Sunday, February 26, 2012

ವಾಹ್ - ವೈರಾಣು


ವಾಹ್-ವೈರಾಣು
ಏನು ಹೇಳಲಿ ಇದೊಂದು ಜೀವಿ
ಅತಿಸೂಕ್ಷ್ಮ ಇದುವೇ ವೈರಾಣು
ಬೇಕು ಇದರ ಬದುಕಿಗೆ ಜೀವಕೋಶ
ಇಲ್ಲವೇ ಬೇಕು ಕಡೇ ಪಕ್ಷ ಜೀವಾಣು

ಡಿ ಅಥವಾ ಆರ್ ಎನ್ ಎ ಇದರ ಜೀವಾಳ
ಜೀವಕೋಶದ ಒಳಗೆ ಸಿಗುತ್ತದೆ ಬಂಡವಾಳ
ತನ್ನ ಡಿ ಅಥವಾ ಆರ್ ಎನ್ ಎ ಹೊರ ಕವಚ
ಅದಕೇ ಒಳಹೋಗಲು ಹಾಕುವುದು ಹೊಂಚ


ಬಂಡವಾಳ ಅತಿಥೇಯ ಜೀವಿಯಿಂದ ಕದ್ದು
ಸಂಕೇತ ತನ್ನದು ಕೆಲಸ ಜೀವಕೋಶದ್ದು
ಹೊದಿಸುತ್ತೆ ತಯಾರಾದ ಪ್ರೋಟೀನ್ ಪದರ
ಮರಿ ವೈರಾಣು ಹೊರಬರುತ್ತೆ ಕೊಟ್ಟು ಗುದ್ದು
ಇಲ್ಲವಾದರೆ ಉಡೆದು ಜೀವಕೋಶದ ಉದರ

ಮರಿ ವೈರಾಣು ಮುಂದುವರೆಸುತ್ತೆ ಸತತ ಕ್ರಿಯೆ
ಪಕ್ಕದ ಜೀವ ಕೋಶಕ್ಕೆ ಹೊಕ್ಕು ಮತ್ತದೇ ಮಾಯೆ
ಸಾವಿರಾರು ಮರಿ ವೈರಾಣುಗಳು ಹುಟ್ಟುವುದು ದಿಟ
ಜೀವಕೋಶ ತೋರದಿದ್ದರೆ ಅದನು ತಡೆಯುವ ಹಟ

ಜೀವಕೋಶ ಕ್ರಿಯೆಗೆ ಅಡಚಣೆ, ಆಗುವುದು ಭಂಗ
ರೋಗ ಹಿಡಿದು ಜಡಗಟ್ಟು ಕೋಶ, ಅಂಗ ಪ್ರತಿ ಅಂಗ
ರೋಗನಿರೋಧಕ ಉತ್ತೇಜಿತಗೊಳ್ಳಲೇ ಬೇಕು ಆಗ
ಇಲ್ಲವಾದರೆ ವೈರಾಣು ತಿಂದುಬಿಡುತ್ತೆ ಜೀವಿಯ ಬೇಗ 


17 comments:

  1. ಜಲನಯನ,
    ನಮ್ಮ ವಿಜ್ಞಾನ ಪಾಠಗಳನ್ನು ನೀವು ಬರೆದಂತೆ ಕವನರೂಪದಲ್ಲಿ ಕೊಟ್ಟಿದ್ದರೆ, ವಿದ್ಯಾರ್ಥಿಗಳೆಲ್ಲರೂ ಖುಶಿಯಿಂದ ಓದುತ್ತಿದ್ದರು. ಸಾಹಿತ್ಯ ಮತ್ತು ವಿಜ್ಞಾನವನ್ನು ಅನೇಕ ವಿಧಗಳಲ್ಲಿ ಜೋಡಿಸುತ್ತಿರುವ ನಿಮಗೆ ಶರಣು, ಶರಣು!

    ReplyDelete
  2. ಸುನಾಥಣ್ಣ...ನಿಮ್ಮದೇ ಮೊದಲ ಪ್ರತಿಕ್ರಿಯೆ ಆಗಿದ್ದಕ್ಕೆ ನನಗೆ ಸಂತಸ...ಯಾಕಂದ್ರೆ ಅದು ನನಗೆ ಆಶೀರ್ವಾದ... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  3. ಆಜಾದ್ ಸರ್ ,

    ನಿಮ್ಮ ಕವನ ಮತ್ತೆ ಜೀವಶಾಸ್ತ್ರ ದ ನೆನಪು ಮಾಡಿಕೊಟ್ಟಿತು.....ಗುರುಗಳು ಹೇಳುತಿದ್ದ ಪಾಠವನ್ನು ಕವನದ ಮೂಲಕ ಹೇಳಿದ್ದಿರಿ..ಚೆನ್ನಾಗಿದೆ.....ಮಕ್ಕಳ ಪಾಠಪುಸ್ತಕಕ್ಕೆ ಸೇರಿಸಬಹುದು......ಧನ್ಯವಾದಗಳು....

    ReplyDelete
  4. ಜೀವ ಶಾಸ್ತ್ರದ ಈ ಪಾಠವನ್ನು ಸರಳವಾದ ನಿರೂಪಣೆಯ ಮೂಲಕ ಕೊಟ್ಟಿದ್ದೀರಿ ಸಾರ್. ಸಂಗ್ರಹ ಯೋಗ್ಯ ಬರಹಗಳು ನಿಮ್ಮವು.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  5. ಅಶೋಕ್ ಧನ್ಯವಾದ...ನನಗೆ ಒಂದು ಮಾತು ಅರ್ಥವಾಗುತ್ತಿಲ್ಲ... ವಿಜ್ಞಾನಕ್ಕೆ ಸಂಸ್ಕೃತ ಶಬ್ದಪ್ರದಾನ ಮಾಡಿದೆ ಎನ್ನುವುದಾದರೆ ಸಂಸ್ಕೃತದಿಂದ ಹುಟ್ಟಿದ ಕನ್ನಡಕ್ಕೆ ತನ್ನದೇ ವಿಜ್ಞಾನಭಾಷೆ ರೂಪಿಸಲು ಕಷ್ಟವೇ..?? ನಮ್ಮಲ್ಲಿ ಕೀಳರಿಮೆ ಏಕೆ ಬೆಳೆಯುತ್ತಿದೆಯೋ ಗೊತ್ತಿಲ್ಲ...

    ReplyDelete
  6. ಬದರಿ ಸರ್... ನಿಮ್ಮ ಮಾತು ನಿಮ್ಮಂತೆಯೇ ತೂಕವಿರುವ ಮಾತು... ಕನ್ನಡದ ಮಕ್ಕಳಿಗೆ ಸಾಸಿವೆ ಕಾಳಿನಷ್ಟು ಉಪಯೋಗವಾದರೂ ಸಾರ್ಥಕ...

    ReplyDelete
  7. ಅಜಾದ್,
    ಜೀವಶಾಸ್ತ್ರದ ವಿಚಾರವನ್ನು ತುಂಬಾ ಸರಳವಾಗಿ ವಿವರಿಸಿದ್ದೀರಿ. ಮಾಹಿತಿಯುಕ್ತವಾಗಿದೆ.

    ReplyDelete
  8. ಧನ್ಯವಾದ ಶಿವು ಕನ್ನಡದಲ್ಲಿ ತಿಳಿಸುವ ಪ್ರಯತ್ನ ನಡೆದಿದೆ....

    ReplyDelete
  9. ಜೀವ ಶಾಸ್ತ್ರದ ಪಾಠ ತುಂಬಾ ಚೆನ್ನಾಗಿದೆ ಸರ್.. ಸುನಾಥ್ ಸರ್ ಹೇಳಿದಂತೆ ವಿಜ್ಞಾನದ ಪಾಠಗಳು ಇಷ್ಟೇ ಸರಳವಾಗಿದಿದ್ದರೆ ಬಹುಷಃ ಇನ್ನೊಂದಿಷ್ಟು ಹೆಚ್ಚು ಅಂಕಗಳನ್ನು ಗಳಿಸಬಹುದಿತ್ತೇನೋ...:)

    ReplyDelete
  10. ವಿಜ್ಞಾನದ ಪಾಠ ಚೆನ್ನಾಗೆ ಸಾಗಿದೆ.. ಎಲ್ಲರಿಗೂ ಅರ್ಥವಾಗುವಂತೆಯೇ ಸಾಲುಗಳನ್ನು ರಚಿಸಿದ್ದೀರಿ. ಧನ್ಯವಾದಗಳು ಸರ್

    ReplyDelete
  11. ಇಂಗ್ಲೀಷಿನ ಭಯಾಲಜಿಗೆ ಕನ್ನಡದ ಜೀವತುಂಬೋ ಯತ್ನ ಸಂಧ್ಯಾ...ಧನ್ಯವಾದ...

    ReplyDelete
  12. ಸುಗುಣ ಧನ್ಯವಾದ..ಹೀಗೂ ಒಂದು ವರಸೆ...

    ReplyDelete
  13. ನಾನು ಓದಿದ ಮೊದಲ ವಿಜ್ಞಾನ ಕವನವಿದು... ತುಂಬ ಚೆನ್ನಾಗಿ ಬರೆದಿದ್ದೀರಿ ಸಾರ್...

    ReplyDelete
  14. ಈಶ್ವರ್ ಪ್ರಸಾದ್ ಧನ್ಯವಾದ ಜಲನಯನಕ್ಕೆ ಸ್ವಾಗತ ಸಹಾ ನಿಮಗೆ....

    ReplyDelete
  15. ಸರ್...ಕವನ ಬಹಳ ಇಷ್ಟವಾಯ್ತು..
    ವಿಜ್ಞಾನದ ಬಗೆಗಿನ ಕವನ ವಾಗಿದ್ದಕ್ಕೆ ಡಬ್ಬಲ್ ಸಂತೋಷ..ಹೊಸತನದ ಅನುಭವ...ಚೆನ್ನಾಗಿದೆ..

    ReplyDelete
  16. ಸುಶ್ಮಾ ಧನ್ಯವಾದ...ವಿಜ್ಞಾನದ ಕವನಗಳ ಸಂಕಲನ ಹೊರತರಬೇಕು ಅಂತ ನಮ್ಮ ಯೋಜನೆಯಿದೆ... ನಿಮ್ಮ ಕವನ ಇದ್ರೂ ಹಾಕಿ Face Book group - ನಮ್ ಕನ್ನಡ ದಲ್ಲಿ.

    ReplyDelete
  17. ಸೂಪರ್ ಭಯಾಲಜಿ ಕವನ ಸರ್.. ಭಾರತ ಅನ್ನೋ ದೇಹಕ್ಕೆ ಈ ರಾಜಕಾರಣಿಯೇ ವೈರಾಣು!!

    ReplyDelete