Sunday, June 7, 2009

ರನ್- ಅಂದ್ರ‍ೇನು..??

ದೃಶ್ಯ-1

ಮೋಹನ್: ಹಲೋ..ಹಲೋ..ರುಕ್ಮಣಿಯಮ್ಮನೋರೆ...ಆಗ್ಲೆ ರನ್ ಶುರು ಆಗ್ಬಿಟ್ಟಿದೇರೀ..ಎಲ್ಲಿದೀರಾ...?? ಹಲೋ..ನಿಮ್ಮ ಜೊತೆ..ರೋಸಿ ಮೇಡಂ ಬರ್ತೀನಿ ಅಂದಿದ್ರಲ್ಲಾ...ಅವ್ರನೂ ಕರ್ಕೊಂಡ್ ಬನ್ನಿ...ಆಯ್ತಾ...ಹಲೋ...ಹಲೋ...ಮರೀಬೇಡ್ರಿ..ನೀವ್ ಬರೋಕೆ ಆಗೊಲ್ಲ ಅನ್ನೋಂಗಿದ್ರೆ...ರೋಸಿ ಅವ್ರಿಗೆ ಹೇಳಿ..ಮೋಹನ್ ಪಾರ್ಕಿನತ್ರ ಕಾಯ್ತಾ ನಿದಾನಕ್ಕೆ ಓಡ್ತಿರ್ತಾರೆ ಜಾಯಿನ್ ಆಗು ಅಂತ...ಓಕೆ...ಮರೀಬೇಡಿ...

ರುಕ್ಮಣಮ್ಮ: ಹಲೋ..ಮೋಹನ್ ಸರ್..ಹಲೋ.. ಹಾಂ ಕೇಳ್ಸ್ತಾ ಇದೆ..ಹಾಂ...ಬರ್ತೀನಿ....ಹಲೋ..ಯಾರು ರೋಸೀನಾ...ಓಕೆ..(ಸ್ವಗತ-ಬಿಳಿ ಚರ್ಮ ಅಂದ್ರೆ ಹಲ್ಗಿಂಜ್ತಾನೆ...ಈ ಬಾಸ್ ಗಳೇ ಹಿಂಗೆ....)..ಹಾಂ...ಹಲೋ ಸರ್..ಇಲ್ಲ..ಇಲ್ಲ...ನಾನೂ ಬರ್ತೀನಿ...ಏನಂದ್ರಿ...ಇಲ್ಲ ಸರ್ ಅವ್ಳನ್ನೂ ಕರ್ಕೊಂಡ್ಬರ್ತೀನಿ....ಓಕೆ...

ರೋಸಿ: (ತನ್ನ ಮೊಬೈಲ್ ಮೆಸೇಜ್ ನೋಡ್ತಾ..ಸ್ವಗತ) what a silly fellow..why he is calling this old lady ,??...Oh...he wants me to be precise...for me business is more important..let me run with him....to please.
ದೃಶ್ಯ-2


ಮೊದಲ್ನೇ ಮೇಡಂ: (ಜೋರಾಗಿ..) ಮೂರ್ತಿ ಸರ್..ನಿಲ್ಲಿ ನಾವೂ ಬರ್ತೀವಿ...ಹಲೋ..ಸರ್...
ಎರಡ್ನೇ ಮೇಡಂ: ಮೂರ್ತಿ ಸರ್ ..ಸರಸೂ ಮೇಡಂ ಒಂದೆರಡ್ದ್ಮೊಳ ಮಲ್ಲಿಗೆ ಪಾರ್ಕ್ ಹತ್ರ ಕೊಂಡ್ಕೊಂಡು ಬರೋಕೆ ನಮ್ಮನೇವ್ರಿಗೆ ಹೇಳಿ ಅಂದ್ರು..ನೀವು ಕಾಣ್ಲಿಲ್ಲ ಅದ್ಕೇ ನಾನೇ ಕೊಡ್ಕೊಂಡೆ..ನೀವು ಕೊಟ್ಟ್ಬಿಡಿ ಸರ್....
ಮೂರ್ತಿ: ರೀ..ಶೇಖರ್..ಬನ್ನಿ ಬೇಗ ಬೇಗ ಹೋಗೋಣ ಇವರ ಇಬ್ರ ಕೈಗೆ ಸಿಕ್ಕರೆ..ಉಳ್ದಿರೋ ಒಂದೆರಡು ಕೂದ್ಲೂ ತಳೇಲಿ ಉಳಿಯೊಲ್ಲ ಅವರ ಕುಯ್ದಾಟಕ್ಕೆ ಪರಚ್ಕೋತೀವಿ,...ನಮ್ಮ ಆಫೀಸ್ ಗೆಸ್ಟ್ ರೋಸಿ ಬರ್ತಾಳೆ ಅಂದ್ಕೊಂಡ್ರೆ ಇವ್ರು ಗಂಟು ಬೀಳ್ತಾ ಇದ್ದಾರೆ...
ಶೇಖರ್: ಹೌದ್ರಿ ಮೂರ್ತಿ...ನಮ್ ಬಾಸ್ ಬಿಡ್ಕೊಡ್ತಾನೆಯೇ ರೋಸೀನಾ...ಅಲ್ನೋಡಿ..ಅಲ್ಲೇ ಪಾರ್ಕ ಹತ್ರ waiting ಕಾಯ್ಕೊಂಡು.ದೃಶ್ಯ-3

ರವಿ: ಲೇ ರಮೇಶ ನಿಂತ್ಕೊಳ್ಳೋ...ಬಾ ಅಂತ ಹೇಳಿ..ಒಬ್ಬನೇ ಹೊರಬಿಟ್ಯಾ...?? (ಸ್ವಗತ....ಬಡ್ಡಿ ಮಗ...ಬಾ ಅಂತ ಹೇಳಿ ಡೌಗಳು ಸಿಕ್ಕಿದ್ವು ಅಂತ ತಪ್ಪಿಸ್ಕೊಂಡ್ ಹೋಗೋದು ನೋಡು).
ರಮೇಶ: ಶಮಾ..ಸುಮಾ...ಬೇಗ ಬೇಗ ಹೆಜ್ಜೆ ಹಾಕಿ...ಇದೇನು ವಾಕಿಂಗ್ ರೇಸಾ..ಜಾಗ್ ಮಾಡಿ...(ಸ್ವಗತ...ಬೇಗ ಹೋಗ್ಬೇಕು... ಆನನ್ಮಗ ರವಿ ನೋಡ್ಬಿಟ್ಟ)ದೃಶ್ಯ-4

ಪತ್ರ ಕರ್ತೆ: ನಮಸ್ಕಾರ ಸರ್ ಈ ವಯಸ್ಸಿನಲ್ಲಿ ನಿಮಗೆ ರನ್ ನಲ್ಲಿ paricipate ಮಾಡ್ಬೇಕು ಅಂತ ಅನ್ಸಿದ್ದು ಯಾಕೆ ನಿಮಗೆ??....
VeteRUN: ನನಗೆ ರನ್ ಮಾಡೂದು ಅಂದ್ರೆ ಬಹಳ ಇಷ್ಟ..ಯಾಕಂದ್ರೆ ನಾನು ನೌಕರಿ ಪ್ರಾರಂಭಿಸಿದ್ದು ‘ರನ್ನರ್‘ ಆಗಿಯೇ....
ಪತ್ರಕರ್ತೆ: ಅಂದ್ರೆ ನೀವು ಅಥ್ಲೆಟ್ ಆಗಿದ್ರಾ...?
VeteRUN: ಅಲ್ಲಮ್ಮಾ...‘ಬ್ರಿಟೀಶರ ಕಾಲ್ದಲ್ಲಿ ರನ್ನರ್ ಅಂದ್ರೆ...postman ಕೆಲಸ...ಹಹಹಹ
ಪಕ್ಕದಾತ: (ನಗುತ್ತಾ..ಯಜಮಾನ್ರು ಜೋಕ್ ಮಾಡ್ತಿದ್ದಾರೆ...) ಹಹಹಹ
VeteRUN: (ಕೋಪದಿಂದ)..ನಿಮ್ಮ ತಲೆ...ಸುಮ್ಮನಿರ್ರೀ..ಗೊತ್ತಿಲ್ಲ ಅಂದ್ರೆ ಮಾತ್ನಾಬಾರ್ದು....Runner = Postman ಗೊತ್ತಾ...
ಪತ್ರಕರ್ತೆ: ಅಂದ್ರೆ...ಇಷ್ಟೊಂದು ಜನ ಪೋಸ್ಟ್ ಮ್ಯಾನ್ (ಉಮನ್) ಗಳು ಓಡ್ತಾ ಇದ್ದಾರಲ್ಲಾ ಯಾಕೆ...??
VeteRUN: (ಹಹಹ) ಇದು..ಜೋಕು...ಇವಾಗ ನಗ್ರೀ...(ಪಕ್ಕದವರಿಗೆ)...ಎಸ್ ಮೇಡಂ ಇದು ಜೋಕೂ ಆಗ್ಬಹುದು...ಸೀರಿಯಸ್ಸೂ ಆಗ್ಬಹುದು...


ನಮ್ಮ ಪರಿಸರ ನಿಸರ್ಗ ಇದರ ಬಗ್ಗೆ ಕಾಳಜಿ ಜನಸಾಮಾನ್ಯರಲ್ಲಿ ಜಾಗೃತಿ ತರಲಿ ಎನ್ನೋ ಉದ್ದೇಶಕ್ಕೆ ಈ ರನ್ ನಿಯೋಜಿಸಿರುವುದು...ಅದನ್ನ ಹಾಗೇ ಗಂಭೀರವಾಗಿ ತಗಂಡು.. ಜನ ಕಾರ್ಯ ತತ್ಪರರಾದ್ರೆ...ಸೀರಿಯಸ್ಸು...ಇಲ್ಲ..ಇವರತರಹ..(ಪಕ್ಕದವರನ್ನು ತೋರಿಸಿ) ಜೋಕು ಅಂದ್ಕಂಡ್ರೆ ಜೋಕು....ಇಷ್ಟು ಜನ postman..postwomen ಅಂದ್ರಲ್ಲಾ..ನಿಜ..ಇವರೆಲ್ಲಾ ಈ ಸಂದೇಶವನ್ನ ಜನಕ್ಕೆ ತಲಪಿಸೋಕೆ ರನ್ ಮಾಡೋದು..ಇನ್ನು ಇವರು (ಪಕ್ಕದವರನ್ನು ನೋಡಿ..ವ್ಯಂಗದಿಂದ) ಎಷ್ಟು ಸೀರಿಯಸ್ಸಾಗಿ ಇದನ್ನು ತಗೋತಾರೆ ಅನ್ನೋದರ ಮೇಲೆ ನಿಮ್ಮ ಟಿಪ್ಪಣಿಗೆ ಅರ್ಥ ಕೊಡಬಹುದು.
ಪತ್ರಕರ್ತೆ: ಧನ್ಯವಾದ ಸರ್.
[ಶಿವು ಅವರ ಬ್ಲಾಗ್ ನಿಂದ (ಅವರ ಅಪ್ಪಣೆಯಿದೆ ಅಂದ್ಕೋತೀನಿ) ತೆಗೆದು ಬ್ಲಾಗಿಸಿದ್ದೀನಿ]

12 comments:

 1. ಚೆನ್ನಾಗಿದೆ ನಿಮ್ಮ interpretation.
  ಆದರೆ ಶಿವೂ ಅವರ ಬ್ಲಾಗಲ್ಲಿದ್ದ ಇನ್ನೊಂದು ಫೋಟೋ ನೋಡಿದರೆ ಪರಿಸರ ಬಗ್ಗೆ ಓಡಿದವರಿಗೆ ಕಾಳಜಿ ಇದ್ದ ಹಾಗೆ ಇರಲಿಲ್ಲ.

  ReplyDelete
 2. ಶಿವೂ ಅವರ ಬ್ಲಾಗಿನ ಫೋಟೋ ಗಳಿಗೆ ಕಾಲ್ಪನಿಕ ಸ೦ಭಾಷಣೆಯ ಪೋಷಾಕು ತೊಡಿಸಿ ರ೦ಜನೀಯಗೊಳಿಸಿದ್ದೀರಿ.

  ReplyDelete
 3. ಸರ್,

  ಮೊದಲು ನಿಮ್ಮ ಬ್ಲಾಗಿಗೆ ಬಂದಾಗ ಫೋಟೋಗಳನ್ನು ನೋಡಿ ಆಶ್ಚರ್ಯವಾಯಿತು...ನಂತರ ಅವುಗಳನ್ನು ಬಳಸಿಕೊಂಡು ಬರೆದ ಸಂಭಾಷಣೆ ನನಗಂತೂ ಸಿಕ್ಕಾಪಟ್ಟೆ ನಗು ತರಿಸಿತು...ಇಂಥವನ್ನು ಬರೆದರೆ ಯಾರು ಬೇಡ ಅಂತಾರೆ ಸರ್... ನೀವು ಹೀಗೆ ಎಲ್ಲರನ್ನೂ ನಗಿಸುತ್ತೀರಿ ಅಂದರೆ ನನ್ನ ಬ್ಲಾಗಿನ ಯಾವ ಫೋಟೋಗಳನ್ನು ಬೇಕಾದರೂ ಉಪಯೋಗಿಸಿಕೊಳ್ಳಬಹುದು...

  ಹೀಗೆ ಬರೆಯುತ್ತಿರಿ....

  ಧನ್ಯವಾದಗಳು.

  ReplyDelete
 4. ಜಲಾನಯನ ಅವರೇ,
  ನಿಮ್ಮ ಬ್ಲೋಗ್ ಓದಲು ಶುರು ಮಾಡಿದಾಗ ' ಇದೇನು ಕಾಮೆಂಟರೀ ತರ ಇದೆಯಲ್ಲಾ ಅಂದ್ಕೊಂಡೆ" ಆಮೇಲೆ ಗೊತ್ತಾಯ್ತು ನಿಜಸ್ತಿತಿ ಏನೂಂತ...ಗುಡ್ ವರ್ಕ್...ಹೊಸತನ ಇಸ್ಟಾ ಆಯ್ತು!!

  ReplyDelete
 5. ಜ್ಯೋತಿಯವರೇ, thanks ಬ್ಲಾಗನ್ನ ನೋಡಿ ಪ್ರತಿಕ್ರಿಯಿಸಿದ್ದಕ್ಕೆ, ನೀವು ಹೇಳೋದು ನಿಜ...ಓಡೀದ್ದೇನೋ ಪರಿಸರಕ್ಕಾಗಿ..ಆದರೆ ಮಾಡಿದ್ದು ಪರಿಸರಕ್ಕೆ ಹಾನಿ...

  ReplyDelete
 6. ಶಿವು ಇವನ್ನು ಪೋಸ್ಟ್ ಮಾಡಿದಾಗಲೇ ಹೇಳಿದ್ದೆ..ಅವರು ಒಪ್ಪಿದ್ರು ಸಹಾ...ಈಗ ಅವರ ಬ್ಲಾಗ್ ನೋಡ್ತಾ ಇರಬೇಕಾದರೆ ಅನ್ನಿಸ್ತು ಏನಾದರೂ ರೂಪ ಕೊಡಬೇಕು ಅಂತ..
  ಪರಾಂಜಪೆಯವರೇ..ಇಲ್ಲಿ ಪರಿಸರ ಕಾಳಜಿ ಹೋಗಿ ಪರಿಸರ ಗಲೀಜು ಮಾಡಿದ್ದು...ಧನ್ಯವಾದ ಪ್ರತಿಕ್ರಿಯೆಗೆ.

  ReplyDelete
 7. ಶಿವು, ತುಂಬಾ ಥ್ಯಾಂಕ್ಸ್..ನಿಮ್ಮ ಅನುಮತಿಗೆ...ಹಾಗೆ ನೋಡಿದ್ರೆ ನಾನು ಕ್ಷಮೆ ಕೇಳ್ಬೇಕುನಿಮ್ಮ ಹತ್ರ ನಿಮ್ಮನ್ನ ಕೇಳ್ದೇನೆ ನಿಮ್ಮ ಚಿತ್ರ ಬಳಸಿದ್ದಕ್ಕೆ...

  ReplyDelete
 8. ಸುಮನ ಮೇಡಂ, ಸ್ವಾಗತ ಜಲನಯನಕ್ಕೆ...ಧನ್ಯವಾದ ಬಂದುದ್ದಕ್ಕೆ, ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ..ನೀವು ಕನ್ನಡದಲ್ಲಿ ಚನ್ನಾಗೇ ಪರ್ತಿಕ್ರಿಯಿಸಿದ್ದೀರ..ನಿಮ್ಮ ಬ್ಲಾಗ ನಲ್ಲೂ ಕನ್ನಡ ಪ್ರಯೋಗಿಸಬಹುದಲ್ಲ. ನಿಮ್ಮ ಮನಸೋಲ್ಲಾಸಕ್ಕೆ ...ಸ್ವಲ್ಪ scroll down ಮಾಡಿದ್ರೆ....ಹಾಡು ವಿಥ್ ಮ್ಯೂಜಿಕ್ ಅನ್ನೋ ಬ್ಲಾಗ್ ಪೋಸ್ಟ್ ಓದಿ ನಿಮ್ಮ ಅನಿಸಿಕೆ ತಿಳಿಸಿ

  ReplyDelete
 9. ಶಿವು ಅವರ ಫೋಟೋಗಳಿಗೆ ನಾಟಕ ರೂಪವನ್ನು ಕೊಟ್ಟು ನಿಮ್ಮದೇ ಸಂಭಾಷಣೆ ಬರೆದು ನಮ್ಮನ್ನೆಲ್ಲ ನಗೆಗಡಲಲ್ಲಿ ತೇಲಿಸಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರೆಯುತ್ತಿರಿ.

  ReplyDelete
 10. ಜಲನಯನ....

  ಸಿಕ್ಕಾಪಟ್ಟೆ ನಗು ಬಂತು...

  ನಿಮ್ಮ ಕಲ್ಪನೆಗೆ ...

  ನನ್ನದೊಂದು ಸಲಾಮ್...

  ಹೀಗೆ ನಗಿಸುತ್ತಿರಿ...

  ReplyDelete
 11. ಉದಯ್, ಧನ್ಯವಾದ...ಇದು ಶಿವು ಚಿತ್ರಕ್ಕೆ ಕೊಟ್ಟ ಒಂದು ಮುಖ ವಿವರಣೆ ಅಷ್ಟೆ...
  ಪ್ರಕಾಶ್ ಸಲಾಮ್ ಗೆ ಧನ್ಯವಾದ...ಇದು ನಿಮ್ಮೆಲ್ಲರ ಪ್ರೋತ್ಸಾಹದ ಫಲ...thanks

  ReplyDelete
 12. veteRUN ಅಂತೂ ಸೂಪರ್ ಸರ.. ಅಲ್ಲ ಫೋಟೋಗಳಿಗೆ ಏನೇನು ಭಾವನೆ ಕೊಟ್ಟು ಬಿಟ್ಟೀದೀರಲ್ಲ, ಗ್ರೇಟ...

  ReplyDelete