ಹುಣಿಸೆ ಮರಕ್ಕೆ ನೇತ್ ಬಿದ್ದಿದ್ ಭೇತಾಳ .. ಸಾವ್ರ ವಿಕ್ರಮನ್ ಎಗ್ಲಿಗ್ ಬಿದ್ ನಡಿಯೋಲೇ ಮಸಾಣ್ತಾಕ್ಕೆ.. ದಾರಿ ಉದ್ದಕ್ಕೆ ಕತೆ ಯೋಳ್ತೀನಿ.. ಅಂತ ಅಂದ ಜಬರ್ದಸ್ತ್ ಮಾಡಿ ವಿಕ್ರಮನ್ ನಡೆಯೊಂಗ್ ಮಾಡಿ..ಕತೆ ಯೋಳಕ್ಕೆ ಸುರು ಅಚ್ಕಂತು....
ಇದ್ದಕ್ಕಿದ್ದ ಹಾಗೆ ಸಾವ್ಕಾರ ಎಂಕ್ಟನ್ನ ಕರೆ ಕಳುಸ್ದ..
ಬಿದ್ನೋ ಎದ್ನೋ ಅಂತ ಎಂಕ್ಟ ಸಾವ್ಕಾರ್ನ ಅಟ್ಟಿತಾಕ್ಕೋದ..
ಅಲ್ನೋಡ್ತಾನೆ.. ಬೀರೇಶ, ಮಂಕ, ಟೇಲರ್ ಇಮಾಮ್ ಸಾಬಿ, ಮಲ್ಗೆ ಮುನಿಯಮ್ಮ ಎಲ್ಲಾ ಜಮಾಯ್ಸವ್ರೆ... ಎಲ್ರೂ ಮಕ್ಮಕ ನೋಡ್ತಾ ಕುಂತವ್ರೆ...
ಮಂಕ ಗಾಬರಿಯಿಂದ ಕೇಳ್ದ...
"ಎಂಕ್ಟಣ್ಣೋ ನಿನ್ನೂ ಕರೆ ಕರ್ಸಿದ್ರಾ ಸಾವ್ಕಾರ್ರು..?? ಮಗಳ್ಮದ್ವೆ ಐತೆ ಅಂತ ಒದ್ದಾಡ್ತ ಇದ್ದೆ.., ಏನಪ್ಪಾ ಗಾಚಾರ.. ಕಣಜ್ದಾಗೆ ಬಿದ್ದಿರೋ ಜ್ವಾಳಾ ಕೊಡು ಬಾಕಿಗೆ ಜಮಾ ಆಕ್ಕತೀನಿ ಅಂದ್ರೆ ..ಏನ್ಮಾಡೀಯೇ..." ?? ಅಂದ
ಅವನಿಗೆ ಅವನ ಕಣದಲ್ಲಿ ರಾಶಿ ಹಾಕಿದ್ದ ರಾಗಿ ಬಗ್ಗೆ ಯೋಚನೆ ಇದ್ದಿದ್ಕೆ..ಆ ಪಾಟಿ ಚಿಂತೆ ಆಗಿತ್ತು ಅಂತ ಬ್ಯಾರೆ ಯೋಳ್ಬೇಕಾಗಿಲ್ಲ..
ಆಳು ನಿಂಗ ಬಂದು ಕರ್ದ...
"ಎಂಕ್ಟಣ್ಣೋ ಸಾವ್ಕಾರ್ರು ಕರೀತಾವ್ರೆ...ಹಜಾರ್ದಾಗ್ ಕುಂತವ್ರೆ ಬಾ.." ಅಂದ
ಅವನ್ ಹಿಂದೆ ಹೊಂಟ ಎಂಕ್ಟ.. ಕಟ್ಕನ್ ಹಿಂದೆ ಕುರಿ ಒಂಟಂಗೆ....
ಅರ್ದ ಗಂಟೆಗೆ ..ಹೊರಕ್ ಬಂದ ಎಂಕ್ಟ...
ಇಮಾಮ್ ಕೇಳ್ದ.." ಏನಪ್ಪಾ ಎಂಕ್ಟ..ೋಗೋವಾಗ ತುಸ್ ಅಂತ ಇದ್ದೋನು.. ಬರೋವಾಗ ಫಿರೀಲ್ ಲಂಗ ಗುಬ್ರಾಕುದ್ರೆ ಅರಳ್ಕತಾದಲ್ಲ ..ಅಂಗೆ ಅರಳೈತೆ ಮಕ/" ಏನಂದ ಸಾವ್ಕಾರ...
"ಇಮಾಮಣ್ಣ..ಇನ್ನೇನಂದಾನೂ..., ಬಾಕಿ ಕೊಟ್ ಮಗ್ಳ್ ಮದವೆ ಮಾಡು ಅಂದಿರ್ತಾನೆ... ಬ್ಯಾಂಕಿಂದ ಸಾಲ ತಗೊಂಡಿರೋದು ಗೊತ್ತಾಗಿರ್ತದೆ.." ಅಂದ್ರು ರಾಮಣ್ಣ ಮೇಷ್ಟ್ರು...ವಿ಼ಷಯ ತಿಳಿದು 'ಏನು' ಅಂತ ವಿಚಾರ್ಸೋಕೆ ಬಂದಿದ್ದೋರು..
"ಇಲ್ಲ ಮೇಟ್ರೇ.. ಮಗಳ್ಮದ್ವೆ ಮಾಡಾಕೆ ಏನ್ಮಾಡ್ದೆ ಎಂಕ್ಟ..? ಯೋಚ್ನೆ ಮಾಡಬ್ಯಾಡ.. ಒಂದೈವತ್ ಕೊಡ್ತೀನಿ.. ಜಂ ಅಂತ ಮದ್ವೆ ಮಾಡು.. ನಿದಾನಕ್ಕೆ ಮುಂದಿನ ಕಿತ ಫಸಲು ಬಂದ್ಮ್ಯಾಕ್ಕೆ ಸ್ವಲ್ಪ ಸ್ವಲ್ಪ ತೀರ್ಸುವಂತೆ, ಅಂತ ನೋಡಿ.,..500 ರೂಪಾಯಿ ಕಂತೆ ಕೊಟ್ಟವ್ರೆ..."
ರಾಮಣ್ಣ ಮೇಷ್ಟ್ರುಸ್ವಲ್ಪ ಯೋಚಿಸಿ... "ಸರಿ..ಒಳ್ಳೇದೇ ಆಯ್ತು.. ಈವಾಗ ಮೋದಿಯೋವ್ರು 500, 1000 ನೋಟು ನಡಿಯಾಕಿಲ್ಲ ಅಂದವ್ರೆ..., ನೀನು ಬ್ಯಾಂಕಿಗ್ ಹೋಗಿ.. ಎಲ್ಲಾ ಬದ್ಲಾಯಿಸ್ಕೊಂಡ್ ಬಾ, ಜ್ವಾಳ ಮಾರಿದ್ ದುಡ್ಡು ಅಂತ ಯೋಳು ಕೇಳುದ್ರೆ...ರೈತರ್ನೆಲ್ಲಾ ಕೇಳಾಕಿಲ್ಲ...ಅಂಗೇನಾರಾ ಕೇಳುದ್ರೆ..!! ಆಯ್ತಾ..ಓಗು..ಓಗು.."
"ಮಂಕ..ನಿನ್ನೂ ಕರ್ದವ್ರೆ ಓಗು... ನಿಂಗೂ ಮಗನ್ ಓದ್ಗೆ ದುಡ್ ಕೊಡ್ಬೌದು..ಓಗು.." ಅಂತ ಹೇಳ್ತಾ...ಎಂಕ್ಟ ಬ್ಯಾಂಕ್ ಕಡೀಕ್ ಒಂಟ...
ಮೇಷ್ಟ್ರು...ಮಂಕನ್ನ ಸಾವ್ಕಾರ್ರ ಹಜಾರಕ್ ಕಳ್ಸಿ ..ಮುಸಿ ಮುಸಿ ನಗ್ತಾ ಶಾಲೆ ಕಡೆ ಒಂಟ್ರು....
ಭೇತಾಳ ಕತೆ ನಿಲ್ಸಿ...ಈಗ ಯೋಳು...ಓದಿರೋ ಮೇಷ್ಟ್ರೇ ತಪ್ ಮಾಡ್ ಬೌದಾ.. ಅವ್ರು ಮಾಡಿದ್ದು ಸರಿನಾ...??
ಈಗ ನೀವು ಹೇಳಿ... ಮೇಷ್ಟ್ರು ಮಾಡಿದ್ದು ಸರಿನಾ? ಸಾವ್ಕಾರ ಮಾಡಿದ್ದು ಓಕೆನಾ..??
ನಾನು ಹೇಳಿದರೆ, ಬೇತಾಳ ಮತ್ತೇ ಓಡಿ ಹೋಗಿ ಮರ ಸೇರಿಕೊಳ್ಳುತ್ತೆ ಅನ್ನೋ ಹೆದರಿಕೆ ನನಗೆ, ಜಲನಯನ!. ಬೇತಾಳ ಇಲ್ಲೇ ಇರಲಿ, ಇನ್ನಷ್ಟು ಕತೆಗಳನ್ನು ಹೇಳಲಿ, ವಿಕ್ರಮ ಸುಸ್ತಾಗಲಿ ಎನ್ನೋದೆ ನನ್ನ ಬಯಕೆ!
ReplyDeleteಧನ್ಯವಾದ ಸುನಾಥಣ್ಣ... ಹೌದು ಬ್ಲಾಗ್ ಕೊರಗಿದೆ ಈ ಮಧ್ಯೆ..ವಾಟ್ಸಪ್ಪು, ಫೂಸ್ಬುಕ್ ಎಲ್ಲಾ ಸೃಜನಶೀಲ ಬರವಣಿಗೆಯನ್ನು ನುಂಗಿವೆ...ಅಥವಾ ನಾವೇ ಥಳುಕಿಗೆ ಮಾರುಹೋಗಿದ್ದೇವೆ ಎನ್ನಬೇಕು.. ಇನ್ನು ಮೇಲೆ ಹೆಚ್ಚು ಬಳಸಲು..ಬರೆಯಲು ಪ್ರಯತ್ನಿಸುವೆ.
Delete