Friday, May 29, 2009

ಮತ್ತೆ ಶಾಲೆಗೆ


ಬೇಸಿಗೆ ರಜೆಗಳು
ಕಳೆದವು ದಿನಗಳು
ಪುಸ್ತಕವಿಲ್ಲದ ಕ್ಷಣಗಳು
ಮತ್ತೆ ಬಂದೆವು ಶಾಲೆಗೆ

ಅಕ್ಕನ ಊರಲಿ
ಭಾವನ ಜೊತೆಯಲಿ
ಕಳೆದೆವು ರಜೆಗಳು
ಮತ್ತೆ ಬಂದೆವು ಶಾಲೆಗೆ

ಜ಼ೂನಲಿ ಸಿಂಹವು
ಪಿಂಜರ ಬಂಧವು
ಪಕ್ಷಿಧಾಮವ ನೋಡಿ
ಮತ್ತೆ ಬಂದೆವು ಶಾಲೆಗೆ

ಹಳ್ಳಿಗೆ ಹೋದೆವು
ಮಳೆಯಲಿ ನೆಂದೆವು
ನೆಗಡೀಲೂ ನಲಿದೆವು
ಮತ್ತೆ ಬಂದೆವು ಶಾಲೆಗೆ

ಹೋಂ ವರ್ಕ್ ಗೋಜಿಲ್ಲದೆ
ಸ್ಕೂಲ್ ವರ್ಕ್ ತಲೆನೋವಿಲ್ಲದೆ
ಹೇಗೆ ಹೋದವು ದಿನಗಳು ಗೊತ್ತಿಲ್ಲದೆ
ಮತ್ತೆ ಬಂದೆವು ಶಾಲೆಗೆ

ಮತ್ತದೇ ಹತ್ತು ಕೇಜಿ ಭಾರ
ಧೂಳು-ಹೊಗೆ ರಸ್ತೆಗಳು ಘೋರ
ಇಲ್ಲಿ ರಸ್ತೆ ದಾಟಿದವನೇ ಶೂರ
ಅದಕೇ ಮತ್ತೆ ಬಂದೆವು ಶಾಲೆಗೆ

ರಜೆದಿನ ಮುಗಿದ ವ್ಯಥೆಯಿತ್ತು, ಈಗಿಲ್ಲ
ರವಿ, ಶಶಿ, ರಮಾ, ಷಫಿ ಮತ್ತೆ ಸೇರಿ
ಸ್ಕೂಲಿನ ಪಾರ್ಕಿನಲ್ಲಿ ಆಡುವೆವು ಕೂಡಿ
ಅದಕೇ, ಮತ್ತೆ ಬಂದೆವು ಶಾಲೆಗೆ

ರಜೆಗಳು ವಿರಾಮಕೆ
ಮೋಜು ಆರಾಮಕೆ
ಶಾಲೆ-ವಿದ್ಯೆ ಭವಿತಕೆ
ಹೌದು..ಅದಕೇ..ಮತ್ತೆ ಬಂದೆವು ಶಾಲೆಗೆ

10 comments:

  1. ಸರ್,

    ನಮ್ಮ ಮನೆಯ ಓಣಿ ಮಕ್ಕಳೆಲ್ಲಾ ಸ್ಕೂಲಿಗೆ ಹೋಗಲು ಸಿದ್ಧರಾಗುತ್ತಿದ್ದಾರೆ...ಈಗ ಬೋರ್ ಆಗುತ್ತಿದೆ.. ನಿಮಗನ್ನಿಸಿದಂತೆ ನನಗೂ ಅನ್ನಿಸುತ್ತಿದೆ...

    ReplyDelete
  2. ಹೌದು ಈಗ ಮಕ್ಕಳೆಲ್ಲಾ ಶಾಲೆ ಕಡೆ ಹೊರಟಿದ್ದಾರೆ ಇಷ್ಟು ದಿನ ಹೇಗೋ ಕಾಲ ಕಳಿತಾ ಇದ್ದರು ಈಗ ಶಾಲೆಗೆ ಒಂದು ಹೊರೆ ಮೂಟೆ ತಗೊಂಡು ಹೋಗಬೇಕು
    ಕವನ ತುಂಬಾ ಇಷ್ಟವಾಯಿತು

    ReplyDelete
  3. ಸರಳ ಹಾಗೂ ಸುಂದರವಾದ ಕವಿತೆ

    ReplyDelete
  4. ಮಕ್ಕಳ ಭಾವಪ್ರಪಂಚವನ್ನು ಸೊಗಸಾಗಿ ವರ್ಣಿಸಿದ್ದೀರಿ.

    ReplyDelete
  5. ಶಿವು ನನ್ನಂತೆ ನಿಮ್ಮ ಸೃಜನಶೀಲ ಮನಸೂ ಮಕ್ಕಳ ಅತಿಯೆನಿಸುವ ಭಾರದ ಪುಸ್ತಕ ಚೀಲ ಮತ್ತು ಕುರಿಗಳಂತೆ ಆಟೋಗೆ ತುಂಬುವ ಪರಿ ಎರಡಕ್ಕೂ ಮಿಡಿದಿದೆ, ನೊಂದಿದೆ. ಇವರ ಪಾಠದ ಪಾಡು ಮತ್ತೆ ಪ್ರಾರಂಭವಾಗಿರುವುದು ಸಿಹಿ-ಕಹಿಯ ಮಿಶ್ರಣ.

    ಮನಸು ಮೇಡಂ ಹೇಗಿದೆ ಕರುನಾಡು ಮತ್ತು ಬೆಂದ (ಬೇಸಿಗೆಯಲಿ) ಕಾಳೂರು...?? ಮಗರಾಯ ಜೊತೆಯಲ್ಲಿದ್ದಾನೆಯೇ..? ನಿಮಗೆ ಅವನಿಗೆ ಶುಭ-vacation. ಪ್ರತಿಕ್ರಿಯೆಗೆ ಸಮಯ ಸಿಗ್ತಿದೆಯಾ..?? ಗ್ರೇಟ್..

    ಡಾ.ಸತ್ಯ...ಅರೇ..ಇದೇ ಹೆಸರಿನ ರಮೇಶ್ ಚಿತ್ರ್ ಇತ್ತಲ್ಲ..??? Thanks ಕಾಮೆಂಟ್ಸ್ ಗೆ.

    ಸುನಾಥ್ ಸರ್, ಮಕ್ಕಳ ಮನಸ್ಸು ವಯಸ್ಸಾದಂತೆ ಕಲುಷಿತವಾಗದಂತಿದ್ದರೆ..ಹೇಗಿರುತ್ತದೆ..??

    ReplyDelete
  6. sir naaninnu oorige hortilla june 2nd hordteeni munchene kalisibittideeri hhaha

    ReplyDelete
  7. ಮನಸು ಮೇಡಂ...ತಪ್ಪು ನನ್ನದಲ್ಲ ..ನಿಮ್ಮ ಬ್ಲಾಗ್ ಪೋಸ್ಟಿಂದು...ಅ ಕವನ ನೋಡಿ ಅಂದ್ಕೊಂಡೆ ನೀವು ಬೆಂಗಳೂರಿನಲ್ಲಿ ಹಳಸಲಾಗಿರ್ತೀರಿ ಅಂತ...
    Anyway, ನಮಗಿಂತ ಮುಂಚೆ ಹೋಗ್ತಿದ್ದೀರಾ...ಶುಭವಾಗಲಿ...ಶುಭಪ್ರಯಾಣ...

    ReplyDelete
  8. ಒಳ್ಳೆಯ ಕವನ.
    ನಾನು ಚಿಕ್ಕ ಹುಡುಗ ಆಗಿದ್ದಾಗ (ಈಗ್ಲೂ ಚಿಕ್ಕ ಹುಡುಗ ಬಿಡಿ) ಶಾಲೆ ಶುರು ಆಯಿತು ಅಂದ್ರೆ ಸಾಕು, ಸ್ವಲ್ಪ ಬೇಜಾರು, ಸ್ವಲ್ಪ ಕುಶಿ..
    ದಿನಾಲೂ ಶಾಲೆಗೆ ಹೋಗಬೇಕಲ್ಲ ಅಂತ ಬೇಜಾರ.
    ಸ್ನೇಹಿತರನ್ನೆಲ್ಲ ಮತ್ತೆ ಸೇರುತಿವಿ ಅಂತ ಕುಶಿ...
    ನಿಮ್ಮ ಕವಿತೆ ನನ್ನ ದಾಟಿಯಲ್ಲಿ...
    "ಬೇಸಿಗೆ ರಜೆಗಳು,
    ಯಾಕಾದ್ರು ಕಳೆದವು :( ,
    ಆದರು ಬೇಜಾರಿಲ್ಲ,
    ಯಾಕೆಂದ್ರೆ
    ಸಿಕ್ತರಲ್ಲಾ ಗೆಳೆಯರು :)"

    ReplyDelete
  9. ಪ್ರಕಾಶ್ ನಿಮ್ಮ ಸ್ಕೂಲಿನ ದಿನಗಳನ್ನು ಕಾಲೆಳೆದು ತಂದುದಕ್ಕೆ ನಿಮ್ಗೆ ಖುಶಿ ಆಯ್ತು ಅಂದುಕೊಳ್ಳೋಣವೇ..?
    ನಿಜ ಮಕ್ಕಳಲ್ಲಿ ರಜೆಯ ನಂತರದ ಘಟ್ಟ ಸಿಹಿ-ಕಹಿಯ ಮಿಶ್ರಣದ್ದು.

    ReplyDelete
  10. ಜಲನಯನ...

    ನಾಳಿದ್ದು ನನ್ನ ಮಗನ ಸ್ಕೂಲ್ ಶುರುವಾಗುತ್ತಿದೆ...
    ನಿಮ್ಮ ಕವಿತೆ ಸಮಯೋಚಿತವಾಗಿದೆ.....
    ನನ್ನ ಮಗನ ಮನಸ್ಸಿನಲ್ಲಿ ನಡೆವ ವಿಚಾರಗಳನ್ನು ಬರೆದ ಹಾಗಿದೆ...
    ಇಷ್ಟವಾಯಿತು..

    ಅಭಿನಂದನೆಗಳು...

    ReplyDelete