Monday, August 2, 2010

ನನ್ನವಳು ನನಗೆ ತಲ್ಲಾಖ್ ಎನ್ನೋ ಸ್ಥಿತಿಗೆ ನನ್ನನ್ನು ತಂದಿದ್ದು ಯಾರು?

"ಟ್ರಿನ್..ಟ್ರಿನ್...ಟ್ರಿನ್..ಟ್ರಿನ್..ಟ್ರಿನ್..ಟ್ರಿನ್.."



ಯಾವ್ದೋ ಲೋಕಲ್ ಫೋನು...ಮಹೇಶ್, ಇಲ್ಲ ಸುಗುಣಾವ್ರೇ ಸಾಮಾನ್ಯವಾಗಿ ಕಾಲ್ ಮಾಡೋದು...ಆದ್ರೆ ಅವ್ರು ನನ್ನ ಲ್ಯಾಂಡ್ ಲೈನಿಗೆ ..ಮಾಡೊಲ್ಲವಲ್ಲ..??..ಅಂತ ಸುಮ್ಮನಾದೆ...ಅಷ್ಟರಲ್ಲಿ ನಿಂತಿತ್ತು ಟಿನ್ ಟ್ರಿನ್,,..ಸರಿ ನಾನು ನನ್ನ ಕೆಲಸ್ದಲ್ಲಿ.......ಅಲ್ಲಲ್ಲ...ಚಾಟ್ ಗೆ ಎಲ್ಲಿದೆ ಸಮಯ...?? ಅಡುಗೆ ಮನೆಯಲ್ಲಿ..!! ಯಾಕೆ ? ಈ ಕೆಲ್ಸ ಯಾವಾಗ್ಲಿಂದ ಅಂದ್ರ...?? ಅಯ್ಯೋ ..ರಜಗಳು ಇಲ್ಲಿ ಜೂನ್ ನಿಂದ, ಫ್ಯಾಮಿಲಿನ ಮದನಪಲ್ಲಿಗೆ ಬಿಟ್ಟು ಬಂದಿದ್ದೆ..... ಇನ್ನು ಕೂಳಿಗೆ ಈ ಮರಳುಗಾಡಿನಲ್ಲಿ?? ಮಾಡಿದ್ದುಣ್ಣೋ ಮಹರಾಯ ಅಂತ ನಾನು ಮಾಡಿದ್ದನ್ನ ನಾನೇ ತಿನ್ನಬೇಕಲ್ಲ? ಅದಕ್ಕೆ..ಈಗ ಹೆಚ್ಚು ಸಮಯ ಕೇರಾಫ್ ಕಿಚನ್.



ಮತ್ತೆ "ಟ್ರಿನ್..ಟ್ರಿನ್.....ಟ್ರಿನ್..ಟ್ರಿನ್......ಟ್ರೀನ್,,ಟ್ರೀನ್..." ಯಾಕೋ ಫೋನಿಗೂ ಕೋಪ ಬಂತಾ ಅನ್ನಿಸ್ತು ಇಲ್ಲ ಅಂದ್ರೆ ಟ್ರಿನ್ ಅನ್ನೋದು ಹೋಗಿ ಟ್ರೀನ್ ಅಂತ ಕಿರ್ಚೋದು ಯಾಕೆ...? ಸರಿ ಹೊಸ ಹ್ಯಾಂಡ್ಸ್-ಫ್ರೀ ತಂದಿದ್ದು ಮತ್ತೆ ಕೋಪ ಮಾಡ್ಕೊಂಡ್ ಕೆಳ್ಗೆ ಬಿದ್ರೆ ಕಷ್ಟ ಅಂತ ಬೇಗ ಬಂದು ಫೋನ್ ಎತ್ತಿದೆ.



"ಹಲೋ..." ಕ್ಯಾ ಕರ್ ರ್ರೈ..?" no doubtಉ ಅಬಿದಾದೇ ಫೋನು...!! ಬಹುಶಃ ನನ್ನ ಮಗಳು- ಸುರು "ಅಬ್ಬ" ಬರೋದ್ರೊಳಗೆ ಬೆಂಗಳೂರಿಗೆ ಹೋಗೋಣ ಅಂತ ಅವ್ರಮ್ಮನ ಹತ್ರ ಹೇಳಿರ್ಬೇಕು ಅದಕ್ಕೆ ಅಬಿದಾ ನನಗೆ ಎಮರ್ಜೆನ್ಸಿ ಕಾಲ್ ....ಹೌದು ..ಅವಳೇ ...ನನ್ನನ್ನ ಮೊದಲಿಗೆ ನೋಡಿದ್ರೆ/ಫೋನಾಯಿಸಿದ್ರೆ "ಸಲಾಂ ಅಲೇಕುಮ್" ಅನ್ತಾ ಇದ್ಲು...??!! ಯಾಕೆ.. ? ಮತ್ತೆ "ಹಲೋ..." ಕ್ಯಾ ಕರ್ ರ್ರೈ..?" ಅಂತ ಕೇಳಿದ್ರಲ್ಲಿ ಕಾಳಜಿಗಿಂತ...ಏನೋ ...ಮಾಡಬಾರದ್ದು ಮಾಡ್ತಿದ್ದೀನಿ ಅನ್ನೋ ಹೆಂಡತಿರಿಗೆ ಇರಬೇಕಾದ ದರ್ಪದಲ್ಲಿ ಕೇಳಿದ್ಲು....



"ಕಿಚನ್ ನಲ್ಲಿದ್ದೀನಿ ಉಪ್ಪಿಟ್ಟು ಮಾಡ್ತಿದೀನಿ.... ಶುಕ್ರವಾರ ಅಲ್ವಾ..ನಮಾಜ್ ಗೆ ಮುಂಚೆ ಮನೆ ಸ್ವಲ್ಪ ಕ್ಲೀನ್ ಮಾಡೋಣ ಅಂತ ಸ್ವಲ್ಪ ಬೇಗಾನೇ ತಿಂಡಿ ರೆಡಿ ಮಾಡ್ತಿದ್ದೀನಿ..." ಅಂದೆ..



"ಯಾಕೆ ಮೋಹಿನಿ ಬರ್ಲಿಲ್ಲವಾ..??"



ಅರೆ..ಇದೇನಪ್ಪಾ...??!! ನನ್ನವಳು ಹೋಗೋಕೆ ಮುಂಚೆ ಯಾರಿಗಾದ್ರೂ ಕೆಲಸದವಳಿಗೆ ಹೇಳಿದ್ಲಾ...ಕೈ ಜಿಗುಟಿಕೊಂಡೆ.."ಆಹ್" ನೋವಾಯ್ತು...ಅಂದ್ರೆ not a dream !! ಎಲ್ಲದಕ್ಕೂ ನನ್ನನ್ನೇ ಕೇಳುತ್ತಾ ತಾನೇ ಯಾವುದೇ ನಿರ್ಧಾರ ತಗೊಳ್ಳದ ಇವ್ಳು..ಕೆಲ್ಸದವಳಿಗೆ ಹೇಳೋದಾ..??!! ಹೇಗೆ ಸಾಧ್ಯ..?? no way..!! ಆದ್ರೂ...



ಆಶ್ಚರ್ಯ..ಸಂತೋಷ ಎರಡೂ ಒಟ್ಟಿಗೆ..



"ಯಾವ ಮೋಹಿನಿ..? ನೀನು ಯಾರ್ಗಾದ್ರೂ ಹೇಳಿದ್ಯಾ.."...ಕೇಳಿದೆ



"ನೀವೇ ಹೇಳಿದ್ದೀರಲ್ಲಾ ಯಾವ್ದೋ ಮಿಟಕಲಾಡೀಗೆ...ಅದಕ್ಕೇನೇನೋ ಕೆಲ್ಸ ಇದೆ... ಬೇಗ ಕುವೈತ್ ಗೆ ಹೋಗಬೇಕು ಅಂತ ....ನಮ್ಮಮಗಳು ’ಸುರು..’ಅಬ್ಬ’ ಇನ್ನೊಂದೆರಡು ದಿನ ಇರಿ” ಅಂದ್ರೂ "ಇಲ್ಲ ಬೇಟ ಕೆಲ್ಸ ಇದೆ ಮತ್ತೆ ಆಗಸ್ಟ್ ನಲ್ಲಿ ಬೇಗ ಬರ್ತೀನಲ್ಲಾ" ..ಅಂತ ಸಬೂಬು ಹೇಳಿ ಬಂದಿದ್ದು..?? ಎಷ್ಟು ದಿನದಿಂದ ನಡೀತಿದೆ ಎಲ್ಲಾ..?? ಇಲ್ಲಾಂದ್ರೆ ಎರಡು ದಿನಕ್ಕೆ ಒಂದು ಸರ್ತಿ..ಫೋನ್ ಮಾಡಿ ಅಬಿದಾ ಆ ಅಡುಗೆ ಹೇಗೆ ಮಾಡೋದು ?..ಈ ಅಡುಗೆ ಹೇಗೆ ಮಾಡೋದು? ಅಂತ ಕೇಳ್ತಿದ್ರಿ...ಈಗ.. ನಾಲ್ಕು ದಿನ ಆದ್ರೂ ಫೋನ್ ಇಲ್ಲ..ಸರಿ ಕೆಲ್ಸದ ಒತ್ತಡ ಮಾಡ್ತಾರೆ ಅಂದ್ಕೊಂಡಿದ್ದೆ.....ಇಂಥಾ ಘನಾಂದಾರಿ ಕೆಲ್ಸ ಅಂತ ಅಂದ್ಕೊಂಡಿರ್ಲಿಲ್ಲ!!."



ಕೋಪ ಅಳು ಎಲ್ಲ ಒಟ್ಟಿಗೆ ಇತ್ತು..ಅವಳ ಧ್ವನಿಯಲ್ಲಿ...ಸಿಕ್ಕಾ ಪಟ್ಟೆ ರಬ್ಬರ್ ಬ್ಯಾಂಡ್ ಚ್ಯೂವಿಂಗ ಗಮ್ ಥರ ಎಳೆಯೋ ಟಿ.ವಿ. ಸೀರಿಯಲ್ ಕಥೆ ಒಂದೇ ಎಪಿಸೋಡಲ್ಲಿ ಮುಗಿಸುವ ಚಾಕ ಚಕ್ಯತೆ ಇತ್ತು ಅವಳ ಆರೋಪದಲ್ಲಿ...ಎಲ್ಲವನ್ನೂ ಸಾರಾ ಸಗಟಾಗಿ ಎಂಥವರ ಕಣ್ಣಿಗೂ (ಕಿವಿಗೇ ಏನು?) ನಾಟುವಂತೆ ಹೇಳಿ..ಬುಸುಗುಡ್ತಾ ಇದ್ಲು..



ನನಗೋ.. ಏಸಿಯಲ್ಲೂ –ಬಿಸಿ ಬೆವರು ಶುರು..!!!



"ಅಲ್ಲ ಮಾರಾಯ್ತೀ...ಯಾವ ಮೋಹಿನಿ...." ನನ್ನ ಮಾತನ್ನ ತುಂಡರಿಸ್ತಾ...



"ಹೆಸರೆತ್ತಬೇಡಿ..,, ಮೋಹಿನಿ ಅಂತೆ..ಮೋಹಿನಿ..!! ಅದೂ ಎಂಥ ಹೆಸ್ರು... ನಿಮಗೇನ್ರೀ ನಾನು ಕಡಿಮೆ ಮಾಡಿದ್ದೆ.?..ಅದೂ ನನ್ನ ಎತ್ತರಕ್ಕೆ ಬೆಳೆದು ನಿಂತಿರೋ ಮಗಳಿರೋವಾಗ...."



ಅವಳ ಮುಸು ಮುಸಿ ಅಳು ಜಾಸ್ತಿಯಾಯ್ತು....ಆ ಕಡೆ ನನ್ನ ಅಕ್ಕ ಮತ್ತೆ ಅಮ್ಮ ಅವಳನ್ನ ಸಮಾಧಾನ ಮಾಡ್ತಿದ್ದದ್ದು ಸ್ಪಷ್ಟವಾಗಿ ಕೇಳ್ತಿತ್ತು..



“ಬೇಟಾ..ಆಜಾದು ಚಿನ್ನದಂತ ಹುಡುಗ ಏನೋ ಗಲತ್ ಆಗಿದೆ" ಅಂತ ನನ್ನಮ್ಮ  "ನಾವು ನಿಧಾನಕ್ಕೆ ಮಾತ್ನಾಡ್ತೀವಿ...ಈಗ ಸುಮ್ಮನಾಗು.....ನನಗೆ ಕೊಡು ಫೋನ್”



ಅಂತ ಅಕ್ಕ ಫೋನ್ ತಗೊಂಡದ್ದು ಗೊತ್ತಾಯಿತು.



"ಅಕ್ಕ ..ಏನಕ್ಕ ಇವಳು ಹೇಳ್ತಿರೋದು...ಯಾರದು ಮೋಹಿನಿ...?" ನನ್ನ ಆತಂಕ ತೋಡಿಕೊಂಡೆ ನನ್ನಕ್ಕನ ಹತ್ರ...



"ನೋಡು ಆಜಾದು, ಈಗ ಮಾತ್ನಾಡೊದು ಬೇಡ..ಅಬಿದಾ ಅಪ್-ಸೆಟ್ ಆಗಿದ್ದಾಳೆ..ನಾನು ಸಮಜಾಯಿಶ್ ಹೇಳ್ತೀನಿ...ನಿನ್ನ ಮಗಳು-ಸುರೂನ ಅವಳ ಚಿಕ್ಕಪ್ಪ ತೋಟಕ್ಕೆ ಕರ್ಕೊಂಡು ಹೋಗಿದ್ದಾನೆ ಅವಳು ಇದ್ದಿದ್ದ್ರೆ ಮಗಳೇ ಸಮಾಧಾನ ಮಾಡ್ತಿದ್ಳು....ನೀನು ವರಿ ಮಾಡ್ಕೋ ಬೇಡ....., ಅಲ್ವೋ, ನೀನು ಕೆಲ್ಸದವಳನ್ನ ಮನೆ ಕೆಲಸಕ್ಕೆ ಹೇಳ್ತೀನಿ ಅಂತ ಅಬಿದಾಗೆ ಒಂದು ಮಾತು ಹೇಳಬಾರ್ದ..?? ಅದೂ..ಎಂಥ ಹೆಸರಿನವಳಿಗೆ ಹೇಳಿದ್ದೀಯಾ ನೋಡು...ಛೀ..ಮೋಹಿನಿ..ಅಂತೆ,,ಮೋಹಿನಿ..."



"ಅಲ್ಲಕ್ಕ ಅದು..." ನಾನು ಮಾತನಾಡೋದಕೂ ಬಿಡ್ಲಿಲ್ಲ...ಅಕ್ಕ



"ನೋಡೋ ಈಗ ಮೊದಲು ಆ ಮೋಹಿನೀನ ಕೆಲಸದಿಂದ ಬಿಡ್ಸು...ನಾನು ಅಬಿದಾ ಹತ್ರ ಮಾತನಾಡ್ತೀನಿ..ಮತ್ತೆ ಎರಡು ದಿನ ಬಿಟ್ಟು ಅವಳಿಗೆ ಫೋನ್ ಮಾಡಿ ಹೇಳು ಯಾರೂ ಇಲ್ಲ..ಅವಳನ್ನ ಕೆಲಸದಿಂದ ಬಿಡಿಸಿದೆ ಅಂತ......ಆಯ್ತಾ..? ಈಗ ನಾನು ಫೋನ್ ಇಡ್ತೀನಿ..."



ಇದೇನಪ್ಪಾ ಇದು...ಬೆಳ್ ಬೆಳಿಗ್ಗೆ....ಉಪ್ಪಿಟ್ಟು ಮಾಡೋಣ ಅಂತ ಇದ್ರೆ ಎಲ್ಲಾ ಚಿತ್ರಾನ್ನ ಆಗಿ ಕೂತಿದೆ...ಹೌದು ಏನಿದು..? ಮೋಹಿನಿ..ಯಾರಿದು ಮೋಹಿನಿ...??.. ತಲೆ ಚಿಟ್ಟು ಹಿಡೀತಿತ್ತು..ಸ್ಟೌವ್ ಆಫ್ ಮಾಡಿ ಬಿಸಿ ಬಿಸಿ ಇನ್ಸ್ಟಾಂಟ್ ಕಾಫಿ ಮಾಡಿ ಹೀರುತ್ತ ಸೋಫಾದಲ್ಲಿ ಧೊಪ್ಪೆಂದು ಕುಂತೆ...ಯೋಚನೆ ನಿಲ್ಲಲಿಲ್ಲ....



"ಅರೆ..!! ಹೌದಲ್ಲಾ..!! ಮೂರು-ನಾಲ್ಕು ದಿನದ ಹಿಂದೆ ಬಜ್ ನಲ್ಲಿ ಹೀಗೇ ತಮಾಶೆ ಮಾಡ್ತಾ..



"ಏನ್ರೀ ಆಜಾದ್ರೇ..ಒಬ್ರೇ ಮನೇಲಿ ಅಂತೀರಾ..ಭಾಭಿನಾ ಬಿಟ್ಟು ಬಂದು.., ರಾತ್ರಿ ಹೆದ್ರಿಕೆ ಆಗೊಲ್ಲವಾ..." ಅಂತ ಯಾರೋ ಕೇಳಿದ್ರು..?"



ಅದಕ್ಕೆ ನಾನು...



"ಬರ್ತಾಳಲ್ಲ ಮೋಹಿನಿ"...ಅಂದಿದ್ದೆ..



ಅವರು..."ದಿನವೂ ಬರ್ತಾಳಾ..?"



"ಹೌದು..ಆ ಗೆಜ್ಜೆ ಆ ಮಧುರ ಕೂಗು...ಬಾ..ರಾ...ಬಾ..ರಾ..." ಅಂತ ನಾನಂದಿದ್ದೆ...



"ಹಾಗಾದ್ರೆ ಅಬಿದಾಗೆ ಫೋನ್ ಮಾಡಿ ಹೇಳ್ತೇನೆ ತಡೀರಿ..." ಅವರು ಹೇಳಿದ್ರು



"ಅವಳಿಗೂ ಗೊತ್ತು ಹೇಳಿ ಪರ್ವಾಗಿಲ್ಲ" ಅಂದಿದ್ದೆ......



ಓಹ್...ಇದು ಇವ್ರದ್ದೇ ಕೆಲ್ಸ....ನನ್ನ ಬಜ್ ನಲ್ಲಿ ನನ್ನ ಇಂಡಿಯಾ ನಂಬರ್ ನೋಡಿ ಫೋನ್ ಮಾಡಿ ತಮಾಶೆ ಮಾಡಿರ್ತಾರೆ..ನಾನು ಆ ಸಿಮ್ ಕಾರ್ಡ್ ಇದ್ದ ಫೋನ್ ಅಬಿದಾಗೆ ಕೊಟ್ಟಿದ್ದೆ..ನಾನು ಸಂಪರ್ಕ ಮಾಡೋಕೆ.....



ಹಾಂ.. ಹೀಗೇ ಆಗಿದೆ..., ಇವರು ವಿಷಯ ಪೂರ್ತಿ ಹೇಳೋಕೆ ಆಗಿಲ್ಲವೋ ಅಥವಾ ಏನೋ ಎಡವಟ್ಟು ಆಗಿದೆ... ನನಗೆ ಎಲ್ಲಾ ಅರ್ಥವಾಗತೊಡಗಿತ್ತು....



ತಕ್ಷಣ ನೆಟ್ ಓಪನ್ ಮಾಡಿ ಆ ದಿನದ ಬಜ್ ನ ಎಲ್ಲ ಸಂಭಾಷಣೇನಾ ವರ್ಡ್ ನಲ್ಲಿ ಪೇಸ್ಟ್ ಮಾಡಿ ಸುರುಗೆ ಮೈಲ್ ಮಾಡಿದೆ.  ಎಡವಟ್ಟು ಏನು ಅಂತ ವಿವರಿಸಿ ನನ್ನ ತಮ್ಮನಿಗೂ ಒಂದು ಕಾಪಿ ಹಾಕಿ...ಸುರುಗೆ ಸಂಜೆ ಫೋನ್ ಮಾಡ್ತೇನೆ ಅಂತ ಮೈಲ್ ನಲ್ಲಿ ತಿಳಿಸಿ ಮೈಲ್ ಮಾಡಿ...ಅರ್ಧ ಸಮಾಧಾನದ ನಿಟ್ಟುಸಿರು ಬಿಟ್ಟೆ...



ಆ ಸಂಜೆ ಮೂರು ಇಪ್ಪತ್ತಾಗಿತ್ತು, ಸಂಜೆ ನಾಲ್ಕೂವರೆಗೆ ಫೋನ ಮಾಡೋಣ ಅಂತ ಚಪಾತಿಗೆ ಹಿಟ್ಟು ಕಲಸಿಡಲು ಕಿಚನ್ ಗೆ ಹೋದೆ..."ಟ್ರಿನ್ ಟ್ರಿನ್..ಟ್ರಿನ್.."



ಏನಿದು ಅಬಿದಾಳದ್ದೇ ಫೋನು...ಹೆದರುತ್ತಾ ಫೋನು ಎತ್ತಿದೆ



"ಅಸ್ಸಲಾಮು ಅಲೇಕುಮ್" ಅಬಿದಾಳ ದ್ವನಿ ..ಮೆದುವಾಗಿತ್ತು... ಧೈರ್ಯ ಬಂತು..



"ವಾಲೈಕುಮ್ ಅಸ್ಸಲಾಮ್ ಡಿಯರ್..." ನಾನು ಇನ್ನೂ ಮುಂದಿನ ಶಬ್ದ ಹೇಳುವುದಕ್ಕೆ ಮುಂಚೆ..."ಮಾಫ್ ಕರೋ ಡಿಯರ್, ನಾನು ನಿಮ್ಮನ್ನ ತಪ್ಪು ತಿಳಿದೆ...ಯಾರೋ ಹೇಳಿದ್ರು ಅಂತ... ನನ್ನದೂ ತಪ್ಪಿದೆ..
ಆ ದಿನ ನಿಮ್ಮ ಫ್ರೆಂಡ್ ಇರ್ಬೇಕು ಅವರು ಫೋನು ಮಾಡಿ "ಭಾಭಿ ತಮಾಷೆ ಗೊತ್ತಾ...? ನಿಮ್ಮವ್ರು ಕುವೈತಲ್ಲಿ ಮೋಹಿನಿ ಅನ್ನೋಳನ್ನ ಕೆಲ್ಸಕ್ಕೆ ಇಟ್ಕೊಂಡಿದ್ದಾರೆ..." ಅನ್ನೋದ್ರಲ್ಲಿ ಫೋನ್ ಕಟ್ ಆಗಿತ್ತು...ನನಗೆ ಹೆಂಗಸಿನ ದ್ವನಿ, ಹೇಳಿದ್ದು ನಿಮ್ಮ ಬಗ್ಗೆ...ಮೋಹಿನಿ ಅನ್ನೋಳನ್ನ ಇಟ್ಕೊಂಡಿದ್ದಾರೆ ... ಇಷ್ಟೇ ಕಿವಿಗೆ ಹೋಗಿದ್ದು....ಕೆಲಸದವಳು ಅನ್ನೋದನ್ನ ಗಮನಿಸಲೇ ಇಲ್ಲ....I am very very sorry..."



ಅಬ್ಬಾ...ಎಂಥ ಹಾಲು ಕುಡಿದ ಅನುಭವ...!! ನಾನೆಂದೆ..



"its Ok dear...misunderstand ಆಗುತ್ತೆ ...ಹೌದೂ.... ನಿನಗೆ ಇದೆಲ್ಲಾ...ಹೇಗೆ ??".



"ಸುರುಗೆ ನೀವು ಕಳ್ಸಿದ ಮೈಲ್ ಸಿಕ್ತು ಅವಳು ಅವಳ ಅತ್ತೆ ಏನೇನೋ ಮಾತನಾಡ್ತಾ ಇದ್ರು..ಆ ಮೇಲೆ ನಿಮ್ಮ ತಮ್ಮನ ಫೋನ್ ಬಂತು...ಮತ್ತೆ ಸುರು ನನ್ನ ಕರೆದು...ನಿಮ್ಮ ಮೈಲ್ ತೋರಿಸಿದಳು....ನನಗೆ ಆಗ್ಲೆ ಅರ್ಥ ಆಗಿದ್ದು ಎಂಥ ಮೂರ್ಖಳು ನಾನು ನಿಮ್ಮನ್ನು ಅಪಾರ್ಥ ಮಾಡ್ಕೊಂಡೆ...sorry" ಎಂದಳು ನಗುತ್ತಾ...



ಅಬ್ಬಾ...ಶುಕ್ರವಾರದ ನಮಾಜ್ ನಲ್ಲಿ ನನ್ನ ಪ್ರಾರ್ಥನೆ ದೇವರಿಗೆ ಮುಟ್ಟಿತು ಎಂದುಕೊಂಡು...ಕೀಟಲೆ ಮಾಡಿದೆ ನನ್ನವಳಿಗೆ..



"ಹಾಗಾದ್ರೆ ಮೋಹಿನೀನ ನಾಳೆಯಿಂದ ಬರೋಕೆ ಹೇಳ್ಲಾ ಮನೇಗೆ..?"



ನಗುತ್ತಾ ಅವಳು.." ಯಾಕೆ? ಈಗ್ಲೇ ಹೇಳಿ.... ರಂಜಾನ್ ಬರ್ತಿದೆ ನಿಮ್ಮ ಉಪವಾಸದ ೭-೮ ದಿನಗಳ ಅಡುಗೆನಾದ್ರು ಮಾಡಿ ಹಾಕ್ತಾಳೆ....ಹಹಹ..."



ಇದು ಒಂದು ಬಜ್.ಚಾಟ್ ಎರಡರ ..ಕಪೋಲ ಕಲ್ಪಿತ..ಇದನ್ನೇ ನೆವಮಾಡಿ ನನ್ನವಳಿಗೆ ಫೋನ್ ಮಾಡೋರಿಗೆ ಎಚ್ಚರಿಕೆ......

68 comments:

  1. ಈ ಪ್ರಕರಣ ನಿಜವೇ ಅಥವಾ ಕಲ್ಪನೆಯೇ, ಹೇಗಿದ್ರು ಸರಿ ತು೦ಬ ಚೆನ್ನಾಗಿದೆ,

    ReplyDelete
  2. ಪರಾಂಜಪೆ ಸರ್, ನೀವು ಲೇಖನದ ಕಡೆಯ ಸಾಲುಗಳನ್ನು ಗಮನಿಸಿಲ್ಲ ಅನಿಸುತ್ತೆ...ಹಹಹ...ಹೌದು ಇದು ಕಲ್ಪನೆ...ಚನ್ನಾಗಿದೆ ಅಂದ್ರಲ್ಲ ಅದೇ ಸಮಾಧಾನ...ಧನ್ಯವಾದ

    ReplyDelete
  3. ವಿಜಯಶ್ರೀ...ಧನ್ಯವಾದ ಬಹು ಸೂಚ್ಯ ಮತ್ತು ಅರ್ಥ ತುಂಬಿದ ಸಾವಿರ ಶಬ್ದಗಳ ಸಮಾನ ನಿಮ್ಮ ಪ್ರತಿಕ್ರಿಯೆಗೆ....

    ReplyDelete
  4. ಏನ್ ಸಾರ್ ನೀವು !. ಒಂದ್ಸಲಾ ನನಗೂ ನಂಬೋಕೆ ಆಗ್ಲಿಲ್ಲ.
    ಸಕ್ಕತ್ ನಗು..:-).

    ReplyDelete
  5. ತಪ್ಪು ಕಲ್ಪನೆಗೆ ಯಾವಗ್ಲೂ ಎಷ್ಟೊಂದು ಅವಕಾಶ ಇರತ್ತ್ತೆ ಅಲ್ವ. ಒಂದೊಂದು ಮಾತಿಗೆ ಒಂದೊಂದು ಅರ್ಥ,, ಎಲ್ಲಾ ನಾವು ಕಲ್ಪಿಸಿಕೊಂದಂತೆ.

    ReplyDelete
  6. ಹ..ಹಾ..ಅಂದಹಾಗೆ ಈಗ ಮೋಹಿನಿ ಬರ್ತಿದ್ದಾಳ ಸರ್?

    ReplyDelete
  7. ನನಗೇನೋ ಇನ್ನು ಅನುಮಾನ. ಅಬಿದಾ ಮೇಡಂ ರವರನ್ನ ಏಮಾರಿಸಿದ್ದಿರಾ... ಅಂಥಾ! ಯಾವದಕ್ಕೂ ಎರಡು ದೋಣಿಲ್ಲಿ ಕಾಲಿಟ್ಟವರು ಹುಷಾರಾಗಿರಬೇಕು!
    ಚೆನ್ನಾಗಿದೆ ಪ್ರಹಸನ(?)

    ReplyDelete
  8. ಸುಬ್ರಮಣ್ಯ..ಯಾವುದಕ್ಕೂ ಹುಶಾರು ಒಬ್ರೇ ಇದ್ದಾಗ....ಹಹಹ ಮುಂದಿಂದು ಇದ್ದೇ ಇದೆ..ಕರ್ಮ ಅನುಭವಿಸೋದು,,,ಹಹಹ

    ReplyDelete
  9. ಸಾಗರಿ...ತಪ್ಪು ಕಲ್ಪನೆ ಆಗೋದೇ ಹೀಗೆ..ಯಾವುದೋ ಮೂಡ್ ನಲ್ಲಿಏನನ್ನೋ ಕೇಳಿಸಿಕೊಂಡು...ಮತ್ತಿನ್ನೇನೋ ಕಲ್ಪಿಸಿಕೊಂಡು ಕೊರಗೋದು,,,ಅಹಹ...

    ReplyDelete
  10. ಸುಮ, ಧನ್ಯವಾದ...ಹಹಹ...ಹೌದು ಪರ್ಮಿಶನ್ ಸಿಕ್ಕ ಮೇಲೆ ನನಗೆ ಜಗತ್ತಿನಲ್ಲಿ ಇನ್ಯಾರ ಭಯವೂ ಇಲ್ಲ,,,ಹಹಹ....

    ReplyDelete
  11. ಸೀತಾರಾಂ ಸರ್, ಮತ್ತೇ ಅನುಮಾನಾನಾ..ಇದಕ್ಕೆ ಮದ್ದಿಲ್ಲ ಬಿಡಿ...
    ಈ ಬ್ಲಾಗ್ ಓದಿದ್ರೆ ಭಾಗಶಃ (ಚಾಟ್ ನಲ್ಲಿ ಸ್ವಲ್ಪ ನಗೆ ಚಟಾಕಿಗೆ ಸೀಮಿತ) ಈ ಬ್ಲಾಗಿಗೆ ಕಾರಣರಾದವರು ತಿಳಿಸ್ತಾರೆ...ಏನಂತೀರಿ ಅದಾಗದಿದ್ರೆ...ನಿಮ್ಮ ನಂಬಿಕೆ ನಿಮಗೆ ನನ್ನ ನಂಬಿಕೆ ನಮಗೆ...ಹಹಹ...ಒಂದಂತೂ ನಿಜ ನಿಮಗೂ ಮೋಹಿನೀನ ಕರೆಸಿಕೊಳ್ಳೋ freedom ಖಂಡಿತಾ ಸಿಗುತ್ತೆ ನನ್ನ ಉದಾಹರಣೆ ಕೊಟ್ಟು

    ReplyDelete
  12. ಬೇಟಾ..ಆಜಾದು ಚಿನ್ನದಂತ ಹುಡುಗ :) ಹೇಗಪ್ಪ ನಾನು ಈ ಮಾತುಗಳನ್ನ ನಂಬಲಿ :) :) :) ಹ್ಹ ಹ್ಹ ಹ್ಹ ಹ್ಹ ತುಂಬಾ ಚನ್ನಾಗಿದೆ ನಿಮ್ಮ ಕಲ್ಪನೆ

    ReplyDelete
  13. ಮಂಜು...ಹೆತ್ತವರಿಗೆ ಹೆಗ್ಣ ಮುದ್ದು ಅನ್ನೊಲ್ಲವಾ..ಹಾಗೇ..ಚಿನ್ನ ರನ್ನ, ಜನ್ನ ಬಿರುದುಗಳು ಪುಕ್ಸಟೆ ಸಿಗೋದು ಅಮ್ಮನ ಬಾಯಲ್ಲಿ ಮಾತ್ರ..ಹಹಹ ನಂಬೋದು ಬಿಡೋದು ನಿಮಗೆ ಬಿಟ್ಟದ್ದು..ಹಹಹ...ಥ್ಯಾಂಕ್ಸ್ ನಿನ್ನ ಅಭಿಪ್ರಾಯಕ್ಕೆ...

    ReplyDelete
  14. ಧನ್ಯವಾದ ಪ್ರಗತಿ...ಇದು..ಒಂದು ..ಹೀಗೂ ಆಗುತ್ತೆ..ಥರದ ಅನಿಸಿಕೆ...

    ReplyDelete
  15. ನಿಮ್ಮಾಕೆ ಪಾಪ ಅಂತಾ ಮುಗ್ಧೆ ಮೇಲೆ ಇಲ್ಲ ಸಲ್ಲದ ಧೋರಣೆ ಹಾಕಿ ಒಂದು ದಿನದ ಪೋಸ್ಟ್ ಗೆ ಈ ಕೆಲಸ ಮಾಡಿಬಿಟ್ಟಿರಾ..?

    ReplyDelete
  16. ಹಹಹ...ಮನಸು ಮೇಡಂ...ಅವಳು ಹಾಗೆ ಅಂತಲೇ ಸ್ವಲ್ಪ ನಾನು ಲಿಬರ್ಟಿ ತಗೊಂಡೆ..ನಕ್ಕು ಸುಮ್ಮನಾಗ್ತಾಳೆ..ಹೇಳಿದ್ರೆ..ಹಹಹ...ಧನ್ಯವಾದ ನಿಮ್ಮ ಅನಿಸಿಕೆಗೆ..

    ReplyDelete
  17. ನಿರೂಪಣೆ ತು೦ಬಾ ಸ್ವಾರಸ್ಯಕರ..ಕುತೂಹಲ ಮೂಡಿಸುತ್ತಾ ಸಾಗಿತು.

    ಶುಭಾಶಯಗಳು
    ಅನ೦ತ್

    ReplyDelete
  18. 'ಮೋಹಿನಿ ಪ್ರಕರಣ',ಸಧ್ಯ ಸುಖಾಂತವಾಯಿತಲ್ಲಾ ಎಂದು ನಿಟ್ಟುಸಿರು ಬಿಡುವಂತಾಯಿತು.

    ReplyDelete
  19. ತುಂಬ ಸೊಗಸಾದ ವಿನೋದಲೇಖನ. ನಗುತ್ತಲೇ ಓದಿದೆ. ಆದರೆ ಒಂದು ಮಾತು,ಜಲನಯನ. ಎಚ್ಚರದಿಂದಲೇ ಇರ್ಬೇಕರಿ!

    ReplyDelete
  20. ಬೇಟಾ..ಆಜಾದು ಚಿನ್ನದಂತ ಹುಡುಗ!!!!!:-)
    .............ಆದ್ರೆ ಸ್ವಲ್ಪ ತರ್ಲೆ ಕೂಡ..!!

    ReplyDelete
  21. ಧಣಿ.......
    ಏನಿದು? ಬಾಬಿಗೆ ಅನುಮಾನ ಬಂದಿದ್ದು ತಪ್ಪಲ್ಲ ಬಿಡಿ, ನೀವೆಲ್ಲಿ ಒಬ್ಬರೇ ಇರುವಾಗ ದಾರಿ ತಪ್ಪಿ ಮೋಹಿನಿಯ ಜೊತೆಯಲ್ಲಿ ರಾ....ರಾ..... ಅಂತ ಹಾಡ್ತೀರೋ ಅಂತ ಒಂದು ಬಾಂಬ್ ಹಾಕಿದ್ದಾರೆ ಅಷ್ಟೇ!
    ಸುಖಾಂತ್ಯ ಆಯ್ತಲ್ಲ, ಸಂತೋಷ!

    ReplyDelete
  22. ಆಜಾದ್ ಸರ್,
    ಶೀರ್ಷಿಕೆ ನೋಡಿ ನಿಜಕ್ಕೂ ಗಾಬರಿಯಾಯಿತು...... ಓದುತ್ತಾ ಓದುತ್ತಾ ಅರ್ಥವಾಗ್ತಾ ಬಂತು...... ಚೆನ್ನಾಗಿದೆ ನಿಮ್ಮ ಕಲ್ಪನೆ..... ಬರೆದ ರೀತಿ ಕುತೂಹಲ ಕಾಯ್ದುಕೊಂಡು ಬಂತು....

    ಅಂದ ಹಾಗೆ ಮೋಹಿನಿ ಯಾವಾಗಿಂದ ಬರ್ತಾಳೆ.....?

    ReplyDelete
  23. ಅಜಾದ್,

    ನಿಮ್ಮ ಅವಾಂತರ ಓದಿದೆ ಇನ್ನೂ ನಗು ನಿಂತಿಲ್ಲ ನೆನಸಿಕೊಂಡರೆ ನಗುಬರುತ್ತೆ. ಇದು ಸತ್ಯವೋ, ಮಿಥ್ಯವೋ ಗೊತ್ತಿಲ್ಲ. ಮನಃಪೂರ್ತಿ ನಗಲಿಕ್ಕೆ ಇಷ್ಟು ಸಾಕು. ನಾನು ಪುಸ್ತಕಗಳ ಪ್ರಿಂಟ್, ಪ್ರೂಪು, ಅಹ್ವಾನಪತ್ರಿಕೆ, ನನ್ನ ದಿನಪತ್ರಿಕೆ ಕೆಲಸ ಅಂತ ದಿನವೆಲ್ಲಾ ಓಡಾಡಿ ಬಂದು ಸುಸ್ತಾಗಿ ನಿಮ್ಮ ಬ್ಲಾಗ್ ನೋಡಿದರೆ ಸುಸ್ತೆಲ್ಲಾ ಮಾಯ! ನಕ್ಕೂ ನಕ್ಕೂ ಸುಸ್ತೆಲ್ಲಾ ಹಾರಿಹೋಯ್ತು...ಅಂದ ಹಾಗೆ ನಾನು ಕಳಿಸಿದ ಮೇಲ್ ನೋಡಿದ್ರಾ...ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.

    ReplyDelete
  24. This comment has been removed by the author.

    ReplyDelete
  25. ಅನಂತ್ ರಾಜ್ ಸರ್, ತುಂಬಾ ಸಂತೋಷ ನಿಮಗೂ ಇಷ್ಟವಾಯ್ತಲ್ಲ...ಅಂದಹಾಗೆ ಕುತೂಹಲ ಕಾಯ್ದುಕೊಳ್ಳುವಲ್ಲಿ ಸಾಹಸ ಪಟ್ಟಿದ್ದೇನೆ,,ಹಹಹ

    ReplyDelete
  26. ಡಾ. ಮೂರ್ತಿ ಧನ್ಯವಾದ ನಿಮ್ಮ ಮೆಚ್ಚುಗೆಗೆ...ಅನಿಸಿಕೆಗೆ..

    ReplyDelete
  27. ಸುನಾಥಣ್ಣ...ಇದು ಹಾಗೇ ಚಾಟ್ ನಲ್ಲಿ ಎದ್ದ ಕಿಡಿ..ಅದನ್ನೇ ಏಕೆ ಬಂಡವಾಳ ಮಾಡ್ಕೋಬಾರ್ದು ಬ್ಲಾಗ್ ಪೋಸ್ಟಿಗೆ ಅನ್ನಿಸಿ ಇದನ್ನು ಹಾಕಿದೆ...ಹಹಹ ಹುಶಾರಾಗಿರ್ತೇನೆ ನಿಮ್ಮ ಹಿತವಚನ ಮನಸಲ್ಲಿರುತ್ತೆ....

    ReplyDelete
  28. ವನಿತಾ...ಬೇಟಾ..ಚಿನ್ನದಂಥ ಹುಡುಗ ಅಂದಿದ್ದು ನಮ್ಮಮ್ಮ...ಹೆತ್ತವರಿಗೆ... ಆದ್ರೆ ಇದು ಯಾಕೋ ನಿನು ಕೊಡೋ ಬಿರುದು...ಸ್ವಲ್ಪ ಬಿರೀತಾ ಇದೆ..ಹಹಹ ಧನ್ಯವಾದ

    ReplyDelete
  29. ಪ್ರವೀಣ್...ಬಾರಾ..ಬಾರಾ...ಎಂದ ತಕ್ಷಣ ..ಹೋಗೋಕೆ...ಇದು ಸಿನಿಮಾನೂ ಅಲ್ಲ ನಾನು ನಟನೂ ಅಲ್ಲ..ಹಹಹ...ಎಲ್ಲರೂ ನನ್ನ ಕಡೆಯ ಸಾಲುಗಳನ್ನು ನೋಡಿಲ್ಲ...ನನಗೇ ಯಾಕೋ ಎಡವಟ್ಟು ಯಾರಾದ್ರೂ ಮಾಡಿದ್ರೆ ..? ಅನ್ನಿಸ್ತಾ ಇದೆ...ಹಹಹ ಧನ್ಯವಾದ.

    ReplyDelete
  30. ದಿನಕರ್..ಹಹಹ...ಶಿವು ಈಗ ತಾನೇ ಚಾಟ್ ನಲ್ಲಿ ಬಂದು ಗಾಬರಿ ಆಗುತ್ತಲ್ಲ,,ಅಂದ್ರು ಶೀರ್ಷಿಕೆ ನೋಡಿ...ಹಹಹ...ಹೌದು ಎಲ್ರೂ ಮೋಹಿನಿ ಬರಿದ್ದಾಳಾ ಅಂತಿದ್ದಾರಲ್ಲಾ...ಗ್ರೀನ್ ಸಿಗ್ನಲ್ ಸಿಕ್ರೆ ನಾನು ಬಿಡ್ತೀನಾ...ಹಹಹ

    ReplyDelete
  31. ಶಿವು ಧನ್ಯವಾದ..ನಿಮ್ಮ ಸುಸ್ತನ್ನು ಓಡಿಸಿದ್ದು ನನ್ನ ಅವಾಂತರವಾ..? ಮೋಹಿನಿ ಕಥೆಯಾ..ಅಥವಾ...ಮತ್ತೆ ನಿಮಗೂ ಇಂಥ ಚಾನ್ಸು ಸಿಗುತ್ತಾ ಅನ್ನೊ ಯೋಚನೆಯಲ್ಲಾ...?? ಹಹಹ ಧನ್ಯವಾದ...

    ReplyDelete
  32. anthu mohini kaata nimmannu kooda kaadithu anni... mohini sahavaasa bedi maharaayare :)

    ReplyDelete
  33. ಎನ್ ಗುರುವೇ,
    ಸುಮ್ಮನೆ ಈ ತರಹ ಪೋಸ್ಟಿಂಗ್ ಹಾಕಿ ಮೋಹಿನಿ ಇಲ್ಲ ಅಂತ ಎಲ್ಲರಿಗೂ ನಂಬಿಸುವುದಾ......ಆ ಕೆಲಸದವಳ ನಿಜ ಹೆಸರನ್ನು ಹೇಳಲ......ಹಹಹಹಾ....
    ಚೆನ್ನಾಗಿದೆ ನಿಮ್ಮ ಆಟ....

    ReplyDelete
  34. ಸುಧೇಶ್ ನೋಡಿದ್ರಾ ಮುಚ್ಚಿಟ್ರಿ ನಮ್ಮಿಂದ ನಿಮಗೆ ಆ ಮೋಹಿನಿ ಕಾಟ ಆಗ್ಲೇ ಆಗಿದ್ರೆ ನಮಗೆ ಹೇಳಬಹುದಿತ್ತು ಅಲ್ಲ್ವಾ..? ಹಹಹ..ಧನ್ಯವಾದ...ಈಗ್ಲಾದ್ರೂ ತಿಳ್ಸಿದಕ್ಕೆ...

    ReplyDelete
  35. ಮಹೇಶಣ್ಣ...ಹೊಟ್ಟೆಕಿಚ್ಚು ಪಡಬಾರ್ದು...ತಪ್ಪು ಹಾಗಂತ ಕಿಚ್ಚೂ ಹಚ್ಚಬಾರದು...ಹಹಹ ನಿಜ ಹೆಸರು..? ಒಬ್ಬೊಬ್ಬರಿಗೆ ಒಂದೊಂದು ಹೇಳ್ತಾಳೆ ಅವಳು...ಹಹಹ....ಆಟ ಮೆಚ್ಚಿದ್ದಕ್ಕೆ ಥ್ಯಾಂಕ್ಸ್

    ReplyDelete
  36. ಆಗಿದ್ದು ನಿಜಘಟನೆ... ಮೋಹಿನಿ ಬಂದಿದ್ದು ಹೇಳಿ ಆಮೇಲೆ ಎಲ್ಲಿ ಪ್ರಶ್ನೆಗಳ ಮಳೆ ಸುರಿಯುತ್ತೋ ಅಂತಾ ಕಲ್ಪನೆ/ಬಂಡವಾಳ ಅಂದ್ರೆ ನಂಬೊದಾ!!
    ಫಿಕರ್ ನಾಟ್ :P ನಾನು ಯಾರಿಗೂ ಹೇಳೋಲ್ಲ ;)

    ReplyDelete
  37. mohuini prasanga tumbaa chennagide. tamaashegaadaroo intaha vichaaragalu hendtiyarige tileebaaradu , tilidre aaguva gadibidigala sundara anaavarana. vinodavaagiddaroo niroopane chennaagide.

    ReplyDelete
  38. ಮಾನಸಾ...ಯಾಕೋ ನೀನು ಎರಡನೇ ಬ್ಲಾಗ್ ಪೋಸ್ಟ್ ಸೀರಿಯಸ್ ಆಗಿ ಹಾಕೋಹಾಗೆ ಮಾಡ್ತಿದ್ದೀಯಾ ಅನ್ಸುತ್ತೆ...ಅದ್ಯಾಕೋ ನಾವಾಗೇ ಹೇಳಿದ್ರೆ ನಂಬೊಲ್ಲ ಅಂತೀರಲ್ಲಾ...??? ಹಹಹ.
    ಧನ್ಯವಾದ..ಅಂದಹಾಗೆ ಅದಕ್ಕೆ ಕಡೆಯಲ್ಲಿ ಎಚ್ಚರಿಕೆ ಅಂತ ಹಾಕಿದ್ದೇನೆ..ನೋಡ್ಲಿಲ್ಲವಾ..?

    ReplyDelete
  39. ಬಾಲು ಧನ್ಯವಾದ... ತಪ್ಪು ಅಭಿಪ್ರಾಯಗಳು ಗೊಂದಲಗಳು ಎಲ್ಲಾ ಸಾಧ್ಯ..ಸಂಸಾರವೆಂದಮೇಲೆ..ಆದರೆ ಅವನ್ನು ನಿಭಾಯಿಸಿಕೊಂಡು ಹೋಗುವುದು ಜಾಣತನ ಅವಕ್ಕೆ ಸೊಲುವುದಲ್ಲ...ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್..ಬಾಲು..

    ReplyDelete
  40. Ha ha ha.... antu Mohini kalpaneyalli bandu kadidlu :):) sambashane bareda reethi sakath swarasyakaravagide

    dhanyavada
    pravi

    ReplyDelete
  41. ನಿಮ್ಮನ್ನು ನೀವು ಒಳ್ಳೆಯವರು ಅಂತಾ prove ಮಾಡ್ಕೊಳ್ಳೋಕೆ ಇಂತಾ ಒಂದು ಲೇಖನಾನಾ.........?!
    ಯಾ ಅಲ್ಲಾ, ಯಾ ಅಲ್ಲಾ......! :) :)

    ReplyDelete
  42. ಪ್ರವೀಣ್
    ನಿನ್ನೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಹೇಳಿ ಉತ್ತರ ಹಾಕಿದ್ದೆ..ಕಾಣ್ತಿಲ್ಲ....ಅಯ್ಯೋ ವಿಧಿಯೇ..ದುರ್ವಿಧಿಯೇ...ಈ ಮೋಹಿನಿ ಇಲ್ಲೂ ಬಿಡೊಲ್ಲವಾ ನನ್ನನ್ನ...
    ಥ್ಯಾಂಕ್ಸ್ ಪ್ರವೀಣ್

    ReplyDelete
  43. ಡಾ. ಗುರು...ನಿಮಗೆ ಬರೋ ಮೋಹಿನಿಯರು ಬಹಳ ಲಿಬರಲ್ ಬಿಡಿ...ದಿನದ ಸಮಯದಲ್ಲೂ ಬರಬಹುದು ಆದ್ರೆ ಇಲ್ಲಿ ರಾತ್ರಿ ಮಾತ್ರ,,,,ಹಹಹ...ಧನ್ಯವಾದ

    ReplyDelete
  44. ತೇಜಸ್ವಿನಿ....
    ಇದು ಸೈಲಂಟ್ ಕಾಮೆಂಟಾ ..ಲೇಖನದ ಕಾಲೆಳೆತಾನಾ..ಪ್ರಶಂಸೇನಾ...ಏನಾದ್ರೂ ತಿಳ್ಕೋಬಹುದಾ..? ಅರ್ಥ ಆಗ್ದೆ ಈಗ ಮತ್ತೆ ಅಡುಗೆ ಮಾಡ್ಬೇಕಲ್ಲಾ ಅಂತ ಮೋಹಿನಿಗಾಗಿ ಕಾಯ್ತಿದ್ದೀನಿ...ಧನ್ಯವಾದ..

    ReplyDelete
  45. ರೀ ..ನೀವು ಏನೇ ಹೇಳಿದ್ರೂ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಾನೂ ಹೇಳೊಲ್ಲ..ಮತ್ತೆ ಉತ್ತರಾನೂ ಕೊಡೊಲ್ಲಾ..ಅಲ್ಲ ..ನನಗೆ ಕೋಪ ಬರಿಸ್ಬೇಡಿ ಮತ್ತೆ...ನನ್ನನ್ನ ಒಳ್ಲೆಯವನು ಅಂತ ಮೋಹಿನೀನ ಅಪ್ರೂವ್ ಮಾಡಿರೋ ನನ್ನವಳಿಗೆ ಗೊತ್ತು..ಬಿಡಿ..ಸಾಕು...ಊಂ..

    ReplyDelete
  46. ಇದೇನ್ Sir, ಮೊದಲಿಗೆ ನಿಜಾಂತನೆ ನಂಬಿದ್ದೆ..!
    ಚೆನ್ನಾಗಿದೆ.. :)

    ReplyDelete
  47. ಶ್ರವಣ್...ಹಹಹ.. ನಿಮ್ಮ ಅನುಮಾನ ಪರಿಹಾರ ಆಯ್ತಲ್ಲ...ಅದೇ ಸಮಾಧಾನ..ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  48. ಪ್ರಹಸನ ಬಹಳ ಚೆನ್ನಾಗಿದೆ, ಇದು ನಿಜವೇ ? ಅಥವಾ ಬರೇ ಕಟ್ಟುಕಥೆಯೇ ಅರ್ಥವಾಗಲಿಲ್ಲ, ಥ್ಯಾಂಕ್ಸ್

    ReplyDelete
  49. ನಿಜವೋ... ಕಟ್ಟು ಕಥೆಯೋ.... !! ತಲೆಬರಹ ಮಾತ್ರ ನಿಜವಾಗಿ ಸ್ವಲ್ಪ ಆತಂಕ ಮೂಡಿಸಿತ್ತು. ಓದುತ್ತಾ ಹೋದಂತೆ, ನಗು ಬಂತು. ಆಜಾದ್ ಸಾರ್ ಸಕ್ಕತ್ ನಿರೂಪಣೆ.... ಇಷ್ಟೆಲ್ಲಾ ಗಲಾಟೆಯಲ್ಲಿ ಪಾಪ ನಿಮಗೆ ಉಪ್ಪಿಟ್ಟೂ ಇಲ್ಲದಂತಾಯ್ತು... :-)..

    ಶ್ಯಾಮಲ

    ReplyDelete
  50. ವಿ.ಆರ್.ಬಿ. ನೀವೂ ಮಿಸ್ ಮಾಡ್ಕಂಡ್ರಿ ಇಂಪಾರ್ಟೆಂಟ್ ಲೈನು...ಕಡೇ ಸಾಲು...ಹಹಹ...ಇದು ಕಲ್ಪನೆ ಆದ್ರೆ ಪ್ರಾರಂಭದ ಕಿಡಿ ಸಿಕ್ಕಿದ್ದು...ಬಜ್-ಜಿಮೈಲ್ ಗಳಿಂದ ಅಂತ ಹಾಕಿದ್ದೇನಲ್ಲಾ....ಹಹಹ....
    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  51. ಶ್ಯಾಮಲವ್ರೆ ನೀವೂ ಮಿಸ್ ಮಾಡ್ಕಂಡ್ರಿ ಕಡೆಯ ಸಾಲನ್ನ ..ಯಾಕೇ ಎಲ್ಲರೂ (ಆಲ್ ಮೋಸ್ಟ್) ಇದನ್ನ ನೋಡ್ತಿಲ್ಲ ..ಹಹಹ...ಇದು ಕೇವಲ ಕಲ್ಪನೆ...ಆದರೆ ನೀವೆಲ್ಲಾ ನಿಮ್ಮ ಆತ್ಮೀಯತೆಯಿಂದ ಕಳುಹಿಸುವ ಬಜ್-ಜಿಮೈಲ್ ಗಳ ಸ್ಪೂರ್ತಿ ಇದಕ್ಕೆ...ಧನ್ಯವಾದ...

    ReplyDelete
  52. ನನಗೇಕೋ ನಿಮ್ಮ ಮೇಲೆ ಸಂದೇಹ .ನೀವು HS ಗೆ ಯಾಮರಿಸಿದ್ದಿರ ಅಂತ...ನಿಮ್ಮ ಶ್ರೀಮತಿ ಪಾಪದವರು ಅಂತ ಹೀಗೆಲ್ಲ ಮಾಡೋದಾ ಹ್ಹಾ ಹ್ಹ ಹ್ಹಾ ..

    ReplyDelete
  53. ಹಹಹ...

    ಹೀಗೂ ಉಂಟೆ?? ಮೊದಲು ನಿಜವೆಂದೇ ನಂಬಿ ಚಿಂತಾಕ್ರಾಂತಳಾದೆ..

    ತುಂಬಾ ಚೆನ್ನಾಗಿದೆ...

    ReplyDelete
  54. ಹೆಂಗಸರ ಅನುಮಾನಬೇನೆ ಸರ್ವೇ ಸಾಮಾನ್ಯ ಅದ್ರೆ ಶಶಿಯವರು..ಛೇ..ಭಾಳ್ ಲಿಬರಲ್ ಅಂದ್ರೆ ನಿಮಗೂ ಬಿಟ್ಟಿಲ್ ಬಿಡ್ರಿ...ಈ ಬ್ಯಾನೆ...ಹಹಹಹ....ಯಾಮಾರಿಸೋದು ಯಾಕ್ರೀ ರಾಜಾರೋಷವಾಗಿ ಪರ್ಮಿಶನ್ನೇ ತಗೊಂಡಿದ್ದೀನಿ....ಬಹಳ ಖುಷೀ ಆಯ್ತು..

    ReplyDelete
  55. ಚೇತನಾ, ಊರಿಂದ ಮೊದಲ್ ಪ್ರತಿಕ್ರಿಯೆ...ಹಹಹ..ಹೀಗೂ ಆಗಬಹುದು ..ಅಂತ..ಹೀಗೇನೂ ಆಗಿಲ್ಲ ಅನ್ನೋ ಭರವಸೆ ನಾನು ಕೊಡ್ತೀನಿ...ನೋ ಚಿಂತೆ...ಧನ್ಯವಾದ ನಿಮ್ಮ ಕಾಳಜಿಗೆ..

    ReplyDelete
  56. ಹ ಹ ಹ...
    ಎಡವಟ್ಟೋ ಎಡವಟ್ಟು..
    ಇಲ್ಲಗಿತ್ತು ಭಾರೀ ಎಡವಟ್ಟು..

    ಯಾರಾ ಎಡವಟ್ಟುರಾಯ..?

    ReplyDelete
  57. ಕತ್ತಲೆ ಮನೆ...ಯ ಕಾಮೆಂಟ್ಸ್ ಗೆ ಧನ್ಯವಾದ..ಎಡವಟ್ಟುರಾಯ ಯಾರಾದ್ರೂ ಆಗಬಹುದು,,,,ಹಹಹ

    ReplyDelete
  58. ಆಜಾದ್ ,
    ಅಲ್ಲಾ, ಅವತ್ತು ಚಾಟ್ ನಲ್ಲಿ ಮೋಹಿನಿ ಬಗ್ಗೆ confess ಮಾಡ್ಕೊಂಡ್ರಿ . ಆಮೇಲೆ, ನಾನು ಆಬಿದಾ ಗೆ ಹೇಳಲಾ ( ಫೋನ್ ನಂ ಗೊತ್ತಿಲ್ಲದಿದ್ರೂ ! ) ಅಂತ ಕೇಳಿದ್ದಕ್ಕೆ .... ತಕ್ಷಣ ಕಥೆ ತರ ಬರೆದು ಬ್ಲಾಗ್ ನಲ್ಲಿ ಹಾಕಿ , ಬರೀ ಕಥೆ- ಕಲ್ಪನೆ ಅಂತೆಲ್ಲ ಹೇಳ್ತಾ ಇದ್ದೀರಾ? ಒಳ್ಳೆ ಜನಾ ಕಣ್ರೀ ನೀವು ! ಹೀಗಾ ಮಾಡೋದು ? ಯಾವುದಕ್ಕೂ ಕೆಲಸದವಳ ನಿಜವಾದ ಹೆಸರನ್ನು ಸುಗುಣ ಹೇಳ್ತೀನಿ ಅಂದಿದಾರಲ್ಲ , ಕೇಳೋಣ ಅವರನ್ನೇ !
    ಹಾ ಹಾ ಹಾ ... ಚೆನ್ನಾಗಿ ಕಥೆ ಕಟ್ಟಿದೀರ ಬಿಡಿ. ನಿಜಕ್ಕೂ ಹೇಳ್ತಾ ಇದ್ದೀನಿ ಕಣ್ರೀ.
    ಅಂದ ಹಾಗೇ, ಕಡೆಯ ಎರಡು ಸಾಲುಗಳನ್ನ ಶುರುವಿಗೆ ಹಾಕಿದ್ದರೆ ಎಲ್ಲರೂ ಓದ್ತಾ ಇದ್ರು ! ಕೊನೆಯಲ್ಲಿ ಸೇರಿಸಿ , ಈಗ ' ಕೊನೆಯ ಸಾಲುಗಳನ್ನು ಯಾರೂ ಓದಲಿಲ್ಲ " ಅಂತ ಹೇಳಿದ್ರೆ ಹೇಗೆ?

    ReplyDelete
  59. This comment has been removed by the author.

    ReplyDelete
  60. ಚಿತ್ರಾ...ಇದು ನಿಮ್ಮ ಕಡೆಯಿಂದಲೇ ಬರಲಿ ಎಲ್ಲರಿಗೂ ನಿಜ ಗೊತ್ತಾಗಲಿ ಅಂತ ನಾನು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಸುಳ್ಳುಮಾಡಿಬಿಟ್ರಿ. ಅಕಟಕಟಾ...ನನ್ನ ಮೇಲೆ ಈಗಾಗಲೇ ಬಂದಿರುವ ಆಪಾದನೆಗಳ ಕಿಡಿಗೆ ಒಣ ಎಲೆ, ತುಪ್ಪ ಸುರಿಯುವ ಕೆಲ್ಸ ಮಾಡಿದ್ದು ತರವೇ..ನಿಮಗೆ ??!! ವಿಧಿಯೇ ..ದುರ್ವಿಧಿಯೇ..!! ಹಗ್ಗವೆಂದು ಹಿಡಿದದ್ದು ಹಾವಾಯಿತೇ..??

    ReplyDelete
  61. ಅಬ್ಬ!! azad ಭಯ್ಯ ನಂಬೋಕೆ ಆಗ್ಲಿಲ್ಲ... :) ನಗು ಬಂತು ಓದಿ.. :) ಚೆನ್ನಾಗಿದೆ....... :-)

    ReplyDelete
  62. Aajaad Sir,

    nangeneno sandeha......idu kalpanenaa? athava nijaana???? Tumbaa Tumbaa chennagide....

    ReplyDelete
  63. ದಿವ್ಯಾ...ಯಾಕೆ ನಿನಗೂ ಅಪನಂಬಿಕೆನಾ,,,ಹೀಗೆ ಅನುಮಾನ ಬ್ಯಾಡ ತಂಗ್ಯಮ್ಮ...ಹಹಹ ಧನ್ಯವಾದ....

    ReplyDelete
  64. ಅಶೋಕ್ ಯಾಕಪ್ಪಾ...ನಿಮಗೂ ಅನುಮಾನವೇ...ಪರ್ವಾಗಿಲ್ಲ ಬಿಡಿ...ನಾನೂ ಹೇಳೊಲ್ಲ...ಬೇಕಾದ್ರೆ ಹೇಳಿ ನಿಮ್ಮ ನಂಬರ್ ಕೊಡ್ತೇನೆ ಮೋಹಿನಿಗೆ...ಹಹಹ ಧನ್ಯವಾದ

    ReplyDelete