Saturday, December 11, 2010

ಮತ್ತೆ ಕೆಲವು ನ್ಯಾನೋಗಳು

ಆಸ್ತಿ
ಮೆದು-ಹುಸಿ ನಗು, ತುಂಟನೋಟ
ಪರ(ಮ) ಗುಲಾಮನಾಗಿಸಲು ಸಾಕು ಆಸ್ತಿ



ಏತಿ-ಪ್ರೇತಿ
ಮದುವೆಹೊಸತರಲ್ಲಿ ಎಲ್ಲದರಲ್ಲೂ ಸೌಂದರ್ಯ ಪ್ರೀತಿ
ಹೊಂದಿಕೆಯಾಗದೆ ನಂತರ ಅವ ಏತಿ ಇವಳು ಪ್ರೇತಿ



ಮಗು
ಜೀವನವಾಗಿದ್ದು ನಿನ್ನಿಂದಲೇ ತಾಯಿಗೆ ಸಾರ್ಥಕ
ಬಂದು ನೀನು ಅಪ್ಪನ ಶ್ರಮವಾಗಲಿಲ್ಲ ನಿರರ್ಥಕ


ಗೊತ್ತೇ ಅಗೊಲ್ಲ
ವಿದೇಶದಿಂದ ಬಂದ ಮಂತ್ರೀನ ಕೇಳಿದ್ರು, ಏನ್ತಂದ್ರಿ?
ಶೇವಿಂಗ್ ಮಾಡೋದು, ಕಟ್ ಮಾಡಿದ್ರೆ ಗೊತ್ತೇ ಆಗಲ್ಲಂತ್ರಿ



ದೊಂಬರಾಟ
ಪಟ್ನದಾಗೈತೆ ಒಬ್ಬೊಬ್ಬರ್ದು ಒಂದೊಂದ್ ಥರ ಆಟ
ಇದಾನ್ ಸೌದ್ದಾಗ್ ನಡೀತೈತಿ ದೊಡ್ದೊಡೋರ್ ದೊಂಬ್ರಾಟ



ಲಂಚ ಅದೆಂಥ ಮಂಚ?
ಕೊಡ್ದಿದ್ರೆ ಸಾಗೊಲ್ಲ, ಹಾಕ್ದಿದ್ರೆ ನಡೆಯೊಲ್ಲ, ಕೊಟ್ರೂನೂ ಉಳಿಯೊಲ್ಲ
ಲಂಚಕೊಟ್ಟೋನು ಕೋಡಂಗಿ, ಈಸ್ಕೊಂಡ್ರೆ
 ಈರ್ಬದ್ರ, ತಲುಪಿದ್ದು ಸುಭದ್ರ


ನ್ಯಾನೋ
ನ್ಯಾನೋ ಹತ್ತಿ ಹೊಂಟಿದ್ರು ಟಾಟಾ..
ರಸ್ತೇಲಿ ಕೈಕೊಟ್ಟೂ ಹೇಳ್ತದು ಬರ್ಲಾ...


ಪ್ರಯತ್ನ
ಬೆಪ್ಪೆ ಬರ್ದಿದ್ದೆಲ್ಲ ಅಗೊಲ್ಲ ಕಣೋ ಕವನ
ಬರ್ದ ಪೇಪರ್ ಎಷ್ಟ್ ಹರಿದಿದ್ದೀಯಾ ನೋಡು ಎನ್ನುತ್ತೆ ಮನ