Friday, December 29, 2017

ನಮ್ಮ ಕನ್ನಡಿ - Our Mirror

ಮಗಳ (ಸುರಯಾ ನೂರ್) ಕವನದ ಭಾವಾನುವಾದ ಮಾಡುವ ಸಂತಸ ನನಗೆ...ಗೊತ್ತಿಲ್ಲ ಎಷ್ಟರ ಮಟ್ಟಿಗೆ ಸಫಲನೋ ನಾನು..ನೀವೇ ಹೇಳಿ ಸ್ನೇಹಿತರೇ....
Very Good Morning Friends,
I wish to share the poem my daughter composed and recited
(26th Dec 2014) at the Writer's Forum of Kuwait. My Kannada transversion for you as well.


Our Mirror

I am not one,
That you find on a wall.

I am not one,
That you buy in a mall.
I do not shatter,
I’m not weak.
I have life,
I do, Seek.
Through the generations, Young ladies
Have a bad habit.
They invariably blame me,
Like I’m a bandit.
They shout and they scream,
Spewing rude comments at me.
But I have done naught,
Even the people of yore agree.
I do compliment,
When you are beautiful.
But, when you turn rotten,
I am but kind, Just truthful.
I try to tell you,
You don’t wish to listen.
Your mistake becomes my mistake,
You shout and I can only be silent.
Humans, They always listen,
To the shiny devil in front of them.
And they forget to ever look back,
To the desperate angel within them.
I am born,
When you are created.
I am gone,
When you are destroyed.
I always walk along
side you,
Beside you on your rocky path.
You never notice,
Yet, you always shower me with your wrath.
I’m invisible,
Or so you think.
If you just opened your eyes,
You could see what I think.
In whatever you do,
You say ‘I’.
I wonder when it changed,
It was never ‘I’.
We work as one,
One denies the other.
We will always be one,
Never to be separated.
That’s why in your world,
It has always been ‘I’.
And that’s why in the real world,
It has never been ‘I’.
But ‘we’.
--Suraiya Noor Fathima

ನಮ್ಮ ಕನ್ನಡಿ

ಹಾಗೆ ನಾನಲ್ಲ
ಗೋಡೆಯ ಮೇಲೆ ನೀವಂದುಕೊಂಡಂತೆ,
ಹಾಗೆ ನಾನಲ್ಲ
ನೀವಂಗಡಿಯಲಿ ಕೊಂಡಂತೆ,
ನಾ ಚೂರಾಗುವುದಿಲ್ಲ,
ನಾ ಅಬಲೆಯಲ್ಲ.
ನನಗೂ ಜೀವವಿದೆ,
ಆಶಯವೂ ನನ್ನದು,
ತಲೆತಲಾಂತರದ ನೀರೆಯರ
ಕೆಟ್ಟ ಅಭ್ಯಾಸ-
ದೂರುವುದು ನನ್ನನು
ನಾನೊಬ್ಬ ದರೋಡೆಗೈವನೆಂದು,
ಕಿರಿಚು ಕೂಗಾಟ
ಹೀಗಳಿಕೆ ತೆಗಳಿಕೆ ನನ್ನೆಡೆಗೆ.
ನಾ ಮಾಡಿದ್ದೇನೂ ಇಲ್ಲ,
ಹಿಂದಿನವರಿಗೂ ಒಪ್ಪಿತವಿದೆ
ನಾ ದಿಟಸ್ಪಂದಿಯೆಂದು,
ನೀವು ನಿಜ ಸುಂದರಿಯರಾದಾಗ
ಕೊಳೆತು ನಾರಿದರೆ ನೀವು, ನಾ
ಸತ್ಯವಾದಿಯೆಂದೂ,
ಅರುಹಲೆತ್ನಿಸಿರುವೆ..
ಕೇಳುವ ಮನಸಿಲ್ಲ ನಿಮಗೆ
ನಿಮ್ಮ ಕೇಡು -ನನ್ನಲ್ಲಿ ಕೇಡು!
ನಿಮ್ಮ ಕೂಗಾಟ ನಾನು ತಟಸ್ಥ,
ಮಾನವರು ಸದಾ ಆಲಿಸುವರು,
ಎದುರಿಗಿನ ನಯ ಸೈತಾನನ,
ಮರೆತೇಬಿಡುವರು ತಮ್ಮೊಳಗಿನ
ದಿಟ ದೈವತ್ವದಾತ್ಮವನು
ನನ್ನ ಹುಟ್ಟಾಯಿತು
ನಿನ್ನುಗಮಾಗಮದೊಂದಿಗೆ,
ನಾನಿಲ್ಲದಾಗುವೆ- ನೀ
ನಿನ್ನಿರವ ಕಳೆದುಕೊಂಡಾಗ,
ನಿನ್ನೊಡನಾಡಿ ನಾ ನಡೆವೆ ಜತೆಗೆ
ಪಕ್ಕ ಪಕ್ಕವೇ ಕಲ್ಮುಳ್ಳೊತ್ತುವಲ್ಲೂ,
ಗಮನಿಸಲೇ ಇಲ್ಲ ನನ್ನಿರವ
ನೀರವತೆಯ ಸುರಿವೆ ಹಾಕುವೆ ಶಾಪ,
ನಾನು ಅಜೇಯ, ಹಾಗೆಂದು
ನೀನಂದುಕೊಂಡೆ,
ಕಣ್ತೆರೆದು ನೋಡಬೇಕಿತ್ತು ಒಮ್ಮೆ
ಕಾಣಬಹುದಿತ್ತು ನನ್ನೊಳಗಿನ ಬಲ್ಮೆ,
ಏನೇ ಮಾಡಿದರೂ ನಿನ್ನದೇ ಆರ್ಭಟ
ಕೂಗಾಡುವೆ ನಾನು -ನಾನು,
ಗೊತ್ತಾಗಲೇ ಇಲ್ಲ ..ನನಗೆ
“ನಾವು” ಹೇಗಾಯಿತೋ  “ನಾನು”!!
ನಾವು ಆಗಿದ್ದೆವು “ಏಕ” ಆಗಿರಲಿಲ್ಲ “ಏಕ”,
ಆದರೂ ನಿನ್ನಲೋಕವು ನಾನು
ಎನ್ನುವ  ”ಏಕ”
ದಿಟದಲ್ಲಿ ನಾವು ನಾವಾಗಿದ್ದೆವು- ಅನೇಕ...

ನಾನು -ಹೋಗಿ, ನಾವು.

6 comments:

  1. ಇದು detail ಆಗಿ ಓದಲೇ ಬೇಕಾದ ಕವನ.
    ಮೂರು ಓದುಗಳಿಗಾದರೂ ಸಿಗಬಲ್ಲದೇ ಹಿಡಿತಕೆ ಎಂಬುದನು ನೋಡಬೇಕು.
    ಜನಾಬ್ ಹಮೇ ಕುಚ್ ಟೈಂ ಚಾಹಿಯೇ...
    ಅಪ್ಪ ಮಗಳಿಗೆ ಜೈಹೋ...

    ReplyDelete
  2. ನಮ್ಮ ಮಮತೆಯ ಸುರೈಯಾ ಬರೆದ ಕವನ ಅದ್ಭುತವಾಗಿದೆ. ಎಷ್ಟೆಲ್ಲ ತತ್ವವನ್ನು ಒಂದು ಪುಟ್ಟ ಕನ್ನಡಿಯಲ್ಲಿ ಅಳವಡಿಸಿದ್ದಾಳಲ್ಲ. ಕವನದ rhyme and flow ಮನೋಹರವಾಗಿವೆ. ಅವಳಿಗೆ ೨೦೦% ಮಾರ್ಕ್ಸ್. ನಿಮ್ಮ ಅನುವಾದವೂ ಸಹ ಚೆನ್ನಾಗಿದೆ. ಮೂಲಕವನದ ಅರ್ಥ ಹಾಗು ಗತಿಯನ್ನು ಸರಿಯಾಗಿ ಹಿಡಿದಿದ್ದೀರಿ. ನಿಮಗೆ ೧೦೦% ಮಾರ್ಕ್ಸ್!

    ReplyDelete
    Replies
    1. ಸುನಾಥಣ್ಣ ನಿಮ್ಮಿಂದ ೧೦೦ ಪಡೆದ ನಾನು ಧನ್ಯ...೨೦೦ ಪಡೆದ ಮಗಳೋ ಪರಮ ಧನ್ಯಳು...ನಿಮ್ಮ ಆಶೀರ್ವಾದಕ್ಕೆ ನಮನ

      Delete
  3. ಜ್ಞಾನವನ್ನು ಎರಕ ಹೊಯ್ದು ಪೊರೆದ ಅಜಾದ್ ಸಾರ್ ಹಾಗು ಅವರ ಶ್ರೀಮತಿಯವರ ಮುದ್ದಿನ ಕನಸಿನ ಬೆಳಕು ಇಲ್ಲಿ ತನ್ನ ಜ್ಞಾನವನ್ನು ಪ್ರಜ್ವಲಿಸಿದೆ .ಅದ್ಭುತ ಕವಿತೆ, ತುಂಬಾ ಇಷ್ಟಾ ಆಯ್ತು.

    ReplyDelete