Friday, February 26, 2016
Saturday, February 13, 2016
ಎಚ್ಚರ ಗಂಡೇ ಎಚ್ಚರ
(Image Source: Google Pics)
ಎಚ್ಚರ ಗಂಡೇ ಎಚ್ಚರ
******************
ಸೇರಿದ್ದು ಒಂದೊಂದೇ ಜೀವಾಣು
ಇಬ್ಬರ ವಿಶೇಷಗಳು, ನಾನಾದೆ..
ಬೆಳೆದೆ ಒಳತಂದ ಸಂದೇಶ ಹೊತ್ತ
ಸಂಕೇತಗಳ ಭಾಷಾಂತರಿಸಿ..
ಗೊತ್ತೇ? ಅಲ್ಲಿದ್ದುದದೊಂದು
ನನ್ನದೇ ಭಾಷೆಯ ಅವತರಿಸಿ..
ಗಂಡಿಗೆ ನನ್ನದೇ ಒಂದು ಅರ್ಥ
ಹೆಣ್ಣೆಂದರೆ ಅನುವಾದಿಸಿದೆ,
ವ್ಯರ್ಥ..
ಆದೆ ಪರಸ್ತ್ರೀ ವ್ಯಾಮೋಹದಲಿ
ರಾವಣ, ಕೀಚಕ ಅಷ್ಟೇಕೆ ಇಂದ್ರ!!
ನಿಲ್ಲಲಿಲ್ಲ ಅಲ್ಲಿಗೇ ಸೋದರ ಸತಿ
ಕಾಮಕ್ಕೆ, ಮೋಹಕ್ಕೆ, ಸೇಡಿಗೆ
ಆದೆ ದುರ್ಯೋಧನ ಶಾಸನ ಮತಿ..
ಈಗಂತೂ ನನ್ನ ಕುಕರ್ಮಗಳು
ಮೀರಿವೆ ಸೀಮೆ ನಾಚಿಸಿ ಮೃಗವ
ಹೆಣ್ಣು ಬರೀ ಕಾಮತೀಟೆಗೆ..
ನನಗಿಲ್ಲ ಯಾವುದೇ ಭೇದ..
ಆಗಿದ್ದರೆ ಸಾಕು ಚರ್ಮ, ಮಾಂಸ,
ರಂಧ್ರವಿರುವ xx ಉಸಿರಾಡುಜೀವ,
ತಿನ್ನಬೇಡ ಆ ಹಣ್ಣನೆಂದರೂ
ಬಿಡಲಿಲ್ಲ ಯಾ ಹೆಣ್ಣುನೊಂದರೂ
ಏಕೀ ಬಿಡದ ಅತಿರೇಕದಾಮತ್ತು ?
ಏಕುಣುವೆ ಎಡಬಿಡದೆ ಕಾಮತುತ್ತು?
ಎಚ್ಚೆತ್ತುಕೋ, ಈಗಲಾದರೂ ಗಂಡೇ
ಹುಟ್ಟಿ ಬರಲಿದೆ ಹೆಂಗಳೆಯರ ದಂಡೇ
ಎರಡಕ್ಕೂ ಅರಿ ಅದೇ ಜೀವದಾತೆ
ನಿನ ಹುಟ್ಟಿಗೂ ಮೂಲವೇ ಆ ಮಾತೆ.
Subscribe to:
Posts (Atom)