ಮೆಳ್ಳ-ಗಣ್ಣು
ಲುಕಿಂಗ್ ಅಟ್ ಲಂಡನ್ ಟಾಕಿಂಗ್ ಅಟ್ ಟೋಕಿಯೋ ಅಂತಾರೆ
ಬಾಯಲ್ಲಿ ಬೆಣ್ಣೆ ಕಂಕ್ಳಲ್ಲಿ ದೊಣ್ಣೆಯ ಛಂದಗಣ್ಣಿಗಿಂತ ನನ್ನದೇ ಖರೆ
ಕುಳ್ಳ
ಕಳ್ಳನ್ನ ನಂಬಿದ್ರೂ ಕುಳ್ಲನ್ನ ನಂಬಬ್ಯಾಡಿ ಅನ್ನೋ ಮಂದಿಗ್ ಪ್ರಶ್ನೆ ನಂದು
ಎತ್ರೆತ್ರ ಕುರ್ಚಿ ಭರ್ತಿ ಚುನಾಯಿಸಿ ಬರೋ ತಾಯ್ಗಂಡ್ರನ್ನ ಕೇಳಿ ಇಂದು
ಮಕಮಲ್ ಟೋಪಿ
ಹೇಳ್ತೀರಲ್ಲಾ ?ಗಾರುಡಿಗ ಹಾಕ್ತಾನೆ ಹುಷಾರ್ ಎಲ್ಲಾರ್ಗೂ ಮಕಮಲ್ ಟೋಪಿ
ನಾನು ಹೆಚ್ಚಂದ್ರೆ ಹತ್ತು, ಕೋಟ್ಯಾಂತರ ದೋಚಲ್ವೆ ಹಾಕ್ಕೊಂಡು ಗಾಂಧಿ ಟೋಪಿ
ತಿಗಣೆ
ತಾನು ಬದುಕೋಕೆ ಸ್ವಲ್ಪ ಹೀರ್ಕೊಂಡ್ರೆ ರಕ್ತ, ಸಾಯ್ಸೇ ಬಿಡ್ತೀರಾ!!, ಛೀ ತಿಗಣೆ
ಜೀವನ ಪೂರ್ತಿ ನೌಕ್ರಿ ಮಾಡಿ ಪೆನ್ಶನ್ಗೆ ಸತಾಯ್ಸೋವಾಗ ಕಾಣೊಲ್ವೇ ಆ ಬವಣೆ?
ಏನಂತೀರಾ?
ಕಣ್ಕಾಣ್ದೆ ಇದ್ರೆ ಕುರುಡ ಅಂತೀರ, ಕಿವಿ ಕೇಳದೆ ಇದ್ರೆ ಕಿವುಡ
ಎಲ್ಲಾರೆದ್ರುಗೇ ದೋಚೋರ್ನ ಕಂಡೂ ಸುಮ್ನಿರೋನು ಮೂಢ