Saturday, February 13, 2016

ಎಚ್ಚರ ಗಂಡೇ ಎಚ್ಚರ

(Image Source: Google Pics)

ಎಚ್ಚರ ಗಂಡೇ ಎಚ್ಚರ
******************
ಸೇರಿದ್ದು ಒಂದೊಂದೇ ಜೀವಾಣು
ಇಬ್ಬರ ವಿಶೇಷಗಳು, ನಾನಾದೆ..
ಬೆಳೆದೆ ಒಳತಂದ ಸಂದೇಶ ಹೊತ್ತ
ಸಂಕೇತಗಳ ಭಾಷಾಂತರಿಸಿ..
ಗೊತ್ತೇ? ಅಲ್ಲಿದ್ದುದದೊಂದು
ನನ್ನದೇ ಭಾಷೆಯ ಅವತರಿಸಿ..
ಗಂಡಿಗೆ ನನ್ನದೇ ಒಂದು ಅರ್ಥ
ಹೆಣ್ಣೆಂದರೆ ಅನುವಾದಿಸಿದೆ, ವ್ಯರ್ಥ..
ಆದೆ ಪರಸ್ತ್ರೀ ವ್ಯಾಮೋಹದಲಿ
ರಾವಣ, ಕೀಚಕ ಅಷ್ಟೇಕೆ ಇಂದ್ರ!!
ನಿಲ್ಲಲಿಲ್ಲ ಅಲ್ಲಿಗೇ ಸೋದರ ಸತಿ
ಕಾಮಕ್ಕೆ, ಮೋಹಕ್ಕೆ, ಸೇಡಿಗೆ
ಆದೆ ದುರ್ಯೋಧನ ಶಾಸನ ಮತಿ..
ಈಗಂತೂ ನನ್ನ ಕುಕರ್ಮಗಳು
ಮೀರಿವೆ ಸೀಮೆ ನಾಚಿಸಿ ಮೃಗವ
ಹೆಣ್ಣು ಬರೀ ಕಾಮತೀಟೆಗೆ..
ನನಗಿಲ್ಲ ಯಾವುದೇ ಭೇದ..
ಆಗಿದ್ದರೆ ಸಾಕು ಚರ್ಮ, ಮಾಂಸ,
ರಂಧ್ರವಿರುವ xx ಉಸಿರಾಡುಜೀವ,
ತಿನ್ನಬೇಡ ಆ ಹಣ್ಣನೆಂದರೂ
ಬಿಡಲಿಲ್ಲ ಯಾ ಹೆಣ್ಣುನೊಂದರೂ
ಏಕೀ ಬಿಡದ ಅತಿರೇಕದಾಮತ್ತು ?
ಏಕುಣುವೆ ಎಡಬಿಡದೆ ಕಾಮತುತ್ತು?
ಎಚ್ಚೆತ್ತುಕೋ, ಈಗಲಾದರೂ ಗಂಡೇ
ಹುಟ್ಟಿ ಬರಲಿದೆ ಹೆಂಗಳೆಯರ ದಂಡೇ
ಎರಡಕ್ಕೂ ಅರಿ ಅದೇ ಜೀವದಾತೆ

ನಿನ ಹುಟ್ಟಿಗೂ ಮೂಲವೇ ಆ ಮಾತೆ.

16 comments:

  1. ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಮುಸುರಿ ಹೇಳುತ್ತಾರೆ
    ನಿಮ್ಮ ಹತ್ರ ಒಂದು ತಡಕಲಾಂಟಿ ತಮಟೆ ಇದೆ..
    ನಮ್ಮ ಹತ್ರ ನಗಾರಿ ಇದೆ.. ಒಮ್ಮೆ ಬಾರಿಸಿದರೆ ಚಂಡಮಾರುತ ಬೀಸುತ್ತೆ

    ಹಾಗೆ.. ಬ್ಲಾಗ್ ಲೋಕ ಕಳೆದೆ ಹೋಗಿದೆ ಎನ್ನುವ ಹೊತ್ತಿಗೆ ಒಂದು ಅದ್ಭುತ ಬ್ಲಾಗ್ ಮೂಲಕ ಮತ್ತೆ
    ಎಂಟ್ರಿ..

    ಸೂಪರ್ ಸರ್ಜಿ..

    ಕಾಮ ಎನ್ನುವ ಭ್ರಮೆ ಜಗತ್ತನ್ನೇ ಹಿಡಿದು ಅಲುಗಾಡಿಸುತ್ತಿದೆ.. ಅದರ ಬಗೆಗಿನ ಚಿಕ್ಕ ಚೊಕ್ಕ ಕವನ ಸುಂದರವಾಗಿ ಮೂಡಿ ಬಂದಿದೆ.. ಹೇಳುವುದನ್ನು ಘಂಟೆ ಬಾರಿಸಿದಂತೆ ಹೇಳಿರುವ ರೀತಿ ಸೂಪರ್
    ಹೌದು ಹೆಂಗಳೆಯರ ದಂಡೆ ಸಿದ್ಧವಾಗುತ್ತಿದೆ.. ಯಾವುದೇ ಕೆಟ್ಟ ಸಂಸ್ಕೃತಿ ಕೊನೆಗಾಳಲೇ ಬೇಕು ..

    ಸೂಪರ್ ಸೂಪರ್

    ReplyDelete
    Replies
    1. ಬ್ಲಾಗ್ ಲೋಕದ ಗೆಳೆಯರು ಮತ್ತೊಮ್ಮೆ ನಮ್ಮ ಬಾಂಧವ್ಯವನ್ನು ಹೆಣೆಯೋಣ ಶ್ರೀಮನ್, ಧನ್ಯವಾದ

      Delete
  2. ಎಚ್ಚೆತ್ತುಕೋ, ಈಗಲಾದರೂ ಗಂಡೇ
    ಹುಟ್ಟಿ ಬರಲಿದೆ ಹೆಂಗಳೆಯರ ದಂಡೇ
    ಎರಡಕ್ಕೂ ಅರಿ ಅದೇ ಜೀವದಾತೆ

    ನಿನ ಹುಟ್ಟಿಗೂ ಮೂಲವೇ ಆ ಮಾತೆ.

    ಬಹಳ ಇಷ್ಟವಾದ ಸಾಲುಗಳು. :)

    ReplyDelete
    Replies
    1. ಧನ್ಯವಾದ ನಿವಿ... ಬ್ಲಾಗ್ ನ ಆ ಘಮಲು ಮತ್ತೆ ತರಿಸುವ...

      Delete
  3. ಅಪರೂಪದ ಬ್ಲಾಗ್ ಬರಹ... ಚೆನ್ನಾಗಿದೆ. ☺

    ReplyDelete
  4. ಅಪರೂಪದ ಬ್ಲಾಗ್ ಬರಹ... ಚೆನ್ನಾಗಿದೆ. ☺

    ReplyDelete
    Replies
    1. ಚುಕ್ಕಿ ಚಿತ್ತಾರ ನಾನೂ ನೋಡಬೇಕು
      ಬರಲಿ ಹೊಸತು.... ಧನ್ಯವಾದ ವಿಜಯಶ್ರೀ

      Delete
  5. ಸುಂದರ ಕವನ ಭಾಯ್, ಗಂಡು ಎಚ್ಚೆತ್ತುಕೊಳ್ಳುವ ಸಮಯ, ಅದೂ ವ್ಯಾಲೆಂಟೈನ್ಸ್ ದಿನದಲ್ಲಿ,,,, ಸೂಪರ್!

    ReplyDelete
  6. ಜಲನಯನ,
    ದೀರ್ಘ ಅವಧಿಯ ನಂತರ ನಿಮ್ಮ ಲೇಖನ ಕಣ್ಣಿಗೆ ಬಿದ್ದದ್ದರಿಂದ ಖುಶಿಗೊಂಡು ತೆರೆದೆ. ಅಬ್ಬಾ, ನನಗೆ ಒಳ್ಳೇ ಎಚ್ಚರಿಕೆಯನ್ನೇ ಕೊಟ್ಟಿದ್ದೀರಲ್ಲ!

    ReplyDelete
    Replies
    1. ಹಹಹ ಸುನಾಥಣ್ಣ...ನಮ್ಮೆಲ್ಲರಿಗೂ ಎಚ್ಚರಿಕೆ ಅಲ್ವಾ...?? ಧನ್ಯವಾದ.

      Delete
  7. ತನ್ನ y ತಂತುವಿನ ಸೋಲೇ ಅಸಲು xx ಹೆಣ್ಣು ಕೂಸಿನ ಜನನಕೆ ಕಾರಣವೆನ್ನುವುದನೂ ಮರೆತು, ಹೆಣ್ಣು ಮಗುವಾದಾಗ ಜರೆವ ಪುರುಷ ಪುಂಗವ ಈ ಕವಿತೆ ಮೂಲಕ ನಿನಗಿದೋ ದೊಡ್ಡ ಧಿಕ್ಕಾರ!

    ಪರ ನಾರಿ ಪೀಡೆಯಲೇ ಅಸಹ್ಯ ಸುಖ ಕಾಣುವ ಪುರುಷಾಧಕಮರಿಗೆ ಬುದ್ದಿ ಕಲಿಸಲಿ ನಾರಿ ಪರಾಕ್ರಮಿಗಳು ಮುಂದೆ...

    ಈ ಕವಿತೆಯಿಂದಲಾದರೂ ಬ್ಲಾಗ್ ಪುನರಪಿ ಟೈಪಿತ್ವ ಶುರುವಾಗಲಿ...

    ReplyDelete
    Replies
    1. ಬದರಿ ಧನ್ಯವಾದ... ವಾರಕ್ಕೊಂದು ಬ್ಲಾಗಲ್ಲಿ ಬರೆಯುವ ನಿರ್ಧಾರ ನೋಡೋಣ...

      Delete