Sunday, September 19, 2010

ಮಗು-ಕೊಡು ನಿನ್ನಗು ನಮಗೂ













(ಚಿತ್ರ ಕೃಪೆ : ಪ್ರಕಾಶ -ಇಟ್ಟಿಗೆ ಸಿಮೆಂಟು  

ಕೇವಲ ಒಮ್ಮೆ ನೀ ನಗು

ನೀನಾಗಿಯಲ್ಲ, ಆಗಿ ಮಗು

ತೊಡೆ ಗೆರೆ-ಮುಖದ ಬಿಗು

ಮನತುಂಬಿ ನೀನೊಮ್ಮೆ ನಗು.

ಮತ್ತೆ ಬಂದರೇನು? ಎರಗಿ ಆಪದ

ಗುನುಗುನಿಸು ನಗುವಿನಾಪದ

ಕಣ್ಣಲಿ ಮಿಂಚು ಸುಳಿವಿಗಾಸ್ಪದ

ನಕ್ಕರೆ ಅದೇ ನಿಜ ಸಂಪದ.


ನೀನಕ್ಕರೆ ಮಗು ನಗುವುದು
ಮನ ಅರಳಿ ಕೊಡುವುದಾಮುದು

ಸಂಕಟ ನೂರು ಬರಬಹುದು

ಮಾಡಿಕೋ ನಗು ಆಮದು.


ನಕ್ಕರೆಂದರು ಅದೇ ಸ್ವರ್ಗ
ಈ ನೀಮಕೆ ಬದ್ಧರೆಲ್ಲ ವರ್ಗ

ಮುದಗೊಂಡ ಮನದ ಮಾರ್ಗ

ಕೊಳ್ಳಬೇಕಿಲ್ಲ ದತ್ತ ನಿಸರ್ಗ.

49 comments:

  1. ಆಜಾದು...

    "ಸಂಕಟ ನೂರು ಬರಬಹುದು...
    ಮಾಡಿಕೋ ನಗು ಆಮದು...."

    ವಾಹ್ !!

    ಸುಂದರ ಸಾಲುಗಳು..

    ಈ ಪಾಉಗಳ ನಗುವಿನ ಮುಗ್ಧತೆಯಷ್ಟೇ.. ಚೆನ್ನಾಗಿದೆ.
    ನೀ ಬರೆದ ಸಾಲುಗಳು...

    ಜೈ ಹೋ.. !!

    ReplyDelete
  2. ಅಜಾದ್ ಸರ್,
    ವಾವ್...........
    ಕವನ ತುಂಬಾ ಚೆನ್ನಾಗಿದೆ.


    ಮಗುವಿನ ಮುಗ್ಧ ನಗು........
    ಬೆಳಗುತಿರಲಿ
    ನಮ್ಮ ಮೊಗದಲ್ಲೂ ಎಂದಿಗೂ.........
    ಚಿಂತೆ ಮರೆಯೋಣ ಕೊನೆಗೂ.......

    ReplyDelete
  3. ಮಗು,ನಿನ್ನ ನಗು
    ಕೊಡು ,ನಮಗೂ
    ನಕ್ಕು ಆದೇವು ಮನದಿ ,
    ನಾವೂ ಒಂದು ಮಗು!
    ಮಗು ನೀ ನಗು !

    ReplyDelete
  4. ಅಜಾದ್,

    ಅದೆಷ್ಟು ಸುಲಭವಾಗಿ ಕವನಗಳನ್ನು ಬರೆದುಬಿಡುತ್ತೀರಿ. ಯಾವ ಫೋಟೊ, ವಸ್ತು...ಹೀಗೆ ಏನು ಸಿಕ್ಕರೂ ಹಾಗೆ ಕವನ ಬರೆದುಬಿಡುತ್ತೀರಿ...ಸೂಪರ್...ನನಗೂ ಹೀಗೆ ಬರೆಯುವುದನ್ನು ಕಲಿಸಿಕೊಡಿ...
    ಮಗುವಿನ ನಗುವಿನ ಕವನ..ಸೂಪರ್..

    ReplyDelete
  5. ಪ್ರಕಾಶ ನಿನ್ನ ಸುಂದರ ಮಗುವಿನ ಛಾಯಾಚಿತ್ರದ ಬಳುವಳಿ ನನ್ನ ಕವನ...ಮಗು ಎಂದರೆ ನನಗೂ ಮಗುವಾಗಿಬಿಡಲೇ ಎನಿಸಿದ್ದುಂಟು...ಆ ಮುಗ್ಧತೆ, ನಿಷ್ಕಲ್ಮಷ ಮನ..ಓಹ್...ಸದ್ಕೆಜಾವಾಂ.......ಶುಕ್ರಿಯಾ ದೋಸ್ತಾ...ನಿನ್ನ ಅನಿಸಿಕೆಗೆ..ಹಾಗೇ ಆ ಮಂಥನದ ಕಾರಣವಾಗಿದ್ದಕ್ಕೆ....

    ReplyDelete
  6. ನಿಮ್ಮ ಆತ್ಮೀಯ ಅನಿಸಿಕೆಗೆ ನನ್ನ ನಮನ....ವೆಂಕಟೇಶ್

    ReplyDelete
  7. ಪ್ರವೀಣ್..ಮಗುವಿನ ಮುಗ್ಧತೆಗೆ ಸಾಟಿ ಮಗುವಿನ ಮುಗ್ಧತೆಯೇ...ಅದರ ನಗುವಿಗೆ ಸಾಟಿ ಅದರ ನಗುವೇ...ಬೇರೆ ಯಾರಿಲ್ಲ....ಧನ್ಯವಾದ ನಿಮ್ಮ ಅನಿಸಿಕೆಗೆ

    ReplyDelete
  8. ಡಾ. ಟಿಡಿಕೆ ಹೇಗಿದ್ದೀರಿ...? ನಿಮ್ಮ ಹಾಡಿನ ಪರಿ ನನಗೆ ಮಗುವಿನ ಕೇಕೆಯ ನೆನಪಿಸಿತ್ತು...

    ReplyDelete
  9. ಶಿವು, ಧನ್ಯವಾದ..ನೀವೂ ಪ್ರಯತ್ನಿಸಿ...ನನಗೂ ಯಾರೋ ಹೀಗೇ ಹೇಳಿ ಆದ ಪ್ರಯತ್ನ ಕವಿತೆಗೆ ದಾರಿ..ಯಾಕೆ ತಡ ಶುರು ಹಚ್ಕೊಳ್ಳಿ...

    ReplyDelete
  10. ಮೊದಲೆರಡು ಸಾಲುಗಳೇ ಮನಕೆ ಮುದ ನೀಡಿದವು."ನೀ ನಗು.. ಆಗಿ ಮಗು".
    ಉತ್ತಮ ಕವನ. ಧನ್ಯವಾದಗಳು ಅಜಾದ್ ಸರ್.

    ಅನ೦ತ್

    ReplyDelete
  11. sir super agide.. magu mattu nagu vina naduve sundara vaagi mudide.....

    ನೀನಕ್ಕರೆ ಮಗು ನಗುವುದು
    ಮನ ಅರಳಿ ಕೊಡುವುದಾಮುದು

    super sir...

    ReplyDelete
  12. ಪ್ರಕಾಶರ ಬ್ಲಾಗಿನ ಮಕ್ಕಳ ಫೋಟೋ ನೋಡಿ ನಾನು ಕವನಿಸಬೇಕೆ೦ದಿದ್ದೆ, ಅಷ್ಟರಲ್ಲಿ ನಿಮ್ಮ ಬ್ಲಾಗಿನಲ್ಲಿ ಕಾಕತಾಳೀಯವೆ೦ಬ೦ತೆ ಅದೇ ವಿಚಾರವಾಗಿ ಕವನ ನೋಡಿದೆ, ಚೆನ್ನಾಗಿದೆ.

    ReplyDelete
  13. tumba chennagide naguva maguvina saalugaLu

    ReplyDelete
  14. ಮಗುವಿನ ಮುಗ್ಧ ನಗು ಸದಾ ಹೀಗೆ ಇರಲಿ........
    ಚೆಂದದ ಕವನ .....

    ReplyDelete
  15. ಅಜಾದ್ ಭಾಯಿ,
    ಕವನ ತು೦ಬಾ ಚೆನ್ನಾಗಿದೆ..:)

    ತಟ್ಟನೆ ಓದಿ..
    ಜಟ್ಟನೆ(ಅಕ್ಷರ )ಪೋಣಿಸಿ..
    ಚೊಕ್ಕಟ ನಗೆಯ
    ಅಪ್ಪಟ ಕವನ..

    ReplyDelete
  16. ಅಜಾದ್ ಸರ್,
    ಫೋಟೋ ಜೊತೆಗೆ ಕವನ ಕೂಡ ಸೊಗಸಾಗಿದೆ.

    ReplyDelete
  17. Chennagidhe kavana Ajaadh sir... pata patane odhisikondu hoyithu :)

    ReplyDelete
  18. ಜಲನಯನ,
    ನಿಮ್ಮ ಮುಗ್ಧ ಮನಸಿನಂತೆಯೇ ಕವನವೂ ಮುಗ್ಧವಾಗಿದೆ. ಮುಗ್ಧತೆಯೇ ಸೊಗಸು.

    ReplyDelete
  19. ಅನಂತ್ ಸರ್ ತುಂಬಾ ಸಂತೋಷ ನೀವು ಜಲನಯನಕ್ಕೆ ಬಂದುದು ಪ್ರೋತ್ಸಾಹದ ಎರಡು ಮಾತು ಬರೆದದ್ದು...ಧನ್ಯವಾದ

    ReplyDelete
  20. ತರುಣ್ ಬಹಳ ಧನ್ಯವಾದಗಳು ನಿಮ್ಮ ಆಗಮನಕ್ಕೆ....ನಿಮ್ಮಲ್ಲಿಗೂ ಬರ್ತೇನೆ...

    ReplyDelete
  21. ಕವನ ಮತ್ತು ಚಿತ್ರ ಚನ್ನಾಗಿದೆ ಸರ್ ;)

    ReplyDelete
  22. ಪರಾಂಜಪೆ ಸರ್, ನಮ್ಮ ಸಸ್ಯವನದ ವಿಹಾರದ ಕವನದ ವಿಷಯದಲ್ಲಿ ನೀವು ಮುಂದಾದಿರಿ..ಅದೇ ಯೋಚನೆ ನನಗೂ ಇತ್ತು...ಈಗ ನನ್ನ ಸರದಿ...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

    ReplyDelete
  23. ಮನಸು ಮೇಡಮ್ ಧನ್ಯವಾದ...ಮಗು ನನ್ನ ಅತಿಮೆಚ್ಚಿನ ವಿಷಯ...ಯಾಕಂದ್ರೆ ಅದರ ನಗುವೇ ಹಾಗೆ...

    ReplyDelete
  24. ಮಹೇಶ್ ಮಗುವಿನ ಮನಸ್ಸು ನಮ್ಮ ಪ್ರೌಢಿಮೆಯೊಂದಿಗೆ ಬೆರೆತು ಕಲಸುಮೇಲೋಗರ ಆಗದೇ ಇದ್ದಿದ್ದ್ರೆ ಎಷ್ಟು ಚನ್ನ ಅಲ್ವಾ? ಧನ್ಯವಾದ

    ReplyDelete
  25. ಮನಮುಕ್ತಾ..ಧನ್ಯವಾದ...

    ತಟ್ಟನೆ ಓದಿ..
    ಜಟ್ಟನೆ(ಅಕ್ಷರ )ಪೋಣಿಸಿ..
    ಚೊಕ್ಕಟ ನಗೆಯ
    ಅಪ್ಪಟ ಕವನ..
    ಇದು ಮನಮುಕ್ತ ತನನ

    ReplyDelete
  26. ಶಶಿ ನಿಮ್ಮ ಅನಿಸಿಕೆಗೆ ನನ್ನ ನಮನ...

    ReplyDelete
  27. ಸುಧೇಶ್ ಧನ್ಯವಾದ ನಿಮ್ಮ ಆತ್ಮೀಯತೆಗೆ...

    ReplyDelete
  28. ಸುನಾಥಣ್ಣ ...ನಿಮ್ಮ ಪ್ರೀತಿಯ ಮುಂದೆ ಮತ್ತೆ ಭಾಷಾ ಪ್ರೇಮ ಜ್ಞಾನದ ಮುಂದೆ ನಾನು ಮಗುವಾಗೋಕೆ ಇಷ್ಟಪಡ್ತೇನೆ...ಧನ್ಯವಾದ.

    ReplyDelete
  29. ಮಂಜು ಥ್ಯಾಂಕ್ಸ್ ಕಣಪ್ಪ...ನಿನ್ನ ಆತ್ಮೀಯತೆಗೆ...

    ReplyDelete
  30. ಸರ್,

    ಸುಂದರ ಸಾಲುಗಳು
    ಬಹಳ ಇಷ್ಟವಾಯಿತು

    ReplyDelete
  31. ಅಜಾದ್ ಸರ್ ನಿಮ್ಮ ಕವಿತೆ ಸೂಪರ್ .ಮುದ್ದುಮಗುವಿನ ಚಿತ್ರಕ್ಕೆ ನಿಮ್ಮ ಕವನದ ಚಿತ್ತಾರ ಚೆನ್ನಾಗಿ ಮೂಡಿಬಂದಿದೆ.

    ReplyDelete
  32. namaste sir.. danyavaadagalu nanna blog ge visit madidakke.. mukyavagi nanna tappugalanna tiddukollalu salahege.. swalpa kagunitada tondare anubhavisuttiddene sir.. munde nimmantavara sahayadindi ee tondare inda hora baruva vishvasa ide sir.. nimma comment nodi kushi aytu sir tappu tiliyuva prasneye illa sir... danyavaadagalu..

    ReplyDelete
  33. ಡಾ ಗುರು..ನಿಮ್ಮ ವ್ಯಸ್ತತೆಯ ಮಧ್ಯೆ ನನ್ನ ಬ್ಲಾಗಿಗೆ ಬಂದಿರಿ ಎರಡು ಪ್ರೋತ್ಸಾಹದ ಮಾತು ಬರೆದಿರಿ...ಥ್ಯಾಂಕ್ಸ್....

    ReplyDelete
  34. ಬಾಲು...ನೀವು ನಮ್ಮ ಜೊತೆ ಸಸ್ಯವನಕ್ಕೆ ಬಂದಿದ್ದರೆ ಚನ್ನಿರುತ್ತಿತ್ತು..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  35. ತರುಣ್...ನಿನ್ನ ಮಾತು ಹಿತವೆನಿಸಿತು..ತಿದ್ದಿಕೊಳ್ಳುವ ಮನೋಭಾವ ಬೆಳವಣಿಗೆಯ ಶುಭ ಸೂಚಕ...ನಿಜ ಹೇಳಬೇಕೆಂದರೆ ಯಾರಿಗೂ ತಪ್ಪು ತೋರಿಸಿದರೆ (ನನಗೂ) ಆ ಕ್ಷಣಕ್ಕೆ ಸ್ವಲ್ಪ ಕೆಡುಕೆನಿಸಬಹುದು ಆದರೆ ನಂತರ..ಹೌದು ಇದನ್ನು ತಿದ್ದಿಕೊಂಡರೆ ...?? ಎನಿಸುವುದು..ನನ್ನಲ್ಲಿನ ತಪ್ಪುಗಳನ್ನು ನನ್ನ ಹಿರಿಯರ ಮಾರ್ಗದರ್ಶನ ಸರಿಪಡಿಸಿದರೆ ನನಗೆ ಸಂತೋಷ...ನಿನ್ನ ಸಹಾಯಕ್ಕೆ ನಾನು ಸದಾ ಸಿದ್ಧ...ನನ್ನ ಮೈಲ್ ಐಡಿ. suruaz@hotmail.com

    ReplyDelete
  36. ಆಜಾದ್ ಸರ್,

    ತುಂಬಾ ಚೆನ್ನಾಗಿದೆ, ಅದ್ಕೆ ಅಲ್ಲವೇ ಹೇಳಿರೋದು...

    ಕೂಸು ಇದ್ದ ಮನಿಗಾ ಬೀಸಣಿಗೆ ಯಾತಕಾ
    ಕೂಸು ಕಂದಯ್ಯ ಒಳಹೊರಗ
    ಕೂಸು ಕಂದಯ್ಯ ಒಳಹೊರಗ ಆಡಿದರ ಬೀಸಣಿಗೆ ಗಾಳಿ ಸುಳಿದಾವು.....ಅಂತ


    ತುಂಬಾ ಚೆನ್ನಾಗಿದೆ ಸರ್...

    ReplyDelete
  37. ಆಜಾದ್ ಸರ್,
    ಅಲ್ಲಿ ಪರಾಂಜಪೆ ಸರ್ ಬ್ಲಾಗ್ ನೋಡಿದರೆ ಮಗುವಿನ ನಗುವಿನ ಚಿತ್ರದ ಜೊತೆ ಕವನ.... ಇಲ್ಲಿ ನಿಮ್ಮದೂ ...... ಒಟ್ಟಾರೆ ಈ ಮಕ್ಕಳಿಗೆ ದ್ರಷ್ಟಿ ಆಗದಿದ್ದರಾಯಿತು...... ಚೆನ್ನಾಗಿದೆ ಸರ್ ನಿಮ್ಮ ಮಕ್ಕಳ ಬಗೆಗಿನ ಕಾಳಜಿಯ ಮಾತುಗಳು........ ಹಾರೈಕೆಗಳು.....

    ReplyDelete
  38. ಮಗುವಿನ ನಗುವಿನಲ್ಲಿ ಎಲ್ಲಾ ನೋವುಗಳನ್ನು ಮರೆಯಬಹುದು ಎಂದುಕೊಳ್ಳುತ್ತೇವೆ. ಆದರೆ ನಮ್ಮ ನಗುವಿಗೂ ಆ ಶಕ್ತಿ ಇದೆ ಎನ್ನುವುದನ್ನು ನೆನಪಾಗುವುದೇ ಇಲ್ಲ !
    ಚಂದದ ಕವನ ..

    ReplyDelete
  39. This comment has been removed by the author.

    ReplyDelete
  40. ಅಶೋಕ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  41. ದಿನಕರ್ ಪರಾಂಜಪೆಯವರು ಇದರ ಬಗ್ಗೆ ಬರೆಯಬೇಕು ಅಂತಿರುವಾಗ ನಾನು ಬರೆದದ್ದು ಕಾಕತಾಳೀಯ ಆಯ್ತು...ಅದೂ ಇಬ್ಬರ ಕವನಗಳಿಗೂ ಪ್ರಕಾಶನ ಫೋಟೋಸ್ ಕಾರಣ..
    ಧನ್ಯವಾದ.

    ReplyDelete
  42. ಚಿತ್ರಾ ..ಮಗುವಿನ ನಗುವನ್ನು ತಂದುಕೊಂಡರೆ...ನಮ್ಮ ದುಗುಡ ಮಾಯವಾಗುವುದು ಸಹಜ....ಧನ್ಯವಾದ ನಿಮ್ಮ ಅನಿಸಿಕೆಗೆ...

    ReplyDelete
  43. This comment has been removed by the author.

    ReplyDelete
  44. ನಿಶಾ...ನಿಜ ನೋಡಿ ನಿಮ್ಮ ಬ್ಲಾಗ್ ಐಕಾನ್ ಸಹ ಮಗುವೇ,,,ಅದರ ನಗುವೂ ಎಂಥ ಮುಗ್ಧತೆಯ ಸಾಕಾರ...ಧನ್ಯವಾದ

    ReplyDelete
  45. ಎಂತಹ ಸಾಲುಗಳು! ಮಕ್ಕಳೇ ಹಾಗೆ... ತಮ್ಮ ತುಂಟ ಮೋಹಕ ನಗೆಯಿಂದ ಎಂತಹ ನೋವನ್ನೂ ಮರೆಸಿಬಿಡುತ್ತಾರೆ... ಚಿತ್ರ, ಕವನ ಎರಡೂ ಸೂಪರ್...

    ReplyDelete
  46. ಪ್ರಗತಿ...ಚಿತ್ರದ ಗುಣಗಾನದ ಶ್ರೇಯ ಪ್ರಕಾಶನಿಗೆ ಸಲ್ಲಬೇಕು...ಅದಕ್ಕೆ ಪದಗಳನ್ನು ಹೊಂದಿಸಲು ಪ್ರಯತ್ನಿಸಿದ್ದೇನೆ ನಿಮಗೆ ಇಷ್ಟವಾದುದಕ್ಕೆ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  47. Very Nice! sadya ishte heluttene! dhnayavaada

    ReplyDelete