(With Permission from Shivu for using the photo)
ಮೋಡಕ್ಕೆ ಏಣಿ
ಹಾಕಿದ್ದಾರೆ ನೋಡಿ
ಪಾಪು ಪುಟ್ಟಿ ಪುಟಾಣಿ
ಮನ ಹಿರಿದು
ತನು ಕಿರಿದು
ಕನಸುಗಳಿಗೆ ಎಲ್ಲೆ-ಎಲ್ಲಿ?
ಅದಕೇ ಏರಿಸಿ
ಆಕಾಶಕ್ಕೇ ಏಣಿ
ರಾಮ, ಜೋಸೆಫ್ ರಹೀಮ
ಸುಳಿಯೋದೇ ಇಲ್ಲ ಇವರಲ್ಲಿ
ಧರ್ಮ-ತಲೆಹಿಡುಕ ಖದೀಮ
ಮರವಿಲ್ಲ್-ಮೇಲೆ ಮರಕೋತಿ
ಕುಂಟಾ ಬಿಲ್ಲೆ ಬುತ್ತಿ-ಆಟ ಚಪಾತಿ
ಮಡಿಯಿಲ್ಲ ಗಡಿಯಿಲ್ಲ
ಜತೆಗೂಡಿ ತಿನ್ನುವರಲ್ಲ
ಹೀಗೆ ಬೇಡ ಹಾಗೆ ಇರು
ಅದು ಸಲ್ಲ ಇಲ್ಲಿ ಸೇರು
ಮಕ್ಕಳಿಗೆ ಬೋಧಿಸುವ
ಪರಿ ಪರಿ ಪೀಡಿಸುವ
ನಮ್ಮ ಸಂಕುಚಿತತೆ ಹೇರುವ
ನಿಜ-ಜೀವನದ ಪಾಠಕ್ಕೆ
ಹೋಗಿ ಸೇರಬೇಕಲ್ಲವೇ
ನಾವೂ ಅವರ ಆಟಕ್ಕೆ??
Excellent! olle kavana, tumbaa mechugeyayitu.
ReplyDeleteಜಲನಯನ ಸರ್,
ReplyDeleteಕವನ ತುಂಬಾ ಚೆನ್ನಾಗಿದೆ...
ಆಜಾದ್ ಸರ್,
ReplyDeleteಕವನ ಚೆನ್ನಾಗಿದೆ.ಹೇಗಿದೆ ಕುವೈತ್ ಜೀವನ.
ಎಸ್ಸೆಸ್ಕೆಯವರೇ, ಕಲ್ಪನೆ ಮತ್ತು ಊಹೆಯ ಮೇರೆಗೆ ಲಗ್ಗೆ ಶಿವು ಅವರ ಚಿತ್ರದ್ದು ಅಕ್ಕೆ ನನ್ನ ಕೈಲಾದ ಪದ-ಬಂಧದ ಭಾವಮಂಥಿತ ಕವನ ಅಷ್ಟೆ...thanks ನಿಮ್ಮ ಪ್ರತಿಕ್ರಿಯೆಗೆ
ReplyDeleteಶಿವು ನಿಮ್ಮ ಹಲವು ಬಹು ಮೆಚ್ಚಿದ ನನ್ನ ಚಿತ್ರಗಳಲ್ಲಿ ಇದು ಅತಿ ಇಷ್ಟವಾದ ಚಿತ್ರ. ನಿಜಕ್ಕೂ ನಿಮ್ಮ ಪ್ರತಿಭೆಗೆ ಬಹುಪರಾಕ್...ನಿಮ್ಮ ಚಿತ್ರಕ್ಕೆ ಭಾವನೆಯ ಲೇಪನದ ಪ್ರಯತ್ನ ನಿಮಗೆ ಇಷ್ಟವಾದುದಕ್ಕೆ ಧನ್ಯವಾದ
ReplyDeleteಶ್ರೀಧರ್, thanks ಮನೆಗೆ ಬಂದಿರಿ ಪ್ರತಿಕ್ರಿಯಿಸಿದಿರಿ...
ReplyDeleteಜಲನಯನ...
ReplyDeleteನನಗೆ ಶಿವು ಅವರ ಇಷ್ಟವಾದ ಫೋಟೊಗಳಲ್ಲಿ ಇದೂ ಒಂದು...
ಅದಕ್ಕೆ ತಕ್ಕದಾದ ರೀತಿಯಲ್ಲಿ ನಿಮ್ಮ ಕವನ...
ಜುಗಲ್ಬಂದಿ ಚೆನ್ನಾಗಿದೆ...!
ಇಬ್ಬರಿಗೂ ಅಭಿನಂದನೆಗಳು...
ಶಿವು ಅವರು ಮೋಡಕ್ಕೆ ಹಾಕಿದ ಏಣಿಯನ್ನು ನೀವು ಕವನದ ಮೂಲಕ ಏರಿದ್ದೀರಿ. ನಿಮ್ಮಿಬ್ಬರಿಗೂ ಅಭಿನಂದನೆಗಳು.
ReplyDeleteಮಡಿಯಿಲ್ಲ ಗಡಿಯಿಲ್ಲ
ReplyDeleteಜತೆಗೂಡಿ ತಿನ್ನುವರಲ್ಲ
ಈ ಸಾಲುಗಳು ಅತ್ಯಂತ ಚೆನ್ನಾಗಿವೆ...
ಸುನಾಥ್ ಸರ್,
ReplyDeleteಶಿವು ಮೋಡಕ್ಕೆ ಹಾಕಿದ ಏಣಿ..ಕಲ್ಪನೆಯ ಪರಾಕಾಷ್ಟೆಗೆ ಅವರಿಟ್ಟ್ ಲಗ್ಗೆ...ಅದಕ್ಕೆ ಒಂದು ಪದ ಜೋಡಣೆಯ ಪ್ರಯತ್ನ ನನ್ನ ಮಿತಿಯಲ್ಲಿ...thanks ನಿಮ್ಮ responseಗೆ
ಮಕ್ಕಳಲ್ಲಿ ಲೇಶವೂ ಭೇದ ಭಾವ ಕಾಣದು..ಇದೇ ಅವರನ್ನು ಒಬ್ಬರಿಗೊಬ್ಬರು ಹತ್ತಿರ ತರುವಲ್ಲಿ ಸಹಕಾರಿ...thanks ಪ್ರಭು response
ReplyDeletesuper kavana sir
ReplyDeleteಧನ್ಯವಾದ ಮನಸಿಗೆ...
ReplyDeleteಭಾವಮಂಥನ ನಿಮ್ಮ ಕವನಕ್ಕೆ ಉತ್ತರ ನೀಡಿದೆ..ಭೇಟಿ ಕೊಡಿ
ಸುಂದರ ಕವನ.’ಮಡಿ ಇಲ್ಲ, ಗಡಿ ಇಲ್ಲ’ ಈ ಪುಟ್ಟ ಸಾಲು ಏನೆಲ್ಲ ತುಂಬಿಕೊಂಡಿದೆ ತನ್ನಲ್ಲಿ!! ಜಲನಯನ, ನಿಮ್ಮಂಥ ರಂಗಾಸಕ್ತ ವಿಜ್ಞಾನಿಗಳ ಪರಿಚಯಯಾದುದ್ದು ನನಗೂ ಸಂತಸ ತಂದಿದೆ. ‘ಮಂಗಳತ್ತೆ’ಯನ್ನು ಅವಳ ನಿಷ್ಠುರತೆಗೆ ಎಲ್ಲರೂ ಬೈಯೋರೇ ಆದ್ದರಿಂದ ನಿಮಗೆ ಆಕೆ ಇಷ್ಟವಾಗದ್ದು ಅಚ್ಚರಿಯೇನಲ್ಲ. ನಿಮ್ಮ ನಿರ್ಬಿಢೆಯ ಮಾತುಗಳು ಓದಿ ಖುಷಿ ಆಯ್ತು.
ReplyDeleteಜಯಕ್ಕ ಎನ್ನಬಹುದೇ,..? ಕೇಳೋದೇನುಬಂತು...ಹಾಗೇ ಕರೀತೇನೆ ಆಯ್ತಾ...?..!!
ReplyDeleteಜಯಕ್ಕ...ಬ್ಲಾಗಿಗೆ ಬಂದು ಆಶೀರ್ವಾದ ತುಂಬಿದ ಹಿತನುಡಿಯನ್ನು ಟೈಪಿಸಿ ಪ್ರೋತ್ಸಾಹಿಸಿದ್ದೀರ. ಮಂಗಳತ್ತೆ ನಿಷ್ಟುರಳಾದಳು...!! ಅಂದರೆ ಆ ಪಾತ್ರಕ್ಕೆ ಎಷ್ಟು ಜೀವ ತುಂಬಿದ್ದೀರಾ ಎನ್ನುವುದು ವಿದಿತ ಅಲ್ಲವೇ...??? ನನಗೆ ನನ್ನ scientific research ಜೊತೆಗೆ ಬರೆಯುವ ಹುಚ್ಚು ಸ್ವಲ್ಪ ಇದೆ...ಇದಕ್ಕೂ ಮುಂಚೆ ನಾಟಕ ನನ್ನ ಮೊದಲ part-time lover...
ಧನ್ಯವಾದ ಅಕ್ಕ ಪ್ರೋತ್ಸಾಹಕ್ಕೆ...
ಶಿವೂ ಅವರ ಫೋಟೋ ಸೂಪರ್.....ಒಳ್ಳೆ imagination ...... ಶಿವೂ ಅವರು ಅನಿಮೇಷನ್ ಮಾಡಿರುವ ಚಿತ್ರಗಳನ್ನು ನೋಡಿರಲಿಲ್ಲ.....ಪರಿಚಯಿಸಿದ್ದಕ್ಕೆ ಧನ್ಯವಾದಗಳು
ReplyDeleteಅದಕ್ಕೆ ತಕ್ಕುದಾದ ನಿಮ್ಮ ಕವನ ಕೂಡ.... ವೆರಿ ನೈಸ್....
ಗುರು, ಶಿವು ಅವರ ಹಲವಾರು ಚಿತ್ರಗಳು ನನ್ನ ಗಮನ ಸೆಳೆದವು...ನನಗೆ ಸಿಕ್ಕ ಕೆಲವನ್ನು ನನ್ನ ಲ್ಯಾಪ್ ಟಾಪ್ ನಲ್ಲಿ store ಮಾಡಿಟ್ಟುಕೊಂಡು ಆಗೊಮ್ಮೆ ಈಗೊಮ್ಮೆ..ಪದ-ಭಾವ ಲೇಪಿಸುವ ಪ್ರಯತ್ನದ ಇಛ್ಚೆ ನನ್ನದು. Thanks ನಿಮ್ಮ ಪ್ರೋತ್ಸಾಹಕ್ಕೆ..
ReplyDelete