ಆಸ್ತಿ
ಮೆದು-ಹುಸಿ ನಗು, ತುಂಟನೋಟ
ಪರ(ಮ) ಗುಲಾಮನಾಗಿಸಲು ಸಾಕು ಆಸ್ತಿ
ಏತಿ-ಪ್ರೇತಿ
ಮದುವೆಹೊಸತರಲ್ಲಿ ಎಲ್ಲದರಲ್ಲೂ ಸೌಂದರ್ಯ ಪ್ರೀತಿ
ಹೊಂದಿಕೆಯಾಗದೆ ನಂತರ ಅವ ಏತಿ ಇವಳು ಪ್ರೇತಿ
ಮಗು
ಜೀವನವಾಗಿದ್ದು ನಿನ್ನಿಂದಲೇ ತಾಯಿಗೆ ಸಾರ್ಥಕ
ಬಂದು ನೀನು ಅಪ್ಪನ ಶ್ರಮವಾಗಲಿಲ್ಲ ನಿರರ್ಥಕ
ಗೊತ್ತೇ ಅಗೊಲ್ಲ
ವಿದೇಶದಿಂದ ಬಂದ ಮಂತ್ರೀನ ಕೇಳಿದ್ರು, ಏನ್ತಂದ್ರಿ?
ಶೇವಿಂಗ್ ಮಾಡೋದು, ಕಟ್ ಮಾಡಿದ್ರೆ ಗೊತ್ತೇ ಆಗಲ್ಲಂತ್ರಿ
ದೊಂಬರಾಟ
ಪಟ್ನದಾಗೈತೆ ಒಬ್ಬೊಬ್ಬರ್ದು ಒಂದೊಂದ್ ಥರ ಆಟ
ಇದಾನ್ ಸೌದ್ದಾಗ್ ನಡೀತೈತಿ ದೊಡ್ದೊಡೋರ್ ದೊಂಬ್ರಾಟ
ಲಂಚ ಅದೆಂಥ ಮಂಚ?
ಕೊಡ್ದಿದ್ರೆ ಸಾಗೊಲ್ಲ, ಹಾಕ್ದಿದ್ರೆ ನಡೆಯೊಲ್ಲ, ಕೊಟ್ರೂನೂ ಉಳಿಯೊಲ್ಲ
ಲಂಚಕೊಟ್ಟೋನು ಕೋಡಂಗಿ, ಈಸ್ಕೊಂಡ್ರೆ
ಈರ್ಬದ್ರ, ತಲುಪಿದ್ದು ಸುಭದ್ರ
ನ್ಯಾನೋ
ನ್ಯಾನೋ ಹತ್ತಿ ಹೊಂಟಿದ್ರು ಟಾಟಾ..
ರಸ್ತೇಲಿ ಕೈಕೊಟ್ಟೂ ಹೇಳ್ತದು ಬರ್ಲಾ...
ಪ್ರಯತ್ನ
ಬೆಪ್ಪೆ ಬರ್ದಿದ್ದೆಲ್ಲ ಅಗೊಲ್ಲ ಕಣೋ ಕವನ
ಬರ್ದ ಪೇಪರ್ ಎಷ್ಟ್ ಹರಿದಿದ್ದೀಯಾ ನೋಡು ಎನ್ನುತ್ತೆ ಮನ
ಭಾಳಾ ಭೇಷ್ ಅಗಿತ್ರಿ ಅಜಾದಪ್ಪ
ReplyDeleteನಿಮ್ಮದು ನ್ಯಾನೋ ಪಸಂದಾಯ್ತ್ರಿ :)
ಸುಂದರ ನ್ಯಾನೋಗಳು!ಅಭಿನಂದನೆಗಳು ಅಜಾದ್ ಸರ್.
ReplyDelete...:))
ReplyDeleteಡಾ. ಥ್ಯಾಂಕ್ಸ್ ರೀ ಯಪ್ಪಾ...ನ್ಯಾನೋ ಪಸಂದಾದ್ಕೆ...
ReplyDeleteಡಾ. ಡಿ.ಟಿ.ಕೆ. ಧನ್ಯವಾದ ಸರ್...
ReplyDeleteವಿಜಯಶ್ರೀ ಧನ್ಯವಾದ..ಸುಭದ್ರ ..ಸ್ವಿಸ್ ಬ್ಯಾಂಕಿಗಿಂತ ಬೇರೆ ಇಲ್ಲ ಅಲ್ವಾ...ಹಹಹಹ
ReplyDeletehe he he..
ReplyDeletesakkattaagide bhai...:)
mashah allah...:)
ha.. ha..ha nice :)
ReplyDeletesir nimm nano super sakkatagide sir..
ReplyDeleteಆಜಾದಾ...
ReplyDeleteರಾಶಿ ಚೊಲೊ ಬರದ್ಯಾ ಮಾರಾಯ್ನೆ...
ಹೀಂಗೆ ಬರಿತಾ ಇರು..
ಆನು..
ಎನ್ ಹೆಂಡ್ತಿ ಎಲ್ರೂ ಸಿಕ್ಕಾಪಟ್ಟೆ ಖುಷಿ ಪಟ್ಯ.. ನೋಡು..
ಹೀಂಗೆ ಇನ್ನಷ್ಟು ಬರಿ ಹೇಳಿ ಎನ್ನ ಶುಭ ಹರೈಕೆ ಇದ್ದು..
ಚೇತನಾ...ನಿಮ್ಮ ಕಾಮೆಂಟ್ ನೋಡಿ...ಆ ಹಾಡು ನೆನಪಾಯ್ತು..ಅದೇ ನನ್ನ ಮೊದಲ ನ್ಯಾನೋ.. ಸಕತ್ತಾಗವಳೇ, ಸುಮ್ನೆ ನಗ್ತಾಳೆ...ಹಹಹಹ್ ಧನ್ಯವಾದ
ReplyDeleteಸುಮ..ಧನ್ಯವಾದ..ಹೀಗೂ ಒಮ್ಮೆ ಅಂತ ನಿಮಗೂ ಅನ್ನ್ಸಿಸಿದೆ..ನಿಮ್ಮ ಬ್ಲಾಗೊಳಗೆ..ಹಹಹ್ಹ..
ReplyDeleteಹಳ್ಳಿ ಹುಡುಗ...ನವೀನ್..ಥ್ಯಾಂಕ್ಸು...ನಿಮ್ಮ ಅನಿಸಿಕೆಗೆ ಮತ್ತೆ ಪ್ರತಿಕ್ರಿಯೆಗೆ.
ReplyDeleteಶುಭ ಹಾರೈಕೆಯ ಆತ್ಮಿಯ ನುಡಿ...ರಾಶಿ ಚಲೋ ಇದ್ದು ಎನ್ನ್ ಥ್ಯಾಂಕ್ಸೂ ಇದ್ದು ಕುಚಿಕು...
ReplyDeleteಅಜಾದ್ ಸರ ನಿಮ್ಮ ನ್ಯಾನೋ ಪಸಂದ್ ಆಗಿ ಐತ್ರೀ !!! ಭಾಳ್ ಚಲೋ ಬರದೀರಿ ಬಿಡ್ರಲ .ಮಂಡಕ್ಕಿ ತಿನ್ದನ್ಗಾತು .
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ನಾನೂ..ನ್ಯಾನೋ..ಬರೆಯೋದು ಕಲಿಯೋಕ್ ಅಭ್ಯಾಸ ಮಾಡ್ಲಿಕ್ ಹತ್ತೀನಿ...ಸಾಏಬ್ರಾ..ಸೊಲ್ಪು..ಹಿ೦ಟ್ಸ್ ಕೊಡ್ರಲಾ...
ReplyDeleteಧನ್ಯವಾದಗಳು
ಅನ೦ತ್
ಟಾಟಾದವರ ನ್ಯಾನೋಗಿಂತ ಚಂದದ ನ್ಯಾನೋ ಬರೀತಾರೆ ಆಜಾದು
ReplyDeleteಅದನ್ನ ಓದಿದ್ರೆನೆ ಗೊತಾಗೋದು , ಏನು ಹೇಳೋದು ಆ ಜಾದು
ಬಾಲು, ಬೋ ಪಸಂದಾಯ್ತ್ರೀ ನಿಮ್ ಮಾತ್ನೋಡಿ...ಧನ್ಯವಾದ...
ReplyDeleteಅನಂತ್ ಸರ್ರಾ..ಬರ್ಯೋಕ್ ಹತ್ತೀರಿ...?? ಛಲೋ ಆತು ಬಿಡ್ರಲಾ...
ReplyDeleteಹಂಗೇ ಎರ್ಡು ಲೈನ್ ಬರ್ದ್ ಬಿಡ್ರಿ ಮತ್ತೆ ಒಮ್ದೆರಡು ಪದ ಆಚೀಚೆ ಮಾಡಿ ಮುಗೀತು ನ್ಯಾನೋ ...
ಚಿತ್ರಾ, ಟಾಟಾ ನ್ಯಾನೋ ಯಾಕೋ ನಾನೋ ನೀನೋ ಅನ್ನುತ್ತಂತೆ ..ಕೈಕೊಡ್ತಪ್ಪಾ ಅಂತಾರೆ ಕೆಲವರು, ಆದ್ರೆ ನನಗೆ ಈ ನ್ಯಾನೋಗಳು ಕೈಕೊಡೊಲ್ಲಪ್ಪ...
ReplyDeleteನ್ಯಾನೋ ಹತ್ತಿ ಹೊಂಟಿದ್ರು ಟಾಟಾ..
ರಸ್ತೇಲಿ ಕೈಕೊಟ್ಟೂ ಹೇಳ್ತದು ಬರ್ಲಾ...
ಪುಟ್ಟ ಹಾಗು ಸುಂದರ ನ್ಯಾನೋ ಹಿಡಿಸಿತು ಸರ್.
ReplyDeleteಶಶಿ ಬಹಳ ಅಪರೂಪ ಆಗಿಬಿಟ್ರಿ...ಆದ್ರೂ ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್...ನ್ಯಾನೋ ಮೆಚ್ಚಿದಕ್ಕೆ...ಆಲ್ಸೋ,...
ReplyDelete"ಗೊತ್ತೇ ಅಗೊಲ್ಲ" ನ್ಯಾನೋ ISHTAVAAYTU..:)
ReplyDeleteತೇಜಸ್ವಿನಿ..ಥ್ಯಾಂಕ್ಸು...ಅದು ನನಗೂ ತುಂಬಾ ಹಿಡಿಸಿದ್ದು...ರಾಜಕಾರಣಿಗಳು ಲಕ್ಷಾಂತರ ಕೋಟಿ ಶೇವ್ ಮಾಡಿ ಸ್ವಿಸ್ ನಲ್ಲಿ ಸೇವ್ ಮಾಡ್ತಿದೆ...ಯಾರ್ಗೂ ಗೊತ್ತೇ ಆಗ್ತಿಲ್ಲ ಹಹಹಹ
ReplyDeleteಧನ್ಯವಾದ ವಸಂತ್ ಪ್ರತಿಕ್ರಿಯೆಗೆ ಮತ್ತು ನ್ಯಾನೋ ಮೆಚ್ಚಿದಕ್ಕೆ
ReplyDeleteಚೆಂದದ ನ್ಯಾನ್ಯೋಗಳು !
ReplyDeleteಇಷ್ಟವಾಯ್ತು
thumba punchin agittu...
ReplyDeletenyaano mattu kavana thumba ishta aayithu ;)
ಸುಧೇಶ್ ಥ್ಯಾಂಕ್ಸ್ ...ಮತ್ತೆ ಹೇಗೆ ನಡೆದಿದೆ ಕಾದಂಬರಿ ಪಥ...?
ReplyDeleteನ್ಯಾನೋ ಯಾಕೋ ಬರ್ಲಾ ಅಂತಾನೇ ಇದೆ...ಹಹಹ