Thursday, March 3, 2011

ನಂಗೊತ್ತಿಲ್ಲ ಮಗು

(ಚಿತ್ರ ಕೃಪೆ: ಅಂತರ್ಜಾಲ)
ನಂಗೊತ್ತಿಲ್ಲ ಮಗು

ಅಪ್ಪಾ ..
ಏನು ಪುಟ್ಟಾ?
ಕನಸಿನ ಕನ್ಯೆ ಅಂದ್ರೆ ಏನಪ್ಪಾ..?
ಅಂದ್ರೆ ,.. ಡ್ರೀಮ್ ಗರ್ಲ್ ಅಂತಾ
ಹಂಗಂತ ನಮ್ಮ ಎಮ್ಮೆ ಎಲ್ಲೇ ಒಬ್ರು ಇಲ್ಲಿಗೆ
ಬಂದಿದ್ರಲ್ಲಾ ಆಂಟಿ ಒಬ್ರು ಅವರನ್ನ ಕೇಳಿದ್ದಕ್ಕೆ
ಅವ್ರು ಮಂಕಾಗಿ ಮೇಲೆ ಕೆಳಗೆ ನೋಡಿದ್ರು...??!!
ಅವ್ರಿಗೆ ಕನ್ನಡ ಬರೊಲ್ಲ ಅಲ್ವಾ ಅದಕ್ಕೆ..
ಮತ್ತೆ ಅವರನ್ನ  ಕನ್ನಡಿಗರು ಯಾಕೆ ಆಯ್ಕೆ ಮಾಡಿದ್ದು ಅಪ್ಪಾ
ನಮ್ಮಲ್ಲಿ ಅಂತಹ ಕನ್ನಡಿಗರೇ ಇಲ್ವಾ...?
ನಂಗೊತ್ತಿಲ್ಲ ಮಗು.

ಅಪ್ಪಾ...ಇನ್ನೊಂದು ಸಂದೇಹ...!!
ಏನಪ್ಪ ಅದು ನಿನ್ನ  ಡೌಟು?
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗೆ
ನಾರಾಯಣ ಮೂರ್ತಿಯವರನ್ನ ಆಹ್ವಾನಿಸಿದ್ದಾರಂತೆ?
ಹೌದು ಕಣೋ ಅವರು ನಮ್ಮ ಬೆಂಗಳೂರನ್ನ ಭೂಪಟದಲ್ಲಿ ಎದ್ದು ಕಾಣೋಹಾಗೆ ಮಾಡಿದ ಮಹಾನ್ ಉದ್ಯಮಿ ಅಲ್ಲವಾ ಅದಕ್ಕೆ..
ಮತ್ತೆ ..ಕನ್ನಡ ಸಮ್ಮೇಳನಕ್ಕೆ ಕನ್ನಡ ಸಾಹಿತಿ ಕಲಾವಿದರು
ಸಿಗಲಿಲ್ಲವಾ..? ಮತ್ತೆ ಹೇಮಾಮಾಲಿನಿ ಆಂಟಿಗೇ ಹೇಳ್ಬಹುದಿತ್ತು
ನಂಗೊತ್ತಿಲ್ಲ ಮಗು

28 comments:

  1. ಚೆನ್ನಾಗಿದೆ.. ಕನ್ನಡ ನಾಡಲ್ಲಿ ಯಾಕೆ ಹೀಗೆಲ್ಲಾ ಆಗುತ್ತಿದೆಯೋ? ನಂಗೂ ಗೊತ್ತಿಲ್ಲ!

    ReplyDelete
  2. "ಅಮ್ಮಾ, ಆಜಾದ್ ಮಾಮಾ ಚೆನಾಗಿ ಬರೀತಾರಲ್ಲ? "

    "ಹ್ಞೂ ಪುಟ್ಟಾ !"

    "ಅವರ ಮಗೂ ನು ತುಂಬಾ ಪ್ರಶ್ನೆ ಕೇಳುತ್ತಲ್ಲ ನನ್ ತರಾನೆ ? "

    "ಹೌದು ಪುಟ್ಟಾ !"

    "ಮತ್ತೆ ಇಷ್ಟೆಲ್ಲಾ ದಿನ ಅದು ಹೇಗಮ್ಮ ಸುಮ್ಮನಿತ್ತು ಏನು ಪ್ರಶ್ನೆ ಕೇಳದೆ ಅವರ ಮಗೂ ? ಅಪ್ಪಂಗೆ ಏನೂ ಗೊತ್ತಿಲ್ಲ ಅಂತಾ ನ ಅಮ್ಮಾ ? "

    ..??? .. ನಂಗೂ ಗೊತ್ತಿಲ್ಲ ಪುಟ್ಟಾ !!!!

    ReplyDelete
  3. ಸುನಾಥಣ್ಣ ನಿಮ್ಮ ಹಾಗೆ ನನಗೂ ಆಶ್ಚರ್ಯ ಮೇಲಿಂದ ಮೇಲೆ..ಮರುಳ ಗೊಳಿಸಿದ ರಾಜ್ಯಸಭಾ ಉಮೇದುವಾಕರಿಕೆ...ಮತ್ತೆ ಈಗ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಯ...ರಾದ್ದಾಂತ...ಎಲ್ಲ ಕಡೆ ಹೆಣದ ...ಸಾರಿ,,,ಹಣದ ವಾಸನೆ..

    ReplyDelete
  4. ಸುಧೇಶ್ ..ಒಂದು ದಿನ ಕನ್ನಡ ಮಾತನೋಡೋದೇ ಪಾಪ ಅನ್ನೋಕಾಲ ಬಂದ್ರೂ ಆಶ್ಚರ್ಯವಿಲ್ಲ...

    ReplyDelete
  5. ಪ್ರದೀಪ್..ಕನ್ನಡ ಎಂದರೆ...ಎನ್ನಡ ಎನ್ನೋ ನಮ್ಮ ಕನ್ನಡಿಗರೇ...ಇನ್ನೂ ಏನೇನು ಕಾದಿದೆಯೋ...

    ReplyDelete
  6. ವನಿತಾ....ಅಂತೂ ಸಮಯ ಸಿಕ್ತಾ...?? ನೆನಪಾಯ್ತಾ...ಜಲನಯನದ ದಾರಿ?? ಥ್ಯಾಂಕ್ಸು

    ReplyDelete
  7. ಅಪ್ಪ ಕಲರ್ ಅದ್ರೆ ಏನಪಾ?
    ಚಿತ್ರ ಕಣೋ...
    ಮತ್ತೆ ಬಣ್ಣ ಬದಲಾಗ್ತಾ ಇದ್ರೆ...ಅದನ್ನೇನು ಅನ್ನೋದು...?
    ನನಗೆ ಗೊತ್ತಿಲ್ಲ ಮಗು..ಚಿತ್ರಾನೇ ಕೇಳು.

    ReplyDelete
  8. ಧನ್ಯವಾದ ಸೌಮ್ಯ...ನಿಮ್ಮ ಪ್ರತಿಕ್ರಿಯೆಗೆ

    ReplyDelete
  9. Hi Ajad Sir..

    nimma first matanna oppabahudu .. adare eradanedu.. kannada sahitya onde kannada ulisolla.. ( ade beku andru kooda narayana moorthy avara madadi kannada sevene madta idare) kannada bhari bhashe alla .. adu sampskruti.. ( idu nanna abhipraya aste.. bejar madkobedi)

    Dhanyavada
    Pravi

    ReplyDelete
  10. ಧನ್ಯವಾದ ಸತೀಶ್...

    ReplyDelete
  11. ಅಶೋಕ್ ನಮ್ಮ ಇರುವಿಕೆಯೆನ್ನೇ ಪ್ರಶ್ನಿಸೋ ಕಾಲ ಬಂದ್ರೂ ಆಶ್ಚರ್ಯ ಇಲ್ಲ....ಕೆಲವು ವಿಶಷಯ ನೋಡಿದ್ರೆ

    ReplyDelete
  12. ಪ್ರವೀಣ್ ನಿಮ್ಮ ಅಭಿಪ್ರಾಯವೂ ನನ್ನ ಅಭಿಪ್ರಾಯದಂತೆಯೇ ಅಲ್ಲವೆ ಅದು ಅವರವರ ಅನಿಸಿಕೆ..ಬೇಜಾರೇಕೆ.ನಾರಾಯಣ ಮೂರ್ತಿಯವರನ್ನು ನಾನೂ ಗೌರವಿಸುತ್ತೇನೆ..ಅದನ್ನು ಸನ್ಮಾನ ಮಾಡಿ ತೋರಿಸಬಹುದು ಆದ್ರೆ ಉದ್ಘಾಟನೆ ಸರಿಯಾಗಲಿಕ್ಕಿಲ್ಲ ಎನ್ನುವುದು ನನ್ನ ಅಭಿಪ್ರಾಯ ಅಷ್ಟೆ... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  13. ಅಜಾದ್,
    ಎರಡು ವ್ಯಂಗ್ಯದ ಸೂಕ್ಷ್ಮಗಳು ತುಂಬಾ ಚೆನ್ನಾಗಿವೆ...ಇವರಿಬ್ಬರೂ ಬೇಕಿತ್ತಾ...

    ReplyDelete
  14. ಶಿವು ನಿಮ್ಮ ಮಾತೇ ನನ್ನದೂ..ಇವರು ಬೇಕಿತ್ತಾ...ಒಬ್ಬರು ಹೈಕಮಾಂಡಿನ ಡ್ರಿಮ್ ಇನ್ನೊಬ್ರು ಎಡೀಯೂರಪ್ಪನ ಡಾಲರ್ರು...ಒಟ್ನಲ್ಲಿ ಕನ್ನಡ ಮತ್ತು ಕನ್ನಡಿಗರನ್ನ ಕೇಳೋನಿಲ್ಲ...

    ReplyDelete
  15. ತೇಜಸ್ವಿನಿ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  16. ಸುಗುಣ ಎಲ್ಲಾ ಕಡೆ ಎದ್ದಿರೋ ಗುಲ್ಲು....ಕನ್ನಡ ಒಟ್ನಲ್ಲಿ ಅನಾಥಪ್ರಜ್ಞೆಯಲ್ಲಿ ಬೇಯೋ ಸ್ಥಿತಿ. ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ

    ReplyDelete
  17. ಮಂಜು...ಕನ್ನಡ ಕನ್ನಡ ಅಂತಾನೇ ಇರೋರಿಗೆ ಮೈ ಗಾಡಿಸಿದರೆ ಹ್ಯಾಗಪ್ಪಾ...???

    ReplyDelete
  18. ಕನ್ನಡಕ್ಕೆ ಜಯವಾಗಲಿ ಸರ್

    ReplyDelete
  19. ಧನ್ಯವಾದ ಅಶಾವ್ರೇ..ನಿಮ್ಮ ಪ್ರತಿಕ್ರಿಯೆಗೆ...

    ReplyDelete