ಆಲದ ಮರ, ಬೇರುಜಾಲದ ಮರ ಒಂದು ಜಾತಿಯ ಅತ್ತಿ, ಅಂಜೂರಗಳ ಗುಂಪಿನ ಮರ. ಇದನ್ನು ಬನಿಯ-ನ್ ಮರ ಎಂದು ಮೊದಲಿಗೆ ಪೋರ್ಚುಗೀಸರಿಗೆ ಪರಿಚಯವಾದದ್ದು, ಬಹುಶಃ ಅಖಂಡ ಭರತ ಖಂಡದ ಸಮಯದ ನಮ್ಮ ನೆಲಕ್ಕೆ ಸಂಬಂಧಿಸಿದ ಮರ ಎನ್ನಬಹುದು. ಬನಿಯ-ಎಂದರೆ ವ್ಯಾಪಾರಿ ಎಂದು ಗುಜರಾತಿ, ಹಿಂದಿ ಭಾಷಿಗರು ಹೇಳುವುದು ನಮಗೆಲ್ಲಾ ತಿಳಿದದ್ದೇ. ಗುಜರಾತಿಗಳು ಸನಾತನ ಕಾಲದಿಂದಲೂ ವ್ಯಾಪಾರಿಗಳಾಗಿಯೇ ಹೆಚ್ಚು ಪ್ರಸಿದ್ಧರು ಎಂದು ಇತಿಹಾಸ ಹೇಳುತ್ತದೆ.
ಇದು ಮೂಲತಃ ಪರಾವಲಂಬಿ ಸಸ್ಯ. ಇದರ ಹಣ್ಣು ಹಕ್ಕಿ ಪಕ್ಷಿಗಳ ಬಹು ಪ್ರಿಯ ಆಹಾರ, ಇದೇ ಕಾರಣದಿಂದ ಇದರ ಬೀಜ ಪ್ರಸಾರ ಪ್ರಮುಖವಾಗಿ ಪಕ್ಷಿಗಳ ಮೂಲಕ ಆಗುತ್ತದೆ. ಬೀಜಗಳ ಚೆಲ್ಲುವಿಕೆ ಅಥವಾ ಪಕ್ಷಿಗಳ ಮಲದ ಮೂಲಕ (ಬೀಜಗಳು ಬಹುಪಾಲು ಜೀರ್ಣವಾಗದೇ ವಿಸರ್ಜಿತವಾಗುವುದರಿಂದ) ವೃಕ್ಷಗಳ, ಬೆಟ್ಟ ಗುಡ್ಡಗಳ ಮುಂತಾದೆಡೆ ಅಂಕುರಿಸಿ..ಬೆಳೆಯುತ್ತದೆ. ಇತರ ವೃಕ್ಷಗಳ ಕಾಂಡ, ಪೊಟರೆಗಳು ಬೀಜಾಂಕುರ ಮತ್ತು ಸಸಿ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ, ಬೇರುಗಳನ್ನು ಕೆಳಮುಖವಾಗಿ ಹರಡುವ ಈ ಸಸಿ ನಿಧಾನವಾಗಿ ಬೆಳೆದು ಆ ಮೂಲಕ ಹರಡಲಾರಂಭಿಸಿ ಮೂಲ ಆಶ್ರಯ ನೀಡಿದ ಸಸ್ಯ ಅಥವಾ ವೃಕ್ಷ ಕಾಣದಾಗುತ್ತದೆ. ಒಮ್ಮೆ ಬೆಳೆದು ಮರವಾದ ಆಲ, ತನ್ನ ರೆಂಬೆಗಳನ್ನು ಭೂಮಿಗೆ ಸಮಾನಾಂತರವಾಗಿ ಹರಡುತ್ತದೆ, ಆ ರೆಂಬೆಯಿಂದ ಒಂದೆರಡು ಶಾಖೆಕೆಳಮುಖವಾಗಿ ಬೆಳೆಸಿಕೊಂಡು ನೆಲವೂರಿದ ಮೇಲೆ ಬೇರುಬಿಟ್ಟು ಆ ರೆಂಬೆ ಮತ್ತೊಂದು ಮರಕ್ಕೆ ಕಾಂಡವಾಗುತ್ತದೆ, ಕಾಂಡಗಳ ಬೆಳವಣಿಗೆ, ಹರಡುವಿಕೆ, ಮತ್ತೆ ಅವುಗಳಿಂದ ಬೇರುಗಳ ಪಸರುವಿಕೆ ಹೀಗೆ..ಮರ ಹೆಮ್ಮರವಾಗಿ ಹಲವಾರು ಎಕರೆ ಹರಡುತ್ತದೆ. ಆ ಕಾರಣದಿಂದಲೇ ಈ ಮರಕ್ಕೆ ಆಯಸ್ಸು ...ಬಹಳ ಹೆಚ್ಚು....ಚಿರಾಯು ಎಂತಲೇ ಹೇಳಬಹುದು.
ಇಂತಹ ಆಲದ ಮರ ಏಕೆ ಬೀಳುತ್ತದೆ..? ಒಂದು ಸಾಧ್ಯತೆ ಹೊಸ ಕಾಂಡಗಳ ಬೆಳವಣಿಗೆ ಬಲವಂತವಾಗಿ ಅಥವಾ ಇತರೆ ಕಾರಣಗಳಿಂದ ಕುಂಠಿತಗೊಂಡರೆ, ಮೂಲ ಕಾಂಡಗಳ ಶಕ್ತಿ ಕುಸಿಯುತ್ತದೆ (ಹೊಸಕಾಂಡಗಳು ಮೂಡುವುದಿಲ್ಲ), ಮೂಲ ಬೇರುಗಳ ಹರಡುವಿಕೆಯೂ ಕುಸಿಯಿತ್ತದೆ ಹೀಗಾಗಿ ಶಕ್ತಿಗುಂದಿ ಧರೆಗುರುಳಬಹುದು. (ಗುರು- ಬ್ಲಾಗಿನಿಂದ ಪ್ರೇರಿತ, Thanks ಗುರು)

ಅಜಾದ್ ಸರ್,
ReplyDeleteತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ, ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ಆಲದ ಮರಗಳನ್ನು ನೋಡಬಹುದು...ಇತ್ತೀಚೆಗೆ ಎಲ್ಲವೊ ನಶಿಸುತ್ತಾ ಹೋಗುತ್ತಲಿವೆ. ನಿಮ್ಮ ಹಲವಾರು ವಿವರಣೆ ಹೆಚ್ಚು ತಿಳಿಯಲಾಯಿತು.
ಧನ್ಯವಾದಗಳು
ಆಲದ ಮರದ ಬಗ್ಗೆ ಹೆಚ್ಚಿನ ವಿಷಯ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು.....
ReplyDeleteಗುರು
ಸರ್,
ReplyDeleteಆಲದ ಮರದ ತುಂಬಾ ಉಪಯುಕ್ತ ಮಾಹಿತಿ...ತುಂಬಾ ಚೆನ್ನಾಗಿ ಬರೆದಿದ್ದೀರಿ...
ಧನ್ಯವಾದಗಳು.
ಆಲದ ಮರದ ಬಗೆಗೆ ನೀವು ನೀಡಿದ ಮಾಹಿತಿ ತುಂಬ ಉಪಯುಕ್ತವಾಗಿದೆ.
ReplyDelete