ಕಪ್ಪು
ಸುಂದರಿ..
ಕಪ್ಪು
ಸುಂದರಿ..
ನನ್ನ ಒಲವಿನ
ಕಿನ್ನರಿ..
ಕಪ್ಪು
ಕಪ್ಪು ಎಂದೇಕೆ
ಮುಖವ ಹಿಂಡುವಿರಿ...??
ಆಹಾ ಆ ಮೊದಲ
ನೋಟ..
ಆ
ವೈಯ್ಯಾರದ ಮೈಮಾಟ..!!
ಮಿರುಗುವ
ಮುದ್ದು ಬರುವ ಮೊಗ
ಹೊಳಪಲಿ
ಕಳೆದಳೆದ ಅಂಗಾಂಗ..
ಕೈ
ಇಟ್ಟರೆ ಜಾರುವ ನುಣುಪು
ನಿಂತರೂ
ನಡೆದರೂ ಎಂಥ ಒನಪು?!!
ಏಕೋ ಏನೋ
ಮೈಮರೆತೆ
ನೋಡ
ನೋಡುತ್ತಲೇ ನಿಂತೆ
ಚಿವುಟಿದಳು
ನನ್ನವಳು ಪಕ್ಕೆ..
ನನ್ನ
ಕಣ್ಣಿಗೆ ಕಟ್ಟಿತ್ತು ಆ ಕಪ್ಪು ಚುಕ್ಕೆ
ಹೊರಟೆ
ನನ್ನವಳ ಬಿಟ್ಟು ಅವಳ ಜೊತೆ
ಮೊಡದ
ಮೇಲೆ, ಆಗಸದಲಿ ತೇಲಿದಂತೆ
ನನ್ನ
ಕಪ್ಪು ಸುಂದರಿಯ ಜೊತೆ ನನ್ನ ನೋಡಿ
ದಾರಿಹೋಕರಿಗೂ
ಈರ್ಷೆ, ಮಾಡಿದಳು ಮೋಡಿ
ಒಮ್ಮೆ
ಒಂದು ಸುತ್ತಾಡಿ ಬಂದೆ ಜೊತೆ
ಈಗ ನನ್ನವಳಿಗೂ
ನಮ್ಮಗಳಿಗೂ ಹಿತೆ
ಒಂದೇ
ದಿನದಲ್ಲಿ ನನಗೆ ಬಹುಪ್ರಿಯೆ
ನಮ್ಮನೆಯವರೂ
ತೋರಿದ್ದಾರೆ ದಯೆ
ಎಲ್ಲಾ
ಹೋಗ್ತೀವಿ ಜೊತೆಯಾಗಿ ಒಟ್ಟಿಗೆ
ಕಪ್ಪು
ಸುಂದರಿ ಬಹುಪ್ರಿಯೆ ನಮ್ಮ ಮಟ್ಟಿಗೆ
.........??????...........
ಉತ್ತರಕ್ಕೆ... ಈ ಲಿಂಕನ್ನು ಕ್ಲಿಕ್ ಮಾಡಿ....
ಸರ್ ಏನು ಸಮಾಚಾರ ಏನೂ ಕಾಣ್ತಾ ಇಲ್ಲ ?? ತುಂಬಾ ಚೆನ್ನಾಗಿದೆ ಇದನ್ನೇ ಕದ್ದು ಬಿಳಿ ಸುಂದರಿ ಅಂತನೂ ಮಾಡಬಹುದು ..
ReplyDeleteಆಜಾದಣ್ಣ, ಈ ಸರ್ತಿ ಬೆಂಗ್ಳೂರಿಗೆ ಬಂದಾಗ ನಿಮ್ಮನ್ನು ಪಾರ್ಟಿ ಕೇಳಲು ಕಾರಣ ಸಿಗ್ತು ಬುಡಿ!
ReplyDeleteಕಪ್ಪು ಸುಂದರಿ ಸಕ್ಕತ್ತಾಗವಳೇ, ಮಜಾ ಮಾಡಿ...
ನಿಜಕ್ಕೂ ಬಲು ಸುಂದರಿ... ನಿಮ್ಮ ಕಪ್ಪು ಕಿನ್ನರಿ... :) :)
ReplyDeleteCongratulations. Have a wonderful ride.
ReplyDeleteSwarna
ಹಹ್ಹಹ್ಹ.... ನಿಮ್ಮ ಕಪ್ಪು ಸುಂದರಿಯು ಇವಳಾಗಿರಬಹುದೆಂಬ ಕಲ್ಪನೆಯೇ ಕವಿತೆ ಓದುವಾಗ ಇರಲಿಲ್ಲ/ಬರಲಿಲ್ಲ ಸರ್....
ReplyDeleteಸೊಗಸಾಗಿ ಬರೆದಿದ್ದೀರಿ...
ಅಂದುಕೊಂಡಿದ್ದು ಒಂದು....ಲಿಂಕ್ ತೋರಿಸಿದ್ದು ಇನ್ನೊಂದು....ಸೂಪರ್...
yaarirabahudu. meena? illa bErenaa? ankondu link click madiddre thorsiddu car anna . car-kavana super
ReplyDeletesuper.
:).. congratulations.
ReplyDeleteನಿಜವಾಗಲು ನಿಮ್ಮ ಕಪ್ಪು ಸುಂದರಿ ಸೂಪರ್ ಸರ್ ...
ReplyDeleteSuper sir!!1 :-)
ReplyDeleteಅಜಾದ್,
ReplyDeleteನಿಮ್ಮ ಕಪ್ಪುಸುಂದರಿಯನ್ನು ಫೇಸ್‍ಬುಕ್‍ನಲ್ಲಿ ನೋಡಿದೆ. ತುಂಬಾ ಚೆನ್ನಾಗಿದೆ ಅದಕ್ಕೆ ತಕ್ಕಂತೆ ಕವನವೂ ಕೂಡ.
Sundari super agidale...
ReplyDelete