Tuesday, May 12, 2009

ಹಾಗೆಯೇ..ಅನಿಸಿದ್ದು

ವ್ಯತ್ಯಾಸ
ನನ್ನಕಣ್ಣಲ್ಲೇ
ಇರುವೆ
ನೀನು ಅಂದಿದ್ದು ತಪ್ಪಾಯ್ತೇನೋ
ಅಲ್ಲಿ ಏನು ಮಾಡುತ್ತಾ
ಇರುವೆ
ಕಣ್ಣೀರು ನಿಂತಿಲ್ಲ

ನಾ(ನಿ)ದಿನಿ
ಮದುವೆಯಾದೆ
ನನ್ನವಳು ಸುಂದರಿ
ಅವಳ ತಂಗಿ ಸಿಂಗಾರಿ
‘ಲೇ‘ ಅಂತ ಕರೆದ್ರೆ ಇವಳನ್ನ
ನಾನಿದೀನಿ
ಅಂತ ಬರಬೇಕೆ ನಾದಿನಿ?

ಅಂತರ
ಸ್ನೇಹಿತರಿಬ್ಬರೂ ನಾವು
ಮದುವೆಯಾದ ನಂತರ ಸಿಕ್ಕೆವು
ಅವನೆಂದ ಲೋ..ಎಷ್ಟು ಚನ್ನಾಗಿ
ಬಿಡಿಸ್ತಾಳೋ ನನ್ಹೆಂಡ್ತಿ ಚಿತ್ರಾನ..
ಕೊಚ್ಚಿಕೊಂಡ
ಹೋಗೋಲೋ..ನನ್ಹೆಂಡ್ತೀಯೇನು ಕಮ್ಮಿ
ಅವಳೂ ಚನ್ನಾಗೇ ಬಿಡಿಸ್ತಾಳೆ ದಿನವೂ
ನನ್ನ ಗ್ರಹಚಾರಾನ

ಗಂಡ ಭೇರುಂಡ
ಲೇ ಗುಂಡ
ಗಂಡ ಭೇರುಂಡ
ಅಂದ್ರೇನ್ಲಾ? ಕೇಳಿದ್ರು ಮೇಷ್ಟ್ರು
ಹೆಂಡ್ತೀನ ಬಿಟ್ಟು ಬೇರೆ
ಉಣ್ಣೋ ಗಂಡನ ಸ್ಥಿತಿಗೆ
ಗಂಡ ಭೇರುಂಡ ಅನ್ತಾರೆ ಸಾ..
ಅನ್ನೋದೇ ಗುಂಡ??!!

ಹೆಣ್ಣು-ಗಂಡು
ಹೆಣ್ಣು...
ಒಲಿದ್ರೆ ನಾರಿ
ಮಿನಿದ್ರೆ ಮಾರಿ
ಗಂಡು...
ಒಲಿದ್ರೆ ಗಂಡ
ಮುನಿದ್ರೆ ದಂಡ

ಕವಿಚ್ಛೆ
ಪ್ರಿಯೆ ನಿನ್ನ
ಕರೆಯಲಿಲ್ಲವೇ
ನನ್ನ ಚಿನ್ನ
ನೀನೇಕೆ ಅನ್ನಲಿಲ್ಲ
ಒಮ್ಮೆಯಾದರೂ ನನ್ನ
ಓ ನನ್ನ ಪಂಪ, ರನ್ನ

8 comments:

  1. ಚುಟುಕು ಕವನಗಳು ಚೆನ್ನಾಗಿವೆ.

    ReplyDelete
  2. ಅಜಾದ್ ಸರ್,
    ತುಂಬಾ ಚೆನ್ನಾಗಿವೆ, ಎಲ್ಲಾ ಚುರುಕು ಚುರುಕಾಗಿವೆ ಹ ಹ ಅಹಾ....

    ReplyDelete
  3. ಸರ್,

    ಚುಟುಕು ಕವನಗಳೆಂದರೇ ನನಗೆ ತುಂಬಾ ಇಷ್ಟ. ಸುಲಭವಾಗಿ ಮತ್ತು ಪಂಚಿಂಗ್ ನೀಡುತ್ತವೆ. ನಿಮ್ಮ ಮೇಲಿನ ಚುಟುಕುಗಳನ್ನು ಓದಿ ಖುಷಿಯಾಯಿತು...

    ಆಹಾಂ! ಬಿಡುವಿದ್ದರೆ ನನ್ನ ಬ್ಲಾಗಿನಲ್ಲಿರುವ ಭೂಪಟ ನೋಡಲು ಬನ್ನಿ. ಇಷ್ಟವಾದರೆ ಎರಡು ಪ್ರೋತ್ಸಾಹದ ಮಾತು ಕಾಮೆಂಟಿಸಿ...

    ಧನ್ಯವಾದಗಳು..

    ReplyDelete
  4. ಹ ಹ ಹ ...
    ಸಕತ್ ಆಗಿ ಇವೆ ಚುಟುಕುಗಳು...

    ReplyDelete
  5. ತುಂಬಾ ಚೆನ್ನಾಗಿವೆ ನಿಮ್ಮ ಚುಟುಕುಗಳು ಮನಸಿಗೆ ಮುದ ನೀಡುತ್ತವೆ

    ReplyDelete
  6. ನನ್ನ ಮನವಿಗೆ ಮನಕೊಟ್ಟು ನನ್ನ ಗೂಡಿಗೆ ಬಂದಿರಿ
    ಶುಭ ಸ್ವಾಗತ...ಪ್ರತಿಕ್ರಿಯೆ ಟೀಕೆ ಟಿಪ್ಪಣಿಗೆ ತೆರೆದ ಮನಸ್ಸು ನನ್ನದು
    thanks

    ReplyDelete
  7. ನಿಮ್ಮ ಕವನಗಳನ್ನು ಓದುತ್ತಾ ಹೋದಂತೆ ಮಳೆಗಾಲದಲ್ಲಿ ಮನೆಯೊಳಗೆ ಕುಳಿತು ಹಪ್ಪಳ-ಸಂಡಿಗೆ ತಿಂದಂಗೆ ಆಯಿತು:))
    -ಧರಿತ್ರಿ

    ReplyDelete
  8. ನಾನೂ ಹಾಗೇ ‘ಭೂಮಿ‘ ಸುತ್ತಿ ಬರೋಣ ಅಂತ ಹೋದೆ..ನೀವು..ಇಲ್ಲೆ ಕುಂತು,,ಹಪ್ಪಳ ಸಂಡಿಗೆ ಕುರುಮ್ ಕುರುಮ್ ಸವಿ ಮೆಲ್ಲುತ್ತಾ ಕೂತಿದ್ದೀರಾ...!!!
    ಹಪ್ಪಳವನ್ನು ಸವಿಯೋದಕೆ ಮನಸೂ ಬೇಕಲ್ಲವೇ..? ಧರಿತ್ರಿಯವರಿಗೆ ಧನ್ಯವಾದಗಳು..ಮನೆಗೆ ಬಂದದ್ದಕ್ಕೆ, ಹಪ್ಪಳ ಸವಿದು ಪ್ರತಿಕ್ರಿಯಿಸಿದ್ದಕ್ಕೆ.

    ReplyDelete