Thursday, May 14, 2009

ಕರ್ತವ್ಯ

ನೆನೆಪುಮಾತ್ರದಿ
‘ಚುರ್‘ ಎಂದು ಸುಟ್ಟಾವು
ಅಂಗಾಲು
ಮರಳುಗಾಡೆಂದರೆ
ಸ್ಮೃತಿಯಲಿ ಹಾಯುವುವು
ಒಂಟೆ, ಪಾಪಾಸು ಕಳ್ಳಿ,
ದಳ್ಳುರಿಬಿಸಿಲ ಮರಳ
ಮೇಲಿನ ಬಳ್ಳಿ.
ಆದ್ರೂ ಇಲ್ಲಿ
ತೇಲಾಡುವರು
ಹಣದ ಹೊಳೆಯಲ್ಲಿ
ನೆರಳಿಲ್ಲ ಮರಳಲ್ಲಿ
ಆದರೂ...
ನೋಟುಗಳ ಚಾ-ಮರ
ಕುಡಿನೀರಿಗೆ,
ವಿದ್ಯುತ್ತಿಗೆ, ಸವಲತ್ತಿಗೆ
ಇಲ್ಲ ಬರ ಇಲ್ಲಿ.
ನಮ್ಮಲ್ಲಿ....
ಎಲ್ಲ ಇದೆ
ಪ್ರತಿಭೆ, ರವಿಪ್ರಭೆ
ಹಸಿರು, ಅನ್ನನೀಡೋ ಬಸಿರು,
ಅಗಾಧ ಜಲ
ನಿಧಿಯದಿರಿನ ನೆಲ
ಆದರೂ ಏಕೆ??
ರೈತ ಸುಣ್ಣವಾಗಿರುವ ಸೋತು
ನಿರುದ್ಯೋಗಿ-ಉದ್ಯೋಗಿ
ಬೀಳುವುದು ಕೊಟ್ಟು
ಹಗ್ಗಕೆ ಕೊರಳ ಜೋತು
ದಿನಗಳೆವ-ಕೊಳ್ಳೆ ಹೊಡೆದು
ತುಂಬಿಕೊಳುವ
ಬರಿ ಅಶ್ವಾಸನೆಯ ಪುಢಾರಿಯದು
ಕೇವಲ ಮಾತು.
ಬರಬೇಕು......
ಹೊಣೆಗಾರಿಕೆ
ಮೊದಲು ನಾಡು
ದೇಶದ ಹೆಗ್ಗಳಿಕೆ
ಎಚ್ಚೆತ್ತುಕೋ ಗೆಳೆಯ
ತೆಗೆದು ಹೊರಹಾಕು
ನೊಣವ ಹಾಲಿಂದ
ವಿಷಮಿಸುವವರ
ಬೆರೆಸಿ ಹಾಲಾಹಲವ
ಮೀಸಲಿಸಿ ಧರ್ಮವ
ಮನ, ಮನೆಗಳ ಬೆಳಕಿಗೆ
ಪಸರಿಸಿ ನಿಜ ಕರ್ಮವ
ನಾಡು-ರಾಷ್ಟ್ರದ
ಏಳಿಗೆಗೆ.

4 comments:

  1. super ide sir kavana.....naaviro ooru neralila marala....bisidegeyalle iddeevi allave..?

    ReplyDelete
  2. ಮನಸು ಅವರೇ, ಇಲ್ಲಿನ ಬಿಸಿಲು ನಮಗೆ ಅಸ್ಟಾಗಿ ಅನುಭವಕ್ಕೆ ಬಂದಿಲ್ಲ ಅನ್ನೋದೇ ನನ್ನ ಅನ್ನಿಸಿಕೆ, ಹೊರಗಡೆ ರಟ್ಟೆ-ಮುರಿ ಕೆಲಸ ಮಾಡೋರನ್ನ ನೋಡಿದ್ರೆ ಆ ಧಗೆ ಎಂಥದ್ದಿರಬಹುದು ಎಂದು ತಿಳಿಯುತ್ತೆ. ಒಮ್ಮೆ ಆ ಅನುಭವ ನನಗೂ ಆಗಿತ್ತು...(ಬರೀ ೧೫ ನಿಮಿಷ..ಸಹಿಸಲಾಗಲಿಲ್ಲ..) ಇನ್ನು ಕಷ್ಟ ಜೀವಿಗಳ ಬವಣೆ ಹೇಗಿರಬಹುದು..??
    ನಮ್ಮಲ್ಲೂ ಸೆಕೆ ಹೆಚ್ಚಾಗ್ತಾಯಿದೆ ಅಂತ ಗೊತ್ತಾಗುತ್ತೆ...ಇಲ್ಲ ಅಂದ್ರೆ ಬೆಂಗಳೂರಲ್ಲಿ ೩೮-೩೯ ಡಿಗ್ರಿ ಉಷ್ಣಾಂಶ...!!!!
    thanks ನಿಮ್ಮ ಪ್ರತಿಕ್ರಿಯೆಗೆ

    ReplyDelete
  3. ನೀವು ಹೇಳ ಹೊರಟಿರುವುದು ಸರಿಯಾಗಿದೆ...ಏನು ಇಲ್ಲದೆ ಎಸ್ಟೋ ದೇಶದ ಜನ ಏನು ಇಲ್ಲ ಎಂಬ ಕೊರಗಿಲ್ಲದೆ ಇರುವುದರಲ್ಲೇ ಸಾಧಿಸಲು ಹೊರಟಿದ್ದಾರೆ.. ಆದರೆ ನಮಗೆ ಎಲ್ಲ ಇದ್ದು,,, ಇನ್ನು ಸೋಮಾರಿಗಳಾಗೆ ಇದ್ದಿವಿ ... ಯಾವಾಗ ಜವಾಬ್ದಾರಿ ಬರುತ್ತೋ ....ಗೊತ್ತಿಲ್ಲ....
    ಗುರು

    ReplyDelete
  4. ಗುರು, ಬಹಳ ದಿನಗಳ ನಂತರ ನಿಮ್ಮ ಪ್ರತಿಕ್ರಿಯೆ ಬಂದಿದೆ, ನೀವು ಹೇಳುವುದನ್ನೇ ಮತ್ತೆ ಮತ್ತೆ ಹೇಳ ಬೇಕು ಅನಿಸುತ್ತೆ...ನಮ್ಮ ನಾಡು, ನಮ್ಮ ದೇಶ ಅಂತ ಅಭಿವೃಧ್ದಿಕಡೆ ಗಮನ ಹರಿಸಿದರೆ ನಮ್ಮಲ್ಲಿರುವ ಪ್ರತಿಭೆಗೆ ಇದೇನೂ ದೊಡ್ಡದಲ್ಲ....thanks ನಿಮ್ಮ ಪ್ರತಿಕ್ರಿಯೆಗೆ

    ReplyDelete