Monday, March 30, 2009

ಆರೋಗ್ಯ

ಮೀನು- ಆರೋಗ್ಯದ ಬಹುಮುಖೀ ಖಾದ್ಯ
ಮೀನು ಎಂದರೆ ಮೂಗುಮುರಿವ ಎಷ್ಟೋ ಮಂದಿಗೆಗೆ ಮೀನು ಎಂತಹ ಅಮೂಲ್ಯ ಪೌಷ್ಠಿಕಾಂಶಯುಕ್ತ ಆಹಾರ ಎಂದು ತಿಳಿದಿರಲಿಕ್ಕಿಲ್ಲ.ಮನುಷ್ಯನ ರಕ್ತ ನಾಳಗಳ ಒಳಪದರಗಳ ಮೇಲೆ ಕೊಬ್ಬಿನ ಶೇಖರಣೆಯಿಂದಾಗಿ ರಕ್ತ ನಾಳದ ಪ್ರಹವನಾ ಸಾಮರ್ಥ್ಯ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ತತ್ಪರಿಣಾಮ ಅಂಗಾಂಗಗಳಿಗೆ ತಲುಪಬೇಕಾದ ಪ್ರಮಾಣದಲ್ಲಿ ರಕ್ತ ತಲುಪದ ಕಾರಣ ಆಯಾ ಅಂಗಾಂಶದ ಕಾರ್ಯಕ್ಷಮತೆ ಕುಂಠಿತಗೊಳ್ಳುತ್ತದೆ. ಅದೇ ರೀತಿ ಹೃದಯವೂ ತನ್ನ ಕಾರ್ಯಕ್ಕೆ ಮತ್ತು ಪೋಷಕಾಂಶಗಳ ಪೂರೈಕೆಗೆ ರಕ್ತವನ್ನು ಅವಲಂಬಿಸಿರುತ್ತದೆ. ದೇಹದ ಅಂಗಾಂಗಗಳಿಂದ ಮಲಿನ ರಕ್ತವನ್ನು ತೆಗೆದುಕೊಂಡು ಅದನ್ನು ಶುದ್ಧಗೊಳಿಸಲು ಶ್ವಾಸಕೋಶಕ್ಕೆ ತಲುಪಿಸುತ್ತದೆ. ಹೀಗಾಗಿ ರಕ್ತ ಪರಿಚಲನೆಯ ಪ್ರಮುಖ ಕೆಲಸವನ್ನು ಮಾಡುವ ಹೃದಯಕ್ಕೂ ರಕ್ತದ ಪೂರೈಕೆ ನಾಳಗಳ ಮೂಲಕ ಆಗುತ್ತದೆ, ಈ ನಾಳಗಳ ಒಳಗೋಡೆಗಳೂ ಕೊಬ್ಬಿನ ಶೇಖರಣೆಯಿಂದ ದಪ್ಪವಾದಾಗ ಹೃದಯಕ್ಕೆ ರಕ್ತ ಸರಿಯಾಗಿ ಪೂರೈಕೆಯಾಗದೆ ತನ್ನ ಕೆಲಸವನ್ನು ನಿಲ್ಲಿಸಬಹುದು ಅಥವಾ ಒತ್ತಡ (ಆಘಾತ)ಕ್ಕೊಳಗಾಗಬಹುದು, ಇದನ್ನು ಹೃದಯಾಘಾತ ಎನ್ನುತ್ತಾರೆ.ಈ ಕೆಳಕಂಡ ಜಾಲ ಕೊಂಡಿಯನ್ನು ಕ್ಲಿಕ್ಕಿಸಿ, ಹೃದಯಾಘಾತ ಎಂದರೆ ಏನು ಎಂಬುದು ವಿಶದವಾಗಿ ತಿಳಿಯುತ್ತದೆ.
http://www.healthcentral.com/cholesterol/understanding-cholesterol-13-115.html
ಈ ಭಾಗದ ಮುಂದಿನ ವಿವರದಲ್ಲಿ ಆರೋಗ್ಯದಲ್ಲಿ ಮೀನಿನ ಪಾತ್ರದ ಬಗ್ಗೆ ವಿವರಿಸುತ್ತೇನೆ.