Wednesday, October 12, 2011

ತ್ರಿವಳಿ ----THREE More for the PIC


ಆಗಲಿ ಸಾರ್ಥಕ

ಕನಸಲ್ಲಿ ವಿಹರಿಸಿದ್ದಿಲ್ಲಿ
ಮನಸ-ಮನಸು ಬೆಸೆದು
ಕೈ-ಕೈ ಹಿಡಿದು, ಸಂಜೆ
ಕತ್ತಲಾದದ್ದೂ ಅರಿಯದ
ಮನ ಮುದಗೊಂಡದ್ದೂ ಇಲ್ಲಿ.
ಅದೇ ಈ ಒಂಟಿ ಮರ
ಈ ಒಂಟಿ ಬೆಂಚು
ನಮ್ಮಿಬ್ಬರನು ಜಂಟಿಮಾಡಿ
ಹಿತ ನೆಳಲ ನೀಡಿ
ಬಿಡಿಸದ ಬಂಧ ಬೆಸೆದದ್ದೂ ಇಲ್ಲಿ.
ನಮ್ಮಂತೆ ಎಷ್ಟು ಮನ
ಮಿಡಿದಿವೆಯೋ ಇಲ್ಲಿ..?
ಎಷ್ಟು ಒಂಟಿಗಳು ಸೇರಿ
ಜಂಟಿಯಾಗಿವೆಯೋ ಇಲ್ಲಿ..?
ಟೊಂಗೆ ನೀಡಿವೆ ಎಲೆ-ಹಸಿರು
ಕೆಳ-ಮೇಲ್ ನೆಲಸಿದವಗೆ ಉಸಿರು
ಬೇರು ಹಿಡಿದಿವೆ ಮಣ್ಣ ಕೊರೆತ
ನೆಳಲು ತಣ್ಣನೆ ತಂಪು.
ಸಾರ್ಥಕವಾದರೆ ಸಾಕು ನಮ್ಮೀ ಬಾಳು
ಈ ಒಂಟಿ ಮರದಂತೆ,
ಅದರ ಹಸಿರೆಲೆಯಂತೆ,
ಬೇರಂತೆ ನೆಳಲಂತೆ..
ಕಡೇ ಪಕ್ಷ ಈ ಬೆಂಚಂತೆ..
Destiny

Oh the light!
Sunny and so bright
to see the twinkle
the magic of magnets
and hope so up right,
I could see in your
Sparkling sight…
No wonder, we sat
With hand-in hand
Under the lonely tree
With green and shadow
Like the magic wand.
I still feel the virgin
Warmth of our breath
On that lonely bench
Where we longed to sit
The day’s gone and
 So the sunny light
But the souls and feelings
We hold and nurtured
Are always verdant
Like the tree, the Sun,
The shadow and the
Lonely Bench

पेड् तलॆ-प्यार् पलॆ

वॊह् शीतल् सी साया
झुलस्तॆ किर्णोंकॊ रोकॆ
फैलाकॆ बाहे दूर् तक्
ममता की आंचल् सा मॆह्कॆ
अकेले थे दोनों,
मैं तुम् और् अकॆला था बॆंच्
बना हसीं मिलन का ऎह् मंच्
अकॆलोंका साथ्,
पिया का ऎह् हाथ्,
मौसम् की बात्
टहल्ना यूं साथ्..
पंची जानॆ कितने पर्देस् गयॆ
अप्नॆ बच्चोंकॆ भी घर् बस् गयॆ
पर् हम् सॆ न छूठा
न पेढ् हम् सॆ रूठा
न बना बॆंच् कभी झूठा
वही साया, वही पेढ्,
वही बॆंच् ऎक् बंधन् सा अनूठा.28 comments:

 1. ಸಾರ್ಥಕವಾದರೆ ಸಾಕು ನಮ್ಮೀ ಬಾಳು
  ಈ ಒಂಟಿ ಮರದಂತೆ,
  ಅದರ ಹಸಿರೆಲೆಯಂತೆ,
  ಬೇರಂತೆ ನೆಳಲಂತೆ..
  ಕಡೇ ಪಕ್ಷ ಈ ಬೆಂಚಂತೆ..

  very nice sir ..... tumba chenagide.....

  ReplyDelete
 2. very nice nice sir.. ha chitrakke takkanta kavana

  ReplyDelete
 3. ಚಿತ್ರ ನೋಡಿ ಕವನನ ಓದುತ್ತಾ ಹೋದಂತೆ...ಸನ್ನಿವೇಶಗಳು ಮನಸ್ಸಲ್ಲಿ ಹಾಗೆ ಹಾದು ಹೋಗುತ್ತವೆ...ಸುಂದರ ಕಲ್ಪನೆ....ಜೊತೆಗೆ ಆ ಕೊನೆಯ ಸಾಲು ತುಂಬಾ ಇಷ್ಟ ಆಯಿತು ಸರ್..

  ReplyDelete
 4. ಜಲನಯನ,
  ನೀವು ನಿಜವಾಗಿಯೂ ತ್ರಿವಳಿಗಳನ್ನು ಹೆತ್ತಿದ್ದೀರಿ. ಏಕೆಂದರೆ ಯಾವ ಕವನವೂ ಅನುವಾದವೆಂದು ಅನ್ನಿಸುವದಿಲ್ಲ. ಪ್ರತಿ ಕವನವೂ original ಎಂದೇ ಅನ್ನಿಸುತ್ತದೆ. ಈ ಭಾವಪೂರ್ಣ, ಮಧುರ ಕವನಗಳ ಜನಕನಿಗೆ ‘ತ್ರಿಭಾಷಾ ಕವಿ’ ಎಂದು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

  ReplyDelete
 5. ತರುಣ್...ಧನ್ಯವಾದ ಬಹಳ ದಿನಗಳ ನಂತರ..!!!

  ReplyDelete
 6. ಸುಗುಣ...ಧನ್ಯವಾದ..ಚಿತ್ರಗಳೂ ಪರಿಸರಗಳೂ ಕವಿಗಳ ಭಾವನೆಗಳ ಮಂಥನಕ್ಕೆ ಕಾರನ ಎನ್ನುವುದು ನಿಮಗೂ ಗೊತ್ತಿದೆ..ಅಲ್ವಾ..?

  ReplyDelete
 7. ಸುಶ್ಮಾ ಧನ್ಯವಾದ...ಮೊದಲಿಗೆ ಒಂಟಿ ಮರ..ನೆರಳು ಮಾತ್ರ ಬರೆದಿದ್ದೆ...ಆದರೆ ಯಾಕೋ ಬೆಂಚೂ ಎಂಥ ಸಾರ್ಥಕತೆಗೆ ಸಾಕ್ಷಿ??!! ಎನಿಸಿ ಈ ಸಾಲನ್ನು ಸೇರಿಸಿದೆ.

  ReplyDelete
 8. ಸೀತಾರಾಂ ಸರ್...ಥ್ಯಾಂಕ್ಸ್...

  ReplyDelete
 9. ಸುನಾಥಣ್ಣ....ನಿಜಕ್ಕೂ ನೀವು ತಮಾಶೆ ಮಾಡ್ತಿಲ್ಲ ತಾನೇ...??!! ಹಹಹ ಪ್ರಕಾಶ ಚಿತ್ರ ಅದರ ಭಾವಕಲಕೋ ಪರಿಸರ ಇದಕ್ಕೆ ಕಾರಣ... ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ.

  ReplyDelete
 10. ಆಜಾದೂ...

  ಮೂರೂ ಸಿಕ್ಸರು ಕಣೊ... !

  ಸುನಾಥ ಸರ್ ಹೇಳಿದ ಮಾತಿಗೆ ನಂದೂ ಸಹ ಮತ ಐತಿ....

  ReplyDelete
 11. ಥ್ಯಾಂಕ್ಸ್ ಕಣೋ ಪ್ರಕಾಶೂ... ಸಿಕ್ಸರ್ ಹೊಡೆದದ್ದು ನನ್ನ ಹೆಚ್ಚುಗಾರಿಕೆ ಅಲ್ಲ....ಅಂಥ ಬಾಲ್ ಹಾಕಿ ನನಗೆ ಅನುಕೂಲ ಮಾಡಿಕೊಟ್ಟಿದ್ದಕ್ಕೆ...ಎರಡೂ ಕಡೆ ಆಟ ನಮ್ಮದೇ ಅಲ್ವಾ..?? ನೋ ಲಾಸ್ ಆಲ್ ಗೈನ್...ಚಿತ್ ಭೀ ಹಮಾರಾ ಪಟ್ ಭೀ ಹಮಾರಾ...ಅಲ್ವಾ...!!!!

  ReplyDelete
 12. ವಾಹ್. ಅದ್ಭುತ, ಜಲನಯನ, ಈ ಬರಹದ ಚಿತ್ರ ಮತ್ತು ಪದ್ಯ ಎರಡೂ ಕೂಡ ಮನಸ್ಸಿಗೆ ತುಂಬಾ ಹಿತವೆನಿಸಿದವು

  ReplyDelete
 13. "ಟೊಂಗೆ ನೀಡಿವೆ ಎಲೆ-ಹಸಿರು
  ಕೆಳ-ಮೇಲ್ ನೆಲಸಿದವಗೆ ಉಸಿರು
  ಬೇರು ಹಿಡಿದಿವೆ ಮಣ್ಣ ಕೊರೆತ
  ನೆಳಲು ತಣ್ಣನೆ ತಂಪು"
  ಇಷ್ಟವಾದ ಸಾಲುಗಳು ಸರ್...

  "ಜಂಟಿಯಾಗಿವೆ ಇಲ್ಲಿ ತ್ರಿ ಭಾಷೆ ಗಳು
  ತ್ರಿವಳಿ ಯಲ್ಲಿ
  ಮುದಗೊಂಡಿತು ಮನ,
  ಅಜಾದರ ತ್ರಿಭಾಷ ಪ್ರೌಡಿಮೆಯಲ್ಲಿ"

  ReplyDelete
 14. ಅದೇ ಈ ಒಂಟಿ ಮರ
  ಈ ಒಂಟಿ ಬೆಂಚು
  ನಮ್ಮಿಬ್ಬರನು ಜಂಟಿಮಾಡಿ
  ಹಿತ ನೆಳಲ ನೀಡಿ
  ಬಿಡಿಸದ ಬಂಧ ಬೆಸೆದದ್ದೂ ಇಲ್ಲಿ.

  Very nice Sir... :)

  ReplyDelete
 15. ಜಿನ್ನು ಧನ್ಯವಾದ...ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆಗೆ

  ReplyDelete
 16. ದೀಪ್ ಥ್ಯಾಂಕ್ಸ್...

  ReplyDelete
 17. ಧನ್ಯವಾದ ಕಾವ್ಯಾ...ಇದು ಒಂದು ಚಿತ್ರ ಕದಡಿದ ಭಾವದ ಫಲ...

  ReplyDelete
 18. ತ್ರಿವಳಿಗಳೂ ಆರೋಗ್ಯ ಪೂರ್ಣವಾಗಿವೆ ಸಾರ್. ಹೊಂದುವ ಚಿತ್ರವನ್ನೂ ಕೊಟ್ಟಿದ್ದೀರಿ. ಇದು ಹೊಸ ಪ್ರಯತ್ನ ತ್ರಿಭಾಷಾ ಚತುರ ನೀವು!

  "ಈ ಒಂಟಿ ಮರದಂತೆ,
  ಅದರ ಹಸಿರೆಲೆಯಂತೆ,
  ಬೇರಂತೆ ನೆಳಲಂತೆ..
  ಕಡೇ ಪಕ್ಷ ಈ ಬೆಂಚಂತೆ.."

  ಸಾಲುಗಳು ನನಗೆ ಇಷ್ಟವಾದವು.

  ಮೂರೂ ಕವನಗಳು ಒಂದೇ ಎನ್ನುವಂತೆ ಭಾಸವಾಯಿತು. ಭೇಷ್ ಭೇಷ್!...

  ReplyDelete
 19. ಬದರಿ ಸರ್ ಧನ್ಯವಾದ ಕಣ್ರೀ...ಹೌದು ಒಂಟಿ ಮರ, ನರಳು, ಬೆಂಚ್ ಎಲ್ಲಾ ಉಪಕಾರಿಗಳೇ...ನಾವು ಒಂದಿನದಮಟ್ಟಿಗಾದ್ರೂ ಹೀಗಾದ್ರೆ ಸಾರ್ಥಕ ಅಲ್ವಾ...??

  ReplyDelete
 20. ಅಜಾದ್,
  ಒಂದು ಚಿತ್ರ ಸಿಕ್ಕರೆ ನೀವು ಸಿಕ್ಸರ್ ಬಾರಿಸುತ್ತೀರಿ ಅನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ.

  ReplyDelete
 21. ಶಿವು ನಿಮ್ಮಂಥ ಛಾಯಾಚಿತ್ರಗ್ರಾಹಕ ನಿಪುಣರಿದ್ದರೆ ಭಾವನೆಗಳ ಹರಿವಿಗೆ ಕವನದ ಝರಿಗೆ...ಅಡ್ಡಿಯಿಲ್ಲ ಅಲ್ಲವೇ...ಧನ್ಯವಾದ ನಿಮ್ಮ ಆತ್ಮೀಯತೆಗೆ...

  ReplyDelete
 22. ಹಮ್.. ಒಂದು ಚಿತ್ರ ಭಾವ ಕಲಕಿ ತ್ರಿಭಾಷಾ ಕವನವಾಗಿದ್ದು ಅದ್ಭುತ...
  ಜೈ ಹೋ .. :)

  ReplyDelete
 23. ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ...ಹೌದು ತ್ರಿಭಾಷಾ ಕವನ ಪೂರಕ ಒಂದಕ್ಕೊಂದು ಅಂತ,,,

  ReplyDelete
 24. ಧನ್ಯವಾದ...ಡಾಕ್ಟ್ರೇ...ಇದು ನಿಮ್ಮ ಅಭಿಮಾನದ ಮಾತು...ಆತ್ಮೀಯತೆಗೆ ಶರಣು..

  ReplyDelete
 25. ಮುಸ್ಸಂಜೆ ಯ ಜೋಡಿ ಹಕ್ಕಿಯ ಹಾಡು ಚೆನ್ನಾಗಿದೆ.....

  ReplyDelete
 26. ಸಿಂಧು ಜೋಡಿ ಹಕ್ಕಿ ಇದರ ಬಗ್ಗೆ ಚಕಾರ ಎತ್ತಿಲ್ಲ ಅನ್ನೋದೇ ಆಶ್ಚರ್ಯಕರ ವಿಷಯ...ಹಹಹ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

  ReplyDelete