Monday, May 18, 2009

ಗರ್ಭಧಾರಿ ಗಂಡುಗಳು..!!!!
ಗೆಳೆಯರೇ,
ಈ ಬ್ಲಾಗಿನ ಮೂಲಕ ನನ್ನ ಅಧ್ಯಯನ ಕ್ಷೇತ್ರದ ಒಂದು ವಿಸ್ಮಯಕಾರಿ ವಿಷಯವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಈ ಚಿತ್ರ ನೋಡ್ತಿದ್ದೀರಲ್ಲಾ..ಇದು ಸಮುದ್ರ ಕುದುರೆಯದು...ಅರೆ..ಸಮುದ್ರದಲ್ಲಿ ಕುದುರೇನೆ..?? ಸೋಜಿಗ ಅನ್ನಿಸೊಲ್ಲವೇ..? ಹೌದು..ಆದ್ರೂ ನಿಜ...ಆದ್ರೆ ಇದು ಕುದುರೆ ಅಲ್ಲ ..ಒಂದು ಜಾತಿಯ ಮೀನು. ಇದೇ ರೀತಿಯ ಸ್ವಲ್ಪ...ಸ್ವಲ್ಪ ಏನು..ಹೆಚ್ಚೇ ವಿಚಿತ್ರ ಅನ್ನಿಸೋ ಇನ್ನೊಂoದು ಸಮುದ್ರ ಕುದುರೆಯ ಸಂಬಂಧಿ..ಸಮುದ್ರ ದೈತ್ಯ ಅಥವಾ ಸೀ ಡ್ರಾಗನ್. ಇದಕ್ಕೋ ಸಮುದ್ರ ತಲದ ಗಿಡ, ಎಲೆಗಳ ಹಿನ್ನೆಲೆಗೆ ಅನುಗುಣವಾಗಿ ಹೊಂದಿಕೊಂಡು ಗುರುತಿಸಲದಳ ಮೈ ಬಣ್ಣ ಮತ್ತು ವಿನ್ಯಾಸದ ನಿಸರ್ಗದತ್ತ ವರದಾನವಿದೆ. ಈ ಎರಡೂ ಜೀವಿಗಳು ಒಂದೇ ರೀತಿಯ ಜೀವ ಮತ್ತು ಜೀವನ ಶೈಲಿಯನ್ನು ಹೊಂದಿರುತ್ತವೆ.
ಸಮುದ್ರ ಕುದುರೆ ಕಿವಿರುಮೂಲಕ ಕರಗಿದ ಆಮ್ಲಜನಕವನ್ನು ಉಸಿರಾಡುವ ಜೀವಿ. ಇದೇ ರೀತಿಯ ಉಸಿರಾಟ ಮೀನಿನದೂ ಸಹಾ. ಸಮುದ್ರ ಕುದುರೆಗಳಲ್ಲಿ ಸುಮಾರು ೪೦-೫೦ ವಿಧಗಳಿರುತ್ತವೆ. ಸಮುದ್ರ ಕುದುರೆಗಳೂ ಸುಮಾರು ೨ ರಿಂದ ೩೦ ಸೆಂ.ಮೀ. ಎತ್ತರವಿದ್ದು ಸುಮಾರು ೧ ರಿಂದ ೫ ವರ್ಷ ಆಯಸ್ಸನ್ನು ಹೊಂದಿರುತ್ತವೆ.
ಸಮುದ್ರ ಕುದುರೆಯಲ್ಲಿನ ವಿಸ್ಮಯಕಾರಿ ಅಂಶವೆಂದರೆ...ಗರ್ಭಧರಿಸುವ ಗಂಡುಗಳು..!!!!
ಹೌದು, ಗಂಡು ಸಮುದ್ರ ಕುದುರೆ ಹೊಟ್ಟೆಯಭಾಗ ಚೀಲದಂತಹ ಗರ್ಭಕೋಶವನ್ನು ಹೊಂದಿರುತ್ತದೆ. ಹೆಣ್ಣು ಸಮುದ್ರ ಕುದುರೆ ಗಂಡಿನೊಡನೆ ರಸಕ್ರೀಡೆಯಾಡುವಾಗ ತನ್ನ ಅಂಡಕೋಶವನ್ನು ಗಂಡಿನ ಗರ್ಭಚೀಲಕ್ಕೆ ವರ್ಗಾಯಿಸುತ್ತದೆ. ಇಲ್ಲಿ ಗಂಡು ತನ್ನ ರೇತ್ರಾಣುಗಳ ಮೂಲಕ ಅಂಡಗಳನ್ನು ಫಲಗೊಳಿಸಿ ಅಂಡದೊಳಗಿನ ಭ್ರೂಣದ ಬೆಳವಣಿಗೆಗೆ ಬೇಕಾದ ಎಲ್ಲ ಜೀವಸತ್ವ-ರಸಗಳನ್ನು ಪೂರೈಸಿ ಪೂರ್ಣರೂಪದಲ್ಲಿ ಬೆಳವಣಿಗೆಯಾದ ಮರಿ ಸಮುದ್ರ ಕುದುರೆಯನ್ನು ಗಂಡು ಸಮುದ್ರ ಕುದುರೆ ಪ್ರಸವಿಸುತ್ತದೆ.
ಒಮ್ಮೆ ಗರ್ಭ ಧರಿಸಿದ ಗಂಡು ಸುಮಾರು ಸರಾಸರಿ ೫೦-೧೦೦ ಮರಿಗಳನ್ನು ಪ್ರಸವಿಸುತ್ತದೆ. ಗಾತ್ರದಲ್ಲಿ ಚಿಕ್ಕ ಪ್ರಬೇಧಗಳು ೫-೧೦ ಮರಿಕೊಟ್ಟರೆ, ಗಾತ್ರದಲ್ಲಿ ದೊಡ್ದ ಪ್ರಬೇಧಗಳು ೫೦೦ ರ ವರೆಗೂ ಮರಿಗಳನ್ನು ನೀಡುತ್ತವೆ.
ಸಮುದ್ರ ಕುದುರೆ ನೀರಿನಲ್ಲಿನ ಜಲಸಸಿಗಳಿಗೆ ತಮ್ಮ ಬಾಲವನ್ನು ಹೆಣೆದುಕೊಂಡು ಕಾದು ಬೇಟೆಯಾಡುತ್ತವೆ. ಸಣ್ಣ ಹುಳುಗಳು, ಸಿಗಡಿ ಮರಿ ಅಲ್ಲದೇ ಮೀನುಮರಿಗಳನ್ನೂ ತಿನ್ನುತ್ತದೆ. ತನ್ನ ಬೇಟೆ ಹತ್ತಿರ ಬರುತ್ತಿದ್ದಂತೆಯೇ ತನ್ನ ಕೊಳವೆ ರೋಪದ ಬಾಯಿ ಮೂಲಕ ನೀರನ್ನು ಮತ್ತು ಬೇಟೆಯನ್ನು ಹೀರಿಕೊಂಡು ಬಿಡುತ್ತದೆ.
ಸಮುದ್ರ ಕುದುರೆಯನ್ನು ಗಾಜಿನ ಅಂದತೊಟ್ಟಿಗಳಲ್ಲಿ ಅಲಂಕಾರಕ್ಕೆ ಅಕ್ವೇರಿಯಂ ಮೀನನ್ನು ಸಾಕುವಂತೆ ಸಾಕಲಗುತ್ತದೆ. ವಿಶ್ವದ ಕೆಲ ರಾಷ್ಟ್ರಗಳಲ್ಲಿ ಇವುಗಳನ್ನು ಮೀನು ಸಾಕುವಂತೆ ಸಾಕಲಾಗುತ್ತದೆ. ಈ ಸಮುದ್ರ ಜೀವಿಗಳು ವಿಶೇಷ ಔಷಧೀಯ ಗುಣಗಳನ್ನು ಹೊಂದಿವೆಯೆಂದು ತಿಳಿದುಬಂದಿದೆ. ಚೀನಾ ಮತ್ತು ಜಪಾನ್ ರಾಷ್ಟ್ರಗಳಲ್ಲಿ ವಿಶೇಷ ಬೇಡಿಕೆಯಲ್ಲಿರುವ ಸಮುದ್ರ ಜೀವಿಯಿದು.

ಈ ಕೆಳಗಡೆ ಕೊಟ್ಟಿರುವ ಅಂತರಜಾಲದ ಲಿಂಕ್ ಸಮುದ್ರ ಕುದುರೆಯ ಮರಿಹಾಕುವ ಚಲನಚಿತ್ರ-ತುಣುಕಿಗೆ ಕೊಂಡೊಯ್ಯುತ್ತದೆ

http://www.youtube.com/watch?v=iaoLxR9FTwk&eurl=http%3A%2F%2Fvideo%2Egoogle%2Eco%2Euk%2Fvideosearch%3Fq%3Dseahorse%2520giving%2520birth%26hl%3Den%26rlz%3D1R2GGLL%5Fen%26um%3D1%26ie%3DUTF%2D8&feature=player_embedded

7 comments:

 1. ಚಿತ್ರ-ವಿವರ ಮಾಹಿತಿಯುಕ್ತ. ಚೆನ್ನಾಗಿದೆ. ಇನ್ನಷ್ಟು ಜಲಚರಗಳನ್ನು ಜಾಲಾಡಿ
  ಮಾಹಿತಿ ಕೊಡುವಿರಾ?

  ReplyDelete
 2. oh Great information!!! thnq so much sir.. keep posting...

  Regards
  manasu

  ReplyDelete
 3. ಜಲನಯನ ಸರ್,

  ಸೂಪರ್!! ರತಿಕ್ರೀಡೆಯ ಸಮಯದಲ್ಲಿ ಗಂಡಿನೊಳಗೆ ಹೆಣ್ಣಿನ ಆಂಡಾಶಯದ ಪಾಸ್..ನನಗಂತೂ ಇಂಥ ವಿಚಾರಗಳನ್ನು ತಿಳಿದುಕೊಳ್ಳುವುದರಲ್ಲಿ ತುಂಬಾ ಕುತೂಹಲ...ಸಮುದ್ರಕುದುರೆಗಳ ಸುಂದರ ಸೊಗಸಾದ ಮತ್ತು ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಿ...ಸಂಗ್ರಹಯೋಗ್ಯವಾದುದು.

  ಇನ್ನಷ್ಟು ಇಂಥವು ಬರಲಿ...ಧನ್ಯವಾದಗಳು

  ReplyDelete
 4. ತುಂಬಾ ಆಶ್ಚರ್ಯಕರ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

  ReplyDelete
 5. ಪರಾಂಜಪೆಯವರೇ
  ಜಲ ಮತ್ತು ಅದರಲ್ಲಿ ಅಡಗಿರುವ ಸೋಜಿಗಗಳಿಗೆ ಎಣೆಯಿಲ್ಲ. ಇನ್ನು ಸಮುದ್ರ ಸಾಗರಗಳು ಅಂದರೆ ಕೇಲಲೇ ಬೇಕಿಲ್ಲ.
  ಸುಮಾರು ೧೨ ವರ್ಷಕ್ಕೆ ಹಿಂದೆಯೆ "ಕಸ್ತೂರಿ" ಯಲ್ಲಿ "ಸಮುದ್ರ ಕುದುರೆ ಮತ್ತು ಕಡಲು ದೈತ್ಯ - ಹೆರುವ ಗಂಡುಗಳು" ಅನ್ನೋ ಶೀರ್ಷಿಕೆಯಡಿ ಲೇಖನವೊಂದನ್ನು ಬರೆದಿದ್ದೆ, ಆ ಸಮಯದಲ್ಲಿ ’ಕನ್ನಡದ ಡೈಜೆಸ್ಟ್ ಮೂಲಕ ನಾಲ್ಕಾರು ಇಂತಹ ವಿಷಯಗಳ ಲೇಖನಗಳನ್ನು ಪ್ರಕಟಿಸಿದ್ದೆ...ಕಾರಣಾಂತರದಿಂದ ಆ ನಂತರ ಲೇಖನಗಳನ್ನು ಕಳುಹಿಸಿಲ್ಲ..
  ನಿಮ್ಮ ಆಸೆಯಂತೆ ಬ್ಲಾಗಿನಡಿ ಸಮಯ ಸಿಕ್ಕಾಗ ಇಂತಹ ಮಾಹಿತಿ ತಲುಪಿಸುತ್ತೇನೆ.

  ಬಹುಶಃ ಶಿವುಗೆ ತುಂಬಾ ಇಷ್ಟವಾಗಬಹುದು..
  ಹಾಗೇ ಇತರರಿಗೂ ಮಾಹಿತಿ ತಲುಪಿಸುವುದು ನಮಗೆ ತಿಳಿದಿರುವುದನ್ನು ಹಂಚಿಕೊಂಡಂತೆ ಅಲ್ಲವೇ..?

  ಮನಸು ಮೇಡಂ ಊರಿಗೆ ಹೋಗಿ ಅಪ್ಪ ಅಮ್ಮನನ್ನು ನೋಡುವ ತವಕದಲ್ಲಿರುವ ನೀವು ಬ್ಲಾಗ್ ನೋಡಿ ಪ್ರತಿಕ್ರಿಯಿಸಿದ್ದೀರ..thanks. ಊರಲ್ಲೂ ನೋಡ್ತಿರಿ..(ಸಮಯ ಸಿಗದಿರಬಹುದು...ಆದ್ರೂ).

  ಉದಯ್ ಸರ್ ಹೇಗಿದೆ ನಮ್ಮಂತೆ ಹೊರದೇಶದ ಅನುಭವ? ಕನ್ನಡ ಸೇವೆಯ ಹೊಸ/ನವೀನ ದಿಶೆಯಲ್ಲಿ (ಅನುವಾದ..ಭಾಷೆಯನ್ನು ಸಿರಿವಂತ ಗೊಳಿಸುತ್ತದೆ) ಮುನ್ನಡೆದಿದ್ದೀರ, ಒಳ್ಲೆಯದಾಗಲಿ...thanks ಮನೆಗೆ ಬಂದು ಪ್ರೋತ್ಸಾಹದ ಎರಡು ಮಾತು ಬರೆದಿದ್ದಕ್ಕೆ.

  ReplyDelete