Monday, April 12, 2010

ತಿಳಿ ನೀರು - ನಿರ್ಮಲ ಕೊಳ



ತಿಳಿ ನೀರು- ನಿರ್ಮಲ ಕೊಳ


ಮುಳುಗಿ ಏಳ್ತಾನೆ ಸೂರ್ಯಾನೂ


ತಾಳಲಾರದೆ ಬಿಸಿಲ ಝಳ


ಕೊಳದಲ್ಲಿ ಹತ್ತು ಹಲವು ಜಾತಿ


ಕೆಂಪು, ಹಳದಿ, ಹಸಿರು, ಕಪ್ಪು ಮೀನು



ದೊಡ್ಡದು ಚಿಕ್ಕದಕ್ಕೆ ಹೇಳ್ತು ಮೆದುವಾಗಿ


ನನ್ಪಾಡ್ಗೆ ನಾನಿರ್ತೀನಿ ಇರ್ಬೌದಲ್ಲ ನೀನೂ


ಆಮೆನೂ ಇತ್ತು ಅಲ್ಲೇ ವಾಸವಾಗಿ


ಮೊಸಳೇನೂ ಬರ್ತಿತ್ತು, ಹೋಗ್ತಿತ್ತು


ತಂಟೆಯಿಲ್ಲ ತಕರಾರಿಲ್ಲ ಎಲ್ಲಾ ಇದ್ವು ಹಾಯಾಗಿ



ಕೆಂಪು ಕಪ್ಪಿಗೆ ಹಲೋ ಅಂದ್ರೆ


ಹಳದಿ ಹಸಿರಿಗೆ ಚಲೋ ಅನ್ತಿತ್ತು ಆಟಕ್ಕೆ


ಅವರವರ ಲೋಕದಲ್ಲಿ ಹಾಯಾಗಿದ್ವು


ಗುರಿಯಾಗದೇ ಯಾವುದೇ ಕಾಟಕ್ಕೆ



ಆಗೊಮ್ಮೆ ಆಗ್ಬಾರ್ದು ಆಗೇ ಹೋಯ್ತು


ಸೂರ್ಯ ತನ್ನ ಬಿಸಿಲಲ್ಲಿ ತಾನೇ ಸುಡ್ತು


ಕಪ್ಪು ಮೋಡ ಆಕಾಶದಲ್ಲಿ ಗುಡುಗು ಸಿಡ್ಲು


ಗಾಳಿ ಮಳೆಗೆ ಹಾರಿದ್ವು ಎಷ್ಟೋ ಗುಡ್ಲು


ಅಲ್ಲೆಲ್ಲಿಂದ್ಲೋ ಹರ್ದು ಬಂತು ಅಪಾರ ನೀರು


ಬಗ್ಗಡ ಆಯ್ತು ತಿಳಿಯಾಗಿದ್ದ ಕೊಳದ ನೀರು

44 comments:

  1. ಅಜಾದ್,

    ಪ್ರಕೃತಿಯ ಪ್ರಕ್ರಿಯೆಯನ್ನು ಸಾದ ಸೀದ ವರ್ಣಿಸಿದ್ದೀರಿ. ನಡುವೆ ಬರುವ ಗುಡುಗು ಮಳೆ ಪರಿಣಾಮ ಕೂಡ ವಿಭಿನ್ನವೆನಿಸಿತು...

    ReplyDelete
  2. ಬಹಳ ಸುಂದರವಾಗಿ ವರ್ಣಿಸಿದ್ದೀರಿ, ಬಗ್ಗಡವಾದ ತಿಳಿನೀರು ಬೇಗ ಮತ್ತೆ ತಿಳಿಯಾದರೆ ಮತ್ತೆ ಜಲ ಜೀವಿಗಳು ಹಾಗೇ ಅರಾಮಾಗಿ ಇರ್ಬಹುದೇನೋ.

    ReplyDelete
  3. ಚೆನ್ನಾಗಿದೆ ಕವನ.. ಪ್ರಕೃತಿಯ ಒಂದು ಕ್ರಿಯಾ ಚಕ್ರದಲ್ಲಿ ಜೀವನ ಸತ್ಯ ಬರೆದ್ದಿದ್ದೀರ. ಜೀವನ ಶಾಂತಿಯು ಹೀಗೆ ಕಷ್ಟಗಳೆದುರಾದಾಗ ಹದಗೆಡುವುದು. ಅದನ್ನೆದುರಿಸೊ ಧರ್ಯ ಮತ್ತು ಬಗ್ಗಡ ತಿಳಿಯಾಗೊವರೆಗೆ ತಾಳ್ಮೆ ಇದ್ದರೆ ಗೆಲ್ಲಬಹುದು ಅಲ್ವೆ..

    ReplyDelete
  4. ತುಂಬಾ ಚನ್ನಾಗಿದೆ ಸರ್ ಪ್ರಕೃತಿಯ ಬಗ್ಗೆ ನಿಮ್ಮ ನಿಮ ಕವನ

    ReplyDelete
  5. ಆಜಾದ್ ಸರ್,,
    ತುಂಬಾ ಚೆನ್ನಾಗಿ ವರ್ಣಿಸಿದ್ದಿರ, ಪ್ರಕೃತಿ ಬಗೆಗಿನ ಕವನ ನ....ವೆರಿ ನೈಸ್...

    ReplyDelete
  6. ಚುಕ್ಕಿ ಚಿತ್ತಾರ...ಧನ್ಯವಾದ...
    ಎಷ್ಟೋ ವರ್ಷಗಳ ನಮ್ಮ ಸಹಬಾಳ್ವೆ ಬೆರಳೆಣಿಕೆಯ ಹೊರಗಡೆಯವರ ಕುತಂತ್ರಕ್ಕೆ ಬಲಿಯಾಗಿ ನಮ್ಮಲ್ಲೇ ಅನುಮಾನಗಳು ಉದ್ಭವವಾಗುತ್ತಿರುವುದನ್ನು ನೋಡಿ ಖೇದಗೊಂಡ ಮನಸಿನ ಅಳಲನ್ನು ನಿಮ್ಮ ಮುಂದೆ ಇಡಲು ಪ್ರಯತ್ನ...ಧನ್ಯವಾದ ನಿಮ್ಮ ಅಭಿಪ್ರಾಯಗಳಿಗೆ...,

    ReplyDelete
  7. ಜಲನಯನ ಸರ್
    ದಿನೇ ದಿನೇ ಸೂರ್ಯನ ತಾಪ ಹೆಚ್ಚುತ್ತಿದೆ
    ಗ್ಲೋಬಲ್ ತಾಪಮಾನ ಹೆಚ್ಚುವಿಕೆ ಮನುಕುಲಕ್ಕೆ ಶುಭಕರವೇನೂ ಅಲ್ಲ
    ಜೊತೆಗೆ ಕವನದಲ್ಲೇ ಹೇಳಿರುವಂತೆ ಮನುಷ್ಯ ಮೊದಲಿಗಿಂತ ಹೆಚ್ಚು ಸಂಶಯ ಪ್ರಾಣಿ ಆಗುತ್ತಿದ್ದಾನೆ
    ಸಹಬಾಳ್ವೆ ಎನ್ನುವುದು ಅವನಿಗೆ ಹಿಡಿಸದ ಶಬ್ದವಾಗುತ್ತಿದೆ
    ಜಾತಿ ಜಾತಿ ಎಂಬ ಪದಗಳಲ್ಲೇ ಮುಳುಗಿರುವ ಅವನ ನಡೆ ದಿನ ದಿನಕ್ಕೂ ಸಂಕೀರ್ಣವಾಗುತ್ತಿದೆ
    ಸುಂದರ ಕವನ

    ReplyDelete
  8. ಧನ್ಯವಾದ ರಂಜು, ಎಂದಿನಂತೆ..ಮೆಚ್ಚುವ ನಿನ್ನ ಪ್ರತಿಕ್ರಿಯೆಗೆ...ನಿನ್ನ ಬ್ಲಾಗು ಯಾಕೋ ಬುರಖಾ ಹಾಕಿಕೊಂಡಿದೆ ಈ ಮಧ್ಯೆ...ಹಹಹ..ಬೇಗ ಒಮ್ಮೆ ದರ್ಶನ ಆಗಲಿ...

    ReplyDelete
  9. ಶಿವು ಧನ್ಯವಾದ...ಗುಡುಗು ಬರಿದೇ ಆದ್ರೆ...ಭಯ...ಬೆವರು..ಮಳೆಯಾದ್ರೇನೇ ಅದರ ಶಬ್ದಕ್ಕೂ ಸಾರ್ಥಕತೆ ಅಲ್ಲವೇ..?

    ReplyDelete
  10. ಸಾಗರಿಯವರೇ...ನಮ್ಮಲ್ಲಿಯ ನೀರು ಹೇಗಿರಬೇಕೆಮ್ದು ನಾವೇ ನಿರ್ಧರಿಸಬೇಕು ಅಲ್ಲವೇ ಮೂರನೇವರೈಗೆ ಬಿಟ್ತರೆ..ಕಷ್ಟ..ಧನ್ಯವಾದ ನಿಮ್ಮ ಅನಿಸಿಕೆಗೆ..

    ReplyDelete
  11. ಶ್ರವಣ ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಗ ಹೀಗೇ ನಿರಂತರ ಹರಿಯಲಿ...ಧನ್ಯವಾದ

    ReplyDelete
  12. ಮಂಜು, ಥ್ಯಾಂಕ್ಸ್ ಕಣಪ್ಪಾ...ಸ್ವಲ್ಪ ಬ್ಯುಸಿ ಆಗಿಬಿಟ್ಟೆ ನಿನ್ನ ಬ್ಲಾಗಿನಕಡೆ ಬರಲಾಗಲಿಲ್ಲ..ಬರ್ತೇನೆ...ಸದ್ಯದಲ್ಲಿ

    ReplyDelete
  13. ಗುರು..ಪ್ರಕೃತಿ ಕಲಿಸುವ ಪಾಠಗಳನ್ನು ನಾವು ಕಲಿಯುವದಿಲ್ಲ ಅದೇ ವಿಷಾದನೀಯ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  14. ಡಾಕ್ಟರೇ..ಗ್ಲೊಬಲ್ ವಾರ್ಮಿಂಗ್...ನ ಬಿಸಿ ತಟ್ಟೋಕೆ ಮುಂಚೆ ನಮಗೆ ಬುದ್ಧಿಯ ಬಾಗಿಲು ತೆರೆದರೆ ಒಳ್ಳೆಯದು...ಅಲ್ಲವೇ...ಎಚ್ಚೆತ್ತುಕೋ ಮನುಜ ಎನ್ನುತಿವೆ ಎಲ್ಲ ನಿಸರ್ಗ ಎಚ್ಚರಗಳು..

    ReplyDelete
  15. ಆಜಾದ್ ಸರ್,
    ತುಂಬಾ ನೋವಿನಿಂದ ಬರೆದ ಕವನ ಅನಿಸಿತು...... ತುಂಬಾ ಆಳದ ಅರ್ಥ ಇದೆ..... ಏನೇ ಇರಲಿ..... ಕವನ ಚೆನ್ನಾಗಿದೆ...... ಭೂಮಿಯ ಬಿಸಿ,, ನುಗ್ಗಿದ ನೀರು ಎಂದೆಲ್ಲಾ ಬರೆದು ನನ್ನ ತಲೆಯಲ್ಲಿ ಹುಳ ಬಿಟ್ಟಿದ್ದೀರಾ ಸರ್..... ಏನೇ ಇರಲಿ..... ಎಲ್ಲಾ ಸರಿಯಾಗಲಿ..... ಗೆಲುವಾಗಿರಿ...... ಸರ್......

    ReplyDelete
  16. Thank you Shashi...
    We need some one who can knit the feelings and brotherhood again ansollavaa nimage...?

    ReplyDelete
  17. ದಿನಕರ್, ಮನದಾಳದ ಕೆಲವು ಭಾವನೆಗಳ ಬಿತ್ತರ ಅಷ್ಟೇ...? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಹಾಗೇ ಕಾಳಜಿ ಭರಿತ ಪ್ರೋತ್ಸಾಹಕ್ಕೆ...

    ReplyDelete
  18. good one. ಅಲ್ಲಲ್ಲಿ line break ಇದ್ದಿದ್ರೆ ಮತ್ತೂ ಚೆನ್ನಾಗಿರ್ತಿತ್ತು. ಪ್ಯಾರಾದಲ್ಲಿಟ್ಟಿದ್ದರೆ ಚೌಕಟ್ಟು ಬರ್ತಿತ್ತು. ಬರೀತಾ ಇರಿ. ಮನದೋಳಗಿನ ಭಾವಗಳಿಗೆ ರೂಪಕೊಡುತ್ತಿದ್ದರೆ ಅವುಗಳ ತಾಕಲಾಟದ ಹಿಂಸೆಯಿಂದ ನಮಗೂ ಮುಕ್ತಿದೊರೆಯುವುದು ಅಲ್ಲವೇ?

    ReplyDelete
  19. ಆಝಾದ್...

    ಬಗ್ಗಡವಾದದ್ದು.....
    ತಿಳಿಯಾಗುವದಕ್ಕೆ..
    ಶುದ್ಧವಾಗುವಾಗುವದಕ್ಕೆ...

    ತಪ್ಪು, ಸರಿ..
    ಒಳ್ಳೆಯದು, ಕೆಟ್ಟದು ಯಾವುದೆಂದು..
    ತಿಳಿಯುವದಕ್ಕೆ.....

    ಬಹಳ ಚಂದದ ಕವನ...

    ಸಾಮರಸ್ಯ ಅನ್ನುವದು ನಮ್ಮ ಮೂಲ ಮಂತ್ರ...
    ಶಾಂತಿ ಕೂಡ..

    ಅಭಿನಂದನೆಗಳು... ಸುಂದರ ಕವಿತೆಗೆ...

    ReplyDelete
  20. ತಿಳಿಯಾದ ಮನಸುಗಳು ಇಂದಿನ ಸಮಾಜಕ್ಕೆ ಅತ್ಯವಶ್ಯಕ. ಬಗ್ಗಡಗೊಳಿಸುವ ಪ್ರಕೃತಿಗೆ ಶರಣಾಗಲೇಬೇಕು. ವಿಕೃತಿಗೇನು ಮಾಡೊಣ ??

    ReplyDelete
  21. ಜಲಾನಯನ ಸರ್,
    ನಿಮ್ಮ ಲೇಖನಗಳಿಗೆ ತುಂಬಾ ಕಾಯ್ತಾ ಇದ್ದೆ . ಯಾಕೋ ಈ ನಡುವೆ ಜಲಾನಯನ ಸ್ವಲ್ಪ ಸೈಲೆಂಟ್ ಆಗಿರೋದು ನೋಡಿ ಕಸಿವಿಸಿ ಆಗ್ತಿತ್ತು . ಸೈಲೆಂಟ್ ಆದ ಜಲಾನಯನ ಮಾತಾಡಿದ್ದು ಕೇಳಿ ಸಂತೋಷವಾಯಿತು .
    ತುಂಬಾ ನೋವು ಬರೆತ ಲೇಖನ , ಮನಸ್ಸು ಮನಸ್ಸಿನ ನಡುವೆ ಎದ್ದಿರುವ ಬಗ್ಗಡ ದೂರವಾಗಲಿ . ಮತ್ತೆ ಮನಸು ಎಂಬ ಕೊಳ ತಿಳಿಯಾಗಿ ಅಲ್ಲಿರುವ ಎಲ್ಲ ಜಲಚರಗಳು ಮೊದಲಿನಂತೆ ನಗುತ್ತ ಬಾಳಲಿ ಅನ್ನೋ ಹಾರೈಕೆ .
    ಮನಸಾರೆ

    ReplyDelete
  22. ತುಂಬಾ ಚೆನ್ನಾಗಿದೆ ಕವನ ಭಯ್ಯಾ. ಎಷ್ಟು ದೊಡ್ಡ ವಿಚಾರವನ್ನು ಎಷ್ಟು ಸರಳವಾಗಿ ಕವಿತೆ ರೂಪದಲ್ಲಿ ಇಟ್ಟಿದ್ದೀರಿ.

    ReplyDelete
  23. ಪ್ರಸ್ತಾವನಾ ಶೈಲಿ ಎಷ್ಟು ಪ್ರಭಾವ ಬೀರುತ್ತೆ ಅನ್ನೋದು...ನಿಮ್ಮ ತಿದ್ದುಪಡಿ ಅಳವಡಿಸಿದ ಮೇಲೆ ಗೊತ್ತಾಗ್ತಿದೆ..ತೇಜಸ್ವಿನಿಯವರೇ....ಧನ್ಯವಾದ....ಹೌದು ಒಂದು ಹಳೆಯ ಘಟನೆಯೂ ಈ ನನ್ನ ಕವನಕ್ಕೆ ಸ್ಫೂರ್ತಿ ಅಂದರೂ ತಪ್ಪಲ್ಲ...

    ReplyDelete
  24. ವನಿತಾ, ನಿಮ್ಮ ಹೊಸ ರುಚಿ ತರಹಾನೇ ಚಿಕ್ಕದು ಮತ್ತು ಚೊಕ್ಕದು...ರುಚಿಯಾಗಿ ಶುಚಿಯಾಗಿ...ಕಾಮೆಂಟಿಗೆ...ಧನ್ಯವಾದ

    ReplyDelete
  25. ಪ್ರಕಾಶು....ಸರ್ವಧರ್ಮ ಸಾಮರಸ್ಯವನ್ನ ನಮ್ಮ ಹಿರಿಯರು ಕಾಪಾಡಿಕೊಂಡು ಬಂದರೆ ನಾವು ಅದನ್ನ ಕೊಂದು ನಡೆದಿದ್ದೇವೆ ಅನ್ನಿಸುತ್ತೆ...ನಿನ್ನ ಮಾತು ನಿಜ...ಈಗ ಬರೀ ಜಾತಿ ಧರ್ಮ ಹೆಚ್ಚಾಗಿದೆ...ರಾಷ್ಟ್ರೀಯತೆ ...ದೇಶಪ್ರೇಮ ಕೊಚ್ಚಿಹೋಗಿದೆ...what a sad situation...? ಅಲ್ವಾ?...ಧನ್ಯವಾದ ನಿನ್ನ ಮಾತಿಗೆ ಮತ್ತೆ ಪ್ರತಿಕ್ರಿಯೆಗೆ...ಪ್ರಕಾಶ್

    ReplyDelete
  26. ಗುರು...ಧನ್ಯವಾದ...ಏನು ನಿಮ್ಮ ಬ್ಲಾಗ್ ಟೈಟಲ್ ಬದಲಾಯಿಸಿದ್ದೀರಾ...?

    ReplyDelete
  27. ರವಿಕಾಂತ್ ಸರ್...ಧನ್ಯವಾದ...ನಿಮ್ಮ ಪ್ರೋತ್ಸಾಹಕ್ಕೆ ಸಲಾಂ...

    ReplyDelete
  28. ಸುಬ್ರಮಣ್ಯರೇ...ಪ್ರಕೃತಿ ತನ್ನದೇ ನಿಯಮದಡಿ ಬಗ್ಗಡ ತರುತ್ತೆ...ಅದನ್ನು ತಿಳಿಮಾಡುತ್ತೆ ಸಹಾ...ಆದ್ರೆ ವಿಕೃತ ಮನಸಿನ ವಿಕೃತಿಗಳಿಗೆ...ಬಗ್ಗಡ ಮಾಡುವುದೊಂದೇ ಗೊತ್ತು...ಅದೂ ಕಾರಣವಿಲ್ಲದೇ...ಅದಕೆ ...ಉಪಾಯ ಕಾಣುತ್ತಿಲ್ಲ...ಧನ್ಯವಾದ ...ಪ್ರತಿಕ್ರಿಯೆಗೆ

    ReplyDelete
  29. ಮನಸಾರೆಯವರೇ....ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಹೌದು ಸ್ವಲ್ಪ ವ್ಯಸ್ತತೆ ...ವ್ಯಸನವಂತೂ ಅಲ್ಲ....ಖಂಡಿತಾ...ನಿಮ್ಮ ಆತ್ಮೀಯತೆಗೆ ಧನ್ಯವಾದ....ನಿಮ್ಮ ಮೈಲ್ ಐಡಿ ಕಳಿಸೀಪಾ...(ನನ್ನ ಮೈಲ್ azadis@hotmail.com) ನಮ್ಮ ಬ್ಲಾಗಿಗರ ಕೂಟದ ಬಗ್ಗೆ ನಿಮ್ಮಿಂದ ಪ್ರತಿಕ್ರಿಯೆ ತಿಳಿಸಿ...

    ReplyDelete
  30. ಓ.ಮ.ನೀ.ಹೀ. ...ಹಿಹಿಹಿಹಿ....ತಂಗ್ಯಮ್ಮ ಕವನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ...ಮತ್ತೆ ಬರುತ್ತಿರು ಆಯ್ತಾ...? ನೀನೂ ಸಹಾ ಬೆಳೀತಿದ್ದೀಯಾ...ಬ್ಲಾಗ್ ಬಳಗದಲ್ಲಿ...ಒಳ್ಳೆಯದಾಗಲಿ..ನಿನ್ನ ಬ್ಲಾಗಿಗೆ...

    ReplyDelete
  31. ನಿಮ್ಮ ಬರವಣಿಗೆ ಬಹಳ ಚೆನ್ನಾಗಿದೆ ಸರ್. ತುಂಬಾ ಹಿಡಿಸಿತು..

    ReplyDelete
  32. ಆಜಾದ್ ,
    ಸರಳ ಆದರೆ ಅರ್ಥಪೂರ್ಣ ಕವನ. ಇದೇ ರೀತಿ ಮನುಷ್ಯರೂ ಹೊಂದಿಕೊಂಡು ಇರುವಂತಾಗಿದ್ದರೆ ....... ಬಗ್ಗಡವಾದ ನೀರು ಬೇಗ ತಿಳಿಯಾಗುವಂತಿದ್ದರೆ ....

    ReplyDelete
  33. ಚಿತ್ರಾ ನಿಮ್ಮ ಪ್ರತಿಕ್ರಿಯೆಗೆ ನನ್ನ ನಮನ...ನಿಮ್ಮ ಮೊದಲ ಭೇಟೀನೇ ಜಲನಯನಕ್ಕೆ....? ನಿಮ್ಮಲ್ಲಿಗೂ ಬರುವೆ ಖಂಡಿತಾ...

    ReplyDelete
  34. ಇಬ್ಬರು ಚಿತ್ರಾರೂ ಒಮ್ಮೆಗೇ ಪ್ರತಿಕ್ರಿಯೆ ಹಾಕಿರುವುದು ....!! ಇಬ್ಬರ ಮಾತೂ ನಿಜ...
    ಮನುಷ್ಯರೂ ಹೊಂದಿಕೊಂಡು ಹೋಗಲು ಹೇಳಿಕೊಡುವಂತಾಯಿತೇ ಎನ್ನುವುದೇ ಚಿಂತೆಯವಿಷಯ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  35. ತಿಳಿಗೊಳ ಬಗ್ಗಡವಾಗದಿರಲಿ
    ಬದುಕು ಚೆದುರದಿರಲಿ
    ವಿವಿಧತೆಯಲ್ಲಿ ಏಕತೆ ಮೆರೆದಿರಲಿ
    ಸಹಬಾಳ್ವೆ ಸಹಮತವಾಗಿರಲಿ.
    ಚೆ೦ದದ ಕವನ ಅಜ಼ಾದರೇ.

    ReplyDelete
  36. ಸೀತಾರಾಂ ಸರ್, ನಿಮ್ಮ ಮಾತು ನಿಜ ಸಹಬಾಳ್ವೆ...ಸಹಮತವಿರಲಿ...
    ನಮ್ಮ ನಡುವೆ ಕಂದಕಗಳ ನಿರ್ಮಿಸುತ್ತಿರುವ ರಾಜಕಾರಣಿಗಳಬಗ್ಗೆ ನಾವು ಜಾಗರೂಕರಾಗಿದ್ದರೆ ಎಷ್ಟು ಉತ್ತಮ ಅಲ್ಲವೇ..?
    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  37. ಅರ್ಥವತ್ತಾದ ಸು೦ದರ ಕವನ.. ತು೦ಬಾ ಚೆನ್ನಾಗಿದೆ.

    ReplyDelete