ಜೀವಕೋಶ ಕ್ರಿಯೆಗೆ ಅಡಚಣೆ, ಆಗುವುದು ಭಂಗ
ರೋಗ ಹಿಡಿದು ಜಡಗಟ್ಟು ಕೋಶ, ಅಂಗ ಪ್ರತಿ ಅಂಗ
ರೋಗನಿರೋಧಕ ಉತ್ತೇಜಿತಗೊಳ್ಳಲೇ ಬೇಕು ಆಗ
ಇಲ್ಲವಾದರೆ ವೈರಾಣು ತಿಂದುಬಿಡುತ್ತೆ ಜೀವಿಯ
ಬೇಗ