Tuesday, February 14, 2012

ಪ್ರೇಮಿಗಳ ದಿನ- ಮತ್ಸ್ಯ ಪ್ರೇಮವೇ..???

ಚಿತ್ರ ಕೃಪೆ: ಅಂತರ್ಜಾಲ

ಮಿತ್ರರೇ... ಪ್ರೇಮಿಗಳ ದಿನ ಒಂದು ಸೂಚಕವಾಗಿ ರೋಚಕವಾಗುತ್ತಿರುವುದು ಕೆಲವರಿಗೆ ಅತಿರೇಕವೆನಿಸಬಹುದು ಆದರೆ ಪಡ್ಡೆ ಯುವಕ ಮತ್ತು ಗರಿಗೆದರಿದ ಯುವತಿಯರಿಗೆ ಅಲ್ಲ.... ಇದೊಂದು ಮೋಜಿನ ದಿನ.. ಬೆರೆಯುವ ದಿನ ಮತ್ತು ಉಳ್ಳ-ಸಿರಿಮದ-ಅಮಲಿನವರಿಗೆ ಅತಿರೇಕದ ದಿನವೆನ್ನುವುದೂ ಅಸತ್ಯವೇನಲ್ಲ. ಅಲ್ಲವೇ? 
ಆದರೆ ನಾನು ಹೇಳ ಹೊರಟಿರುವುದು ರೋಚಕ ಮತ್ಸ್ಯ ಜಗತ್ತಿನ ಒಂದು ಸ್ವಾಭಾವಿಕ ಕ್ರಿಯೆಯ (ಹಲವು ಅಕ್ವೇರಿಯಂ ಆಸಕ್ತರು ಹವ್ಯಾಸಿಗಳು ನೋಡಿರುವ) ಬಗ್ಗೆ!!!

ಅದೇ ಕಿಸ್ಸಿಂಗ್ (ಮುತ್ತಿಡುವ, ಚುಂಬಿಸುವ) ಗೌರಾಮಿಗಳ  ಬಗ್ಗೆ.... ಏನು ?? ನಿಜ ಕಣ್ರೀ....

ಇದು ಮೀನಿನ ಒಂದು ಸ್ವಾಭಾವಿಕ ಸ್ವಭಾವದ ವಿವರ ಅಷ್ಟೇ.... ಛೇ!!! ಆಂಟಿ ಕ್ಲೈಮ್ಯಾಕ್ಸ್ ಅಂದ್ರಾ...?? ಅಲ್ಲ ಬಿಡಿ ಕಲಿಯುವವರಿಗೆ... ಇದು ...ಇಂಟರೆಸ್ಟಿಂಗ್... ಏನಂತೀರಾ..???

ಹಾಂ... ಈಗ ವಿಷಯಕ್ಕೆ ಬರೋಣ.
ಈ ಚಿತ್ರ ಮತ್ತು..ಈ ವೀಡಿಯೋ ನೋಡಿ...ಆನಂದಿಸಿ... ಆ ಮೇಲೆ ..ಹಾಂ..ಹಾಂ..
ನಿಜಾಂಶ ತಿಳಿಸ್ತೀನಿ...ಓಕೆ... ಸಿಟ್ ಬ್ಯಾಕ್ ರಿಲ್ಯಾಕ್ಸ್ ಅಂಡ್ ವಾಚ್...



ನೋಡಿದ್ರಾ..? ಹ್ಯಾಗನ್ನಿಸ್ತು... ಸೋ ಕ್ಯೂಟ್ (ಏನು ಸೊಗಸು )ಅನ್ನಿಸ್ತಾ..??  ತಡೀರಿ ತಡೀರಿ..... ಮುಂದಕ್ಕೆ ಓದಿ....

ಇದು ಮೊದಲೇ ಹೇಳಿದ ಹಾಗೆ ಗೌರಾಮಿ ಜಾತಿಯ ಮೀನು. ಇದನ್ನು ನೈಜಎಲುಬಿನ ಮೀನಿನ ಗುಂಪಿಗೆ ಸೇರಿಸಲಾಗಿದೆ... ಏನು..?? ಹೂಂ..ರೀ... ಮಿಥ್ಯ ಎಲುಬು ಇರೋ ಮೀನೂ ಇದೆ... ಅಂದರೆ ಮೆತ್ತನೆಯ ಅಥವಾ ಗಡುಸಲ್ಲದ ಎಲುಬಿನ ಮೀನು ಸಹಾ ಇವೆ... ಯಾವುದು ಅಂದ್ರಾ...??? ಶಾರ್ಕ್ ಕಣ್ರೀ... ಹೂಂ..ಶಾಕ್ ಜಾತಿ ಮೀನಲ್ಲಿ ಕ್ಯಾಲ್ಶೀಕೃತ (ಗಡಸಾಗೋಕೆ) ಎಲುಬಿರುವುದಿಲ್ಲ. ಇವನ್ನು ಮೃದ್ವಸ್ಥಿ ಮೀನು ಅಂತಲೂ ಹೇಳ್ತಾರೆ.... ಓಕೆ..ಓಕೆ... ಕೋಪ ಮಾಡ್ಕೋಬೇಡಿ ಬಂದೆ ವಿಷಯಕ್ಕೆ.
ಗೌರಾಮಿ ಜೀವ ವರ್ಗೀಕರಣ ಹೀಗಿದೆ...

Kingdom:Animalia       
Phylum:Chordata
Class:Actinopterygii
Order:Perciformes
Suborder:Anabantoidei
Family:Helostomatidae
Genus:Helostoma
Cuvier, 1829
Species:H. temminckii



ಈ ಕಿಸ್ಸಿಂಗ್ ಗೌರಾಮಿ ಮೀನಿನ ತವರು ಪೂರ್ವೋತ್ತರ ದೇಶಗಳಾದ ಥಾಯ್ಲ್ಯಾಂಡ್ ಮತ್ತು ಇಂಡೋನೇಶಿಯಾ. ಗೌರಾಮಿಯಲ್ಲಿ ಹಲವಾರು ಉಪ ಜಾತಿಗಳಿವೆ. ಗೌರಾಮಿ ಮೀನುಗಳು ಹೆಚ್ಚಾಗಿ ಅಲಂಕಾರದ ಮೀನುಗಳು. ಈ ಮೀನುಗಳು ವೇಗವಾಗಿ ಬೆಳೆಯಬಲ್ಲವು. ಸುಮಾರು ೩೦ ಸೆಂ.ಮೀ. ವರೆಗೂ ಬೆಳೆಯಬಹುದು. ಈ ಮೀನು ಸಿಹಿನೀರಿನಲ್ಲಿ ವಾಸಿಸುತ್ತವೆ, ಸಾಮಾನ್ಯವಾಗಿ ಇವಕ್ಕೆ ೨೨ ರಿಂದ ೨೮ ಡಿಗ್ರಿ ಸೆಂ.ಗ್ರೇ. ತಾಪಮಾನದ ನೀರು ಇಷ್ಟವಾಗುತ್ತದೆ.

ಓಕೆ..ಓಕೆ... ಇದರ "ಕಿಸ್ಸಿಂಗ್" ಬಗ್ಗೆ ಹೇಳ್ಬೇಕಲ್ವಾ...???
ಸ್ವಾಮಿ... ಇವು ಕಿಸ್ ಮಾಡೋದ್ರಿಂದಲೇ ಪ್ರಪಂಚದಾದ್ಯಂತ ಅಕ್ವೇರಿಯಂ ಪ್ರೇಮಿಗಳು ಇಷ್ಟ ಪಡೋದು..ಮಕ್ಕಳು ನೋಡಿ..ಚಪ್ಪಾಳೆ ತಟ್ಟಿ ಆನಂದಿಸುವುದು!!!
ಹೂಂ... 
ಆದ್ರೆ... ಇವು ಕಿಸ್ ಮಾಡಿದ್ವು ಅಂದಾಕ್ಷಣ ಗಂಡು-ಹೆಣ್ಣು ಬೇರೆ ಬೇರೆ ಲಿಂಗದ ಮೀನು ಅಂದ್ಕೋಬೇಡಿ...!!! ಎರಡು ಗಂಡುಗಳೂ...!!! ಏನು..?? ಗೇ..ನಾ?? ಅಯ್ಯೋ ಅಲ್ಲಾರೀ ..ಇದು ನಾವು ಅಂದ್ಕೊಳ್ಳೋ ಕಿಸ್ ಅಲ್ವೇ ಅಲ್ಲ.....!!!!!
ಅಹಹಹ .. ನೋಡಿದ್ರಾ... ಇದು ಆಂಟಿ ಕ್ಲೈಮ್ಯಾಕ್ಸು...
ಹೌದು ಇವು ಕಿಸ್ ಅಲ್ಲ ಒಂದಕ್ಕೊಂದು  ಸವಾಲ್ ಹಾಕುವುದು ಈ ರೀತಿ... ಇವುಗಳ ತುಟಿಯಂಚಿನಲ್ಲಿ ಬಹಳ ಚಿಕ್ಕ ಹಲ್ಲು ಸಹಾ ಇರುತ್ತವೆ... ಹಾಗಾಗಿ ಗಾಯ ಆಗೋ ಹಾಗೆ ಚುಂಬಿಸದೇ ಇದ್ರೂ... ಅವುಗಳ ತುಟಿಯ ಲೋಳೆಯನ್ನು ಕಸಿದುಕೊಂಡು ಸೋಂಕು ಹರಡಿ ರೋಗ ಉಂಟುಮಾಡಲೂ ಬಹುದು. 
ಇದನ್ನು ತಡೆಗಟ್ಟಲ್ಲು (ಅಂದರೆ..ಕಡಿಮೆ ಕಿಸ್ ಮಾಡಲು) ಕೆಲ ಗಡಸು ಜಲಸಸ್ಯ ಅಥವಾ ಪ್ಲಾಸ್ಟಿಕ್ ಸಸಿ ಅಕ್ವೇರಿಯಂ ನಲ್ಲಿ ನೆಡಬಹುದು. ಹಾಗೆಯೇ ಗಾಜಿನ ತೊಟ್ಟಿಯ ಹಿಂಗೋಡೆಯ ಪಾಚಿಯನ್ನು ತೆಗೆಯಬೇಡಿ...ಅದೇ ಅವುಗಳಿಗೆ ಆಹಾರವಾಗಿ..ಚುಂಬನ ತೀಕ್ಷ್ಣತೆ ಕಡಿಮೆಯಾಗುತ್ತದೆ....
ಈಗ ಗೊತ್ತಾಯ್ತಲ್ಲ....
ವ್ಯಾಲೆಂಟೈನ್ಸ್ ಚುಂಬನ ಅಲ್ಲ....ಇದು ಅಂತ....??!!!



46 comments:

  1. ಅಜಾದ್,
    ಮೀನುಗಳ ಕಿಸ್ಸಿಂಗ್ ಜೋರಾಗಿದೆ...ನಮ್ಮ ಸಿನಿಮ ನಟ ನಟಿಯರಿಗಿಂತ ಇದೇ ಬೆಟರು ಅನ್ನಿಸಿತ್ತೆ. ಆದ್ರೆ ಈ ಕಿಸ್ಸಿಂಗ್ ಒಳ ಅರ್ಥವೇ ಬೇರೆ ಎಂದು ನೀವು ಕೊಟ್ಟಿರವ ಮಾಹಿತಿಯಿಂದ ತಿಳಿದಾಗ ಖುಷಿಯೂ ಆಗುತ್ತದೆ...ಹೇಗಾದ್ರೂ ಇರಲಿ ನೀವು ಪ್ರೇಮಿಗಳ ದಿನಕ್ಕಾಗಿ ವಿಭಿನ್ನವಾದದ್ದನ್ನು ಕೊಟ್ಟಿದ್ದಕ್ಕೆ ಥ್ಯಾಂಕ್ಸ್.

    ReplyDelete
  2. ಹ್ಹ..ಹ್ಹ... ಒಳ್ಳೆ ವಿಚಾರ..

    ReplyDelete
  3. Olleya video mattu chitradondige olleya vichaara tilisikottiddiri...

    ReplyDelete
  4. ಓಹ್.. ಇಷ್ಟೆಲ್ಲಾ ಇದೆಯಾ ಗೊತ್ತೇ ಇರಲಿಲ್ಲ ಸರ್... ಧನ್ಯವಾದಗಳು

    ReplyDelete
  5. ಡಾಕ್ಟ್ರೇ ಧನ್ಯವಾದ...ಫಾರ್ ಎ ಚೇಂಜ್ ಅಲ್ವಾ..?/

    ReplyDelete
  6. ಶಿವು ಧನ್ಯವಾದ ಹೌದು ವ್ಯಾಲೆಂಟೈನ್ಸ್ ದಿನಕ್ಕೆ ಇದನ್ನ ಹಾಕೋ ಐಡಿಯಾ ಬಂತು...ನಿನ್ನೆ ರಾತ್ರಿ...ಹಾಕೇ ಬಿಟ್ಟೆ..

    ReplyDelete
  7. ವಿಜಯಶ್ರೀ ಧನ್ಯವಾದ

    ReplyDelete
  8. ಹೌದು ತೋಟೇಗೌಡ್ರೆ ಹೀಗೂ ಮಾತ್ರ ಅಲ್ಲಾ ಇನ್ನೂ ಹೇಗೇಗೋ ಉಂಟು...ಗಂಡಾಗಿ ಹುಟ್ಟಿದ ಮೀನು ಕೆಲ ಸಮಯನಂತರ ಹೆಣ್ಣಾಗುತ್ತೆ ಗೊತ್ತಾ,,,?? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  9. ಸಂಧ್ಯಾ ಧನ್ಯವಾದ..ಕೆಲವು ಮೀನಿಗೆ ಸಂಬಮ್ಧಿತ ಬರಹ ನನ್ನ ಇನ್ನೊಂದು ಬ್ಲಾಗಲ್ಲಿದೆ..ನೋಡು ಸಮಯ ಸಿಕ್ಕಾಗ...
    http://azad-freedomseek.blogspot.com/

    ReplyDelete
  10. ಧನ್ಯವಾದ ಸುಗುಣ....

    ReplyDelete
  11. Interesting sir. Had seen some in Dharmasthala aquarium.
    Thanks for info.
    Swarna

    ReplyDelete
  12. ಹ ಹಾಹ .. ಒಳ್ಳೇ ತಮಾಷೆಯಾಗಿದೆ ಕಣ್ರೀ ಈ ಮೀನುಗಳ ಮುತ್ತಿನ ಕಥೆ !!! ಹೊಡೆದಾಟಕ್ಕೂ ಮುಂಚೆ ಮುತ್ತಿಡೋದು ಅಥವಾ ಮುತ್ತಿಟ್ಟು ಹೊಡೆದಾಡೋದು !
    ಅಲ್ಲಾ, ಕಪ್ಪೆಗೆ ಹೊಟ್ಟೆ ಕಿಚ್ಚು ಅನ್ನೋಕ್ಕಿಂತ , ಅದು ಜಗಳ ಬಿಡಿಸೋಕೆ ನೋಡ್ತಾ ಇದ್ಯಾ ಅಂತ ಡೌಟು !
    ಚೆನಾಗಿದವೇ ನಿಮ್ಮ ಮೀನುಗಳು !

    ReplyDelete
  13. interesting ವಿಚಾರ... ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ ಅಜಾದಣ್ಣ... :) ಸವಾಲಿಗೆ ಕರೆಯುತ್ತಿರುವುದಾದರೂ ನೋಡೋಕೆ ಮಾತ್ರ ತುಂಬಾ ಚೆನ್ನಾಗಿದೆ... ;) :)

    ReplyDelete
  14. ಈ ಥರಾ ಕಿಸಿಂಗ್ ಮಾನವಜಾತಿಯಲ್ಲೂ ಇದ್ದರೆ ಎಷ್ಟು ಚೆನ್ನಾಗಿ ಇರ್ತಿತ್ತು ಅಲ್ವೆ? ಆಗ ಮನಮೋಹನ ಸಿಂಗ ಹಾಗು ಗಿಲಾನಿ ಇವರ ಕಿಸ್‍ಅನ್ನು ಟೀವಿಯಲ್ಲಿ ತೋರಿಸಬಹುದಾಗಿತ್ತು!

    ReplyDelete
  15. ಆಜಾದಣ್ಣ ಒಳ್ಳೆಯ ವಿವರ ಉಳ್ಳ ಬರಹ.

    ಆದರೆ ಕ್ಲೈಮ್ಯಾಕ್ಸ್ ಬರುವ ವರೆಗೂ ನಮ್ಮನ್ನು ಕಾಯಿಸಿಟ್ಟಿ ಹೀಗೆ ಸವಾಲ್ ಕಥೆ ಹೇಳಿದ್ದು ಮಾತ್ರ ರಸಿಕರಿಗೆ ನೋವು ತಂದಿತು!!!!

    ಹಹಹ

    ReplyDelete
  16. ಸ್ವರ್ಣ ಧನ್ಯವಾದ ರೀ... ಧರ್ಮಸ್ಥಳ ಆದ್ರೂ ಅವು ಮುತ್ತಿಡೋದು ಬಿಡೊಲ್ಲ ಹಹಹಹ

    ReplyDelete
  17. ಚಿತ್ರಾ... ಇವು ಮುತ್ತಿಡೋಕೆ ಮುಂಚೆ ಈ ಥರದ್ದು ಮಾಡಿದ್ರೆ ಓಕೆ... ಆದ್ರೆ ಮುತ್ತಿಟ್ಟು ಹೀಗೆ ಮಾಡಿದ್ರೆ...ಡೇಂಜರ್ರು ... ಕಪ್ಪೆ ಪಾಪ..ಏನಾದ್ರೂ ಸಿಗುತ್ತಾ ಅಂತ ಹೋಯ್ತು...ಆದ್ರೆ ಅದು ತಾನು ಅಂದ್ಕೊಂಡ ಮುತ್ತಲ್ಲ ಅಂತ ಗೊತ್ತಾಗಿದ್ದೇ..ಪಲಾಯನ...ಹಹಹ

    ReplyDelete
  18. ತೇಜಸ್ವಿನಿ ಧನ್ಯವಾದ...

    ReplyDelete
  19. ಕಾವ್ಯ..ಹೌದು ಮತ್ಸ್ಯ ಜಗತ್ತಿನ ವಿಸ್ಮಯಗಳ ಕೌತುಕಗಳೇ ಹೀಗೆ....ಧನ್ಯವಾದ

    ReplyDelete
  20. ಸುನಾಥಣ್ಣ...ಹಹಹ ಕಲ್ಪನೆ ಸಕ್ಕತ್ತಾಗಿದೆ... ಮನಮೋಹನನ ಮೀಸೆ ಗಡ್ಡ ಶುಲ್ಕವಿಲ್ಲದೇ ಕಟ್ ಆಗ್ತಿತ್ತು...ಹಹಹಹ

    ReplyDelete
  21. ಬದರಿ ಸರ್... ಏನ್ಮಾಡೋದು...ಇದು ಒಂದೇ ಟೇಕಲ್ಲಿ ಬರೆದಿದ್ದು..ಡೈರೆಕ್ಟಾಗಿ ಹಾಗಾಗಿ...ಧನ್ಯವಾದ ನಿಮ್ಮ ಕಾಮೆಂಟಿಗೆ

    ReplyDelete
  22. ಮಾಲ-T ನಿಮ್ಮ ಕಾಮೆಂಟ್ಗೆ ಧನ್ಯವಾದ..ನಿಮ್ಮಲ್ಲಿ ಇಲ್ವಾ ಅಕ್ವೇರಿಯಂ?? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  23. ರೋಮಾಂಟಿಕ್ ಹಾಗು ರೋಚಕವಾಗಿದೆ ನಿಮ್ಮ ಲೇಖನ.
    ಮನುಷ್ಯರಂತೆ ಮತ್ಸ್ಯಗಳೂ ಕಿಸ್ಸಿಂಗ್ ಮತ್ತು ಜಗಳ ಎರಡೂ ಮಾಡುತ್ತವೆ ಅಂತ ಗೊತ್ತೇ ಇರಲಿಲ್ಲ.

    ReplyDelete
  24. ಆಜಾದೂ...
    ಪ್ಯಾರ್ ಗೆ ಆಗ್ಬುಟ್ಟೈತೆ...!
    ನಿಮ್ದುಕಿ ಲೇಖನಕ್ಕೆ ಪ್ಯಾರ್ ಗೆ ಆಗ್ಬುತ್ತೈತೆ....!!

    ಎಂಥಹ ಕೌತುಕ... !

    ನಮ್ಮನೆಯಲ್ಲಿ ಎರಡು ಮೀನುಗಳು ಮುತ್ತುಕೊಡುವದನ್ನು ನೋಡಿ ನಾವೆಲ್ಲ ನಕ್ಕಿದ್ದಿದೆ...
    ಕಾರಣ ಈಗ ಗೊತ್ತಾಯ್ತು ಕಣೊ...

    ತುಂಬಾ ಸ್ವಾರಸ್ಯಕರವಾಗಿ ಮಾಹಿತಿ ತಿಳಿಸಿದ್ದಕ್ಕೆ ಜೈ ಜೈ ಹೋ !!

    ReplyDelete
  25. ವನಿತಾ...ನಿನಗೆ ಗೊತ್ತಿರ್ಲಿಲ್ವಾ??? ಆಶ್ಚರ್ಯ...!! ಶ್ರೇಯಂಗೆ ವೀಡಿಯೋ ತೋರ್ಸು... ಅಕ್ವೆರಿಯಂ ತನ್ನಿ ಅಂತಾಳೆ...ಹಹಹಹ ಥ್ಯಾಂಕ್ಸ್ ಕಾಮೆಂಟ್ಸ್ ಗೆ..

    ReplyDelete
  26. ಈಶ್ವರ್ ಪ್ರಸಾದ್ ಮೀನುಗಳಲ್ಲಿ ಕೌತುಕಗಳಿಗೆ ಎಣೆಯಿಲ್ಲ... ಇವುಗಳ ಬಗ್ಗೆ ನನ್ನ ಇತರ ಬ್ಲಾಗಲ್ಲೂ ಹಾಕಿದ್ದೀನಿ ನೋಡಿ... ಧನ್ಯವಾದ ಇಲ್ಲಿ ಬಂದುದ್ದಕ್ಕೆ..

    ReplyDelete
  27. ಪ್ರಕಾಶೂ...ನಮ್ದುಕೆ ಗಾಯದು ಅಗ್ಬುಟ್ಟೈತೆ ಬಾಯ್ಗೆ ಗಾಯಾದು ಆಗ್ಬುಟ್ತೈತೆ..ಅಂತ ಹೇಳ್ತಾ ಇದೆ ಕಿಸ್ಸಿಂಗ್ ಗೌರಾಮಿ...ಹಹಹಹ
    ಧನ್ಯವಾದ ಕಣೋ ನಿನ್ನ ಶೇರ್ ಗೂ...

    ReplyDelete
  28. ಚುಂಬನದ ಲೇಖನ ಚುಂಬಿಸುವಂತಿದೆ ಸರ್...

    ReplyDelete
  29. ಒಹ್..ಒಹ್... ನಾನು ಅಂದುಕೊಂಡೆ ಮನುಷ್ಯ ತಾನು ಕೆಡೋದಲ್ದೆ ಮೀನುಗಳನ್ನು ಕೆಡಿಸಿಬಿಟ್ಟ ಅಂತ.... ಪೂರಾ ಓದಿದ ಮೇಲೆ ಎಲ್ಲಾ ಗೊತ್ತಯ್ತು.... ಚನ್ನಾಗಿದೆ ಚನ್ನಾಗಿದೆ ಚುಂಬನ

    ReplyDelete
  30. ಭಯ್ಯಾ,
    ನಿಮ್ಮ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬರ್ತಾ ಇದೆ :)))
    ಒಳ್ಳೆ ರೋಮ್ಯಾಂಟಿಕ್ ಸಸ್ಪೆನ್ಸ್ ಹಾಳುಮಾಡಿಬಿಟ್ರಲ್ಲ :(((

    ಪರವಾಗಿಲ್ಲ ಬಿಡಿ, ಒಳ್ಳೆ ಮಾಹಿತಿ ಕೊಟ್ರಲ್ಲಾ. ಇಲ್ಲ ಅಂದ್ರೆ ನಾನೂ ನನ್ನಂತ ದಡ್ದರೂ ಇದನ್ನು ಪ್ರೀತಿಯ ಮುತ್ತು ಅನ್ಕೊಂಡು ನಾಚಿಕೆ ಮಾಡ್ಕೋತಾ ಇದ್ವಿ :P

    ಧನ್ಯವಾದಗಳು.

    ReplyDelete
  31. ಹೊಸತೊಂದು ವಿಷಯ ತಿಳಿಸಿ ಕೊಟ್ಟಿದ್ದಿಕ್ಕೆ ಧನ್ಯವಾದಗಳು ಸರ್..
    ಒಳ್ಳೆಯ ಲೇಖನ....

    ReplyDelete
  32. ಮಲ್ಲಿಕಾರ್ಜುನ್ ಧನ್ಯವಾದ..ಚುಂಬಿಸಿಬಿಡಿ ಒಮ್ಮೆ....ಹಹಹಹ

    ReplyDelete
  33. ಮಂಜು..ಅದಕ್ಕೇ ಹೇಳಿದ್ದು ಒಂಥರಾ ಡಿಫರೆಂಟ್ ಪೋಸ್ಟ್ ಅಂತ ಧನ್ಯವಾದ..

    ReplyDelete
  34. ಹಹಹಹ್...ಪ್ರವೀಣ್.. ನಿನಗೆ ನಿರಾಸೆ ಮಾಡಿದ್ದಕ್ಕೆ ನನ್ನ ಕ್ಷಮ್ಸು ತಮ್ಮಯ್ಯಾ...ಹಹಹ ಆದರೂ ದೂರ ಇಲ್ಲ ಬಿಡು ಘಳಿಗೆ...
    ವಿಚಾರ ನವೀನತೆಗೆ ಮೆಚ್ಚುಗೆ ಮೀನಿಗೆ ಹೋಗುತ್ತೆ...ಹಹಹಹ ಧನ್ಯವಾದ

    ReplyDelete
  35. ಸುಶ್ಮಾ... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  36. ಹೀಗೂ ಉಂಟು ಅಂತ ಗೊತ್ತಾಗಿದ್ದು ಇದನ್ನು ಓದಿದ ಮೇಲೇನೇ....ಉಪಯುಕ್ತ ಮಾಹಿತಿ ಸರ್.......ಧನ್ಯವಾದಗಳು...

    ReplyDelete
  37. ಅಶೋಕ್ ಧನ್ಯವಾದ....

    ReplyDelete