ಅವಳು ಹೊರಟು ನಿಂತಾಗ
ನಿನ್ನನಗಲಿ ಹೇಗಿರಲಿ
ನೀನಿಲ್ಲದೆ ನಾ ಜಾಲಿಯಲಿ
ನಿನ್ನ ನೆನಪು ಸದಾ ಕಾಡುವುದು
ನೀ ಬರುವರೆಗೆ ದಿನ ಓಡುವುದು
ಬೆಳ್ಳಂ ಬೆಳಗೇ ಎಚ್ಚರ ನೀನಿಲ್ಲದೆ
ನೆತ್ತಿಗೆ ರವಿಯಿರೆ ಮಲಗುವೆ ಭಯವಿಲ್ಲದೆ
ನಿನ್ನ ಕೈಯ ರುಚಿ ಕಾಡುವುದು
ಹಲಬಗೆ ಹೊರರುಚಿ ರುಚಿಸುವುದು
ಕೆಲಸಕೆ ಹೊರಟಾಗ ನೀ ಎದುರಾಗುವುದು
ಕೆಲಸದಿ ಆಪ್ತ ಸಹಾಯಕಿ ಕುಲುಕಾಡುವುದು
ಮನೆಗೆ ಬಂದರೆ ನೀನಿಲ್ಲದೆ ಬೋರು
ಮನೆಗೇ ಬರದೆ ಹೊರಗೇ ಪಾರ್ಟಿಜೋರು
ಬಂದರೂ ಮನೆಗೆ ನಿನ್ನ ನೆನಪು ನೂರು
ಮಲಗಿಬಿಡುವೆ ಆದರೂ ಅದು ನಿತ್ಯ ನವ ಸೂರು
ಸೂಚನೆ: ಏಳು (ಪಂಕ್ತಿ ಬಿಟ್ಟು ಪಂಕ್ತಿ) ಅವಳಿಗೆ ಹೊರಟು ನಿಂತಾಗ
ಏಳು (ಪಂಕ್ತಿ ಬಿಟ್ಟು ಪಂಕ್ತಿ) ಬ್ಲಾಗ್ ಪೋಸ್ಟಿಗೆ ಕುಂತಾಗ
ಸಂಗಾತಿ ಜೊತೆಗಿಲ್ಲದಿದ್ದಾಗ ಆಗುವ ನೋವು ಬಯಕೆಗಳು ಕವನದಲ್ಲಿ ಚೆನ್ನಾಗಿ ವ್ಯಕ್ತವಾಗಿವೆ...
ReplyDeletethumba chennagide...
ReplyDeleteಹಲಬಗೆ ಹೊರರುಚಿ ರುಚಿಸುವುದು / ಮನೆಗೇ ಬರದೆ ಹೊರಗೇ ಪಾರ್ಟಿಜೋರು....
endu bareyutta..
ಬಂದರೂ ಮನೆಗೆ ನಿನ್ನ ನೆನಪು ನೂರು...
endiddiri. nimma bayake haagu bhavanegalu chennagi vyaktha aagide.
ಕವನದಲ್ಲಿ ಸಾಲುಗಳಲ್ಲಿರುವ ಪ್ರಾಮಾಣಿಕತೆ, ತು೦ಟತೆ ಇಷ್ಟವಾಯಿತು.
ReplyDeleteಶಿವು, ಪರಾಂಜಪೆ ಮತ್ತು ಬಾಲು ನಿಮ್ಮೆಲ್ಲರಿಗೆ ಮತ್ತು ನಮ್ಮ ಬ್ಲಾಗ್ ಸಹೋದರಿಯರಿಗೂ ಅನ್ವಯಿಸೋ ಹಾಗೆ ನಿಮ್ಮ ಪ್ರತಿಕ್ರಿಯೆಗೆ ನನ್ನ ಅನಿಸಿಕೆ ತಿಳಿಸಿಲು ಬಯಸುತ್ತೇನೆ
ReplyDeleteನನ್ನ ಪ್ರಕಾರ ಗಂಡಸು ಸ್ವೇಚ್ಛಾಪ್ರಿಯ..ಮತ್ತು ಹೆಂಡತಿ... ಹೇಳದೇ ಹಾಕುವ ನಿರ್ಭಂಧದ ಇನ್ನೊಂದು ರೂಪ...ಬಹುಪಾಲು ಹೆಂಡತೀರು ಮಿತಿಯೊಳಗೇ ತನ್ನ ಗಂಡ ಸ್ವೇಚ್ಛೆಮಾಡಲಿ ಎಂದರೂ ಎಲ್ಲೋ ಒಂದು ಮನದ ಮೂಲೆಯಲ್ಲಿ ಅಳುಕು, ಅದೇ ತರಹ ಗಂಡಸು ಈ ರೀತಿ ಹೆಂಡತಿ ಹೇಳಿದರೂ ಎಲ್ಲೋ..ತಾನು ತನ್ನ ಮಿತಿಯನ್ನು ಮೀರಿದ್ದೇನೆಂದು ಹೆಂದತಿ ಅಂದುಕೊಂಡರೆ..ಎನ್ನುವ ಆಳುಕು..ಇದೇ ಜೀವನವಲ್ಲವೇ..ಇಬ್ಬ್ರಿಗೂ ಅಳುಕಿಲ್ಲದಿದ್ದರೆ...ಮಿತಿಗಳು ಮೀರಬಹುದು ಸಂಸಾರಗಳು ಹಾಳಾಗಬಹುದು...ಆಗಿವೆ ಕೂಡ..ನಮ್ಮೆಲ್ಲರ ಮುಂದೆ ನಿದರ್ಶನಗಳು ಇಲ್ಲದಿಲ್ಲ.
ಸರ್,
ReplyDeleteಕವನ ಜೋರಾಗೆ ಬರೆದಿದ್ದೀರಿ.... ಹಾ ಹಾ ಹಾ... ನೀವು ಇಲ್ಲಿ ಕವನದಲ್ಲಿ ಹೇಳಿರೋ ಹಾಗೆ ನಾನು ನಮ್ಮ ಮನೆಯವರನ್ನ ರೇಗಿಸುತಲಿದ್ದೆ ಹಾ ಹಾ
ಹೊಟರ ಮನೆಯವರು ಊರಿಗೆ
ನಿಮ್ಮ ಸಂಸಾರದಲ್ಲಿ ಸರಿಗಮ ಚನ್ನಾಗಿದೆ....ಮಹೇಶ್ ಮನಸ್ಸಲ್ಲೇ ಮಂಡಿಗೆ ತಿಂತಿರ್ತಾರೆ ಅಲ್ಲವೇ?..!! ಹಹಹ
ReplyDeleteಇಲ್ಲ ನಾವು ೧೧ಕ್ಕೆ ಬರ್ತಿದ್ದೀವಿ, ಮತ್ತೆ ನಾನು return 20kke.
ಹೌದು ಹೆಂಡತಿ ಇಲ್ಲದಾಗ ಎರೆಡೂ ಭಾವನೆಗಳು ಮೂಡುತ್ತವೆ.
ReplyDeleteಆದರೆ ಹೇಳುವುದು ಮಾತ್ರ ನೀನಿಲ್ಲದಾಗ ನಾನು ಜಾಲಿಯಾಗಿರುತ್ತೇನೆ ಅಂತ
ಚೆನ್ನಾಗಿದೆ ಎರೆಡೂ ಭಾವನೆಗಳನ್ನು ಹೇಳುವ ಪರಿಕಲ್ಪನೆ
alternate lines odidaaga siguva anubhavave bere...tumba chennagi bandide kavana...
ReplyDeleteanda haage nimma hendathige idanna thorisiddira?? :P
ಈ ಕವನ ಓದಿ ತುಂಬಾ ಖುಷಿ ಆಯ್ತು ಆಜಾದ್ ಅವರೆ. ನಿಜಕ್ಕೂ ಭಿನ್ನವಾದ ಕವನ.
ReplyDelete