Monday, March 28, 2011

ಚುನಾವಣೆ


ಚುನಾವಣೆ ಬಂತಂದ್ರೆ ಚನ್ಪಟ್ಣ ಜನ ಖುಶೋ ಖುಶ್ಶು

ಮಾರ ಬೀರ ಎಂಕ ಮಂಕ ಬಾರಲ್ಕುಂತ್ರೆ ನೀರೋ ನೀರು

ಅಕ್ಕಮ್ಮ, ರುಕ್ಕಮ್ಮ, ಶಾರದಕ್ಕ ಸುಬ್ಬಿರ ಬೀರೋ ತುಂಬಿ ಸ್ಯಾಲೆ

ಕಂಠಿ, ಬಂಟಿ, ನಾಣಿ, ಶಾರಿ ಓಗ್ತಾರೆ ತೆಗದ್ರೆ ಮೇಷ್ಟ್ರೇ ಬರದ ಶಾಲೆ



ದುಡ್ಡು ಬೇಕು ಮಾಡ್ಕೋ ಬೇಕು ಹ್ಯಾಂಗಾರಾ ಆಗ್ಲಿ

ದುಡ್ಕೋ ಬೇಕು ಸುಲ್ಕೋ ಬೇಕು ಹ್ಯಾಂಗಾರಾ ಆಗ್ಲಿ

ಮ್ಯಾಲ್ಕುಂತವ್ರಿಗೆ ಬ್ಯಾರೆ ಕಡೆ ಗೆಲ್ಬೇಕು ಹ್ಯಾಂಗಾರಾ ಆಗ್ಲಿ

ಎಲ್ಲಾರೂ ಒಂದೇ !! ನ್ಯಾಯ ನೀತಿ ಹಂಗಿರ್ಲಿ ಹ್ಯಾಂಗಾರಾ ಆಗ್ಲಿ



ಜನ ಬೋ ಮುಗ್ದರು ಆರಿಸ್ತಾರೆ ನಾಯ್ಕ ನಮ್ಮನ್ನೆಲ್ಲ ಕಾಯ್ತಾನೆ ಅಂತ

ಗೆದ್ ಮ್ಯಾಲೆ ಬರ್ತಾನೆ ನಮ್ ಸಮಸ್ಯೇನಾ ಕಿವಿ ಕೊಟ್ ಕೇಳ್ತಾನೆ ಅಂತ

ಎಲ್ಲಾ ಖುಶಿ ಪಡ್ತಾರೆ ಬಂದ ನಮ್ ನಾಯ್ಕ ನಮ್ ಅಹ್ವಾಲು ಕೇಳಾಕೆ ಅಂತ

ಜಗ್ಲಿ ಅಜ್ಜ ನಗ್ತಾನೆ ಮೀಸೇಲೇ..ಗೊತ್ತವಂಗೆ ನಾಯ್ಕ ಬಂದಿದ್ದು ಓಟ್ ಕೇಳಾಕಂತ



ನಾಯಕನ್ನ ಗೆಲ್ಸಿದ್ರು ಓದ್ದಪಾ ಕಿತ್ತಾಡ್ಕೊಂಡು ತಮ್ತಮ್ಮಲ್ಲೇ ಜನ

ಮರ್ತೇ ಬಿಡ್ತಾರೆ ಕಿತ್ತಾಡಿದ್ದನ್ನ, ಒಂದಾಗ್ತಾರೆ ನಡೆದೈತೆ ಇಂಗೇ ಜೀವನ

ಕಿತ್ತಾಡಿದ್ದ ಮರೆಯೋಕೆ ಬಿಡೊಲ್ರು ಈ ನಾಯಕ್ರು ಪಾರ್ಟಿ ಬದ್ಲಾಯಿಸೋದು

ತರ್ತಾರೆ ಬೈ ಎಲಕ್ಸನ್ನು ಈವಾಗ ಅಳ್ಳಿಲಿ ಶಾಸ್ವತ ಒಬ್ರನ್ನೊಬ್ರು ಗುರಾಯ್ಸೋದು


24 comments:

  1. ಚುನಾವಣೆ ಪುರಾಣಾನ್ನ ಚಂದಾಗಿ ಯೋಳ್ದ್ರಿ, ಜಲನಯನ.
    ನಿಮ್ಮ ಮಾತನ್ನ ಮತದಾರಣ್ಣ ಮಾಡ್ಬೇಕಪ್ಪಾ ಮನನ.
    ನೋಟು ಕೊಡೋಕೆ ಬಂದೋರನ್ನ ಒದ್ದೋಡ್ಸಪ್ಪಾ ಹೊರಗೆ.
    ನೀತಿಯಿಂದ ನಡೆವಾತನ್ನ ಕರ್ಕೋಳಪ್ಪಾ ಒಳಗೆ!

    ReplyDelete
  2. ಚುಣಾವಣೆ ಎಂಬುದು ಹಣದ ಆಟ
    ರಾಜಕಾರಣಿಗಳು ಮಾಡುವರು ಮಾಟ
    ಜನರಲ್ಲಿರುವುದು ಬರಿ ಆಸೆಯ ನೋಟ
    ಬಡವರಿಗೆಲ್ಲ ಸಮಸ್ಯೆಯ ಕಾಟ
    ಅಳಿಯಲಿ ಕುತಂತ್ರದ ಆಟ
    ಚುನಾವಣೆಗೆ ಬರಲಿ ಸತ್ಯದ ಹೊಸ ನೋಟ

    ReplyDelete
  3. These lines tells clearly the exact situation of elections and politicians.
    Perfect lines for Right time(Bi-election is there next week)

    ReplyDelete
  4. ಚುನಾವಣೆ ರಾಜಕೀಯದ ಬಗ್ಗೆ ಹಳ್ಳಿ ಭಾಷೆಯ ಅಂದದ ಕವನ!

    ReplyDelete
  5. ಚುನಾವಣೆ ಕವನ ಬೊಂಬಾಟ್.....

    ReplyDelete
  6. ನಿಮ್ಮ ಬ್ಲಾಗ್ ಕುಮಾರಣ್ಣ ಓದಿದಾರ೦ತೆ. ಈ ಬಾರಿ ಚನ್ನಪಟ್ನದಲ್ಲಿ ಬಡ ಅಬ್ಯರ್ಥಿ ಹಾಕಿದೀವಿ. ಹಾಗಾಗಿ ಚನ್ನಪಟ್ನದಲ್ಲಿ ಚುನಾವಣಾ ಪ್ರಚಾರ ಮಾಡಲು ಆಜಾದ್ ಸಾಬರನ್ನು ಕರೆಸಲೇಬೇಕು,ಎಷ್ಟು ಖರ್ಚಾದ್ರು ಪರವಾಗಿಲ್ಲ ಅಂತ ಕೇಳ್ತಿದಾರೆ, ಏನು ಹೇಳಲಿ ?

    ReplyDelete
  7. ಹಹಹ ಸರ್ ಕವನ ಬೋ ಪಸಂದಾಗೈತೆ... ಪರಂಜಾಪೆ ಸರ್ ಹೇಳಿದಂತೆ ಕುಮಾರಣ್ಣ ನಿಮ್ಮನ್ನ ಕರೆಸ್ಕೋತಾರಂತೆ ತಯಾರಾಗಿ.
    ಮೊಸರನ್ನ ಚಿತ್ರನ್ನದ ಪಾಕೆಟ್ ಗಳನ್ನು ಕೊಡ್ತಾರೆ ಹಹಹ

    ReplyDelete
  8. ಸುನಾಥಣ್ಣ ಧನ್ಯವಾದ ನಿಮ್ಮ ಪ್ರತ್ಯುತ್ತರದ ಕವನ ಸೂಪರ್...
    ಮತದಾರ ಕ್ಷಣಿಕದ ಸುಖ ನೋಡದೇ ಕೊನೆತನಕದ ಹಿತ ಗಮನಿಸಿದರೆ ಎಲ್ಲಾ ಸರಿ

    ReplyDelete
  9. ಕೀರ್ತಿ, ಧನ್ಯವಾದ ಚುನಾವಣೆಗೆ ಬ್ಲಾಗ್ ಗೆ ನಿಮ್ಮ ಪ್ರತಿಕವನ ಚನ್ನಾಗಿದೆ...

    ReplyDelete
  10. ಗಿರೀಶ್ ಎಸ್ ಸ್ವಾಗತ ಜಲನಯನಕ್ಕೆ...ನಿಮ್ಮ ಬೆಂಬಲಕ್ಕೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  11. ಪ್ರದೀಪ್ ಚುನಾವಣೆಯ ಪರಿಭಾಷೆಯೇ ಬದಲಾಗಿದೆ ಈಗ ಹಳ್ಳೀಲೂ...ಇದಕ್ಕೆ ಕಾರಣ ನಮ್ಮ ರಾಜಕೀಯದ ಪ್ರಸಕ್ತ ಕುಲಗೆಟ್ಟ ರೀತಿ.,,,, ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ...

    ReplyDelete
  12. ಮಯೇಶಣ್ಣ ಧನ್ಯವಾದ ಕಣಣ್ಣ, ಚುನಾವಣೆ ಲೂಟಿ ಮಾಡೋಕೆ ಜನ ಎಲ್ಲಾ ಸೇರಿ ಕೊಡೋ ಲೈಸನ್ಸು...ಅಲ್ವಾ...?

    ReplyDelete
  13. ಪರಾಂಜಪೆ ಸರ್ ಬ್ಲಾಗ್ ಕುಮಾರಣ್ಣ ಓದಿದ್ರೆ ಸಾಲ್ದು ನಮ್ಮ ಪರಮೇಶ್ವರ್ ಸಾಹೇಬ್ರೂ ಓದಬೇಕು. ನನಗೆ ಹೇಳಿದ್ರೆ ಠೇವಣಿ ಉಳಿಯಿತ್ತಾ...ಡೌಟು...

    ReplyDelete
  14. ಮನಸು ಮೇಡಂ ಕವನ ಪಸಂದ್ ಮಾಡಿದ್ದಕ್ಕೆ ಶುಕ್ರನ್...ನಾನು ತಯಾರ್ ಆದ್ರೆ ಮೊಸ್ರನ್ನ ಚಿತ್ರನ್ನಕ್ಕೆ ನಾನು ತಯಾರಾಗಿಲ್ಲ...ಬಿರಿಯಾನಿ ಅಂದ್ರೆ ಓಕೆ...ಹಹಹ ನಮ್ಮ ನಿತ್ಯೋತ್ಸವ ಕವಿ ಹೇಳಿಲ್ವಾ...ಬಿರಿಯಾನಿಯಾ ಮಹರ್ಬಾನಿಯಾ ಮಾಡಿ...ಅಂತಾ...ಹಹಹ

    ReplyDelete
  15. ಅಜಾದ್,

    ಇಂದಿನ ಪರಿಸ್ಥಿತಿಯಲ್ಲಿ ಸಧ್ಯ ನಡೆಯುವ ಚುನಾವಣೆಗಳ ಸತ್ಯದ ಅವಲೋಕನವನ್ನು ಹಳ್ಳಿಭಾಷೆಯಲ್ಲಿ ಚೆನ್ನಾಗಿ ಮಾಡಿದ್ದೀರಿ.. ಗಾಳಿ ಬಂದಾಗ ತೂರಿಕೊಳ್ರೋ...ಅನ್ನುವಂತೆ ಚುನಾವಣೆ ಬಂತಂದ್ರೆ ಎಲ್ಲರಿಗೂ ಹಣ ಮಾಡಲು ಇದೇ ಸಮಯ...ಅಲ್ವಾ...ಮಾಡಲಿ ಬಿಡಿ..ಹಳ್ಳಿ ಜನರು ಚೆನ್ನಾಗಿರಲಿ...ಏನಂತೀರಿ...

    ReplyDelete
  16. ಶಿವು ಹಣ ಮಾಡಿಕೊಳ್ಳೋ ಜಾಣರು ಮಾಡ್ಕೋತಾರೆ ಆದರೆ ಆ ಜಾಣರು ಕೋಣರಾಗ್ಬಾರದು ಎಲ್ಲಾ ದುಂದು ವೆಚ್ಚಮಾಡಿ...
    ಆದ್ರೆ ಒಂದು ಚುನಾವ್ಣೆಗೆ ಎಷ್ಟೊಂದು ಖರ್ಚಾಗುತ್ತೆ ಗೊತ್ತಾ,,,?? ಎಲ್ಲಾ ಮತ್ತೆ ಜನಸಾಮಾನ್ಯನ ಮೇಲೆ ಭಾರ ಬೀಳುತ್ತೆ...ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಒಳ್ಳೆಯದಾಗಲಿ ಎಂದು ಆಶಿಸೋದೇ ನಮಗಿರೋ ದಾರಿ..

    ReplyDelete
  17. ಬೋ ಸಂದಾಕೈತೆ ಕಣಣ್ಣೋ, ನಾ ಬುಡಾಕಿಲ್ಲಾ ವೈನಾಗಿ ಈ ಆಡ್ನ ರಿಕಾಡಿಂಗ್ ಬಾಡಸ್ಬುಟ್ಟು ದ್ಯಾವೆಗೆ ಕಳಸ್ಬುಡ್ತೀನಿ, ಆವಯ್ಯ ನೆಪ್ಪಿಟ್ಟು ಏನಾರಾ ಕರುದ್ರೆ ಬೈ ಇಲೆಕ್ಸನ್ಗೆ ನಾನೇ ನಿಂತ್ಗತೀನಿ, ಆಜಾದ್ ಸರ್, ಭೇಷಾತ್ರೀ ಯಪ್ಪಾ , ಚೆನ್ನಾಗಿದೆ

    ReplyDelete
  18. sakkattaagaite saaru...
    bo sendaagi baredivri.........

    ReplyDelete
  19. ಗುರು ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಆದ್ರೆ ಎಲ್ಲರೂ ಇದನ್ನೇ ಹೇಳಿದ್ರೆ ಬದಲಾವಣೆ ತರೋದು ಹ್ಯಾಗೆ ಸಾಧ್ಯ ಗುರುವೇ...???

    ReplyDelete
  20. ವಿ,ಆರ್.ಬಿ ಸರ್, ಬೈ ಎಲಕ್ಸನ್ ಗೆ ನೀವ್ನಿಂತ್ರೆ ನಾನ್ ಗ್ಯಾರಂಟಿ ಟಿಕಾಣಿ ಊಡ್ತೀನಿ..ನಿಮ್ಮ ಕ್ಸೇತ್ರದಾಗೆ...ಊಂ ಮತ್ತೆ..ಎಲ್ಲಾರೂ ನಿಮ್ಗೇಯಾ ಓಟ್ ಆಕ್ಬೇಕು ಅಂಗ್ ಮಾಡ್ತೀವಿ.....ಜೈ ಆನಿ ಒಮ್ಮೆ ನೋಡುಮಾ...ಹಹಹಹ ಧನ್ಯವಾದ ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗೆ..

    ReplyDelete
  21. ದಿನಕರ್ ಧನ್ಯವಾದ ನಿಮ್ಮ ಕಾಮೆಂಟಿಗೆ...ಸಂದಾಕಿರೋ ಪಸಂದಾಗಿರೋ ಅಭ್ಯರ್ಥಿಗಳನ್ನ ನಮ್ಮ ಓಟುದಾತ ಆರಿಸಿದರೆ ಸಾಕು...

    ReplyDelete