Friday, September 25, 2009

ಪುನರ್ಜನ್ಮ – ಪುನರಪಿ ಜನನಂ ಪುನರಪಿ ಮರಣಂ















ಎಸ್.ಎಲ್.ಭೈರಪ್ಪನವರ ನಾಯಿನೆರಳು ನಾನು ಎರಡನೇ ವರ್ಷ ಬಿ.ಎಫ್.ಎಸ್ಸಿ (ಬ್ಯಾಚುಲರ್ ಅಫ್ ಫಿಶರೀಸ್ ಸೈನ್ಸ್) ಯಲ್ಲಿದ್ದಾಗ ನನ್ನ ಸ್ನೇಹಿತನ ಒತ್ತಡಕ್ಕೆ ತಂದು ಓದಲು ಪ್ರಾರಂಭಿಸಿದ್ದೇ ..ಅದನ್ನು ಮುಗಿಸಿಯೇ ಮಲಗಿದ್ದು..!!! ಕಾದಂಬರಿಯ ಬರವಣಿಗೆ ಮತ್ತು ಓದಿಸಿಕೊಂಡು ಹೋಗುವ ಕಥೆ ಹಾಗೂ ಕಥೆಗಾರನ ಶೈಲಿ (ನನಗೆ ಲೇಖಕನ ಬಗ್ಗೆ ಹೆಚ್ಚು ಅರಿವು ಮೂಡಿದ್ದು ನಂತರವೇ..ಆದ್ದರಿಂದ ಭೈರಪ್ಪನವರ ಹೆಸರಿಂದ ಪ್ರೇರಿತ ಎನ್ನುವಂತಿಲ್ಲ) ನನ್ನ ಆ ನಾನ್-ಸ್ಟಾಪ್ ಮ್ಯಾರಥಾನ್ ಗೆ ಕಾರಣ. ನನ್ನ ಸ್ನೇಹಿತನಿಗೆ ಮರುದಿನ ಬೆಳಿಗ್ಗೆ.. “ಬಹಳ ಚನ್ನಾಗಿದೆಯೋ ಕಾದಂಬರಿ..” ಎಂದುದಕ್ಕೆ ..ಅವನೋ ..ಸ್ಥಬ್ಧ...!!!! “ಸಂಜೇನೇ ಅಲ್ವೇನೋ ತಂದಿದ್ದು ಲೈಬ್ರರಿಯಿಂದ..?? ಅಷ್ಟು ಬೇಗ ಓದ್ಬಿಟ್ಯಾ??” ಹುಬ್ಬೇರಿತ್ತು ಅವಂದು.
ಈಗ ಅದೇ ಕಾದಂಬರಿ ಆಧಾರಿತ ಅದೇ ಹೆಸರಿನ ಚಲನಚಿತ್ರಕ್ಕೆ ಪವಿತ್ರಾ ಲೋಕೇಶ್ ಅದ್ಭುತ ಅಭಿನಯಕ್ಕೆ ರಾಜ್ಯಪ್ರಶಸ್ತಿ ಸಿಕ್ಕಿದೆ ಒಂದೆರಡು ವರ್ಷಕ್ಕೆ ಹಿಂದೆ. ಕಥಾ ವಸ್ತು..ಪುನರ್ಜನ್ಮದ್ದೇ... ಹಲವಾರು ಚಲನಚಿತ್ರಗಳು ಬಂದಿವೆ..ಬಾಲಿವುಡ್, ಸ್ಯಾಂಡಲ್ವುಡ್ ಎಲ್ಲ ವುಡ್ ಗಳಲ್ಲೂ ಬಹುಶಃ. ಇವನ್ನು ಕಂಡವರಿಗೆ ಕಾಡುವುದು...ಸತ್ತಮೇಲೆ ಮನುಷ್ಯ ಮತ್ತೆ ಹುಟ್ಟುತ್ತಾನೆಯೇ..? ಪುನರ್ಜನ್ಮ ಎಂಬುವುದಿದೆಯೇ? ಅದು ಹೇಗೆ ಸಾಧ್ಯ..?? ಅಥವಾ ಇದೊಂದು ಗಿಮಿಕ್ಕೇ?? ಇತ್ಯಾದಿ...
ನಮ್ಮ ಪುರಾಣಗಳು ದೇವತಾ ಸ್ವರೂಪರಿಗೆ ಅವತಾರಗಳನ್ನು ಕೊಟ್ಟು ದೇವತೆಗಳು ಹಲವಾರು ರೂಪಗಳಲ್ಲಿ ಬಂದರು ಎಂದು ಹೇಳುತ್ತವೆ. ಇಲ್ಲಿಯೂ ಕೆಲ ಅವತಾರಗಳು ತಮ್ಮ ಜನ್ಮದ ಬಗ್ಗೆ ತಾವೇ ಹೇಳುವುದು ಕಡಿಮೆಯೇ..ಉದಾಹರಣೆಗೆ ..ರಾಮಾವತಾರ...? ಆದರೆ ಅದೇ ವಿಷ್ಣುವಿನ ಅವತಾರವೆಂದೇ ಪ್ರಸಿದ್ಧಿಯಾಗಿರುವ ಬುದ್ಧ ತನ್ನ ಪುನರ್ಜನ್ಮದ ಬಗ್ಗೆ ನಿಖರವಾಗಿ ಹೇಳುತ್ತಾನೆ...ಹಾಗೆ ನೋಡಿದರೆ..ಪುನರ್ಜನ್ಮದ ಬಗ್ಗೆ ನಿಖರವಾಗಿ ಸೈದ್ಧಾಂತಿಕವಾಗಿ ನಂಬುವುದು ಬೌದ್ಧ ಧರ್ಮವೇ? ಹಿಂದೂ ಧರ್ಮ ಇದನ್ನು ಮೊದಲೇ ಪ್ರತಿಪಾದಿಸಿದೆ.

ಪುನರ್ಜನ್ಮ – ಕಟ್ಟು ಕಥೆಯೇ? ವಾಸ್ತವವೇ??
ಸಾವಿನ ನಂತರ ಮತ್ತೊಂದು ಜನ್ಮ ಇದೆಯೇ? ಅದೇ ಜೀವಿ ಮತ್ತೆ ಹುಟ್ಟುತ್ತದೆಯೇ? ಎನ್ನುವುದು ಹಲವರು ಘಟನಾವಳಿಗಳನ್ನು ನೋಡಿರುವವರಲ್ಲಿ ಅಥವಾ ಕೇಳಿರುವವರಲ್ಲಿ ಕೌತುಕ ಕೆರಳಿಸುವ ಪ್ರಶ್ನೆಗಳು.
ಇನ್ನು ಧರ್ಮಗಳ ಪ್ರಕಾರ, ಕೇವಲ ಹಿಂದೂ ಧರ್ಮ ಸೈದ್ಧಾಂತಿಕವಾಗಿ ಪುನರ್ಜನ್ಮವನ್ನು ಪ್ರತಿಪಾದಿಸಿತು..ಅದೇ ನಿಟ್ಟಿನಲ್ಲಿ ಬೌದ್ಧ ಧರ್ಮವೂ ಈ ನಂಬಿಕೆಯನ್ನು ಧರ್ಮ-ಸಮ್ಮತ ಮಾಡಿತು. ಬುದ್ಧ ತನ್ನ ಶಿಷ್ಯರಿಗೆ ನಿಖರವಗಿ ಈ ಬಗ್ಗೆ ಬೋಧಿಸಿದ್ದಾನೆಂದು ಉಲ್ಲೇಖವಿದೆ. ಒಟ್ಟಿನಲ್ಲಿ ಇದು ಒಂದು ಸರ್ವಕಾಲಿಕ ಕೌತುಕ ಹುಟ್ಟಿಸಿದ ಅಂಶ ಎನ್ನುವುದರಲ್ಲಿ ಸಂಶಯವಿಲ್ಲ.
ಇಲ್ಲಿ ಹಲವಾರು ವಾದಗಳನ್ನು ನಾವು ಪರಿಗಣಿಸೋಣ. ಯಾರೋ ಒಬ್ಬರು ತಾವು ನೋಡದೇ ಇರುವ ಸ್ಥಾನ, ವ್ಯಕ್ತಿ, ಪರಿಸರ, ಘಟನಾವಳಿಯನ್ನು ನಿಖರವಾಗಿ ಹೇಗೆ ವಿವರಿಸಲು ಸಾಧ್ಯ...?? ಅದನ್ನು ಅವರು ಸ್ವತಃ ಅನುಭವಿಸದೇ?? !! ಅದರಲ್ಲೂ ನೆನಪಲ್ಲಿ ಹೆಚ್ಚು ಶೇಖರವಾಗಿರದ ಮಕ್ಕಳು ಅಸಹಜವೆಂಬಂತೆ ತಾವು ಅದಾಗಿದ್ದೆವು, ಅಲ್ಲಿದ್ದೆವು, ಅಂತಹವರ ಗಂಡನೋ ಹೆಂಡತಿಯೋ ಆಗಿದ್ದೆವು..ಎಂದೆಲ್ಲಾ ಹೇಳುವುದು ಹೇಗೆ ಸಾಧ್ಯ?? ಇನ್ನು ಪುನರ್ಜನ್ಮ ಎನ್ನುವಷ್ಟರ ಮಟ್ಟದ್ದಲ್ಲವದರೂ ನಮಗೇ ಕೆಲವೊಮ್ಮೆ ತಾವು ಮೊದಲು ಕಂಡಿರದ ಯಾವುದೋ ಸ್ಥಾನವನ್ನು ನೋಡಿದಾಗ ತೀರಾ ಪರಿಚಿತ ಎನಿಸುವುದು ಏಕೆ? ಕೆಲವರನ್ನು ಮೊದಲೇ ಕಂಡಿಲ್ಲದಿದ್ದರೂ ನಮಗೆ ಅಸಹ್ಯ ಅನಿಸುವುದೇಕೆ? ಕೆಲವರು ತೀರಾ ಹತ್ತಿರದವರು, ಮಿತ್ರರು ಎನಿಸುವುದೇಕೆ?? ಹೀಗೆ ಹತ್ತು ಹಲವು ವಿಜ್ಞಾನಕ್ಕೆ ನಿಲುಕದ ವಿಷಯ ನಮ್ಮನ್ನು ದ್ವಂದ್ವಗಳಿಗೆ ಕೆಡಹುತ್ತವೆ.
ಅಮೇರಿಕೆಯ ವರ್ಜೀನಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಸ್ಟೀವನ್ ಸನ್ ತಮ್ಮ ಅಧ್ಯಯನದ ನಲವತ್ತು ವರ್ಷಗಳನ್ನು ಪುನರ್ಜನ್ಮದ ಸುತ್ತಲ ಪವಾಡ ಸದೃಶ ಘಟನಾವಳಿಗಳನ್ನು ಕೂಲಂಕುಷ ಪರಿಶೀಲನೆ ಮತ್ತು ಅಧ್ಯಯನದಲ್ಲಿ ಕಳೆದಿದ್ದಾರೆ. ಪ್ರಪಂಚದ ಹಲವಾರು ದೇಶಗಳಿಂದ ಘಟನಾವಳಿಗಳನ್ನು ಶೇಖರಿಸಿ, ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ, ಪ್ರಕಟಿಸಿದ್ದಾರೆ. ಇವರು ಪುನರ್ಜನ್ಮಿ ನೀಡಿದ ಅಹವಾಲು, ಹೇಳಿಕೆಗಳನ್ನು ಅಕ್ಷರಶಃ ಪರಿಶೀಲಿಸಿ ವೈದ್ಯಕೀಯ ದಾಖಲೆಗಳನ್ನು ತಾಳೆಹಾಕಿ ಅಧ್ಯಯನ ನಡೆಸಿದ್ದಾರೆ, ಹಲವಾರು ಇಂತಹ ಹೇಳಿಕೆಗಳು ವಾಸ್ತವವಾಗಿ ನಡೆದಿವೆ. ಇಲ್ಲಿ ಇನ್ನೊಂದು ವಾದವೆಂದರೆ, ಪುರ್ಜನ್ಮ ಇದ್ದರೂ ಆ ರೀತಿ ಜನ್ಮ ಪಡೆದವರೆಲ್ಲರಿಗೂ ಹಿಂದಿನ ಜನ್ಮದ ನೆನಪಿರುವುದಿಲ್ಲ. ಆದರೆ ಸತ್ತವರೆಲ್ಲ ಪುನರ್ಜನ್ಮ ಪಡೆಯುತ್ತಾರೆಂದೂ ಏನಿಲ್ಲವಲ್ಲ??!! ಪ್ರೊಫೆಸರ ಅಧ್ಯಯನದ ಪ್ರಕಾರ ಇಂತಹ ನಿಖರ ಪುನರ್ಜನ್ಮದ ನಿದರ್ಶನಗಳಲ್ಲಿ ತಿಳಿದು ಬಂದ ಅಂಶ, ಸತ್ತು ಮತ್ತೆ ಹುಟ್ಟಿದವರು ಅಕಾಲಿಕ ಅಥವಾ ಅತೃಪ್ತ ಅಥವಾ ಘೋರವೆನಿಸುವ ಸಾವಿಗೀಡಾದವರು ಎಂದು. ಅಂದರೆ ಯಾವುದೋ ಅವ್ಯಕ್ತ ಶಕ್ತಿ ಮೃತ ದೇಹದಿಂದ ಮತ್ತೊಂದು ದೇಹಕ್ಕೆ ವರ್ಗಾಯಿತಗೊಂಡು ಪುನರ್ಜನ್ಮದ ನೆನಪುಗಳಿಗೆ ಕಾರಣವಾಗುತ್ತದೆಯೇ?? ಅಥವಾ ಎಲ್ಲ ಪುನರ್ಜನ್ಮಿತ ಜೀವಿ ತನ್ನ ಪೂರ್ವದ ನೆನಪು ಉಳಿಸಿಕೊಂಡಿರುವುದಿಲ್ಲ ಎಂದೇ..?? ಅಥವಾ ಘೋರ ಅತೃಪ್ತ ಆತ್ಮವೇ ಪುನರ್ಜನ್ಮಕ್ಕೆ ಕಾರಣವೇ? ? ಸದ್ಯಕ್ಕೆ ಏನೂ ಹೇಳಲಾಗದು...ಸತ್ತನಂತರವೇ ಇದನ್ನು ನಿಖರವಾಗಿ ಹೇಳಲು ಸಾಧ್ಯ..ಅಂದರೆ ..???!!!
ಇಸ್ಲಾಂ ಅಂತ್ಯದ ನಂತರವೂ ಜೀವ ಇದೆ ಎನ್ನುತ್ತದೆಯಾದರೂ ಪುನರ್ಜನ್ಮವೆನ್ನುವುದು ಇದೆ ಎಂದು ಒಪ್ಪುವುದಿಲ್ಲ ಏಕೆಂದರೆ ಆ ರೀತಿ ನಿರೂಪಿಸಲು ಸಾಧ್ಯವಿಲ್ಲ. ಇಸ್ಲಾಂ ಪ್ರಕಾರ ಸತ್ತವನೇ ಪುನರ್ಜನ್ಮ ಹೊಂದಿದಾತ ಎನ್ನುವುದಕ್ಕೆ ಪುರಾವೆ ಇರುವುದಿಲ್ಲ ಹಾಗೆ ಇದೆ ಎನಿಸಿದರೂ ಅದು ಕೇವಲ ಕಾಕತಾಳೀಯವಾಗಿರಬಹುದು ಎನ್ನುತ್ತದೆ. ಆದರೆ ಸಾವಿನ ನಂತರದ ಜೀವನ ಇದೆ ಎಂತಲೂ ಆ ಜೀವದಲ್ಲಿ ಸುಖ ಅಥವಾ ಕ್ರೂರ ಶಿಕ್ಷೆಗಳು ಈ ಜನ್ಮದ ನಿನ್ನ ಕರ್ಮಗಳನ್ನು ಅವಲಂಬಿಸಿದೆ ಎಂದೂ ಹೇಳುತ್ತದೆ. ನಿನ್ನ ಮರಣಾನಂತರದ ಸ್ಥಿತಿ ಸುಖದಾಯಕ ಆಗಬೇಕಾದರೆ ಈ ಜನ್ಮದಲ್ಲಿ ಒಳ್ಳೆಯ ಕರ್ಮಗಳನ್ನು ಮಾಡು ಎನ್ನುತ್ತದೆ ಆದರೆ ನೀನೇ ಮತ್ತೆ ಹುಟ್ಟಿ ಬರುವೆ ಎನ್ನುವುದಿಲ್ಲ. ನರಕ ಮತ್ತು ಸ್ವರ್ಗ, ಈ ಸಿದ್ಧಾಂತ ಬಹುಶಃ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಕಂಡು ಬರುವ ಸಮಾನ ಅಂಶ. ಕ್ರಿಸ್ಚಿಯನ್ನರೂ ಪುನರ್ಜನ್ಮದ ಬಗ್ಗೆ ನಿಖರವಾಗಿ ಏನೂ ಹೇಳುವುದಿಲ್ಲ, ಕಿಸ್ತನು ಮತ್ತೆ ಜೀವ ಪಡೆದ ಎನ್ನುವರೇ ಹೊರತು, ಪುನರ್ಜನ್ಮ ಪಡೆದ ಎಂದು ಹೇಳಿಲ್ಲ. ಇನ್ನು ಜೊರಾಸ್ಟ್ರಿಯನ್ನರು ಒಂದು ರೀತಿಯ ಜೀವ-ಮರುಕಳಿಕೆಯನ್ನು ಒಪ್ಪುವರಾದರೂ ಖಚಿತವಾಗಿ ಪುನರ್ಜನ್ಮದ ಬಗ್ಗೆ ಹೇಳಿಲ್ಲ.
ಬೌದ್ಧ ಧರ್ಮ ಪುನರ್ಜನ್ಮ ಒಂದು ಸತ್ಯ ಎನ್ನುತ್ತದೆ. ಇನ್ನೂ ಮುಂದುವರೆದು, ಪುನರ್ಜನ್ಮದ ಆರು ಆಯಾಮಗಳು ಸಾಧ್ಯ ಎನ್ನುತ್ತದೆ. ಇವು ದೇವತಾ, ಗಂಧರ್ವ (ಭಾಗಶಃ ದೇವತಾ ಅಥವಾ ಅತಿಮಾನವ), ಮಾನವ, ಪಶು, ಪೈಶಾಚ ಮತ್ತು ದೈತ್ಯ (ನರಕವಾಸಿ) ಎನ್ನುತ್ತದೆ. ಇವುಗಳಲ್ಲಿ ದೇವತಾ, ಗಂಧರ್ವ ಮತ್ತು ಮಾನವ ಆಯಾಮಗಳು ಸುಖದಾಯಿಯಾದರೆ ಪಶು, ಪೈಶಾಚ ಮತ್ತು ದಾನವ ಆಯಾಮಗಳು ಪೀಡಿತ ಅಯಾಮಗಳು ಎನ್ನುತ್ತದೆ. ಮೊದಲನೆಯ ಮೂರು ಆಯಾಮಗಳು ಸುಕರ್ಮಗಳಿಗೆ ಸಿಗುವ ಫಲವಾದರೆ ದುಷ್ಕೃತ್ಯಗಳಿಗೆ ಸಿಗುವ ಫಲ ಪೀಡನಾದಾಯಕ ಆಯಾಮ. ಬುದ್ಧನ ಪ್ರಕಾರ ಆತ್ಮ ಶುದ್ಧಿ, ಯೋಗ ಸಿದ್ಧಿಹೊಂದಿದ ಜೀವಿಗೆ ತನ್ನ ಬುದ್ಧಿ ಅಥವಾ ಜ್ಞಾನವಾಹಕಗಳನ್ನು ನಿಯಂತ್ರಿಸುವ ಅಥವಾ ವರ್ಗಾಯಿಸುವ ಶಕ್ತಿಯಿರುವುದೆಂದೂ, ಅಂತಹ ಜೀವಿ ತನ್ನ ಪುನರ್ಜನ್ಮದಲ್ಲೂ ಪೂರ್ವದ ಎಲ್ಲ ಅರಿವನ್ನು ಉಳ್ಳವರಾಗಿತ್ತಾರೆಂದೂ ಇದು ಕೆಲವರಿಗೆ ಮಾತ್ರ ಸಾಧ್ಯವೆನ್ನಲಾಗಿದೆ.
ಇನ್ನು ವೈಜ್ಞಾನಿಕ ನಿದರ್ಶನಗಳನ್ನು ಪರಿಶೀಲಿಸಿದವರಿಗೂ ಪುನರ್ಜನ್ಮವನ್ನು ಅಲ್ಲಗಳೆಯುವ ಯಾವಿದೇ ತರ್ಕ ಸಿಗದಿದ್ದರೂ ಇದೆಯೆನ್ನಲೂ ಸಾಕಷ್ಟು ಪುರಾವೆಗಳು ಸಿದ್ಧಾಂತಗಳು ಸಿಗುತ್ತಿಲ್ಲ.

ಕೆಲವು ದಾಖಲೆಯಾಗಿರುವ ನಿದರ್ಶನಗಳನ್ನು ಗಮನಿಸೋಣ.
ಅಮೇರಿಕೆಯ ಶ್ರೀಮತಿ ರೂಥ್ ಸಿಮೋನ್ಸ್ ಎನ್ನುವಾಕೆ ತನ್ನ ನೂರು ವರ್ಷಕ್ಕೂ ಹಿಂದಿನ ಐರ್ಲೆಂಡಿನ ಜನ್ಮದ ಬಗ್ಗೆ ನಿಖರ ಮಾಹಿತಿ ನೀಡಿದ್ದಾಳೆ, ಪರಿಶೀಲನೆ ನಂತರ ಈ ಎಲ್ಲ ಮಾಹಿತಿ ಅಕ್ಷರಶಃ ನಿಜವೆಂದು ತಿಳಿದುಬಂತು, ಮತ್ತೂ ಅಚ್ಚರಿಯೆಂದರೆ ಆಕೆ ಯಾವತ್ತೂ ಅಮೇರಿಕಾ ಬಿಟ್ಟು ಬೇರೆ ದೇಶಕ್ಕೆ ಹೋಗೇ ಇಲ್ಲದ್ದು.
ಇನ್ನೂ ಅಶ್ಚರ್ಯದ ನಿದರ್ಶನ ಇಂಗ್ಲೇಂಡಿನ ಶ್ರಿಮತಿ ನಾವೋಮಿ ಎಂಬಾಕೆಯದು. ಈಕೆ ತನ್ನ ಹಿಂದಿನ ಎರಡು ಜನ್ಮಗಳ ವಿವರಗಳನ್ನು ನಿಖರವಾಗಿ ನೀಡಿದ್ದಾಳೆ. ತಾನು ಏಳನೇ ಶತಮಾನದಲ್ಲಿ ಐರಿಶ್ ಮಹಿಳೆಯಾಗಿ ಗ್ರೀಹಾಲ್ಘ್ ಎಂಬ ಹಳ್ಳಿಯಲ್ಲಿ ಜೀವಿಸಿದ್ದಳೆಂದೂ, ತಾನು ೧೯೦೨ ರಲ್ಲಿ ಆಂಗ್ಲ ನರ್ಸ್ ಮಹಿಳೆಯಾಗಿ ಡೌನ್ ಹಾಮ್ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದಳೆಂದು ಹೇಳಿದ್ದಾಳೆ. ಈ ಎರಡೂ ವಿವವರಗಳೂ ನಿಜವಾಗಿದ್ದವು.
ನಮ್ಮಲ್ಲಿಯೇ ಬೆಂಗಳೂರಿನ ನಿಮ್ಹಾನ್ಸ್ (ಮಾನಸಿಕ ಆಸ್ಪತ್ರೆ) ನಲ್ಲಿರುವ ಮನಶಾಸ್ತ್ರಜ್ಞ ಡಾ. ಪಶ್ರೀಚಾ ಸ್ಟಿವನ ಸನ್ರ ಜೊತೆ ಅಧ್ಯಯನ ನಡೆಸಿದ ಮತ್ತು ಪುನರ್ಜನ್ಮವನ್ನು ಪರೀಕ್ಷಿಸಿದವರಲ್ಲಿ ಒಬ್ಬರು. ಅವರೇ ವಿವರಿಸಿರುವ ನಿದರ್ಶನ ಮಹಾರಾಸ್ಟ್ರದ ಉತ್ತರೆ ಎಂಬುವರ ಕುರಿತದ್ದು. ಆಕೆ ಇದ್ದಕ್ಕಿದ್ದಂತೆ ತಮಗೆ ಗೊತ್ತಿರದ ಬಂಗಾಳಿ ಭಜನ್ ಹಾಡಲು ಪ್ರಾರಂಭಿಸಿದ್ದು ಮತ್ತು ೧೧೦ ವರ್ಷಕ್ಕೆ ಹಿಂದೆ ತಾನು ಅಂದಿನ ಬಂಗಾಳದ ಚಟ್ಟೋಪಾದ್ಯಾಯ ಕುಟುಂಬದಲ್ಲಿ ಶಾರದೆಯಾಗಿದ್ದಳೆಂದೂ ಹೇಳಿದ್ದು ಇವು ನಿಜವಾಗಿದ್ದವೆಂದೂ ತಿಳಿಸಿದ್ದಾರೆ.
ಇನ್ನೂ ವಿಸ್ಮಯಕಾರಿ ನಿದರ್ಶನ ಈಗಲೂ ಸೇವೆ ನಿರತ ಭೋಪಾಲಿನ ನವೀನ ಕಾಲೇಜಿನ ಪ್ರಾಂಶುಪಾಲೆ ಡಾ. ಸ್ವರ್ಣಲತಾ ತಿವಾರಿಯವರದ್ದು. ಇವರಿಗೆ ತಮ್ಮ ಮೂರು ಜನ್ಮಗಳ ವಿವರಗಳು ತಿಳಿದಿವೆ..!!!!! ಈ ನಿದರ್ಶನ ಪ್ರಪಂಚದ ಏಳು ಅಧ್ಯಯನಾಧೀನ ನಿದರ್ಶನಗಳಲ್ಲಿ ಒಂದಾಗಿದೆ.
ಮೊದಲಿಗೆ ಆಕೆ ಮಧ್ಯಪ್ರದೇಶದ ಕತ್ನಿ ಎಂಬಲ್ಲಿ ನದಿಯೊಂದನ್ನು ದಾಟುವಾಗ ಒಮ್ಮೆಗೇ ನೆನಪಾದ ಪುನರ್ಜನ್ಮ ಆಗ ಆಕೆಗೆ ನಾಲ್ಕು ವರ್ಷ ವಯಸ್ಸು.. ಆಕೆ ತಾನು ಬಿಯಾ ಪಾಥಕ್ ಎಂದು ಹೇಳಿ ತಂದೆ ತಾಯಿಯರಲ್ಲಿ ಆತಂಕಕ್ಕೆ ಎಡೆಮಾಡಿ ಅವರು ಮನಶಾಸ್ತ್ರಜ್ಞರನ್ನು ಕಂಡು ತಮ್ಮ ಮಗಳಬಗ್ಗೆ ವಿಚಾರಿಸಿದಾಗ ಆಕೆ..ಪೂರ್ಣ ಆರೋಗ್ಯವಂತಳೆಂದೂ ಅವಳಿಗೆ ಪುನರ್ಜನ್ಮದ ನೆನಪು ಬಂದಿದೆಯೆಂದೂ ...ಹೇಳಿದರು.. ವಿಚಾರಿಸಿದಾಗ ಬಿಯಾ ಪಾಥಕ್ ಎಂಬಾಕೆ ಸತ್ತ ಒಂಭತ್ತು ವರ್ಷಗಳ ನಂತರ (೧೯೪೮) ಸ್ವರ್ಣಲತಾ ಹುಟ್ಟಿದೆಂದೂ ತಿಳಿದು ಬಂತು. ಬಿಯಾ ಪಾಥಕ್ ಸತ್ತು ಅಸ್ಸಾಂ ನಲ್ಲಿ ಸಿಲಹಟ್ ಎಂಬಲ್ಲಿ ೧೯೪೦ ರಲ್ಲಿ ಕಮಲೆಶ್ ಎಂಬ ಹೆಣ್ಣುಮಗಳಾಗಿ ಜನಿಸಿ ೧೯೪೭ ರಲ್ಲಿ ಹೃದಯಾಘಾತದಿಂದ ಸತ್ತಳೆಂದೂ ತಿಳಿಯಿತು.
ಮೂರು ಜನ್ಮ- ಈಗಿನ- ಸ್ವರ್ಣಲತಾ (ಹುಟ್ಟಿದ್ದು ೧೯೪೮)
ಅದಕ್ಕೂ ಹಿಂದೆ ಕಮಲೆಶ್ ಅಸ್ಸಾಂ ನಲ್ಲಿ (ಹುಟ್ಟಿದ್ದು ೧೯೪೦ ಸತ್ತದ್ದು ೧೯೪೭)
ಅದಕ್ಕೂ ಹಿಂದೆ ಬಿಯಾ ಪಾಥಕ್ ಆಗಿ ಕತ್ನಿ, ಮಧ್ಯಪ್ರದೇಶದಲ್ಲಿ (ಸತ್ತದ್ದು ೧೯೩೯)
ಸ್ವರ್ಣಲತಾರ ವಿವರಗಳನ್ನು ಸ್ಟಿವನಸನ್ ಪರಿಶೀಲಿಸಿ ಎಲ್ಲಾ ಸತ್ಯವೆಂದು ಕಂಡುಕೊಂಡಿದ್ದಾರೆ...!!!

ಈ ಎಲ್ಲ ವಿಷಯಗಳನ್ನು ಎಷ್ಟು ಆಸಕ್ತಿ, ಕೌತುಕತೆಯಿಂದ ನೀವು ಓದುವಿರೋ ತಿಳಿಯದು,,,ನನಗಂತೂ ಈ ಲೇಖನವನ್ನು ಮುಗಿಸುವ ವೇಳೆಗೆ ನನ್ನದೂ ಯಾವುದಾದರೂ ಪುನರ್ಜನ್ಮವೇ ??? ಎನಿಸಲಾರಂಭಿಸಿದೆ..!!!! ಹಹಹ
(ನಿಮಗೆ ಆಶ್ಚರ್ಯ ಎನಿಸಬಹುದು..ಈ ಲೇಖನ ಒಂದೇ ಉಸಿರಿನಲ್ಲಿ...ಮೂರು ತಾಸು..ಮಾಹಿತಿ ಸಂಗ್ರಹಿಸಿ ಬರೆದದ್ದು..ಪ್ರಾರಂಭ ರಾತ್ರಿ ೧೦ಕ್ಕೆ ಮುಕ್ತಾಯ ೧೨.೫೫ಕ್ಕೆ..!!!)
I am thankful to Uday for a correction, also request you to forward this many of your friends for feedback.

38 comments:

  1. ಪುನರ್ಜನ್ಮ - ಒ೦ದು ಕೌತುಕದ ವಿಷಯ. ಇದು ಎಲ್ಲರಿಗೂ ಕುತೂಹಲ ಹುಟ್ಟಿಸುವ ವಿಚಾರವೇ!. ನಮಗೆ ತಿಳಿಯದ, ನಮ್ಮ ತರ್ಕಕ್ಕೆ ನಿಲುಕದ ಎಷ್ಟೋ ವಿಷಯಗಳು ಈ ಜಗತ್ತಿನಲ್ಲಿದೆ. ಪ್ರಮಾಣೀಕರಿಸದೇ, ತರ್ಕಕ್ಕೆ ನಿಲುಕದೇ ಇದ್ದಲ್ಲಿ ನ೦ಬಬೇಡವೆನ್ನುತ್ತದೆ ವಿಜ್ಞಾನ. ಹಾಗ೦ತ ಕಣ್ಣ ಮು೦ದೆ ನಡೆಯುವ ವಿಸ್ಮಯಗಳನ್ನು ತಳ್ಳಿ ಹಾಕಲು ಮನ ಒಪ್ಪುವದಿಲ್ಲ.
    ವೇದಾ೦ತಿ ಲ್ಯಾಪ್ಲಸ್ ಹೇಳೋ ಹಾಗೆ " ಇಲ್ಲಿ ನಾವು ತಿಳಿದುಕೊ೦ಡಿರುವದು ಅತ್ಯಲ್ಪ ಆದರೆ ನಮ್ಮ ಅಜ್ಞಾನ ಅಪಾರ"- ಇಲ್ಲಿ ಸೂಕ್ತ ಊಕ್ತಿ. ನಮ್ಮ ತರ್ಕಕ್ಕೆ ನಿಲುಕದ್ದು ನಮ್ಮ ಅಜ್ಞಾನವೆನ್ನುಕೊಳ್ಳಬೇಕು.
    ತಮ್ಮ ಲೇಖನ ಚೆನ್ನಗಿ ಮೂಡಿ ಬ೦ದಿದೆ.

    ReplyDelete
  2. ಅಧ್ಯಯನಶೀಲ ಲೇಖನ. ಚೆನ್ನಾಗಿದೆ. ಚಿಂತನೆಗೆ ಹಚ್ಚುತ್ತದೆ ನಮ್ಮನ್ನು. ನಿಮ್ಮ ಈ ಲೇಖನವನ್ನೋದಿದ ಮೇಲೆ ನನಗೂ ಈ ವಿಷಯದ ಮೇಲೆ ಬರೆಯಬೇಕೆನ್ನಿಸಿತು. ನನ್ನ ಬಳಿಯೂ ಕೆಲವೊಂದು ಉಪಯುಕ್ತ ಮಾಹಿತಿಗಳಿವೆ ಪುನರ್ಜನ್ಮದ ಕುರಿತು. ಒಂದು ಉತ್ತಮ ಲೇಖನದ ಮೂಲಕ ಒಂದೊಳ್ಳೆಯ ವಿಷಯದ ಕುರಿತು ಆರೋಗ್ಯಕರ ಚರ್ಚೆಗೆ, ವಿಚಾರ ವಿನಿಮಯಕ್ಕೆ ಹುಟ್ಟುಹಾಕಿದ್ದೀರಿ. ಧನ್ಯವಾದಗಳು.

    ReplyDelete
  3. ಸೀತಾರಾಂ ಸರ್
    ನನಗೆ ನನ್ನ ಸಂಶೋಧನಾ ಲೇಖನವೊಂದರಲ್ಲಿ ಇಮುಯುನೋಲಾಜಿಕಲ್ ಮೆಮೋರಿ ಬಗ್ಗೆ ಬರಯುವಾಗ ವಂಶವಾಹಕಗಳು ಹೇಗೆ ಜೀವಿಯಿಂದ ಅದರ ಜೀವಕುಡಿಗೆ ವರ್ಗಾವಣೆಯಾಗುತ್ತವೆ ಎನ್ನುವುದನ್ನು ಬರೆಯುವಾಗ ಈ ಪುನರ್ಜನ್ಮದ ಯೋಚನೆ ಏಕಾ ಏಕಿ ಬಂತು ಹಾಗೇ ಅಂತರ್ಜಾಲದ ಜಾಲದಿಂದ ಮಾಹಿತಿ ಕಲೆಹಾಕಿ ಈ ಲೇಖನ ಬರೆದೆ, ನಿಮ್ಮ ಅನಿಸಿಕೆ ಮತ್ತು ವಿವರಗಳು ಇದ್ದರೆ ತಿಳಿಸಿ, ಮಾಹಿತಿ ಇದ್ದರೂ ನನ್ನ azadis@hotmail.com ಮಿಂಚೆಗೆ ಕಳುಹಿಸಿ.
    ಧನ್ಯವಾದ

    ReplyDelete
  4. ತೇಜಸ್ವಿನಿ, ನನ್ನಿ..ನಿಮ್ಮ ಮಾತು ನನ್ನ ಯೋಚನೆ ಹಾಗೂ ಈ ಲೇಖನದ ಕಾರಣ ಒಂದೇ ದಿಕ್ಕಿನಲ್ಲಿವೆ. ನೀರು ಆವಿಯಾಗುತ್ತದೆ..ಆವಿ ಕಾಣುತ್ತದೆ..ನೀರೂ ಕಾಣುತ್ತದೆ..ಅದೇ ಜಲಜನಕ, ಆಮ್ಲಜನಕಗಳು ಕಾಣುವುದಿಲ್ಲ..ನೀರು ಈ ಎರಡು ತತ್ವಗಳಿಂದ ಕೂಡಿದ್ದೇ ಆದರೆ ಕಂಡಿದ್ದನ್ನೇ ನಿಜ ಎಂದು ನಾವು ಒಪ್ಪುವುದೇ ಆದರೆ..?? ಹೀಗೆ..ಹಲವು .. ಸಂಶಯಗಳು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ನಿಮ್ಮ ಲೇಖನಕ್ಕೆ ಕಾಯುತ್ತೇನೆ..

    ReplyDelete
  5. ನಿಮ್ಮ ಲೇಖನದಲ್ಲಿ ಉಪಯುಕ್ತ ಮಾಹಿತಿಗಳಿವೆ, ಚೆನ್ನಾಗಿದೆ.

    ReplyDelete
  6. ತುಂಬಾ ಕುತೂಹಲಕರವಾದ ವಿಷಯ.

    ReplyDelete
  7. ಜಲನಯನ ಅವರೇ,
    ಈ ಲೇಖನ ಓದುವಾಗ, ನಾನು ಬೇರೆಯದೇ ಒಂದು ಲೋಕದಲ್ಲಿ ಇರುವಂತೆ ಭಾಸವಾಯಿತು ಎಂದರೆ ಅತಿಶಯೋಕ್ತಿಯಲ್ಲ!
    ಮತ್ತೆ ನೀವು ಪುನರ್ಜನ್ಮದ ಬಗ್ಗೆ ನೀಡಿರುವ ಎಲ್ಲ ಉದಾಹರಣೆಯಲ್ಲೂ ಕೇವಲ ಹೆಂಗಸರ ಉದಾಹರಣೆ ಇದೆಯೇ ವಿನಃ ಗಂಡಸರ ಯಾವ ಉದಾಹರಣೆಯೂ ಇಲ್ಲ. ಇನ್ನೂ ಹೆಚ್ಚಿನ ಮಾಹಿತಿ ಇದ್ದರೇ ತಿಳಿಸಿ.
    ನನಗೆ ಈ ಪುನರ್ಜನ್ಮದ ಬಗ್ಗೆ ನಂಬಿಕೆ ಇದೆಯೋ ಇಲ್ಲವೊ ಗೊತ್ತಿಲ್ಲ, ಆದರೆ ಆರನೇ ಜ್ಞಾನೆಂದ್ರಿಯ (sixth sense) ಬಗ್ಗೆ ಸಾಕಷ್ಟು ನಂಬಿಕೆ ಇದೆ!!! ಅದು ನನ್ನ ಜೀವನದಲ್ಲಿ ಎಷ್ಟೋ ಸಲ ನನಗೆ ಅನುಭವವಾಗಿದೆ. ಇದರ ಬಗ್ಗೆ ಆಳವಾಗಿ ಯೋಚಿಸಿದಷ್ಟು ಮನಸ್ಸು ಗೊಂದಲಕ್ಕೊಳಗಾಗುತ್ತದೆ. ಅದರಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ!!!
    ಎನಿ ವೇ ಒಂದು ಚಿಂತನಾತ್ಮಕ ಲೇಖನವನ್ನು ನಮಗೆ ನೀಡಿದ್ದೀರಾ ಅದಕ್ಕಾಗಿ ಧನ್ಯವಾದಗಳು!

    ReplyDelete
  8. ಪುನರ್ ಜನ್ಮ ಕುರಿತಾದದ ನಿಮ್ಮ ವಸ್ತುನಿಷ್ಠ ಲೇಖನ ಚನ್ನಾಗಿ ಮೂಡಿ ಬಂದಿದೆ. ಅಂದಹಾಗೆ ಪವಿತ್ರ ಲೋಕೇಶ್ ಗೆ ಯಾವುದೇ ರಾಷ್ಟ್ರೀಯ ಶ್ರೇಷ್ಟ ನಟಿ ಪ್ರಶಸ್ತಿ ಬಂದಿಲ್ಲ. ಅದು ‘ನಾಯಿ ನೆರಳು’ ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಬಂದದ್ದು. ಅದನ್ನು ಬದಲಾಯಿಸಿ.

    ReplyDelete
  9. ಪರಾಂಜಪೆಯವರೇ, ಕೆಲಸದ ಒತ್ತಡ ರಂಜಾನ್ ಉಪವಾಸಗಳು ಹೀಗೆ..ಸಮಯ ಸಿಗಲಿಲ್ಲ ನಿಮ್ಮ ಗೂಡಿನತ್ತ ಬರಲು. ಕ್ಷಮಿಸಿ..ಸದ್ಯದಲ್ಲೇ ಭೇಟಿ ಖಂಡಿತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ,

    ReplyDelete
  10. ಎಸ್ಸೆಸ್ಕೇ ಮೇಡಂ ನಿಮ್ಮ ಪ್ರತಿಕ್ರಿಯೆ ಚನ್ನಾಗಿದೆ ಹಾಗೇ..ನಿಮ್ಮ ಗಮನಕ್ಕೆ ಬಂದಿರುವ ಅಂಶ ಗಮನಾರ್ಹವಾದ ಅಂಶ...ಹಹಹ್.. ಈ ನಿದರ್ಶ್ನಗಳಲ್ಲಿ ಬರೀ ಹೆಣ್ಣು ಪಾತ್ರಗಳೇ ಅಲ್ಲವೇ..?? ನಿಜ..ನಿಮಗೆ ಗೊತ್ತಿರುವ ಯಾವುದಾದರೂ ಗಂಡು ಪಾತ್ರವಿದ್ದರೆ ತಿಳಿಸಿ. ಇಲ್ಲಿ ಇನ್ನೊಂದು ಅಂಶ..ಈಗ ಸುವರ್ಣ ಟಿ.ವಿ. ಯಲ್ಲಿ ಒಂದು ಧಾರಾವಾಹಿ ಬರುತ್ತಿದೆ ನೋಡಿ..ಅಲ್ಲಿಯೂ ಪುನರ್ಜನ್ಮಿ ಹೆಣ್ಣೇ? ಯಾಕೆ ಹೀಗೆ?? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  11. ಸುನಾಥ್ ಸರ್ ನಿಮ್ಮಿಂದ ಹೆಚ್ಚು ಪ್ರತಿಕ್ರಿಯೆ ನಿರೀಕ್ಷಿಸಿದ್ದೆ..ಅಥ್ವಾ ಮತ್ತೆ ಇನ್ನೊಂದು ಬಾರಿ ಬನ್ನಿ ನಿಮ್ಮ ಮಾಹಿತಿಯೊಂದಿಗೆ..

    ReplyDelete
  12. ಉದಯ್, ಬಹಳ ದಿನವಾಯಿತು ನಿಮ್ಮ ಪ್ರತಿಕ್ರಿಯೆ ನೋಡಿ..ನಿಮ್ಮ ಮಾತು ನಿಜ ಪವಿತ್ರ ಲೋಕೇಶ್ ಗೆ ರಾಜ್ಯ್ ಪ್ರಶಸ್ತಿ ಬಂದಿದ್ದು, ಅದನ್ನು ತಿದ್ದಿದ್ದೇನೆ. ನಿಮ್ಮ ಇನ್ಪುಟ್ ಇದ್ದರೆ ಕಳುಹಿಸಿ ಈ ವಿಷಯದಲ್ಲಿ...ಧನ್ಯವಾದ ಮತ್ತೊಮ್ಮೆ

    ReplyDelete
  13. ಜಲನಯನ ಸರ್...

    ಲೇಖನ ಓದಿ ಮೈ ಜುಮ್ ಅ೦ತು... ನನಗೂ ಇದು ತು೦ಬಾ ಇಷ್ಟವಾದ, ಕೌತಕ ಹುಟ್ಟಿಸುವ ಸ೦ಗತಿ... ನಾನು ಹಿ೦ದಿನ ಜನ್ಮದಲ್ಲಿ ಏನಾಗಿದ್ದೆನೋ ಎ೦ದು ಯಾವಾಗಲೂ ಯೋಚಿಸುತ್ತೇನೆ...

    ತು೦ಬಾ ಚೆ೦ದದ ವಸ್ತು ನಿಷ್ಟ ಬರಹ...

    ReplyDelete
  14. ಸುಧೇಶ್, ಪುನರ್ಜನ್ಮದ ಒಂದು ಅನುಭವ ನನಗೂ ಆಗಿದೆ...ಮಂಗಳೂರಿನಲ್ಲಿ ಓದುವಾಗ ನಾವು ಭಾನುವಾರ ಉಳ್ಳಾಲ ಅಥವಾ ಸೋಮೇಶ್ವರ ಬೀಚಿಗೆ ಹೋಗುತ್ತಿದ್ದುದುಂಟು. ಒಮ್ಮೆ ಹೀಗೇ ಬೀಚಿನ ಮರಳಿನ ಮೇಲೆ ನಡೆದಾಡುವಾಗ ಒಂದು ೫೦-೫೫ ವರ್ಷ ವಯಸ್ಸಿನ ಹೆಂಗಸೊಬ್ಬಳು ಏನ್ಮಗಾ ಸರ್ವೇಶಾ ಎಲ್ಲೋಗ್ಬಿಟ್ಟಿದ್ದೆ ಕಣಾ ಅಂತ ಗೊಳೋ ಅಂತ ನನ್ನ ಸ್ನೇಹಿತ ದೇವರಾಜನನು ಹಿಡಿದುಕೊಂಡು ಅಳತೊಡಗಿದಳು..ನಂತರ ಬಹಳ ಸಮಜಾಯಿಷಿ ಹೇಳಿ ಅಲ್ಲಿಂದ ನನ್ನ ಸ್ನೇಹಿತನನ್ನು ಹಾಸ್ಟೆಲ್ ಗೆ ಕರೆದುಕೊಂಡು ಹೋಗುವಹೊತ್ತಿಗೆ ಸಾಕುಸಾಕಾಯಿತು.. ಅಮ್ದಿನಿಂದ ಅವನನ್ನು ನಾವು ಸರ್ವೇಸ ಅಂತಾನೇ ಚುಡಾಯಿಸ್ತಿದ್ವಿ.

    ReplyDelete
  15. ಸರ್,
    ನಿಮ್ಮ ಲೇಖನ ನೋಡಿ ಮನದಲ್ಲಿ ಹಲವಾರು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ... ನಿಜಕ್ಕು ಪುನರ್ಜನ್ಮ ಪ್ರಶ್ನಾರ್ತಕವಾಗಿದೆ..? ನಾನು ಮುಂಚೆ ಏನಾಗಿದ್ದೇನೋ..? ಈಗ ಇರುವ ಜೀವ ಸತ್ತಮೇಲೆ ಏನಾಗುವೆನೋ ಎಂಬ ಪ್ರಶ್ನನೆ ಕಾಡುತಿದೆ..

    ನಿಜಕ್ಕು ನಿಮ್ಮ ವಿಮರ್ಶೆ ಬಹಳ ಉಪಯುಕ್ತ ಹಾಗು ತಿಳಿದುಕೊಳ್ಳಬೇಕಾದ ವಿಷಯ... ಏನು ಸರ್ ರಮದಾನ್ ರಜೆಯಲ್ಲಿ ರಾತ್ರಿಯೆಲ್ಲ ಇದೇ ರೀತಿ ತರ್ಕಕ್ಕೆ ನಿಲುಕದ್ದ ಕಥೆಗಳತ್ತ ಮನ ಒಲೈಸಿದ್ದಿರಾ..?
    ವಂದನೆಗಳು

    ReplyDelete
  16. ಪುನರ್ಜನ್ಮ ಕುತೂಹಲ ಹುಟ್ಟಿಸುವ ವಿಚಾರವೇ...!
    ಚೆನ್ನಾಗಿದೆ..

    ReplyDelete
  17. ಮನಸು ಮೇಡಂ ನಿಮ್ಮ ಹಾಗೇ ನನಗೂ ಅನ್ನಿಸ್ತು ಲೇಖನ ಮುಗಿಸೋ ಹೊತ್ತಿಗೆ..ಒಂದಂತೂ ಖರೆ...ಕುವೈತ್ನಲ್ಲಂತೂ ಹುಟ್ಟಲಿಲ್ಲ ಅನ್ನೋದೇ ಸಮಾಧಾನ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  18. ಮಹೇಶ್, Rebirth, reincarnation ಅತೃಪ್ತ ಮನಗಳ ರೋದನದ ಫಲ ಅಂತಾರೆ..ಆದ್ರೆ ನಾನು ಓದಿರುವ ಅಥ್ವಾ ಕೇಳಿರೋ ಕಥೆಗಳಲ್ಲಿ ಹೆಣ್ಣು ಪುನರ್ಜನ್ಮಿಗಳೇ ಹೆಚ್ಚು..ನಿಮಗೆ ಏನಾದರೂ ಓದಿದ್ದು ನೆನಪಿದೆಯಾ..ಗಂಡು ಜೀವ ಪುನರ್ಜನ್ಮ ಪಡೆದ ಬಗ್ಗೆ?? ನಿಜಕ್ಕೂ ಇದು ಸೋಜಿಗದ ವಿಷಯ

    ReplyDelete
  19. ನಿಜ,, ಎಂದಿಗೂ ಈ reincarnation ಹಾಗೂ occultism ನಂತಹ ವಿಷಯಗಳು ಸೋಜಿಗವನ್ನುಂಟುಮಾಡುತ್ತವೆ..

    ಮಾಹಿತಿಯನ್ನೊಳಗೊಂಡ ಲೇಖನ..ನಿರೂಪಣೆ ಚೆನ್ನಾಗಿದೆ..

    ಇಂತಹ ಒಂದು ಒಳ್ಳೆಯ, ಕೌತುಕಪೂರ್ಣವಾದ ವಿಷಯವನ್ನು ನಮಗೆಲ್ಲ ಉಣಬಡಿಸಿದ್ದಕ್ಕೆ ಧನ್ಯವಾದಗಳು...

    ReplyDelete
  20. ಚೇತನಾ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..ಹಲವು ವಿಜ್ಞಾನಕ್ಕೆ ನಿಲುಕದ ವಿಷಯಗಳನ್ನು ನಾವು ನಂಬಲು ಹಿಂಜರಿಯುಉತ್ತೇವೆ ಎನ್ನುವುದು ಸತ್ಯ. ಆದರೆ ಇವು ಕೆಲ ಅಸಾಧಾರಣ ಘಟನೆಗಳು..ಇವನ್ನು ನಂಬದಿರಲು ಸಾಧ್ಯವೇ ಎನಿಸುತ್ತದೆ....ನಿಮ್ಮ ಬ್ಲಾಗ್ ನಿರಂತರ ಬರುತ್ತಿರಲಿ ಹೊಸ ಹೊಸ ಪೋಸ್ಟ್ ನೊಂದಿಗೆ..

    ReplyDelete
  21. ಜಲನಯನ ಸರ್,

    ಪುನರ್ಜನ್ಮದ ಬಗ್ಗೆ ಒಂದು ಮಾಹಿತಿಪೂರ್ಣ ಲೇಖನವನ್ನು ಕೊಟ್ಟಿದ್ದೀರಿ..ಎಲ್ಲಾ ಧರ್ಮಗಳಲ್ಲಿ ಇದರ ಬಗ್ಗೆ ಇರುವ ವಿಚಾರವನ್ನು ಚೆನ್ನಾಗಿ ಅವಲೋಕಿಸಿದ್ದೀರಿ...ಕೆಲವು ಸತ್ಯಮಾಹಿತಿಗಳನ್ನು ಓದಿದ ಮೇಲೆ ನನಗೂ ಎಲ್ಲೋ ದಿಗಿಲಾದದ್ದು ನಿಜ. ಪುನರ್ಜನ್ಮವೆನ್ನುವುದು ಇದೆಯಾ ? ಕಾಡತೊಡಗಿದೆ.

    ಲೇಖನದಲ್ಲಿ ನೀವು ಒದಗಿಸಿರುವ ಮಾಹಿತಿಗಳನ್ನು ಓದಿ ಖುಷಿಯಾಯ್ತು...ಒಳ್ಳೆಯ ಲೇಖನ

    ಧನ್ಯವಾದಗಳು.

    ReplyDelete
  22. :) ಒಳ್ಳೆ ತಲೆ ತಿನ್ನುವ ವಿಚಾರವನ್ನೇ ಹೊರತೆಗೆದಿದ್ದೀರಿ.. ನನ್ನ ಮುಂದಿನ ಜನ್ಮದವರೆಗೂ ಈ ಪ್ರಶ್ನೇ ಕಾಡೀತು ಅಂತ ಯೋಚಿಸ್ತಾ ಇದೀನೀ...
    ಲೇಖನ ಬಹಳ ಚೆನ್ನಾಗಿದೆ, ವಿಷ್ಲೇಶಣೆ ವಾಸ್ತವಿಕವಾಗಿದೆ, ಈ ಪುನರ್ಜನ್ಮದ ಬಗ್ಗೆ ವೈಜ್ಞಾನಿಕವಾಗಿ ಎಲ್ಲೂ ಪುರಾವೆ ಸಿಕ್ಕಿಲ್ಲ ಆದರೂ ಪುರಾವೆ ಸಿಕ್ಕರೆ ಮಾತ್ರ ನಿಜ ಅಂತಲೂ ಹೇಳಬೇಕಾಗಿಲ್ಲ... ಈ ಜನ ಮರಣದಿಂದ ಮುಕ್ತಿಯೇ ಮೋಕ್ಷ ಅಂತ ಕೂಡ ಹೇಳ್ತಾರೆ, ಜನ್ಮಜನ್ಮಾಂತರದ ಸಂಬಂಧ ಅಂತಲೂ ಹೇಳ್ತಾರೆ... ನನಗೆ ಬಹಳ ಗೊತ್ತಿಲ್ಲ...
    ಒಂದಂತೂ ನಿಜ ನಾನು ಹೋದ ಜನ್ಮದಲ್ಲಿ ಏನಾಗಿದ್ದೆನೋ ಏನೊ, ಈ ಜನ್ಮ ಮಾತ್ರ ಸಾರ್ಥಕ ಮಾಡಿಕೊಂಡು ಹೊರಟರೆ ಸಾಕು ಅಂತಂದುಕೊಂಡಿದ್ದೇನೆ...

    ReplyDelete
  23. ಪುನರ್ಜನ್ಮದ ಲೇಖನ ಆಸಕ್ತಿದಾಯಕವಾಗಿತ್ತು. ಇಂಥ ಮಾನವಾತೀತ (paranormal) ವಿಷಯಗಳ ಬಗ್ಗೆ ನನಗೆ ಯಾವಾಗಲೂ ಕುತೂಹಲ. ಎಲ್ಲ ಧರ್ಮಗಳೂ ಜನನಮರಣಗಳ ಬಗ್ಗೆ ಉಲ್ಲೇಖಮಾಡುತ್ತವೆ. ಪುನರ್ಜನ್ಮ, ಆತ್ಮ, ದೆವ್ವ, ಭೂತ, ದೇವರು, ಹೀಗೆ ನಮ್ಮ ಕಲ್ಪನೆ, ವಿಜ್ಞಾನಕ್ಕೆ ಮೀರಿದ ಸಂಗತಿಗಳು ಇನ್ನೂ ಅನೇಕ ಇವೆ. ನಮಗೆ ತಿಳಿಯದ್ದೆಲ್ಲ ಮೂಢನಂಬಿಕೆ ಎಂದು ಹೀಗಳೆಯುವುದು ಸರಿಯಲ್ಲ. ಒಳ್ಳೆ ಲೇಖನ.

    ReplyDelete
  24. ಶಿವು, ಜನ್ಮದ ಬಗ್ಗೆ ನಾವು ಖಚಿತವಾಗಿ ಹೇಳಬಲ್ಲೆವು ಕಡೇ ಪಕ್ಷ ಅಂಡ-ಶುಕ್ರಾಣು ಸೇರಿ ಫಲಗೊಂಡಾಗ..ಅದು ಒಂಭತ್ತು ತಿಂಗಳಲ್ಲಿ ಹೆಣ್ಣೋ-ಗಂಡೋ ಆಗಿ ಜನಿಸುತ್ತೆ ಎಂದು. ಮುಂಚೆ ಮೂರು-ನಾಲ್ಕು ತಿಂಗಳಿಗೆ ಅದೂ ವಾಂತಿ, ಬಯಕೆ , ಮುಟ್ಟುನಿಲ್ಲುವಿಕೆ ಇಂತಹ ಲಕ್ಷಣಗಳ ಮೂಲಕ, ನಂತರ ಫ಼ರ್ಟಿಲಿಟಿ ಟೆಸ್ಟ್ ಮೂಲಕ ಈಗ ಸ್ಕ್ಯಾನ್ ಮತ್ತು ಇತ್ತರೆ ಆಧುನಿಕೆ ಉಪಕರಣಗಳ ಮೂಲಕ...ಮತ್ತೆ ಮುಂದುವರೆದು..ಪ್ರನಾಳ ಶಿಶು.. ಮೂಲ-ಕ್ರಿಯೆಯ ಬೇರಿನ ಎಳೆಗೆ ಹೋಗಿ ಅರಿವಾಗುತ್ತೆ...ಹೀಗೆ..ನಮ್ಮ ಜ್ಜಾನದ ಎಟುಕು ಬೆಳೆದಂತೆಲ್ಲಾ ಹೆಚ್ಚು ಹೆಚ್ಚು ತಿಳಿಯುತ್ತೆ. Science ನಲ್ಲಿ, matter cannot be created nor destroyed ಎಂದು ಹೇಳಲಾಗುತ್ತೆ, ಹಾಗೇ energy ಶಕ್ತಿ ಸಹಾ ತನ್ನ ರೂಪ ಬದಲಾಯಿಸುತ್ತೆ ಹೊರತು ಅದನ್ನು ನಾಶ ಮಾದಲಾಗುವುದಿಲ್ಲ...ಈ ಎಲ್ಲ ಸಿದ್ಧಾಂತಗಳ ಹಿನ್ನೆಲೆಯಲ್ಲಿ, ಉಸಿರಾಡುತ್ತಿದ್ದ, ಏನೆಲ್ಲ ಮಾಡುತ್ತಿದ್ದ ಜೀವ ಒಮ್ಮೆಲೇ ಇಲ್ಲದಂತಾಗುತ್ತೆ ಎನ್ನುವುದನ್ನು ಹೇಗೆ ನಂಬಲು ಸಾಧ್ಯ? ಪ್ರಾಣವೂ ಶಕ್ತಿಯ ರೂಪವೇ ಅಲ್ಲವೇ...ದೇಹವೇನೋ ಮಣ್ಣಾಗುತ್ತೆ..ಕಣಗಳಾಗುತ್ತೆ...ಮತ್ತೊಂದು ಸಸ್ಯವೋ ಪ್ರಾಣಿಯೋ ಹುಟ್ಟುತ್ತೆ ಎನ್ನುವುದನ್ನೂ ನಂಬುತ್ತೇವೆ ನಾವು...ಹೇಗೇ ಪ್ರಾಣ (ಶಕ್ತಿ) ಬೇರೆ ರೂಪದಲ್ಲಿ ಏಕೆ ರೂಪಾಂತರಗೊಳ್ಲಬಾರದು..ಇದನ್ನು ಪುನರ್ಜನ್ಮ ಎಂದು ಏಕೆ ಹೇಳಲಾಗದು.....???? ಓಹ್..ನನ್ನ ಯೋಚನೆ ಮತ್ತು ನನ್ನಲ್ಲಿರುವ Scientist ಹೀಗೆಲ್ಲಾ ಯೋಚಿಸಲು ನನ್ನನ್ನು ಪ್ರೇರೇಪಿಸಿದೆ...
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  25. ಪ್ರಭು, ಯೋಚಿಸ್ತಾ ಮತ್ತೆ ನಿಮ್ಮಾk ಗೆ ಎಲ್ಲಾದರೂ ನಿಮ್ಮ ಹಳೆ ಜನ್ಮದ ವಿಷಯ ಹೇಳಿಬಿಟ್ಟೀರಾ?? ಆಮೇಲೆ ಮುಗೀತು ಕಥೆ..ನಿಮ್ಮ ಬ್ಲಾಗು-ಗೀಗು ಎಲ್ಲಾ ನಿಂಥೋಗುತ್ತೆ..ಜೋಕೆ..
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  26. ದಿಪಸ್ಮಿತಾ, ಮಾನವಾತೀತ ಎನ್ನುವ ಶಬ್ದ ಕಾಲ ಕಾಲಕ್ಕೆ ಬದಕಾಗುತ್ತೆ ಅಲ್ಲವೇ? ನಮ್ಮ ಪೂರ್ವಜರು ಚಂದ್ರನನ್ನು ದೇವರೆಂದರು..ಈಗ ನಾವು ದೇವರ ಹತ್ತಿರ ಹೋಗುವಷ್ಟು ಬೆಳೆದಿದ್ದೇವೆ.. ನಮ್ಅಗೆ ನಿಲುಕದ್ದು ದೈವಾಂಶ ಎನ್ನುವುದು ಹಳೆಯದಾಯಿತು...ಸತ್ತ ನಂತರ ಬದುಕಿದ್ದ ಜೀವದ ಶಕ್ತಿ ಎಲ್ಲಿಯಾದರೂ ವರ್ಗಾವಣೆಯಾಗಿರಲೇಬೇಕಲ್ಲವೇ?? ಅದು ಎಲ್ಲಿಗೆ ಹೋಗುತ್ತೆ?? ಯೋಚಿಸಬೇಕಾದ ವಿಷಯ...

    ReplyDelete
  27. ಮಾಹಿತಿಪೂರ್ಣ ಬರಹ... ಚೆನ್ನಾಗಿ ನಿರೂಪಿಸಿದ್ದೀರಿ.. ಧನ್ಯವದಗಳು... ನನ್ನ ಬ್ಲಾಗಿಗೆ ಭೇಟಿನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  28. ಮುಸ್ಸಂಜೆ ಇಂಪು...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..ನನ್ನ ಗೂಡಿಗೆ ಬಂದಿರಿ ನಿಮ್ಮ ಪ್ರೋತ್ಸಾಹದ ಎರಡು ಮಾತಿಂದ ಬೆನ್ನು ತಟ್ಟಿದಿರಿ..ನನ್ನಿ.

    ReplyDelete
  29. ಪುನರ್ಜನ್ಮ ನಿಜಕ್ಕೂ ತುಂಬಾ ಕುತೂಹಲಭರಿತ ವಿಷಯವೇ ಸರಿ.. ಉತ್ತಮ ವಿಷಯವನ್ನೇ ಆರಿಸಿಕೊಂಡಿದ್ದೀರಿ... ಉತ್ತಮ ನಿರೂಪಣೆ ಕೂಡಾ...

    ತನಗೆ ಸಂಪೂರ್ಣ ಅರಿವಿರದ ವಿಷಯಗಳ ಬಗ್ಗೆ ಆಸಕ್ತಿ, ಕುತೂಹಲ ಗಳಿರೋದು ಮಾನವಸಹಜ... ಹಾಗೆ ಗೊತ್ತಿರದ ವಿಷಯಗಳ ಬಗ್ಗೆ ಅರಿಯಲು ಹೋಗಿದ್ದಕ್ಕೆ ಜಗತ್ತು ಇಂದು ಇಷ್ಟು ಮುಂದುವರೆದಿರೋದು.. ಆದರೂ, ಹುಟ್ಟು, ಸಾವು, ಸಾವಿನ ನಂತರದ ಜೀವನ ಇದ್ಯಾವುದನ್ನೂ ಸಂಪೂರ್ಣವಾಗಿ ತಿಳಿದುಕೊಳ್ಳಲು, ನಿಯಂತ್ರಣ ಸಾಧಿಸಲು ಮನುಷ್ಯನಿಗೆ ಸಾಧ್ಯವಾಗಿಲ್ಲ... ಸಾಕಷ್ಟು ಪುರಾವೆ ಸಿಗದೇ ಇರೋದ್ರಿಂದ ಪುನರ್ಜನ್ಮದ ಕತೆಗಳನ್ನ ನಂಬುವದೋ, ಬಿಡುವುದೋ... ಗೊಂದಲ ಬಗೆ ಹರಿಯದು.. ಆದರೂ, ಒಮ್ಮೊಮ್ಮೆ ಕೆಲವರು ನೋಡಿರದ ಸ್ಥಳಗಳ ಬಗ್ಗೆ ಹೇಳೋದು, ಕೇಳಿಯೇ ಇರದ ಭಾಷೆಯಲ್ಲಿ ಸ್ಪಷ್ಟವಾಗಿ ಮಾತನಾಡೋದು, ಪರಿಚಯವೇ ಇಲ್ಲದ ಮುಖಗಳಲ್ಲಿ ಸಂಬಂಧ ಗುರುತಿಸೋದು ನೋಡಿದಾಗ ನಂಬಲೇ ಬೇಕಾಗುತ್ತದೆ...

    ಹಾಗೆಯೇ ಹಲವಾರು ಸಂಶೋಧನೆಗಳಿಂದ ಕಂಡು ಬಂದ ಸತ್ಯ ಅಂದ್ರೆ ಮಹಿಳೆಯರಲ್ಲಿ ಮನಸ್ಸಿಗೆ ಸಂಭಂದಿಸಿದ ಸಮಸ್ಯೆಗಳು ಹೆಚ್ಚು ಅನ್ನೋದು.. ಇದೇ ಕಾರಣಕ್ಕಿರಬಹುದು... ನಿಮ್ಮ ಉದಾಹರಣೆಗಳಲ್ಲಿ ಬರೀ ಮಹಿಳೆಯರ ಕಥೆಯೇ ಇರೋದು..! :)

    ReplyDelete
  30. ಜಲಾನಯನ ಸರ್ ,
    ತುಂಬಾ ಆಸಕ್ತಿದಾಯಕ ಹಾಗೂ ಕುತೂಹಲಕಾರಿಯಾದ ವಿಷಯ ಇದು .. ಲೇಖನ ನಿರೂಪಿಸಿದ ಬಗೆಯೂ ತುಂಬಾ ಚೆನ್ನಾಗಿದೆ ..
    ಮೂರು ತಾಸಿನೊಳಗೆ ಮಾಹಿತಿ ಸಂಗ್ರಹಿಸಿ ಬರೆದದ್ದು ಮೆಚ್ಚಲೇ ಬೇಕು .. ಹಲವಾರು ಉದಾಹರಣೆ ಕೊಟ್ಟು ಚಂದದ ಲೇಖನ ಬರೆದದ್ದಕ್ಕೆ ಧನ್ಯವಾದಗಳು

    ReplyDelete
  31. ಆಝಾದ್ ಸರ್...

    ಹುಟ್ಟು, ಸಾವು ಬದುಕು, ಜೀವ, ಪುನರ್ಜನ್ಮದ ಬಗೆಗೆ ಮನುಷ್ಯ ಆನಾದಿ ಕಾಲದಿಂದಲೂ ತಲೆ ಕೆಡಿಸಿಕೊಂಡಿದ್ದಾನೆ..
    ಅವುಗಳನ್ನು ಅರ್ಥೈಸಿಕೊಳ್ಳುವದು ಕಷ್ಟ..

    ಈ ಪುನರ್ಜನ್ಮದ ವಿಷಯ ಒಳ್ಳೊಳ್ಳೆ ಸಿನೇಮಾ, ಕಾದಂಬರಿ ಕೊಟ್ಟಿದೆ...

    ನಿಮ್ಮ ವಸ್ತುನಿಷ್ಠ ವಿಶ್ಲೇಷಣೆ ಇಷ್ಟವಾಯಿತು...

    ನಿಮ್ಮ ಅಧ್ಯನಕ್ಕೊಂದು ನನ್ನ ಸಲಾಮ್...!

    ReplyDelete
  32. ತುಂಬಾ ಚೆನ್ನಾಗಿ ಬರೆದಿದ್ದೀರ....
    ಅಬ್ಬಾ ... ಓದುತ್ತ ಓದುತ್ತ ನಾನು ಏನು ಆಗಿರಬೇಕೆಂದು ಯೋಚಿಸಲಾರಮ್ಬಿಸಿದೆ... ಕಣ್ಣಿಗೆ ಸುತ್ತಿಕೊಂಡ ಹಾಗೆ ಆಯಿತು ತಟ್ಟನೆ ಯೇಚ್ಚೆತ್ತುಕೊಂಡೆ ಇಲ್ಲದೆ ಇದ್ದರೆ. .....

    ReplyDelete
  33. Dileep, thanks,
    ನನ್ನ ಮನಸ್ಸಿನಲ್ಲಿ ಕೊರೆಯಿತ್ತಿದ್ದ ಅಂಶ ಹೀಗೆ ಬ್ಲಾಗಿನ ಮೂಲಕ ವ್ಯಕ್ತವಾಗಲು ಕಾರಣ ಈ ಮಧ್ಯೆ ಬರುತ್ತಿರೋ ಗ್ರಹಣ ಅನ್ನೋ ಸುವರ್ಣ ಚಾನಲ್ ನ ಧಾರಾವಾಹಿ, ಇದು ಸತ್ಯ್ ಘಟನೆ ಎಂದೇ ಬಿಂಬಿಸಲಾಗಿದೆ, ಈ ಘಟನೆ ಗಾಂಧೀಜಿಯವರನ್ನೂ ಆಶ್ವರ್ಯಕ್ಕೀಡುಮಾಡಿತ್ತು ಎಂದು ಹೋದ ಸಮ್ಚಿಕೆಯಲ್ಲೂ ಹೇಳಿದ್ದಾರೆ..ನೋಡಿ ಧಾರಾವಾಹಿ..

    ReplyDelete
  34. ರಂಜಿತಾ, ನನ್ನಿ, ನಿಜ ಇದು ಬಹಳ ಕುತೂಹಲ ಭರಿತ ವಿಷಯ, ಓದಿದಷ್ಟೂ ಕೇಳಿದಷ್ಟು..ಇನ್ನೂ ಏನಾದರೂ ಇದೆಯೇ..ಎನ್ನುವಂತಿರುತ್ತದೆ. ನಿಮಗೆ ಹೀಗೇ ಕೇಳಿ ತಿಳಿದುದರ ಅನುಭವ ಇದ್ದರೆ ಬರೆಯಿರಿ, ನಮ್ಮ ಬ್ಲಾಗ್ ಮಿತ್ರರೊಬ್ಬರು ಪೂರ್ಣ ಪ್ರಮಾನದ ಲೇಖವೊಂದನ್ನು ಬರೆಯಬೇಕೆಂದಿದ್ದಾರೆ, ನಿಮ್ಮ ಪ್ರತಿಕ್ರಿಯೆ ಮತ್ತು ಪೂರಕ ಮಾಹಿತಿ ಅವರಿಗೆ ಸಹಕಾರಿಯಾಗಬಹುದು.
    ಅಂದಹಾಗೆ ನಾನು ಜಲನಯನ..ಜಲಾನಯನದಲ್ಲಿರುವ ಜಲನಯನ (ಅಂದ್ರೆ ಮೀನು...ಹಹಹ)...ಧನ್ಯವಾದ

    ReplyDelete
  35. ಪ್ರಕಾಶ್, ನಿಮ್ಮ ಗಮನಕ್ಕೆ ಬಂದ ಪುರುಷ ಪುನರ್ಜನ್ಮಿ ಕಥೆ ಏನದರೂ ಇದ್ದ್ರೆ ಹೇಳಿ..ನನಗೆ ಸಿಕ್ಕವೆಲ್ಲಾ ಸ್ತ್ರೀ ಪುನರ್ಜನ್ಮಿಗಳಿಗೆ ಸಂಬಂಧಿಸಿದ್ದು...ನಾನು ಪಕ್ಷಪಾತಿ ಆಗಬಾರದಲ್ಲ ಅದಕ್ಕೆ...
    ತುಂಬಾ ಧನ್ಯವಾದ ನಿಮ್ಮಂಥ ಹಿರಿಯಬ್ಲಾಗಿತಿಯರು ಪ್ರತಿಕ್ರಿಯಿಸಿದ್ದಕೆ...(ಬ್ಲಾಗಿತಿ, ಪುರುಷ ಬ್ಲಾಗ್ ಲೆಖಕರು, ಬ್ಲಾಗಿತ್ತಿ..ಸ್ತ್ರೀ ಬ್ಲಾಗ್ ಲೇಖಕಿಯರು...ಹೇಗಿದೆ ನನ್ನ someಶೋಧನೆಯ ಪದಾವಳಿ...ಹಹಹ)

    ReplyDelete
  36. ಗೋಪಾಲ್...ಅರೆರೆ...ಅಷ್ಟೊಂದು ಪ್ರಭಾವಿತರಾದಿರೇ ನೀವು..? ಮತ್ತೆ ನನ್ನ ಮೇಲೆ ಮೊಕದ್ದಮೆ ಏನಾದ್ರೂ ಹಾಕ್ಬಿಟ್ಟೀರ‍? ನಿಮ್ಮ ಪ್ರೋತ್ಸಾಹದ ಮಾತಿಗೆ ಮತ್ತು ಲೇಖನದ ಬಗ್ಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  37. ಜಲನಯನ,

    ನಾನೂ ಅಷ್ಟೇ ಉಸಿರು ಬಿಗಿ ಹಿಡಿದು ಓದಿದೆ ! ಅಧ್ಯಯನ ಮಾಡಿ ಬರೆದ ಉತ್ತಮ ಬರೆಹ. ಕೆಲವರ್ಷಗಳ ಹಿಂದೆ ಪುನರ್ಜನ್ಮದ ಬಗ್ಗೆ ಯಾವುದೋ ಪುಸ್ತಕ ಓದಿದ್ದು ನೆನಪಾಯಿತು.
    ಹಾಗೆ, ನನ್ನ ಮಗಳು ಚಿಕ್ಕವಳಿದ್ದಾಗಿನ ಒಂದು ಘಟನೆಯೂ. ಅವಳೂ ಕೆಲದಿನಗಳ ಕಾಲ ತನಗೆ ಮದುವೆಯಾಗಿದೆ , ಗಂಡ ಇದ್ದಾನೆ ಎಂದೆಲ್ಲ ವಿಚಿತ್ರವಾಗಿ ಮಾತನಾಡುತ್ತಿದ್ದಳು. ಸದ್ಯ, ಕೆಲ ದಿನಗಳಲ್ಲಿ ಅದು ನಿಂತು ಹೋಗಿದ್ದರಿಂದ ನಾವು ಸಮಾಧಾನದ ಉಸಿರು ಬಿಟ್ಟಿದ್ದೆವು. ಆ ಘಟನೆಯ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ನನ್ನ ಬ್ಲಾಗಿನಲ್ಲಿ ಬರೆಯುತ್ತೇನೆ.

    ReplyDelete
  38. ಚಿತ್ರಾ..ಒಂದು ಕ್ಷಣ ನನಗೇ ನಂಬಲಾಗಲಿಲ್ಲ...ನಿಮ್ಮ ಮಗಳು..!! ಮದುವೆಯಾಗಿದೆ ಎಂದು...!!! ಅದು ತಮಾಶೆಗೆ ಹೇಳಿದ್ದೋ ಹೇಗೆ..?? ನಿಜ ಇವೆಲ್ಲಾ ವಿವರಿಸಲಾಗದ ಅಂಶಗಳು...ನಿಮ್ಮ ಬ್ಲಾಗಿಗೆ ಕಾಯುತ್ತಿರುತ್ತೇನೆ..ಅಮ್ದಹಾಗೆ ಸುವರ್ಣ ಚಾನಲ್ ನಲ್ಲಿ ಬರುತ್ತಿರುವ ಗ್ರಹಣ ನೋಡಿದಿರಾ..? ನೋಡಿ..ಇದೇ ವಿಷಯದ್ದು.. ಧನ್ಯವದ ನಿಮ್ಮ ಪ್ರಿತಿಕ್ರಿಯೆಗೆ

    ReplyDelete