Monday, May 4, 2009


ವೃಕ್ಷ-ಪ್ರೇಮ
ನೇಪಥ್ಯ ಮುಸುಕು
ಕಂಡಂತೆ ಈ ನಸುಕು
ಬೋಳು ಮರ ನಿಂತಿದೆ
ಆದರೂ ಹೆಮ್ಮೆ ಅದಕೆ
ನಿಂತಿರುವೆನೆಂದು
ಭರವಸೆಯ ಬಿಮ್ಮು
ಚಿಗುರಿ ಹಸಿರ ಹೊದ್ದು
ನಿಲುವೆನೆಂದು
ಇಲ್ಲವೇ ‘ಸಾಥ್‘ ನೀಡಲು
ದೂರ-ದೂರ
ಅಲ್ಲೊಂದು ಇಲ್ಲೊಂದು
ಹೆಸರಿಗೊಂದು ಮರ
ಹಸಿರೇ ಉಸಿರೆಂದು
ಮನಗಾಣಲಿ ಮನು
ಉಸಿರು ನಿಂತರೆ
ಅದು ತನ್ನದೇ ಅಂತ್ಯವೆಂದು
ಬೆಳೆಯಲಿ ಮಕ್ಕಳಲೂ
ಹಸಿರು-ಪ್ರೇಮ
ನಾಂದಿಯಾಗಲಿ ಹುಟ್ಟಲು
ಮಾನವನಲಿ
ವೃಕ್ಷ-ಪ್ರೇಮ
ನಾನು
ನಾನು ಮರ
ನಾನಮರ
ವಿವೇಚನೆಯಿರಲಿ
ಓ ನರ
ಹಾಕೀಯೆ ಕೊಡಲಿ
ನಿನ್ನ ಕಾಲಿಗೆ ನೀನೆ
ನಿನ್ನ ವಿಷದುಸಿರು
ನನಗುಸಿರು, ಈ ಹಸಿರು
ಹೋದರೆ ನಿಲ್ಲುವುದೋ
ಮರುಳೇ ನಿನ್ನುಸಿರು
ಇದುವೇ ನಿಜ
ಕಾಡು, ಕಾನನ ವನ
ಆಗುತಿವೆ ಕುರುಚಲು ಬನ
ಹಸಿರು ಹೊದ್ದು ಮೇರುಗಳು
ಎದ್ದು ಹೋಗಿವೆ
ಆಗಿ ಕೊರಕಲು ಗಣಿಗಳು
ಮಿತಿಯಿರಬೇಕು ಎಲ್ಲದಕೂ
ಇತಿಯರಿತು ಕೆಡಹುವುದಕೂ
ಮರಗಳು ಬಿದ್ದರೆ
ಏಳುವಂತಿರಬೇಕು
ಹೊಸತು,
ಎಚ್ಚೆತ್ತುಕೋ ಮನುಜ
ಹಸಿರೇ ಉಸಿರು
ಇದುವೇ ನಿಜ

5 comments:

  1. ನಿಮ್ಮ ಕವನ ತುಂಬಾ ಚೆನ್ನಾಗಿವೆ.. ನಾನು ಮರ ಅದು ನನ್ಗೆ ತುಂಬಾ ಇಷ್ಟವಾಯಿತು... ಹಸಿರ ಸಿರಿ ಮರೆಯಾಗುತಿದೆ.... ಮುಂದೊಂದು ದಿನ ಬರಡಾಗುವ ದಿನ ಹತ್ತಿರವೇ ಇದೆ... ಹಸಿರ ಉಳಿಸಲು ಎಲ್ಲರೊ ಕೈಜೋಡಿಸಿಬೇಕಿದೆ ಅಲ್ಲವೇ..?
    ಮತ್ತಷ್ಟು ಕವನಗಳು ಬರಲೆಂದು ಆಶಿಸುತ್ತೇವೆ.
    ಧನ್ಯವಾದಗಳು...

    ReplyDelete
  2. ಜಲನಯನ ಮೇಡಮ್,

    ನಾನು ನಿಮ್ಮ ಬ್ಲಾಗನ್ನು ಲಿಂಕಿಸಿಕೊಂಡಿಲ್ಲದ್ದರಿಂದ ನಿಮ್ಮ ಬ್ಲಾಗ್ ನನಗೆ ತಿಳಿಯಲಿಲ್ಲ...ಈಗ ಲಿಂಕಿಸಿಕೊಂಡಿದ್ದೇನೆ...
    ಮತ್ತೆ ಕವನ ಚೆನ್ನಾಗಿದೆ..
    ನಾನು ಮರ..ನಾನಮರ..ಈ ಪದ ಪ್ರಯೋಗ ಇಷ್ಟವಾಯಿತು...
    ಪ್ರಕೃತಿಯನ್ನು ಉಳಿಸಲು ಬರೆದ ಕವನ ಚೆನ್ನಾಗಿದೆ...

    ಬಿಡುವು ಮಾಡಿಕೊಂಡು ಇನ್ನುಳಿದ ಕವನವನ್ನು ಓದುತ್ತೇನೆ...
    ಧನ್ಯವಾದಗಳು..

    ReplyDelete
  3. ಕವನ ಚೆನ್ನಾಗಿದೆ. ನಿಮ್ಮ ಬ್ಲಾಗನ್ನು ಕೆ೦ಡಸ೦ಪಿಗೆ ಯವರು ದಿನದ ಬ್ಲಾಗ್ ಅ೦ಕಣದಲ್ಲಿ ಪರಿಚಯಿಸಿದ್ದಾರೆ.Congrats ನನ್ನ ಬ್ಲಾಗಿಗೂ ಬ೦ದು ಹೋಗುತ್ತಿರಿ.

    ReplyDelete
  4. ಮನಸಿನ ತುಂಬಾ ಭಾವನೆಗಳು, thanks, ಮನುಗೆ ನಮ್ಮ ಶುಭಾಷಯ ತಿಳಿಸಿದಿರೆಂದುಕೊಳ್ಳಲೇ..?
    ಶಿವು ಮನೆಗೆ ಬಂದದಕ್ಕೆ ಬಹಳ ಖುಷಿ ಅನ್ಸುತ್ತೆ..ಬರ್ತಾ ಇರಿ ಕವನವನ್ನು ಮೆಚ್ಚಿದಕ್ಕೆ ಮತ್ತೆ ...thanks,
    ಪರಾಂಜಪೆಯವರೇ, ಧನ್ಯವಾದಗಳು ಸಿಕ್ಕಿಸಿಕೊಂಡಿದ್ದಕ್ಕೆ (ತಮಾಷೆ ಅನಿಸುತ್ತೆ ಅಲ್ಲವಾ..ಆದ್ರೆ ಸತ್ಯ ಅಲ್ಲವೇ..link ಗೆ ಕನ್ನಡಾರ್ಥ..?)
    ಬರುತ್ತಿರಿ.
    ನಿಮ್ಮೆಲ್ಲರಿಗೂ ಧನ್ಯವಾದಗಳು ಪ್ರತಿಕ್ರಿಯೆಗಳಿಗೆ...
    ಶಿವು ಅವರ ಮೊದಲ ವಾಕ್ಯ ನೋಡಿ ಮೃದುಮನಸು ಮುಗುಳ್ನಗುತಿರಬೇಕು....ಹಹಹ

    ReplyDelete
  5. ನಿಮ್ಮ ಕವನಗಳನ್ನು ಓದಿ ತುಂಬಾ ಖುಷಿಪಡ್ತೀನಿ..ಖುಷಿಯಿಂದ ಅನುಭವಿಸ್ತೀನಿ. ಆದ್ರೆ ನಾನು ಲೈಫಲ್ಲಿ ಒಂದೇ ಒಂದು ಕವನ ಬರೆದಿಲ್ಲ..ಅದಕ್ಕೆ ಏನೂ ಹೇಳಕ್ಕೆ ಬರಲ್ಲ
    -ಧರಿತ್ರಿ

    ReplyDelete