(ಚಿತ್ರ ಕೃಪೆ : ಪ್ರಕಾಶ -ಇಟ್ಟಿಗೆ ಸಿಮೆಂಟು
ಕೇವಲ ಒಮ್ಮೆ ನೀ ನಗು
ನೀನಾಗಿಯಲ್ಲ, ಆಗಿ ಮಗು
ತೊಡೆ ಗೆರೆ-ಮುಖದ ಬಿಗು
ಮನತುಂಬಿ ನೀನೊಮ್ಮೆ ನಗು.
ಮತ್ತೆ ಬಂದರೇನು? ಎರಗಿ ಆಪದ
ಗುನುಗುನಿಸು ನಗುವಿನಾಪದ
ಕಣ್ಣಲಿ ಮಿಂಚು ಸುಳಿವಿಗಾಸ್ಪದ
ನಕ್ಕರೆ ಅದೇ ನಿಜ ಸಂಪದ.
ನೀನಕ್ಕರೆ ಮಗು ನಗುವುದು
ಮನ ಅರಳಿ ಕೊಡುವುದಾಮುದು
ಸಂಕಟ ನೂರು ಬರಬಹುದು
ಮಾಡಿಕೋ ನಗು ಆಮದು.
ನಕ್ಕರೆಂದರು ಅದೇ ಸ್ವರ್ಗ
ಈ ನೀಮಕೆ ಬದ್ಧರೆಲ್ಲ ವರ್ಗ
ಮುದಗೊಂಡ ಮನದ ಮಾರ್ಗ
ಕೊಳ್ಳಬೇಕಿಲ್ಲ ದತ್ತ ನಿಸರ್ಗ.