Tuesday, June 9, 2009

ಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ದೊಡ್ಡ ದೊಡ್ಡ ಪದವೀಲಿ ಇರೋರ್ಗೆ
ಹಾಂ..ಇರೋರ್ಗೆ..??
ಮಾನ ಅನ್ನೋದು ತುಂಬಾ ಇರುತ್ತಾ??
ಹೌದಪ್ಪಾ..ಅದ್ಕೇ ಅಲ್ವ ಅವರು ಆ ಪದವೀಲಿರೋದು..
ಹಂಗಾರೆ..ಮಾನ ನಷ್ಟ ಮೊಕದ್ದಮೆ ಹಾಕಿದ್ರೆ
ಹೋದ ಮಾನ ವಾಪಸ್ ಬಂದ್ಬಿಡುತ್ತಾ..?
ಗೊತ್ತಿಲ್ಲ ಮಗು.

ಅಪ್ಪಾ
ಹೇಳು ಮಗು
ಜೊoಡ್ ಬೆಳೆದ ಬೆಂಗ್ಳೂರ್ ಕೆರೆ ಅಸಹ್ಯ ಅಲ್ವಾ..?
ಹೌದಪ್ಪ..ಉದ್ಯಾನ ನಗರೀಗೆ ದೃಷ್ಠಿ-ಬೊಟ್ಟು..
ಬಿ.ಬಿ.ಎಮ್.ಪಿ. ಗೆ ಇದನ್ನ ಕ್ಲೀನ್ ಮಾಡೋಕೆ
ಅಭಿಶೇಕ್ ನಂತಹ ಕಂದಮ್ಮಗಳ ಬಲಿಬೇಕಾ?
ಗೊತ್ತಿಲ್ಲ ಮಗು

ಅಪ್ಪಾ
ಏನಪ್ಪಾ ರಾಜ?
ರಾಜ ಅಂತೀಯ ಮತ್ತೆ ಏನ್ಕೇಳಿದ್ರೂ
ಅದುಬೇಡ..ಇದು ಆಮೇಲೆ ಅಂತೀಯಾ..
ನೀನು ದೊಡ್ದವನಾಗು ಆಮೇಲೆ ನೀನೇ ರಾಜ
ಅದ್ಕೇನಾ ರಾಜಕಾರಣಿ ಮಂತ್ರಿ ಆದ್ಮೇಲೆ
ಇದು ಈಗಲ್ಲ..ಅದು ಆಗೊಲ್ಲ ಅನ್ನೋದು..?
ನಂಗೊತ್ತಿಲ್ಲ ಮಗು

ಅಪ್ಪಾ
ಇನ್ನೂ ಏನೋ ನಿಂದು ತರಲೆ?
ನೋಡ್ದ್ಯಾ ಮಕ್ಕಳ ಪ್ರಶ್ನೆಗೆ ಉತ್ತರಿಸೋದು
ದೊಡ್ದವರ ಕರ್ತವ್ಯ ಅಂತಾರಲ್ಲವಾ?
ಹೌದಪ್ಪ..ಕೇಳು..ಅದೇನ್ಕೇಳ್ತೀಯೋ..
ಸ್ಕೂಲಲ್ಲಿ ಹುಡುಗ ಚೇಸ್ಟೆ ಮಾಡ್ದ ಅಂತ
ಮೇಸ್ಟ್ರು ಅವನ್ನ ಹೊಡ್ದಿದ್ದಕ್ಕೆ ಮೇಸ್ಟ್ರನ್ನ ಕೆಲ್ಸದಿಂದ
suspend ಮಾಡ್ಸಿ ಬಿಟ್ರಲ್ಲಾ ಅವನ ಪೋಷಕರು?
ಹೌದಪ್ಪಾ..ತೀರಾ ಅತಿಯಾಯ್ತು ಬಿಡು..
ಮತ್ತೆ ಬೇರೆ ದೇಶದಲ್ಲಿದ್ದು ಓದ್ತಾಯಿರೋ ಭಾರತೀಯರ್ನ
ಯಾರೋ ದಾರಿಹೋಕರು ಹಿಗ್ಗಾ-ಮುಗ್ಗಾ ಹೊಡ್ದ್ರೂ
ಸುಮ್ಮನಿದ್ದೀವಲ್ಲಾ ನಾವು..ಇದು ಅತಿ ಅಲ್ವಾ?
ನಂಗೊತ್ತಿಲ್ಲ ಮಗು

17 comments:

  1. ಜಲನಯನ....

    ಮಗುವಿನ ಪ್ರಶ್ನೆಗಳಿಗೆ ಉತ್ತರಿಸೋದು ಕಷ್ಟ...

    ನ್ಯಾಯವಾದ ಪ್ರಶ್ನೆಗಳು...
    ಭಾರತೀಯರ ಮನದಲ್ಲಿಯ ಪ್ರಶ್ನೆಗಳು ಅವು...

    ಬಹಳ ಚಂದದ ಕವನ...

    ReplyDelete
  2. ಮೇಲ್ನೋಟಕ್ಕೆ ಮಗುವಿನ ಪ್ರಶ್ನೆಯ ಹಾಗೆ ಕಂಡ್ರೂ ಎಂಥ ಗಂಭೀರ ವಿಷಯಗಳನ್ನ ಹೆಕ್ಕೀಕೊಂಡಿದ್ದೀರ..."ದೊಡ್ಡವರಾದ" ನಮ್ಮಲ್ಲಿ ಇವುಗಳಿಗೆ ಉತ್ತರ ಇಲ್ಲವಲ್ಲ :(

    ಹೊಸ ರೀತಿಯ ಬರಹಕ್ಕೆ ಅಭಿನಂದನೆಗಳು!!

    ReplyDelete
  3. ನಿಮ್ಮ "ಗೊತ್ತಿಲ್ಲ ಮಗು" ಸರಣಿಯ ಪ್ರಶ್ನೋತ್ತರ ಮಾಲಿಕೆ ಬಹಳ ಮಾರ್ಮಿಕವಾಗಿರುತ್ತದೆ.

    ReplyDelete
  4. ಪ್ರಕಾಶರ ಮೊದಲ ಪ್ರಕಾಶಕ್ಕೆ ಪ್ರಥಮ ವಂದನೆಗಳು...
    ನಮ್ಮ ಹಲವು ಉತ್ತರಿಸಲಾಗದ ಪ್ರಶ್ನೆಗಳು ಮಕ್ಕಳಿಂದ ಬರುತ್ತವೆ ಎನ್ನುವುದು ನಿರ್ವಿವಾದ

    ReplyDelete
  5. ಸುಮನ ಮೇಡಂ ದೊಡ್ಡವರು ದಡ್ಡರಂತೆ ವರ್ತಿಸುವಾಗ ಮಕ್ಕಳು ಬುದ್ಧಿವಂತರಾಗಿ ಕಾಣುವುದು ಸಹಜ. ಪ್ರತಿಕ್ರಿಯೆಗೆ ಧನ್ಯವಾದ.

    ಪರಾಂಜಪೆಯವರೇ, ಬುದ್ಧಿವಂತರ ಬುದ್ದಿಹೀನತೆಯನ್ನು ಹೊರಹಾಕಲು ಮಗುವಿನ ಪ್ರಶ್ನೆಗಳು ಸಹಕಾರಿಯಾಗಬಹುದು, ಅಲ್ಲವಾ..

    ReplyDelete
  6. ನಮಸ್ತೆ. ಕೆಲಸದೊತ್ತಡದಿಂದ ನಿಮ್ಮನೆ ಕಡೆ ತಲೆಹಾಕಿ ಮಲಗಿಲ್ಲ..ಥತ್! ನನ್ನ ಮನೆಯಲ್ಲೂ ನಾನು ಕಲರವಗುಟ್ಟಿಲ್ಲ! ಬೈಕೋಬೇಡಿ..
    'ಗೊತ್ತಿಲ್ಲ ಮಗು' ನಿಜವಾಗಲೂ ತುಂಬಾನೇ ಇಷ್ಟವಾಯಿತು. ಮುಗ್ಧ ಮಗುವಿನ ಪ್ರಶ್ನೆಗಳು ಸುತ್ತಲ ಬದುಕು, ವಾಸ್ತವ ಸ್ಥಿತಿಗೆ ಹಿಡಿದ ಕೈಗನ್ನಡಿ.
    -ಧರಿತ್ರಿ

    ReplyDelete
  7. ಸರಳ ಅಭಿವ್ಯಕ್ತಿಯಿಂದ ವಿವೇಚನಾಶೀಲತೆಗೆ ಪ್ರೇರೇಪಿಸುತ್ತದೆ.

    ನಲ್ಮೆಯ
    ಚಂದಿನ

    ReplyDelete
  8. ಜಲನಯನ ಸರ್,

    ನಿಮ್ಮ "ಗೊತ್ತಿಲ್ಲ ಮಗು" ಸಂಭಾಷಣೆ ಸರಳವಾಗಿದ್ದರೂ ಕೊನೆಯಲ್ಲಿ ವಿವೇಚನೆಗೆ ಮನಸ್ಸನ್ನು ನೂಕಿಬಿಡುತ್ತದೆ....
    ಧನ್ಯವಾದಗಳು ಸರ್..

    ReplyDelete
  9. ನಂಗೊತ್ತಿಲ್ಲ ಮಗು ಸೀರೀಸ ಬಹಳ ಚೆನ್ನಾಗಿದೆ ಸರ್, ಅದರಲ್ಲೂ ಈ ಮಾನನಷ್ಟ ಮೊಕದ್ದ್ದಮೆ ಅಂತೂ ಸೂಪರ್, ಒಂದು ಪುಟ್ಟ ರೆಕ್ವೇಸ್ಟ, ಈ ಪ್ರಶ್ನೆನಾ ಹೇಗಾದ್ರೂ ಮಾಡಿ ಹೈಲ್ಲೈಟು ಮಾಡಿ, ಇಟಾಲಿಕ್ಸನಲ್ಲಿ ಇಲ್ಲ ಬೇರೆ ಕಲರಿನಲ್ಲಿ ಹೀಗೆ, ನನಗೆ ಈ ಉದ್ದಾಕೆ ಓದೊ ಸ್ವಭಾವ ಹಾಗಾಗಿ, ಪ್ರಶ್ನೇ ಮುಗಿದದ್ದು ಗೊತ್ತಾಗುತ್ತಿರಲಿಲ್ಲ, ಇವನೇನು ನನಗೇ ಹೇಳುತ್ತಿದ್ದನಲ್ಲ ಅಂತ ಬೇಜಾರು ಮಾಡಿಕೊಳ್ಬೇಡಿ ಪ್ಲೀಜ. ಸರಿ ಎನಿಸಿದರೆ ಮಾತ್ರ ಮಾಡಿ.

    ReplyDelete
  10. super ondakkinta ondu... sir neevu blorege barodu yavaga..

    ReplyDelete
  11. ಧರಿತ್ರಿಯವ್ರೇ..ಅಲ್ರೀ..ನಿಮ್ಮನೇಲೇ ನೀವು ಸೌಂಡ್ ಮಾಡಿಲ್ಲ ಅಂದ್ಮೇಲೆ..ನಮ್ಮನೇಕಡೆ ಬಂದಿಲ್ಲ ಅನ್ನೋದು..ಹೆಚ್ಚಲ್ಲ ಬಿಡಿ..ಆದ್ರೂ..ಬಂದ್ರಿ...ಮೆಚ್ಚಿದ್ರಿ...ಕಾಮೆಂಟಿಸಿದ್ರಿ..ಸಾಕಲ್ವೇ..
    ನಾನೂ..ಬೆಂಗ್ಳೂರ್ನಾಗಿದ್ದೆ..ಅದ್ಕೇ.....ಲೇಟು...ಉತ್ತರಿಸೋಕೆ...ಸಾರಿ..ಈಗ ನನ್ನ ಕಡೇಯಿಂದ...

    ReplyDelete
  12. ಚಂದಿನಾರ..ಚಂದದ ಪ್ರತಿಕ್ರಿಯೆಗೆ..ಬಲಿಚಂದದ ವಂದನೆ...

    ReplyDelete
  13. ಶಿವು..ತಾಯ್ನಾಡಿಗೆ ಒಂದು ವಾರದ ಮಟ್ಟಿಗೆ ಬಂದಿದ್ದೆ..ಅದಕ್ಕೇ ಸಮಯ ಸಿಗಲಿಲ್ಲ..thanks ಇದು ನಿಮ್ಮ ಪ್ರೋತ್ಸಾಹದ ಫಲವೆನ್ನಲೇ..?

    ReplyDelete
  14. ಪ್ರಭು, ನಿಮ್ಮ ಮಾತಿಗೆ ನನ್ನ ವಂದನೆಗಳು...ನಮ್ಮ ಬರವಣಿಗೆ, ಶೈಲೆಗೆ ಕನ್ನಡಿ ಹಿಡಿಯಬೇಕಾದ್ದು ಬ್ಲಾಗ್ ಪ್ರೋತ್ಸಾಹಕರ ಕರ್ತವ್ಯ..ನನಗೆ ನಿಮ್ಮಿಂದ ಇದು ಸಿಗುತ್ತಿರುವುದಕ್ಕೆ ಬೇಜಾರೇಕೆ..??? ಬದಲಾಗಿ ಸಂತೋಷ...ಪ್ರಯತ್ನಿಸ್ತೇನೆ...ತಿಳಿಸಿ..ನಿಮ್ಮ ನಿರೀಕ್ಷೆಗೆ ನನ್ನ ಮುಂದಿನ ಪೋಸ್ಟ್ ಬರುತ್ತೋ ಇಲ್ಲವೋ ಅಂತ...Thanks...

    ReplyDelete
  15. ಮನಸು ಮೇಡಂ...ತುಂಬಾ..ತುಂಬಾ ಸಾರಿ ತಿಳಿಸ್ಲಿಲ್ಲ ನಿಮಗೆ...ಮಹೇಶ್ ಸಹಾ ಬೆಂಗ್ಳೂರಿಗೆ ಹೋಗಿದ್ದಾರೆ ಅಂದ್ಕೊಂಡೆ..ನಾನು ಜೂನ್ ೧೦ಕ್ಕೆ ಹೋಗಿ..೧೮ಕ್ಕೆ ವಾಪಸ್ ಬಂದೆ...ನಿಮ್ಮ ಕುವೈತ್ ವಾಪಸ್ಸಾತಿ ಯಾವಾಗ?? thanks ಅಲ್ಲೂ ಸಮಯ-ಬಿಡಿವು ಮಾಡ್ಕೊಂಡು ಬ್ಲಾಗ್ ನೋಡಿ ಪ್ರತಿಕ್ರಿಯಿಸಿದ್ದಿರಲ್ಲಾ..!!! ಟೊಪ್ಪಿಗಳು ಮೇಲೆ....(hats off...!!!)...ಹಹಹಹ....

    ReplyDelete
  16. Ravikant sir, thanks for your visit to my blog..and nice words...

    ReplyDelete