Saturday, September 10, 2011

ಅದರ ಬದಲು....


ನನ್ನ ಚಿಕ್ಕತಮ್ಮನಂತಹ ಗೆಳೆಯನೆಂದ
2011 ರ ಕ್ಯಾಲಂಡರ್ ಇಲ್ಲವೇ ಅಣ್ಣ?
ಯಾಕೆ ವರೀ..?? ಅದರಲ್ಲೂ ಅದೇ ಬಣ್ಣ
2005 ರ ಕ್ಯಾಲಂಡರ್ 2011 ರ ತದ್ರೂಪು
ಹಿಂತಿರುವಿ ಹಾಕು ಪುಟಗಳ, ಮಾಡು ಟೆಬಲ್ ಟಾಪು.

ತೊಡೆಯಲು ನಿನ್ನ ಕ್ಯಾಲಂಡರ್ ಬೇಕುಗಳ
ಕಟ್ ಮಾಡು ಹೊಸ ವರ್ಷದ ಕೇಕುಗಳ.
ನಿನ್ನ ಬೆಳ್ಳಿಯಾಗಹೊರಟೆ ತಲೆ ಕೂದಲಿಗೆ
ಡೈ ಹಚ್ಚಲು ಪ್ರಾರಂಭಿಸಲಿಲ್ಲವೇ 2008 ಮೊದಲಿಗೆ
ನಿನ್ನ ಮನದಲ್ಲಿನ ತುಯ್ದಾಟಕ್ಕೆ ಸೋತು
ಟೀ ಶರ್ಟು ಜೀನ್ಸು ನಿನ್ನ ಮೈಗೆ ಬೀಳಲಿಲ್ಲವೇ ಜೋತು?

ಡಯಟಿಂಗು ಬಂತು, ಹೆಚಾದ್ವು ನಿನ್ನ ಬೆಳಗಿನ ವಾಕುಗಳು
ಯುವ ಲುಕ್ಕಿನ ಬಗ್ಗೆ ಸಮವಯಸ್ಕರೊಡನೆ ಟಾಕುಗಳು..?
ಹಾರಿದ್ದು ಆರು..ವರುಷ, ಅಲ್ಲಲ್ಲಿ ತಂದದದ್ದು ಹರುಷ
ದಾರಿಗುಂಟಾ ಓಡ್ತಿದ್ದೆ.. ನಡಿಗೆ ಆಯ್ತು
ನಡಿಗೆ ಬಿಡ್ತು ಕಾರ್ ಬಂತು, ನೋಡ್ತಿದ್ದೆ ಕನ್ನಡಿ..ಆಗ,
ನೋಡಿದ್ರೆ ಮನ ಚೀರುತ್ತೆ ಈಗ.., ಕನ್ನಡಕ...
ಕಣ್ಣು ನೋಡೊಲ್ಲ ಅನ್ನುತ್ತೆ..

ತಮ್ಮನ ಮಾತನ್ನ ಪಾಲಿಸ್ದೆ..ತಿರುವಿದೆ ಕ್ಯಾಲೆಂಡರ್
2005 ನ್ನು ತಿದ್ದಿ 2011 ಮಾಡಿದೆ, ಡೈ ತಲೆಗೆ, ಮೀಸೆಗೆ..
ಯಾಕೋ ..ಹೊಸತನ ಅನ್ನಿಸ್ತು..ಯುವಕನಾಗೋ ಆಸೆಗೆ
ಹಾಗೆ ಓಡೋಕೆ ಆಗೊಲ್ಲ ಆದ್ರೂ ಮಾಡ್ತೀನಿ..ಪ್ರಯತ್ನ
ಅದೇ ನೆಪದಲ್ಲಿ ಕ್ರಮ್ಸಿದೀನಿ ಬಹಳ ದೂರಾನ
ಅನ್ನಿಸುತ್ತೆ, ಯಾವ್ದೂ ಅಸಾಧ್ಯ ಅಲ್ಲ ಅನ್ನೋದು

16 comments:

  1. ಅಜಾದ್ ಸರ್;ವಯಸ್ಸು ದೇಹಕ್ಕೆ ಮನಸ್ಸಿಗಲ್ಲ.ಯಾವುದೋ ಒಂದು ಹಳೇ ಹಿಂದೀ ಹಾಡು ನೆನಪಾಯ್ತು;'ಜಿಸ್ಮ್ ಕೋ ಮೌತ್ ಆತೀ ಹೈ ಲೇಕಿನ್,ರೂಹ್ ಕೋ ಮೌತ್ ಆತೀ ನಹೀ ಹೈ'.ಚೆಂದದ ಕವಿತೆ .ಧನ್ಯವಾದಗಳು.

    ReplyDelete
  2. ಜಲನಯನ,
    ಹೊಸ ರೂಹಿನ ಕವನವನ್ನು ಬರೆದಿದ್ದೀರಿ. ಇದು ಹಳೆಯ ಕೆಲಂಡರ್ ಅಲ್ಲ; ಹೊಚ್ಚ ಹೊಸಾ ಕೆಲಂಡರ್! ನಿಮ್ಮ ಪ್ರತಿಭೆ ಅನೇಕ ಮಾದರಿಗಳ ಅಭಿವ್ಯಕ್ತಿಯನ್ನು ಹುಡುಕುತ್ತಿದೆ. ‘ಪ್ರತಿಭಾ ನವನವೋನ್ಮೇಶಶಾಲಿನೀ!’, ಅಲ್ಲವೆ?

    ReplyDelete
  3. Ahhhhh yello vyangya ideyeno annistu.. houdaaaa? chennaagi saalugalanna henediddeera.. ishta aaytu!

    ReplyDelete
  4. ಧನ್ಯವಾದ ಡಾಕ್ಟ್ರೇ ನಿಜ ಹೇಳಿದ್ರಿ...ಅಭಿ ಭೀ ಮೈ ಜವಾನ್ ಹೂಂ....ದಿಲ್ ಸೆ...
    ಹಹಹಹ

    ReplyDelete
  5. ಸುನಾಥಣ್ಣ ..ಊರಿಗೆ ಹೋಗಿ ಬಂದಮೇಲೆ ಮೊದಲ ಪೋಸ್ಟ್..ಅದಕ್ಕೆ ನಿಮ್ಮ ಎಂದಿನ ಪ್ರೋತ್ಸಾಹಕ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ...ಧನ್ಯವಾದ

    ReplyDelete
  6. ಸುಮನ...ವ್ಯಂಗ ಎಲ್ಬಂತು...ನಾಟ್ ಸೋ ಜವಾನ್ ಜಿಸ್ಮ್ ನೆ ಕಹಾ..ಅರೆ ಅಭೀ ತೋ ಜವಾನ್ ಹೂಂ....ಹಹಹಹ್ ಧನ್ಯವಾದ

    ReplyDelete
  7. ಧನ್ಯವಾದ.....ಇದು ಶಿವಪ್ರಕಾಶ ಹತ್ತಿಸಿದ ಕಿಡಿಯಿಂದ ಹೊರಟ ದೀಪದ ಬೆಳಕು.....

    ReplyDelete
  8. ಆಜಾದ್ ಭಯ್ಯಾ......
    ಪದಗಳನ್ನು ಹೆಣೆದು, ಪೋಣಿಸಿ, ಸಾಲುಗಳನ್ನಾಗಿ ಮಾಡುವುದರಲ್ಲಿ ನಿಮ್ಮನ್ನು ಬಿಟ್ಟರೊಂಟೇ?

    ರೈತನ ಬೆಳೆಯ ಸಾಲು,
    ರೈಲಿನ ಹಳಿಯ ಸಾಲು,
    ಹಾರದಲ್ಲಿ ಮುತ್ತಿನ ಸಾಲು,
    ಆಜಾದಣ್ಣನ ಕವನದಲ್ಲಿ
    ಮುದ್ದಾದ ಪದಗಳ ಸಾಲು...........

    ಸೂಪರ್ ಸ್ವಾಮಿ...............

    ReplyDelete
  9. ಅಣ್ಣಾ , ನಾನು ಮೊನ್ನೆ ನೋಡಿದ್ದು ವರ್ಶನ್ ೨೦೦೫ ರ ಕ್ಯಾಲೆಂಡರೋ ಅಥವಾ ೨೦೧೧ ರದ್ದೋ ? ... ಹಿ ಹಿ ಹಿ .. ಚೆನಾಗಿದೆ .. ಮನಸ್ಸಿನ ಗೊಂದಲವನ್ನು ಚೆನ್ನಾಗಿ ಮೂಡಿಸಿದ್ದೀರಿ.

    ReplyDelete
  10. ಪ್ರವೀಣ್ತಮ್ಮ...ನಿನ್ ಸಾಲುಗಳು ಬೋ ಪಸಂದಾಗವೆಯಲೋ ತಮ್ಮಾ...

    ReplyDelete
  11. ನೀನು ನೋಡಿದ್ದು ಅಣ್ಣನ್ನ ಅಂದಮ್ಯಾಕೆ..ಅದು ೨೦೦೫ ಆದ್ರೆ ಏನು ೨೦೧೧ ಆದ್ರೆ ಏನು ತಂಗ್ಯಮ್ಮಾ...ನಿನ್ನ ನಂತರ ಅಂತೂ ಹುಟ್ಲಿಲ್ಲ ನಾನು... ಅಭಿಮಾನದ ತಂಗಿ-ತಮ್ಮಂದಿರ ದೃಷ್ಟಿಲಿ ೨೦೦೫ದೇ..ಅಪ್ಪ ಅಮ್ಮನ ದೃಷ್ಟಿಲಿ ೧೯೫೯....ನಿನ್ನ ಛಂದದ ಪ್ರತಿಕ್ರಿಯೆಗೆ..ಸಲಾಮ್ ತಂಗ್ಯಮ್ಮಾ...

    ReplyDelete
  12. ಚನ್ನಾಗಿದೆ ಚನ್ನಾಗಿದೆ :-)

    ReplyDelete
  13. ಧನ್ಯವಾದ ಧನ್ಯವಾದ ಮಂಜು....

    ReplyDelete
  14. ಅಜಾದ್,

    ವಯಸ್ಸು ಮನಸ್ಸಿಗೆ ಆಗುವುದಿಲ್ಲ. ಅದಕ್ಕೆ ತಕ್ಕಂತೆ ಸೊಗಸಾದ ಕವಿತೆ..ನಾನು ನೋಡಿಕೊಳ್ಳೋಣವೆಂದರೆ ನನ್ನ ಬಳಿ ೨೦೦೫ರ ಕ್ಯಾಲೆಂಡರ್ ಇಲ್ಲವಲ್ಲ...

    ReplyDelete
  15. ಶಿವು...ಹಹಹಹ್ ಕಂಪ್ಯೂಟರ್ ಇದೆಯಲ್ಲಾ....ಅದ್ರಲ್ಲಿ ಕ್ಯಾಲೆಂಡರ್ ತಿರುವಿಹಾಕಿ......

    ReplyDelete