Friday, February 11, 2011

(Photo: web pages)

ಅಳ್ಳಿ-ವರಸೆ

ಗದ್ದೆ ಕೆಸ್ರು, ಮಂಡೀಗಂಟ ಏರ್ಸ್ಕೋಂಡು ಸೀರೆ
ಎದೆಮ್ಯಾಲಿನ್ ಸೆರ್ಗು ಜಾರ್ತೈತೆ ಜ್ವಾಕೆ ನೀರೆ
ಪಡ್ಡೆ ಐಕ್ಳು ನಾಟಿ ಗೇಯ್ಮೆ ಮಾಡೋದ್ ಕಮ್ಮಿ
ಬಡ್ಡಿ ಮಕ್ಳು ಕಳ್ನೋಟ ಆಕ್ತಾವ್ರೆ ಉಸಾರ್ಕಣಮ್ಮಿ

ಸುಬ್ಬಿ ಅಂದ್ರೆ ಅಳ್ಳಿಯೋಳ್ಗೆ ಗಂಡಸ್ರು
ಎಂಡ್ತೀರ್ ನೋಡ್ದೇಟ್ಗೆ ಆಕ್ತಾರೆ ನಿಟ್ಟುಸ್ರು
ನಮ್ಮ ಗೌಡ ಕುಂತಿದ್ರೂ ಜಗ್ಲಿ ಮ್ಯಾಲೆ
ಕುಣೀತಾವೆ ಮೀಸೆ ಮಾಡ್ತಾವೆ ಬ್ಯಾಲೆ

ಸಾಕಮ್ಮನ್ಗಾಗಿತ್ತು ಎಲ್ರಂಗೇ ಡೌಟು
ಸುಬ್ಬಿ ಶೆಟ್ರಂಗ್ಡಿಗೋದ್ರೆ ಕಮ್ಮಿಯಾಕೆ ರೇಟು?
ಕೊಸ್ರೋಕೋದ್ರೆ ಸುಬ್ಬಿ ಕೈಜೊತೆ ಆಗ್ತಿತ್ತು ಫೈಟು
ಶೆಟ್ರಿಗೆ ಕಾದಿತ್ತು..!! ಬಂತು ಸಾಕಮ್ಮನ್ಕೈಗೆ ಸೌಟು.

44 comments:

  1. ಬೋ ಸಂದಾಕೈತೆ ಕಣ್ ಬುದ್ದಿ...

    ReplyDelete
  2. ಆಜಾದೂ ....
    ಸೂಪರ್ರು ಕಣಪೊ !

    ರಾಶಿ ಚೊಲೊ ಬರದ್ಯೊ ಮಾರಾಯಾ ! Jai Ho !

    ReplyDelete
  3. ದಿಲೀಪಣ್ಣ ಎಂಗೆ..ಕಾಲೇಜ್ಕೋಗೋವಾಗ ಆಡಿದ್ದಾಟ ನೆಪ್ತಿ ಆಯ್ತಾ..??/ ಹಹಹ ಉಸಾರ್ಕಣಪ್ಪಾ ಈವಾಗ ಪ್ರಗ್ತಿ ಮಾಡ್ಕಂಡಿದ್ದೀಯಾ...ಹಹಹ ಧನ್ಯವಾದ

    ReplyDelete
  4. ಓ ಓ..ಪಕ್ಕು ಬಟ್ರು...ಅಳ್ಳಿ ದಿನ್ಗೋಳು ಮೆಲ್ಕಾಕ್ಕಳ್ಲಿ ಅಂಗೇಯಾ...ಮಿಂಚ್ಮೂಡ್ತಾದೆ ಕಣ್ಣೊಳ್ಗೆ...ಹಹಹ ಧನ್ಯವಾದ

    ReplyDelete
  5. ವಿಜಯಶ್ರೀ...ಹಹ್ಹಹ..ಧನ್ಯವಾದ...

    ReplyDelete
  6. ಪ್ರದೀಪ್ ಸುಬ್ಬಿ,ಹಳ್ಳಿ ಹುಡುಗಿ ಆದ್ರೂ ಕಿಲಾಡಿ ಹುಡ್ಗಿ...ಧನ್ಯವಾದ

    ReplyDelete
  7. ಮನಮುಕ್ತಾ...ಧನ್ಯವಾದ..ಏಕತಾನತೆಗೆ ಸ್ವಲ್ಪ ಬ್ರೇಕ್ ಅಂತ ಇದನ್ನ ಹಾಕಿದ್ದು...

    ReplyDelete
  8. ಸಖತ್ತಾಗಿದೆ " ಅಳ್ಳಿ -ವರಸೆ "

    ಹೀಂಗೆ ಹೋದ್ರೆ , ಹಳ್ಳಿ ನೆ ಏನು ಎಲ್ಲೆಲಿಯೂ ಇದೇ ಕಥೆ ಆಗುತ್ತೆ ! ಪ್ರೇಮಲೋಕದ ಹಾಡು ನೆನಪಾಯ್ತು ! ಹಾ ಹಾ ಹಾ

    ReplyDelete
  9. ಓಹೋಹೋ...ಬಲ್ ಪಸಂದ್ ಆಗಿದೆಯಲ್ಲಾ ಅಜಾದ್.

    ReplyDelete
  10. ಚಿತ್ರಾ...ಥ್ಯಾಂಕ್ಸ್ ಕನಕ್ಕಾ...ಒಸಿ ಅಂಗೇಯಾ ನೆಪ್ತಿ ಆತು,,,ಅಳ್ಳಿ ಒಳ್ಗೆ ಆಡೋ ಆಟ..ಆದ್ರೆ ಎಲ್ಲೂ ಮರ್ವಾದೆ ಮೀರೊಲ್ಲ...ಮೀರಿದ್ರೆ ..ಮದ್ವೆ ಗ್ಯಾರಂಟಿ...ಹಹಹ

    ReplyDelete
  11. ಮಹಾಬಲರೇ...ಗ್ರೇಟ್ ಸ್ಟ್ರೆಂತ್ ಬಂತು ಜಲನಯನಕ್ಕೆ ನಿಮ್ಮ ಕಾಮೆಂಟಿಂದ್...ಧನ್ಯವಾದ

    ReplyDelete
  12. ಹಹಾಹಹಹ ಶಿವು...!! ಇದೂ ಒಮ್ದು ಒರ್ಸೆ...ಅಲ್ವಾ...ಒಂದೊಂದು ಕಡೆ ಒಂದೊಂದು ಇಸ್ಟೈಲ್...ಧನ್ಯವಾದ ನಿಮ್ಮ ಕಾಮೆಂಟಿಗೆ

    ReplyDelete
  13. hahaha enu sir idu haLLi hudugeena baari pasandagi tiLsiri sar.... hahaha

    ReplyDelete
  14. ಹಹ್ಹಹ ಮನಸು ಮೇಡಂ...ಮನಸು ಏನೆಲ್ಲಾ ಮಎಲಕು ಹಾಕುತ್ತೆ ಅನ್ನೋದಕ್ಕೆ ಇದು ಒಂದು ನಿದರ್ಶನ ...ಧನ್ಯವಾದ.

    ReplyDelete
  15. ಪಸಂದಾಕೈತೆ ಕಣ್ ಬುದ್ದಿ.....

    ReplyDelete
  16. ಕ್ಯಾಜಿ ತುಮೆ, ಹಳ್ಳಿ ಚೊಕ್ರೀ ಕೆ ಬಾರೆ ಮೇ ಕವನ ಲಿಖ್ಯಾ ಸೋ, ಅಚ್ಚಾ ಹೈ೦ಜಿ. ಸುಭಾನಲ್ಲಾ

    ReplyDelete
  17. ಏನೇಳ್ಳಿ ಅಜಾದು ಭಯ್ಯಾ! ಮೂಕನಾಗಿದ್ದೇನೆ!!!

    ReplyDelete
  18. ಮಯೇಸಣ್ಣ ಯಾವಾಗ್ಬಂದ್ದೆ ಗದ್ದೆತಾವಿಂದ...?? ಆಯೋ ನಿನ್ ಇಸ್ಯ ಆಕಿಲ್ಲ ಬುಡು...ಹಹಹ
    ಧನ್ಯವಾದ ಮಹೇಶ್ ನಿಮ್ಮ ಪ್ರತಿಕ್ರಿಯೆಗೆ

    ReplyDelete
  19. ಪರಾಂಜಪೆಜೀ...ಏನ್ಸಾ ನಿಮ್ದೂಕೆ ಅಳ್ಳಿ ಛೋಕ್ರಿ ವಿಶ್ಯಾ ಹೇಳ್ಲಿ..?? ಶುಕ್ರಿಯಾ...ಆಪ್ ನೆ ಪಸಂದ್ ಕಿಯಾ...ಹಹಹ

    ReplyDelete
  20. ಸತೀಶ್...ಏನು..? ಪ್ರತಿಕ್ರಿಯೆ ನಿಮ್ಮದು..?? ನನಗೆ ಒಗಟಾಗೇ ಇದೆ.. ತುಂಟತನ ಹಿಡಿಸ್ಲಿಲ್ವೋ ಅಥವಾ ನೆನಪಾಯ್ತೋ..?? ಹಹಹ ಧನ್ಯವಾದ ಎನಿ ವೇ...

    ReplyDelete
  21. ವನಿತಾ, ಬಹಳ ದಿನಗಳ ನಂತರ...ಏನು, ಅಹಾ !! ಅಂದ್ರೆ...??!! ಥ್ಯಾಂಕ್ಸ್ ಎನಿವೇ..ನಿನ್ನ ಬರುವಿಕೆಗೆ ಮತ್ತು ಆಹಾ ಗೆ...

    ReplyDelete
  22. ಹಹಹ್ ದಿನಕರ್...ಏನು ಬಹಳ ಅಪರೂಪ ಆಗಿಬಿಟ್ರಿ..? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  23. ಆಜಾದ್ ಸರ್,
    ಸ್ಯಾನೆ ರಸಿಕರು ತಾವು, ಕಳ್ಳ ಕಿಸ್ನ :)

    ಮತ್ತೆ, ಹೆಂಗವ್ಳೆ..? ಸುಬ್ಬಿ..!
    ಹ ಹ..
    ಪಸಂದಾಗಿದೆ.

    ReplyDelete
  24. ಅಲ್ಕಣ್ ಬುದ್ಧಿ............
    ಅದ್ಯೇನ್ ಸ್ಯಾನೆ ರಸಿಕರಾಗಿ ಬರ್ದ್ ಬುಟ್ರಲ್ಲ ಸಿವಾ?
    ಹ್ಹ ಹ್ಹ ಹ್ಹಾ........

    ReplyDelete
  25. ಜಲನಯನ,
    ಸವ್ಯಸಾಚಿ ಲೇಖಕರು ನೀವು. ಶಿಷ್ಟ ಹಾಗು ಜಾನಪದ ಶೈಲಿಗಳೆರಡೂ ಕರಗತವಾಗಿವೆ ನಿಮಗೆ.

    ReplyDelete
  26. ಅನಿಲ...
    ನಿನಮನದಮಾತ ನನಬರಣಿಗೆ ಗೀತಾ...
    ಹಾಡಿಕೊಂಡರೆ ಮನವರಳುವುದು...
    ಸುಮ್ಮನೇ ನನ ತುಂಟನೆಂದವ ತಾ
    ಬಲುತುಂಟನೆಂದನಯ್ಯಾ ಬ್ಲಾಗೇಶ್ವರ

    ReplyDelete
  27. ಪ್ರವೀಣ ..ಎಲ್ಲಿದ್ದೆ ಇಲ್ಲೀ ತಂಕ..ಎಲ್ಲಿಂದಾ ಬಂದ್ಯಪ್ಪಾ ನಿನಕಂಡು ಬ್ಲಾಗ ಯಾಕೋ ಮರುಗಿದೆಯೋ...ಹಹಹಹಹ ಧನ್ಯವಾದ

    ReplyDelete
  28. ರಂಜು..ಧನ್ಯವಾದ...ನಿನ್ನ ಚುಟುಕದ ಚುರುಕು ಮುಟ್ಟದೆ ನಮಗೆಲ್ಲಾ ನಿರಾಶೆ ಆಗಿದೆ..ಬೇಗ ಒಮ್ದು ಬರಲಿ...ನಿನ್ನ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  29. ಸುನಾಥಣ್ಣ...ನಿಮ್ಮ ಮಾತು ಸಾವಿರ ಆಶೀರ್ವಾದಕ್ಕೆ ಸಮ..ಧನ್ಯವಾದ..
    ಮನುಷ್ಯ ಪೂರ್ಣನಾಗೋದು ಎರಡೂ ಇದ್ದರೇನೇ ಅಂತೆ...ಗಾಂಭೀರ್ಯ ಮತ್ತು ಮೆದು ತುಂಟತನ...ಸದಭಿರುಚಿಯ ಎಲ್ಲೆಯೊಳಗೆ...ಏನಂತೀರಿ? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  30. hahaahaaaaaaaaaa :) super bhayya

    ReplyDelete
  31. ಮಂಜು ಥ್ಯಾಂಕ್ಸ್...ಹೀಗೂ ಉಂಟಾ ಅಂದ್ಕೊಂಡ್ರಾ...??!!

    ReplyDelete
  32. ನಾಗರಾಜ್ ಧನ್ಯವಾದ ಗುರುವೆ..

    ReplyDelete
  33. hmmm Halli haiklu pyate haiklu..kan haktar nim kavanad myake.. adkinta jote iro photod myake :) nice one

    ReplyDelete
  34. ಪ್ರವೀಣ್..ಹಹಹಹ, ಧನ್ಯವಾದ ನಿಮ್ಮ ಮುಕ್ತ ಮತ್ತು ಆತ್ಮೀಯ ಅನಿಸಿಕೆಗೆ...ಹೌದಾ..? ನನಗೂ ಈ ಕವನಕ್ಕೆ ಒಳ್ಳೆ ಚಿತ್ರ ಸಿಕ್ತು ಅಲ್ವಾ?!!

    ReplyDelete
  35. ಅಕ್ಕೂ!!! ಅಜಾದನ್ನ ಈ ಕವಿತೆಲಿ ಕಮಾಲ್ ಮಾಡವ್ರೆ .ಚಿತ್ರ ನೋಡ್ತಾ ಕವಿತೆ ಓದ್ತಾ ಇದ್ರೆ ಕವಿತೆ ಕಿಕ್ ಕೊಡ್ತುದೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  36. ಹಹಹ...ಬಡ್ಡಿ ಮಗ್ನೇ,,,ನಿನ ಬ್ಲಾಗ್ ಓಪನ್ ಮಾಡಿ ವ್ಯಾಲಂಟೈನ್ ದಿವ್ಸ...ಮದ್ದು ಹಾಕ್ದೆ ಕಣೋ..ಅದರ ಕಿಕ್ಕೇ ಕಿಕ್ಕ್ಕು ಅಂತ ನನ್ನ ಸ್ನೇಹಿತನೊಬ್ಬ ಬರೆದ...ಅದು ನೆನಪಾಯ್ತು ನಿಮ್ಮ ಕಾಮೆಂಟ್ ನೋಡಿ ಬಾಲು...ಥ್ಯಾಂಕ್ಸ್...

    ReplyDelete