ಚಿತ್ರ ಕೃಪೆ: ಅಂತರ್ಜಾಲ
ಮಿತ್ರರೇ... ಪ್ರೇಮಿಗಳ ದಿನ ಒಂದು ಸೂಚಕವಾಗಿ ರೋಚಕವಾಗುತ್ತಿರುವುದು ಕೆಲವರಿಗೆ ಅತಿರೇಕವೆನಿಸಬಹುದು ಆದರೆ ಪಡ್ಡೆ ಯುವಕ ಮತ್ತು ಗರಿಗೆದರಿದ ಯುವತಿಯರಿಗೆ ಅಲ್ಲ.... ಇದೊಂದು ಮೋಜಿನ ದಿನ.. ಬೆರೆಯುವ ದಿನ ಮತ್ತು ಉಳ್ಳ-ಸಿರಿಮದ-ಅಮಲಿನವರಿಗೆ ಅತಿರೇಕದ ದಿನವೆನ್ನುವುದೂ ಅಸತ್ಯವೇನಲ್ಲ. ಅಲ್ಲವೇ?
ಆದರೆ ನಾನು ಹೇಳ ಹೊರಟಿರುವುದು ರೋಚಕ ಮತ್ಸ್ಯ ಜಗತ್ತಿನ ಒಂದು ಸ್ವಾಭಾವಿಕ ಕ್ರಿಯೆಯ (ಹಲವು ಅಕ್ವೇರಿಯಂ ಆಸಕ್ತರು ಹವ್ಯಾಸಿಗಳು ನೋಡಿರುವ) ಬಗ್ಗೆ!!!
ಅದೇ ಕಿಸ್ಸಿಂಗ್ (ಮುತ್ತಿಡುವ, ಚುಂಬಿಸುವ) ಗೌರಾಮಿಗಳ ಬಗ್ಗೆ.... ಏನು ?? ನಿಜ ಕಣ್ರೀ....
ಇದು ಮೀನಿನ ಒಂದು ಸ್ವಾಭಾವಿಕ ಸ್ವಭಾವದ ವಿವರ ಅಷ್ಟೇ.... ಛೇ!!! ಆಂಟಿ ಕ್ಲೈಮ್ಯಾಕ್ಸ್ ಅಂದ್ರಾ...?? ಅಲ್ಲ ಬಿಡಿ ಕಲಿಯುವವರಿಗೆ... ಇದು ...ಇಂಟರೆಸ್ಟಿಂಗ್... ಏನಂತೀರಾ..???
ಹಾಂ... ಈಗ ವಿಷಯಕ್ಕೆ ಬರೋಣ.
ಈ ಚಿತ್ರ ಮತ್ತು..ಈ ವೀಡಿಯೋ ನೋಡಿ...ಆನಂದಿಸಿ... ಆ ಮೇಲೆ ..ಹಾಂ..ಹಾಂ..
ನಿಜಾಂಶ ತಿಳಿಸ್ತೀನಿ...ಓಕೆ... ಸಿಟ್ ಬ್ಯಾಕ್ ರಿಲ್ಯಾಕ್ಸ್ ಅಂಡ್ ವಾಚ್...
ನೋಡಿದ್ರಾ..? ಹ್ಯಾಗನ್ನಿಸ್ತು... ಸೋ ಕ್ಯೂಟ್ (ಏನು ಸೊಗಸು )ಅನ್ನಿಸ್ತಾ..?? ತಡೀರಿ ತಡೀರಿ..... ಮುಂದಕ್ಕೆ ಓದಿ....
ಇದು ಮೊದಲೇ ಹೇಳಿದ ಹಾಗೆ ಗೌರಾಮಿ ಜಾತಿಯ ಮೀನು. ಇದನ್ನು ನೈಜಎಲುಬಿನ ಮೀನಿನ ಗುಂಪಿಗೆ ಸೇರಿಸಲಾಗಿದೆ... ಏನು..?? ಹೂಂ..ರೀ... ಮಿಥ್ಯ ಎಲುಬು ಇರೋ ಮೀನೂ ಇದೆ... ಅಂದರೆ ಮೆತ್ತನೆಯ ಅಥವಾ ಗಡುಸಲ್ಲದ ಎಲುಬಿನ ಮೀನು ಸಹಾ ಇವೆ... ಯಾವುದು ಅಂದ್ರಾ...??? ಶಾರ್ಕ್ ಕಣ್ರೀ... ಹೂಂ..ಶಾಕ್ ಜಾತಿ ಮೀನಲ್ಲಿ ಕ್ಯಾಲ್ಶೀಕೃತ (ಗಡಸಾಗೋಕೆ) ಎಲುಬಿರುವುದಿಲ್ಲ. ಇವನ್ನು ಮೃದ್ವಸ್ಥಿ ಮೀನು ಅಂತಲೂ ಹೇಳ್ತಾರೆ.... ಓಕೆ..ಓಕೆ... ಕೋಪ ಮಾಡ್ಕೋಬೇಡಿ ಬಂದೆ ವಿಷಯಕ್ಕೆ.
ಗೌರಾಮಿ ಜೀವ ವರ್ಗೀಕರಣ ಹೀಗಿದೆ...
Kingdom: | Animalia |
Phylum: | Chordata |
Class: | Actinopterygii |
Order: | Perciformes |
Suborder: | Anabantoidei |
Family: | Helostomatidae |
Genus: | Helostoma Cuvier, 1829 |
Species: | H. temminckii |
ಈ ಕಿಸ್ಸಿಂಗ್ ಗೌರಾಮಿ ಮೀನಿನ ತವರು ಪೂರ್ವೋತ್ತರ ದೇಶಗಳಾದ ಥಾಯ್ಲ್ಯಾಂಡ್ ಮತ್ತು ಇಂಡೋನೇಶಿಯಾ. ಗೌರಾಮಿಯಲ್ಲಿ ಹಲವಾರು ಉಪ ಜಾತಿಗಳಿವೆ. ಗೌರಾಮಿ ಮೀನುಗಳು ಹೆಚ್ಚಾಗಿ ಅಲಂಕಾರದ ಮೀನುಗಳು. ಈ ಮೀನುಗಳು ವೇಗವಾಗಿ ಬೆಳೆಯಬಲ್ಲವು. ಸುಮಾರು ೩೦ ಸೆಂ.ಮೀ. ವರೆಗೂ ಬೆಳೆಯಬಹುದು. ಈ ಮೀನು ಸಿಹಿನೀರಿನಲ್ಲಿ ವಾಸಿಸುತ್ತವೆ, ಸಾಮಾನ್ಯವಾಗಿ ಇವಕ್ಕೆ ೨೨ ರಿಂದ ೨೮ ಡಿಗ್ರಿ ಸೆಂ.ಗ್ರೇ. ತಾಪಮಾನದ ನೀರು ಇಷ್ಟವಾಗುತ್ತದೆ.
ಓಕೆ..ಓಕೆ... ಇದರ "ಕಿಸ್ಸಿಂಗ್" ಬಗ್ಗೆ ಹೇಳ್ಬೇಕಲ್ವಾ...???
ಸ್ವಾಮಿ... ಇವು ಕಿಸ್ ಮಾಡೋದ್ರಿಂದಲೇ ಪ್ರಪಂಚದಾದ್ಯಂತ ಅಕ್ವೇರಿಯಂ ಪ್ರೇಮಿಗಳು ಇಷ್ಟ ಪಡೋದು..ಮಕ್ಕಳು ನೋಡಿ..ಚಪ್ಪಾಳೆ ತಟ್ಟಿ ಆನಂದಿಸುವುದು!!!
ಹೂಂ...
ಆದ್ರೆ... ಇವು ಕಿಸ್ ಮಾಡಿದ್ವು ಅಂದಾಕ್ಷಣ ಗಂಡು-ಹೆಣ್ಣು ಬೇರೆ ಬೇರೆ ಲಿಂಗದ ಮೀನು ಅಂದ್ಕೋಬೇಡಿ...!!! ಎರಡು ಗಂಡುಗಳೂ...!!! ಏನು..?? ಗೇ..ನಾ?? ಅಯ್ಯೋ ಅಲ್ಲಾರೀ ..ಇದು ನಾವು ಅಂದ್ಕೊಳ್ಳೋ ಕಿಸ್ ಅಲ್ವೇ ಅಲ್ಲ.....!!!!!
ಅಹಹಹ .. ನೋಡಿದ್ರಾ... ಇದು ಆಂಟಿ ಕ್ಲೈಮ್ಯಾಕ್ಸು...
ಹೌದು ಇವು ಕಿಸ್ ಅಲ್ಲ ಒಂದಕ್ಕೊಂದು ಸವಾಲ್ ಹಾಕುವುದು ಈ ರೀತಿ... ಇವುಗಳ ತುಟಿಯಂಚಿನಲ್ಲಿ ಬಹಳ ಚಿಕ್ಕ ಹಲ್ಲು ಸಹಾ ಇರುತ್ತವೆ... ಹಾಗಾಗಿ ಗಾಯ ಆಗೋ ಹಾಗೆ ಚುಂಬಿಸದೇ ಇದ್ರೂ... ಅವುಗಳ ತುಟಿಯ ಲೋಳೆಯನ್ನು ಕಸಿದುಕೊಂಡು ಸೋಂಕು ಹರಡಿ ರೋಗ ಉಂಟುಮಾಡಲೂ ಬಹುದು.
ಇದನ್ನು ತಡೆಗಟ್ಟಲ್ಲು (ಅಂದರೆ..ಕಡಿಮೆ ಕಿಸ್ ಮಾಡಲು) ಕೆಲ ಗಡಸು ಜಲಸಸ್ಯ ಅಥವಾ ಪ್ಲಾಸ್ಟಿಕ್ ಸಸಿ ಅಕ್ವೇರಿಯಂ ನಲ್ಲಿ ನೆಡಬಹುದು. ಹಾಗೆಯೇ ಗಾಜಿನ ತೊಟ್ಟಿಯ ಹಿಂಗೋಡೆಯ ಪಾಚಿಯನ್ನು ತೆಗೆಯಬೇಡಿ...ಅದೇ ಅವುಗಳಿಗೆ ಆಹಾರವಾಗಿ..ಚುಂಬನ ತೀಕ್ಷ್ಣತೆ ಕಡಿಮೆಯಾಗುತ್ತದೆ....
ಈಗ ಗೊತ್ತಾಯ್ತಲ್ಲ....
ವ್ಯಾಲೆಂಟೈನ್ಸ್ ಚುಂಬನ ಅಲ್ಲ....ಇದು ಅಂತ....??!!!