Wednesday, April 29, 2009

ಚುಟುಕಗಳ ಮತ್ತೊಂದು ಸರಣಿ

ಕನಸು
ಮುಚ್ಚಿದ ಕಣ್ಣ
ಹಚ್ಚಿದ ಬಣ್ಣ
ಕೊಚ್ಚಿಹೋಯಿತೇಕೆ?
ತೆರೆದರೆ ಕಣ್ಣ


ಲವ್ವು
ತಾಳ ತಪ್ಪಿದ ಬಡಿತ
ಹೃದಯ ಬಿಚ್ಚಿ ಮಿಡಿತ
ಕಣ್ಣ-ಕಣ್ಣು ಕಲೆತಾಗ
ತುಟಿ ಎರಡಾಗದೇ ಹೊಮ್ಮಿದ್ದು

ಗಾಯ
ಸ್ವಲ್ಪವೇ ಏಕೋ ಉಜ್ಜಿಕೊಂಡೆ
ಹಿತವೆನಿಸಿತು ಕೆರೆದುಕೊಂಡೆ
ಈಗ ಅನಿಸುತಿದೆ-ತಲೆಚಚ್ಚಿಕೊಂಡೆ
ನಾನೇಕೆ ಕೈಯಾರೆ ಗಾಯ ಮಾಡಿಕೊಂಡೆ ?

ಟ್ವಿಸ್ಟರ್
ನ್ಯಾಯಾನ್ಯಾಯದ ತಕ್ಕಡಿ
ಅನ್ಯಾಯದೆಡೆಗೆ ವಾಲುವುದು
ಅನ್ಯಾಯವಾದಿಯ
ನ್ಯಾಯವಲ್ಲದ
ಅನ್ಯಾಯವನ್ನು
ನ್ಯಾಯಾಸ್ಥಾನದ
ನ್ಯಾಯಾಧೀಶರು
ಅನ್ಯಾಯವಾದರೂ
ನ್ಯಾಯವಲ್ಲದ
ಅನ್ಯಾಯವನ್ನು
ನ್ಯಾಯವೆಂದು
ಎತ್ತಿ ಹಿಡಿದಾಗ

ವಿಪರ್ಯಾಸ
ಹೆಣ್ಣನ್ನು
ಅಬಲೆಯೇ
ಅಬಲೆಯೆಂದು
ಬಣ್ಣಿಸುವುದು.

ಸರಣಿ
ಅಂದು - ಇಬ್ಬರದೂ ಮಾತು, ಇನಿಮಾತು
ಪ್ರೇಮಿಗಳು
ನಂತರ - ಅವನದೇ ಮಾತು ಸವಿ ಮಾತು
ಮಧುಚಂದ್ರ-ರಾತ್ರಿ
ಆಮೇಲೆ- ಇವಳದೇ ಮಾತು, ಇವನು ಮೂಕ
ಸಂಸಾರದ ಪ್ರಾರಂಭ
ತದನಂತರ- ಇಬ್ಬರದೂ ಮಾತು..ಅಲ್ಲಲ್ಲ ಕಿರುಚಾಟ
ಸಂಸಾರದಲಿ ಜಂಜಾಟ
ಈಗ- ಮೌನ, ಇಬ್ಬರೂ
ವೃದ್ಧಾಶ್ರಮದಲಿ...
ಇವರು ಮಾಡಿದ್ದನ್ನು
ಮುಂದುವರೆಸಿದ್ದಾರೆ ಅವರ ಮಕ್ಕಳು
ತಂತಂಮ್ಮ ಮನೆಗಳಲ್ಲಿ

5 comments:

  1. sir ella ondakinta ondu chutukugalu ha ha ha bahala chennagide...
    heege barita iri

    ReplyDelete
  2. ಬಹಳ ಚೆನ್ನಾಗಿದೆ..ನಿಮ್ಮ ಚುಟುಕುಗಳು, ಅದರಲ್ಲಿರುವ ಭಾವಗಳು! ಹೆಣ್ಣನ್ನು ಅಬಲೆಯೇ ಎಂದು ಬಣ್ಣಿಸುವುದು ಒಂದು ವಿಪರ್ಯಾಸ ...ನಿಜಕ್ಕೂ ಹೌದು, ! ಆದರೆ ಏನ ಮಾಡಲೀ..ಮುಂದಿನ ತಲೆಮಾರುಗಳಲ್ಲೂ ಇದು ಬದಲಾವಣೆ ಕಾಣೋ ಲಕ್ಷಣಗಳು ಕಾಣ್ತಿಲ್ಲ ಸರ್...(:)
    -ಧರಿತ್ರಿ

    ReplyDelete
  3. ನನಗೆ ಚುಟುಕಗಳಿಗೆ ಸ್ಪೂರ್ತಿ- ಡುಂಡಿರಾಜರು
    ನಮಗಿಂತ ಎರಡುವರ್ಷ ಸೀನಿಯರ್ ಇವರು ಬೆಂಗಳೂರಿನ ಕೃಷಿ ವಿ.ವಿ. ಯ ಧಾರವಾಡ ಕ್ಯಾಂಪಸ್ಸಿನಲ್ಲಿ ಡುಂಡಿಯವರು ಎಂ ಎಸ್ಸಿ ಮಾಡುವಾಗ ನಾವು ಹುಡುಗು ಹುಡುಗು ಮನಸ್ಸಿನಲ್ಲಿ
    ಬಿಎಫೆಸ್ಸಿ (ಅದೇ ವಿ.ವಿ.ಯ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ) ಮಾಡುತ್ತಿದ್ದ ಸಮಯ, ನಂತರ ಇವರು ಬ್ಯಾಂಕ್ ನೌಕರಿಯಲ್ಲಿದ್ದಾಗ ನೇರ ಭೇಟಿಯಾಗದಿದ್ದರೂ ಅವರ ಒಳ್ಳೆಯ ಮಿತ್ರ ಡಾ.ಎಸ್.ಎಂ.ಶಿವಪ್ರಕಾಶ್ (ಈಗ ಮಂ.ಮೀ.ಮವಿ ದಲ್ಲಿ ಪ್ರಾಧ್ಯಾಪಕರು) ನನಗೂ ಮಿತ್ರ ನಾದ್ದರಿಂದ ಅವರ ಚುಟುಕಗಳನ್ನು ಹಸಿ-ಹಸಿ..(fresh) ಆಗಿದ್ದಾಗೆ ಓದಿ ಹೇಳುತ್ತಿದ್ದರು..

    ಮನಸು ಮತ್ತು ಧರಿತ್ರಿ, ಇಬ್ಬರಿಗೂ -

    ಜ಼ರ್ರ ನವಾಜ಼ಿ ಕಾ ಶುಕ್ರಿಯಾ
    ಜೋ ಆಪನೇ ಕಿಯಾ
    ಏಕ್ ಜ಼ರ್ರ ಥಾ ಓ
    ಉಸ್ಕೋ ಕಹಾಂಸೆ ಕಹಾಂ
    ಬನಾಕರ್ ರಖ್ ದಿಯಾ....

    ಹೇಗೆ..? for a change..ಉರ್ದು--ಥರ ಉದುರು ಉದುರು ಶಾಯರಿ..??

    ReplyDelete
  4. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಎನ್‍ಲಾರ್ಜ್ ಮಾಡಬೇಕಾಗಿರುವ ಫೋಟೊದ ಮೇಲೆ ರೈಟ್ ಕ್ಲಿಕ್ ಮಾಡಿ properties ಆಯ್ಕೆ ಮಾಡಿಕೊಂಡು ಮುಂದುವರಿಯಿರಿ

    ReplyDelete
  5. ಮೇಡಮ್,

    ನಿಮ್ಮ ಚುಟುಕು ಕವನಗಳು ತುಂಬಾ ಚೆನ್ನಾಗಿವೆ...ಅದರಲ್ಲಿ ಆಡಗಿರುವ ಭಾವಾರ್ಥಗಳನ್ನು ಚೆನ್ನಾಗಿ ಪ್ರತಿಬಿಂಬಿಸಿದ್ದೀರಿ...
    ಧನ್ಯವಾದಗಳು..

    ReplyDelete