Saturday, April 18, 2009

XX ಮತ್ತು XY









ಮಗು
ಕರುಳಬಳ್ಳಿಯ
ಟಿಸುಲೊಡೆದ ಮೊಗ್ಗು
ತಾಯಿ
ಆ ಮೊಗ್ಗು
ತನ್ನೊಡಲ ಮಮತೆಯ
ಧಾರೆಗೆ
ದಾರಿಯಾದಾಗ
ಅಜ್ಜಿ
ತನ್ನ ಮಮತೆಯ ಸೆಲೆ
ಬತ್ತದೇ ಬಾಡದೇ
ಇನ್ನೊಂದು ಜೀವಕೆ
ಕಾರಣವಾದಾಗ



ಮಗ
ತಾಯ-ತಂದೆಯ
ಒಂದೊಂದು ಅಂಶ
ಪಡೆದಾಗ
ಅಪ್ಪ
ತನ್ನಪ್ಪನನ್ನು
ಧಿಕ್ಕರಿಸಿ, ಪ್ರೇಮಿಸಿ
ವರಿಸಿ, ತನ್ನದೇ ಜಾತಿಯ
ಜನ್ಮವಾದಾಗ
ಅಜ್ಜ
ಮುದಿಸಿ, ವ್ಯಥಿಸಿ
ತನ್ನ ಎರಡನೇ ತಲೆಮಾರಿನ
ಗಂಡು ಕೂಸನು ಕಾಣಲು
ವೃದ್ಧಾಶ್ರಮದ
ಅನುಮತಿ ಪಡೆದಾಗ

4 comments:

  1. chennagide...taata ajji appa amma makkalu ellaru bandiddare kavanadalli..istavaayitu kavana..

    ReplyDelete
  2. ಮಧುರವಾದ ಬಾಂಧವ್ಯಗಳು ಹುಟ್ಟುವುದು, ಬೆಳೆಯುವುದು, ಹಲ ರೂಪ ಪಡೆಯುವುದು ತಂದೆ, ಮಗ, ಮೊಮ್ಮಗ ಹೀಗೆ ತಲೆಮಾರುಗಳು ಒಟ್ಟಿಗೆ ಇರುವಾಗ
    ಅಂತಹ ಅವಿಭಕ್ತ ಕುಟುಂಬ ಸಂಸ್ಕೃತಿ ಈಗ ಉಳಿದಿಲ್ಲದಿರುವುದೇ ಈ ಬಾಂಧವ್ಯಗಳ ನಿಜಾರ್ಥಗಳು ಇಂದಿನ ಪೀಳಿಗೆಗೆ ಅರ್ಥವಾಗುವುದು ಸುಲಭವಲ್ಲ
    ಮನಸಿನ ಅನಿಸಿಕೆಗೆ..ಧನ್ಯವಾದಗಳು

    ReplyDelete
  3. ತಲೆಮಾರುಗಳ ಆ ಮಧುರ ಸಂಬಂಧಗಳನ್ನು ಇಷ್ಟು ಚೆನ್ನಾಗಿ ವಿವರಿಸಿದ್ದೀರಿ ಸರ್. ತುಂಬಾನೇ ಇಷ್ಟವಾಯಿತು. ಪುಟ್ಟ ಪದದಲ್ಲಿ ದೊಡ್ಡ ಅರ್ಥವನ್ನು ಹೇಳುವುದೇ ನಿಮ್ಮ ಬರವಣಿಗೆಯ ಶಕ್ತಿ. ಇನ್ನಷ್ಟು ಬರೆಯಿರಿ.
    -ಧರಿತ್ರಿ

    ReplyDelete
  4. ಧರಿತ್ರಿಯವರೇ, thanks
    ಈಗೀಗ ಒಡೆದು ಚಿತ್ರಾನ್ನ ಆಗ್ತಾ ಇರೋ ಪರಿವಾರ-ಕುಟುಂಬ ಪದ್ಧತಿಗಳು ನೋಡಿದರೆ ಮುಂದೊಂದುದಿನ
    ನಮ್ಮ ಮಕ್ಕಳಿಗೆ..ಅಜ್ಜ-ಅಜ್ಜಿ ಅಂದ್ರೆ ಏನು ಅಂತ ವಿವರಿಸಬೇಕಾಗಬಹುದು...
    ನಿಮ್ಮ ಗದ್ಯ ಶೈಲಿಯ ನೈಜ ನಿರೂಪಣೆ ಅದ್ರಲ್ಲೂ ಇತ್ತೀಚಿನ ನಿಮ್ಮ ಸಂಬಂಧಗಳ ಕುರಿತಾದ ಬಲಗು-ಬರಹ ತುಂಬಾ ಇಷ್ಟವಾಯಿತು.
    ನಮ್ಮ ಮನೆಗೆ ಬರುತ್ತಿರಿ..ಹಾಗೂ ಸ್ನೇಹಿತರ್ನ್ನೂ ಕರೆತನ್ನಿ...

    ReplyDelete