ಜಲಪಾತ
ಹನಿಯಾಯಿತು ದನಿ
ಧೋ-ಗುಡುವುದು ಹನಿ
ಗುಡು-ಗುಡಿಸುವ
ಕೋರೈಸುವ
ಸಿಡಿಲ್ಮಿಂಚು ಗುಡುಗು
ಕರಗಿ ಮೋಡದ ಹಡಗು
ತುಂಬಿ ಹರಿದು ಬೊಗಸೆ
ಬೀದಿ ಹೊಲ ತೊರೆನೆರೆ
ಕಾಲುವೆಯಾದ ವರಸೆ
ಬೀಡನ್ನು ಕೊರೆದು
ಕಾಡಲ್ಲಿ ಹರಿದು
ಬಂಡೆಗಳಮೇಲಿಂದ ಹರಿಯುತ
ಮೂಡಿದುದೊಂದು ಪುಟ್ಟ ಜಲಪಾತ
ತೊರೆಕಾಲುವೆ ಕೂಡಿ ನದಿ
ಹರಿದು ರಭಸದಿ ಆಗಿ ಮಹಾನದಿ
ಬೆಟ್ಟದಮೇಲಿಂದ ಜಿಗಿಯುತ
ಬೀಳುವುದು ಲೆಕ್ಕವೇ ಅದಕೆ
ಆದರೂ ಅದು ಅಗಾಧ ಪ್ರಪಾತ
ಅದಕಲ್ಲವೇ ಆದುದು ರಮಣಿಯ ನಯನಕೆ
ವಿಶ್ವವಿಖ್ಯಾತ ಕರುನಾಡ ಹೆಮ್ಮೆ
ಧುಮುಗುಡುತ ಧುಮುಕುವ
ಶರಾವತರಿತ ಜೋಗ ಜಲಪಾತ
ಆಜಾದ್ ಸರ್,
ReplyDeleteಜೋಗದ ಜಲಪಾತ ಕುವೈತ್ಗೆ ತಂದು ಬಿಟ್ಟಿರಿ... ನಿಮ್ಮ ಕವನ ಜೋಗದ ಸಿರಿಯನ್ನು ಮೂಡಿಸಿದೆ..
ಇನ್ನು ಹೆಚ್ಚು ಹೆಚ್ಚು ನಿಮ್ಮ ಕವನ, ಬರಹಗಳು ಈ ಬ್ಲಾಗಿಗೆ ಬರಲಿ...
ನಿಮ್ಮ ಬ್ಲಾಗಿನ ಮುಂದೆ
ReplyDeleteನನ್ನದು ಕುರಿಯ ಮಂದೆ
ನಡೆದರೆ ನೀವು ಮುಂದೆ
ನಾವು ನಿಮ್ಮ ಹಿಂದೆ-ಹಿಂದೆ
......thank U madam