ರಾತ್ರಿ ಕಂಡ ಬಾವಿ
ಬೆರೆತಾಗ ಕಣ್ಣು
ಕರಗುವುದು ಹೆಣ್ಣು.??!!
ಬೆಪ್ಪೇ, ಅದೊಂದು ಹುಣ್ಣು
ಕೆರೆದುಕೊಂಡರೆ ಏನೋ ಹಿತ
ಮರುಳಾಗಬೇಡ
ರಾತ್ರಿಕಂಡ ಬಾವಿಗೆ
ಹಗಲೇ ಬೀಳಬೇಡ
ಪ್ರೀತಿ
ತುಟಿ ಬಿಚ್ಚಲಿಲ್ಲ
ಕಣ್ಣು-ಕಣ್ಣು ಸೇರಿದ್ದವು
ಕಣ್ಣು ಮುಚ್ಚಲಿಲ್ಲ
ಮನಗಳು ಮಾತನಾಡಿದ್ದವು
ಮನ ಹಾಡಿತಲ್ಲ
ಕಣ್ಣು-ತುಟಿ ಸೇರಿರಲು
ವಿಚಿತ್ರ
ಕಣ್ಣು ಮುಚ್ಚಿದರೆ
ಚಿತ್ರ
ಮನಸಕಾಡಿದಳು
ಚಿತ್ರ
ಮನಗೆದ್ದು ಮೂಡಿದ
ಚಿತ್ರ
ಆಗದಾಯಿತು ಇದು ಹತ್ರ
ಅದಕೇ ಇದು ವಿ-
ಚಿತ್ರ
ಕಚಗುಳಿಯಿಡುವ ಚುಟುಕುಗಳು. ಚೆನ್ನಾಗಿವೆ, ಮು೦ದುವರಿಯಲಿ ನಿಮ್ಮ ಕಾವ್ಯಲಹರಿ
ReplyDeleteಸರ್,
ReplyDeleteನೀವು ಚುಟುಕುಗಳನ್ನು ಚೆನ್ನಾಗಿ ಬರೆಯುತ್ತೀರಿ...ಓದಲು ಇಷ್ಜವಾಗುತ್ತವೆ...
ನಲ್ಮೆಯ
ReplyDeleteಪರಾಂಜಪೆ ಮತ್ತು ಶಿವುಗೆ thanks ಚುಟುಕಗಳು ನನ್ನ ಇತ್ತೀಚಿನ ಶೋಕಿ, ನಿಮಗೆ ಇಷ್ಟವಾದದ್ದು ಸಂತೋಷ.
ನನಗೆ ನಿಮ್ಮ ಟೀಕೆ ಸಿಕ್ಕರೆ ಚನ್ನ...ಏನಾದರೂ ನ್ಯೂನತೆಗಳು..? ನಿಮಗೆ ಅನ್ನಿಸಿದ್ದು ಪ್ರತಿಕ್ರಿಯಿಸಿದರೆ ನನ್ನ ಬರವಣಿಗೆ ಇನ್ನೂ ಸುಧಾರಿಸಿಕೊಳ್ಳಬಹುದು
ವಾಹ್... ವೆರಿ ನೈಸ್... ಚಿಕ್ಕ ಚುಟುಕ ತುಂಬ ಚೆನ್ನಾಗಿ ಇದೆ... ಹೀಗೆ ಮುಂದುವರಿಸಿ.
ReplyDeleteಗುರು
tumba chennagide sir!!!! keep posting
ReplyDelete