Monday, March 28, 2011

ಚುನಾವಣೆ


ಚುನಾವಣೆ ಬಂತಂದ್ರೆ ಚನ್ಪಟ್ಣ ಜನ ಖುಶೋ ಖುಶ್ಶು

ಮಾರ ಬೀರ ಎಂಕ ಮಂಕ ಬಾರಲ್ಕುಂತ್ರೆ ನೀರೋ ನೀರು

ಅಕ್ಕಮ್ಮ, ರುಕ್ಕಮ್ಮ, ಶಾರದಕ್ಕ ಸುಬ್ಬಿರ ಬೀರೋ ತುಂಬಿ ಸ್ಯಾಲೆ

ಕಂಠಿ, ಬಂಟಿ, ನಾಣಿ, ಶಾರಿ ಓಗ್ತಾರೆ ತೆಗದ್ರೆ ಮೇಷ್ಟ್ರೇ ಬರದ ಶಾಲೆ



ದುಡ್ಡು ಬೇಕು ಮಾಡ್ಕೋ ಬೇಕು ಹ್ಯಾಂಗಾರಾ ಆಗ್ಲಿ

ದುಡ್ಕೋ ಬೇಕು ಸುಲ್ಕೋ ಬೇಕು ಹ್ಯಾಂಗಾರಾ ಆಗ್ಲಿ

ಮ್ಯಾಲ್ಕುಂತವ್ರಿಗೆ ಬ್ಯಾರೆ ಕಡೆ ಗೆಲ್ಬೇಕು ಹ್ಯಾಂಗಾರಾ ಆಗ್ಲಿ

ಎಲ್ಲಾರೂ ಒಂದೇ !! ನ್ಯಾಯ ನೀತಿ ಹಂಗಿರ್ಲಿ ಹ್ಯಾಂಗಾರಾ ಆಗ್ಲಿ



ಜನ ಬೋ ಮುಗ್ದರು ಆರಿಸ್ತಾರೆ ನಾಯ್ಕ ನಮ್ಮನ್ನೆಲ್ಲ ಕಾಯ್ತಾನೆ ಅಂತ

ಗೆದ್ ಮ್ಯಾಲೆ ಬರ್ತಾನೆ ನಮ್ ಸಮಸ್ಯೇನಾ ಕಿವಿ ಕೊಟ್ ಕೇಳ್ತಾನೆ ಅಂತ

ಎಲ್ಲಾ ಖುಶಿ ಪಡ್ತಾರೆ ಬಂದ ನಮ್ ನಾಯ್ಕ ನಮ್ ಅಹ್ವಾಲು ಕೇಳಾಕೆ ಅಂತ

ಜಗ್ಲಿ ಅಜ್ಜ ನಗ್ತಾನೆ ಮೀಸೇಲೇ..ಗೊತ್ತವಂಗೆ ನಾಯ್ಕ ಬಂದಿದ್ದು ಓಟ್ ಕೇಳಾಕಂತ



ನಾಯಕನ್ನ ಗೆಲ್ಸಿದ್ರು ಓದ್ದಪಾ ಕಿತ್ತಾಡ್ಕೊಂಡು ತಮ್ತಮ್ಮಲ್ಲೇ ಜನ

ಮರ್ತೇ ಬಿಡ್ತಾರೆ ಕಿತ್ತಾಡಿದ್ದನ್ನ, ಒಂದಾಗ್ತಾರೆ ನಡೆದೈತೆ ಇಂಗೇ ಜೀವನ

ಕಿತ್ತಾಡಿದ್ದ ಮರೆಯೋಕೆ ಬಿಡೊಲ್ರು ಈ ನಾಯಕ್ರು ಪಾರ್ಟಿ ಬದ್ಲಾಯಿಸೋದು

ತರ್ತಾರೆ ಬೈ ಎಲಕ್ಸನ್ನು ಈವಾಗ ಅಳ್ಳಿಲಿ ಶಾಸ್ವತ ಒಬ್ರನ್ನೊಬ್ರು ಗುರಾಯ್ಸೋದು