ಬೆಚ್ಚನೆ ಕರುಳಪ್ಪುಗೆ
ಬಳ್ಳಿಗೆ ಒಳಗೆ, ಹೊರಗೆ
ಡವ-ಡವಿಕೆ ಜೋಗುಳ ಒಳಗೆ
ಮೈದಡವಿ ಮಡಿಲಲಿ ಹೊರಗೆ
ಚರಾಚರದ ಸೃಷ್ಠಿಗೆ ಕಾರಣ ದೇವರು
ನನ್ನ ಹೊತ್ತು ಹೆತ್ತವಳು ತಾಯಿ ದೇವರು
ಲಾಲಿಸಿ-ಪಾಲಿಸಿ ಮಗುವ
ಮುದ್ದಿಸಿ ರಕ್ಷಿಸಿ ಬಾಲ್ಯವ
ನೋವಲಿ ‘ಅಮ್ಮಾ‘ ಎನಲು
ಓಡೋಡಿ ಬರುವಳು
ನನ್ನ ಮೇಲಿನ ಅಪ್ಪನ ಕೋಪಕೆ
ಆಡ್ಡಗೋಡೆಯಾಗಿ ನಿಲುವಳು
ನನಗೆ ಬೀಳಬೇಕಾದ ಏಟನು
ತಾನೇ ತಿನುವಳು
ನನ್ನ ನೋವಲಿ ತಾನೊಂದು
ಸಂತೈಸುವಳು
ನನ್ನಲ್ಪ ಗೆಲುವಲೂ
ಜಗಗೆದ್ದಂತೆ ನಲಿವಳು
ಬಾಲ್ಯ..ಶಾಲೆ ಆಗಲೂ ಮಗು
ಕಾಲೇಜು, ಉದ್ಯೋಗ
ಆಗಲೂ ಮಗು
ಮದುವೆಯಾಗಿ ತಂದೆಯಾದರೂ
ಅಪರೂಪಕ್ಕೆ ಹೋದಾಗ ಊರಿಗೆ
ದಢೂತಿದೇಹವ ಬಗ್ಗಿಸಿ ನಮಿಸಲು
ಅನ್ನುವಳಲ್ಲ ‘ಎಷ್ಟು ಸೊರಗಿರುವೆ ಮಗು?‘
ಅವಳಿಗೆ ನಾನು ಈಗಲೂ ಮಗು
ಅಮ್ಮ ಯಾವಾಗಲೂ ಅಮ್ಮ
ಮಗ ತಾತನಾದರೂ
ಅವಳಿಗೆ ಮಗುವೇ.
ಅಮ್ಮನ ಬಗ್ಗೆ ಒಂದು ಚೆಂದದ ಕವನ!!
ReplyDelete"ಅಮ್ಮ ಯಾವಾಗಲೂ ಅಮ್ಮ
ಮಗ ತಾತನಾದರೂ
ಅವಳಿಗೆ ಮಗುವೇ. "
ಎಷ್ಟು ಸತ್ಯ!
ಓಹ್!!! ತುಂಬಾ ಚೆಂದದ ಕವನ ಸರ್, ಎಷ್ಟೆ ಆದರು ಏನೇ ಆದರು ಅಮ್ಮನಿಗೆ ನಾವೆಲ್ಲ ಪುಟ್ಟ ಮಕ್ಕಳೇ ಸರಿ!!! ಅಪ್ಪನ ಏಟು ತಪ್ಪಿಸಿಕೊಳ್ಳಲೂ ಅಮ್ಮನ ರಕ್ಷಣೆ ಹ ಹಹ ತುಂಬಾ ಚೆನ್ನಾಗಿದೆ...
ReplyDeleteಹೀಗೆ ಒಂದು ದಿನ ನನ್ನ ಮಗನಿಗೆ ಪಾಪು ಎಂದು ಕರೆದಿದ್ದಕ್ಕೆ ನಾನು ಪಾಪುನ ಇನ್ನು ಏಕೆ ಆಡಿಕೊಳ್ಳುತ್ತೀಯ ಎಂದ ಅದಕ್ಕೆ ನಾ ಹೇಳಿದೆ ನೀ ಎಷ್ಟೆ ದೊಡ್ಡವನಾದರು ನನಗೆ ಪಾಪುನೇ ಎಂದು ಆಗ ಅವನಿಗೆ ಅರ್ಥವಾಯಿತು ಅಮ್ಮನಿಗೆ ಮಕ್ಕಳು ಎಂದೆಂದಿಗೊ ಮಗುವೇ ಎಂದು...
ಅಮ್ಮನ ಬಗ್ಗೆ ಏನು ಬರೆದರು ಚೆ೦ದವೇ, ಅಮ್ಮನ ಹಾಗೆ. ಚೆನ್ನಾಗಿದೆ.
ReplyDeleteರೂಪಶ್ರೀ ಮೇಡಂ ಬಂದುದಕ್ಕೆ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ReplyDeleteಅಮ್ಮನಾಗಿ ಮಗುವನ್ನು ಮಗುವಾಗೇ ನೋಡುವುದು ಅಮ್ಮನ ಮಮತೆಯ ಕಾರಣ,
ಪಾಪು ಅಂತ ನೀವನ್ನೋದೂ ಅದೇ ಕಾರಣಕ್ಕೆ ಮನಸು ಮೇಡಂ...thansk commentsಗೆ
ಪರಾಂಜಪೆಯವರೇ, ಅಮ್ಮ ಗುಮ್ಮ ಬರ್ತಾನೆ ಅಂತ ಹೆದರಿಸಿ ಮತ್ತೆ ಗಕ್ಕನೇ..ಸೆರಗಲ್ಲಿ ಬಚ್ಚಿಟ್ಟುಕೊಂಡು ತುತ್ತು ತಿನ್ನಿಸಿದ್ದು ನಿಮಗೆ ನೆನೆಪಿಲ್ಲವೇ...?
ಬಹುಶಃ ಚಂದಮಾಮ ಮತ್ತು ಗುಮ್ಮ ಅಮ್ಮನ ಬತ್ತಳಿಕೆಯ ಬಾಣಗಳು..ಮಗುವಿಕೆ ತಿನಿಸಲು...ಅಲ್ಲವೇ..??
ಸರ್,
ReplyDeleteಅಮ್ಮನ ಬಗ್ಗೆ ಕವನ ಅಮ್ಮನಷ್ಟೇ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ...ಅಮ್ಮ ಯಾವಗಲೂ ಅಮ್ಮನೇ ಅಲ್ಲವೇ...
ಕವನ ಮನತಟ್ಟುತ್ತದೆ...
ಧನ್ಯವಾದಗಳು
ಶಿವು ನಿಮ್ಮ ಅಪ್ರತಿಮ ಛಾಯಾಗ್ರಹಣದ ಬಗ್ಗೆ ತುಂಬಾ ಕೇಳಿದ್ದೇನೆ..ನಿಮ್ಮ ಕೆಲವು ಅಮೋಘ ಚಿತ್ರಗಳನ್ನು ಕಳುಹಿಸಿ (azadis@hotmail.com). ಸಾಧ್ಯವಾದಷ್ಟೂ ಪ್ರಯತ್ನಿಸಿ ಅವಕ್ಕೆ ತಕ್ಕ ಚಿತ್ರ ಕವನ ಹೊಂದಿಸಿ ರಚಿಸಿ ಕಳುಹಿಸುತ್ತೇನೆ...ನೀವು ಸಮ್ಮತಿಸಿದರೆ, ಬ್ಲಾಗ್ ನಲ್ಲಿ ಪೋಸ್ಟ್ ಮಾಡುತ್ತೇನೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ReplyDeleteಚೆನ್ನಾಗಿದೆ ಕವನ...
ReplyDeleteನನ್ನಲ್ಪ ಗೆಲುವಲೂ
ಜಗಗೆದ್ದಂತೆ ನಲಿವಳು
ಈ ಸಾಲುಗಳು ಇಷ್ಟವಾದುವು. ಗೆಲುವು ಏನೇ ಆಗಿರಲಿ, ಅಮ್ಮನಿಗೆ ಖಂಡಿತಾ ಖುಷಿ ಸಿಗುತ್ತೆ.. ಜೊತೆಗೆ ಆಕೆಯ ಆ ಖುಷಿಯೇ, ನಮಗೆ ಇನ್ನೂ ದೊಡ್ಡ ಗೆಲುವು ಸಾಧಿಸಲು ಪ್ರೇರಣೆ.. ಅಲ್ಲವೇ?
ದಿವ್ಯಾ, ಗೂಡಿಗೆ ಸ್ವಾಗತ ಬಂದುದಕ್ಕೆ ಬಂದು ‘ಅಮ್ಮ‘ನ ಬಗ್ಗೆ ಒಂದೆರಡು ಪ್ರತಿಕ್ರಿಯೆ ನೀಡಿದ್ದಕ್ಕೆ..thanks, ಏನು..ಟೆಸ್ಟ್ ಡ್ರೈವ ಮಾಡಿದಮೇಲೆ...ಬೆಸ್ಟ್ ಡ್ರೈವ್ ಗೆ ತಯಾರೀನೋ ??
ReplyDeleteಬ್ಲಾಗಿನಲ್ಲಿ ಹೊಸ ಪೋಸ್ಟ್ ಕಾಣಿಸ್ಲಿಲ್ಲ...ಧನ್ಯವಾದ...ಬರ್ತಾ ಇರಿ...
ಕವನ, ಚಿತ್ರ -ಎರಡೂ ಇಷ್ಟ ಆದ್ವು.
ReplyDeleteಜಲನಯನ,
ReplyDeleteಸುಂದರವಾದ ಕವನ ಹಾಗೂ ಚಿತ್ರಕ್ಕಾಗಿ ನಿಮಗೆ ಅಭಿನಂದನೆಗಳು.
ಸುಶ್ರುತ ಮತ್ತು ಸುನಾಥ್ ಸರ್ ಗೆ, scroll down ಮಾಡಿ post ನೋಡಿ ಪ್ರತಿಕ್ರಿಯಿಸಿದ್ದೀರಿ, ಧನ್ಯವಾದ
ReplyDeleteತಾಯಿ ಮಗು ಬಾಂಧವ್ಯ ಬಹುಶಃ ಹಲವು ಭಾವ ಮಂಥನಗಳಿಗೆ ಪ್ರೇರಣೆ ಎಂಬುದು ಇಲ್ಲೂ ವ್ಯಕ್ತವಾಗಿತ್ತಿದೆ.