Friday, July 3, 2009

ಕನಸಲ್ಲೇ ಇರಲು ಬಿಡಿ



ಅನ್ನಕೆ ಬೇಕಾದ ಮಾಡೋದಕೆ ನಾವು
ಚಿನ್ನ ತೆಗೆಯೋದಕ್ಕೆ ನಾವು
ಕನ್ನ ಕೊರ್ದು ಬಾಚ್ಕೊಂಡು
ದರ್ಬಾರು ಮಾಡೋಕೆ ನೀವು

ಅಕ್ಷರ ಕಲಿಸೋರು ನಾವು
ಮತ್ಸರ ಉಡುಗಿಸೋರು ನಾವು
ನಮ್ಮ ಶತೃಗಳ ಜೊತೆ ವ್ಯವಹಾರ
ಮಾಡಿ ಮಜಾ ಮಾಡೋಕೆ ನೀವು

ಕರೆಂಟಿಲ್ಲದ ಮನೇಲಿ ನಾವು
ಬಂಜರಲ್ಲಿ ಬೆಳಿಯೋಕೂ ನಾವು
ಓದೋಮಕ್ಕಳಿಗೆ ದೀಪಾನೂ ಕೊಡ್ದೋರು..
ಕತ್ತಲಲ್ಲಿ ಪರ್ದಾಡೋರು ನಾವು
ಸಾವ್ರಾರು ದೀಪಾನ ಹಗಲಲ್ಲೂ
ಮನೇ ತುಂಬ ಉರಿಸೋರು ನೀವು

ನೂರು ಜನ ತಿನ್ನೋದನ್ನ ಚಲ್ಲಾಡಿ
ತಿಂದೂ ತಿನ್ನದಹಾಗೆ ಒಬ್ಬರೇ ತಿಂತೀರ
ಒಬ್ಬರು ಚಲ್ಲಾಡಿ ತಿನ್ನೋದು ಕೊಡಿ
ಹತ್ತು ಬಡವ್ರ ಹೊಟ್ಟೆ ತುಂಬುತ್ತೆ
ಅನ್ನೋದನ್ನ ಯಾಕೆ ಮರೀತೀರಾ?
ಸಾವ್ರ ದೀಪ..ಒಂದೇ ಮನೆ
ಒಂದೊಂದಾದ್ರೂ ದೀಪ ಸಾವ್ರ ಮನೆ
ಬೆಳ್ಗುತ್ತೆ.. ಬೆಳ್ಯುತ್ತೆ ಇಷ್ಟಾದರೂ ಕಲೀತೀರಾ..?

ಇದ್ದೋರು ಇಲ್ದೋರ್ಗೆ ಕೊಡೋದು ಕಲಿತ್ರೆ
ಇದ್ದೋರು-ಇಲ್ದೋರು ಅನ್ನೋ ಭೇದ ಇರುತ್ತಾ?
ಕುರ್ಚೀಲಿ ಕೂತು ದರ್ಬಾರ ಮಾಡೋರು
ಗುಡ್ಲಲ್ಲಿರೋರ ಸುಖ-ದುಃಖ ಅರಿತರೆ
ಹೊಟ್ಟೇಗಿಲ್ದೆ ಸಾಯೋರು, ಬಟ್ಟೇ ಇಲ್ದೇ ಬೇಯೋರು....,
ಓಹ್..ಹೀಂಗೂ ನನ್ ಕನಸು ನನಸಾಗ್ತದಾ,,??
ಹಗಲ್ಗನಸು ಅಲ್ಲ ಇದು ಎದ್ದು ನೋಡು ನನಸು....!!
ಅಂತ ಯಾರಾದರೂ ನನ್ನ ಎಚ್ಚರಿಸೋ ಕಾಲ ಬರುತ್ತಾ???
ಹಾಗೊಂದು ವೇಳೆ ..ಇಲ್ಲ ಅಂದ್ರೆ....
ನನ್ನನ್ನ ನನ್ನ ಕನಸಲ್ಲೇ ವಿಹರಿಸಲು ಬಿಡಿ.

22 comments:

  1. ಜಲನಯನ ಅವರೇ...

    ಸರಳ ಪದಗಳಿ೦ದ ಕೂಡಿದ ಈ ಕವನ ತಾನು ಏನು ಹೇಳಬೇಕೆ೦ದಿದೆಯೋ ಅದನ್ನು ಸಶಕ್ತವಾಗಿ ಹೇಳಿದೆ... ಮೆಚ್ಚುಗೆಯಾಯಿತು ಕವನ...

    ಮತ್ತೆ ಬರುತ್ತೇನೆ...

    ReplyDelete
  2. ಜಲನಯನ...
    ನಿಜವಾಗ್ಲೂ ತುಂಬಾ ಇಷ್ಟ ಆಯಿತು ಇ ನಿಮ್ಮ ಸರಳ ಕವನ....ತುಂಬ ಚೆನ್ನಾಗಿ ವಾಸ್ತವವನ್ನು ವಿವರಿಸಿದ್ದಿರ.....very much impressed...
    ಹೀಗೆ ಬರೀತಾ ಇರಿ......
    ಗುರು

    ReplyDelete
  3. ಜಲನಯನ ಅವರೇ,
    ಸಕತ್ ಚೆನ್ನಾಗಿದೆ ನಿಮ್ಮ ಈ ಕನಸಿನ ಬಗ್ಗೆಯ ಕವನ. ಇದಂತೂ ಈಗಿನ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ!

    ReplyDelete
  4. ಆಕ್ರೋಶದ ಕವನಕ್ಕೆ ಯೋಗ್ಯವಾದ ಭಾಷೆ ಇದೆ. ಅದಕ್ಕೆ ತಕ್ಕಂತಹ ಚಿತ್ರವನ್ನೂ ಕೊಟ್ಟಿದ್ದೀರಿ. ಅಭಿನಂದನೆಗಳು.

    ReplyDelete
  5. ಸುಧೇಶ್, ಎಂತಾ ಮಾರಾರೆ...ಎಂಚೆ ಉಳ್ಳೆರ್...
    ನನ್ನ ಬ್ಲಾಗಿಗೆ ಬಂದು ಮನಸಾ ಎರಡು ವಾಕ್ಯ ಪ್ರೋತ್ಸಾಹದ್ದು ಬರೆದಿದ್ದೀರಾ...ಬಹಳ ಸಂತೋಷ...mutual ಮುಂದುವರೆಸೋಕೆ..ನನ್ ಒಪ್ಪಿಗೆ ...
    Thanks for coming...

    ReplyDelete
  6. ಏನ್ ಗುರು ಬಹಳ ದಿನಗಳ ನಂತರ ದರ್ಶನ ಕೊಟ್ಟ್ರಿ...thank ಬಂದಿದ್ದಕ್ಕೆ...ಇಷ್ಟ ಆಯ್ತಾ..? ಅನಿಸೋದನ್ನ ಗೀಚೋದು ನನ್ ಸ್ವಭಾವ..ಅದರಲ್ಲಿ ಭಾವ ಬಂದಿದೆ ಅಂದರೆ ಸಾರ್ಥಕ ಮನೋಭಾವ...ಅಲ್ವೇ..?? ಬರ್ತಾಯಿರಿ....

    ReplyDelete
  7. ಎಸ್ಸೆಸ್ಕೆ, ನಿಮ್ಮ ತಪ್ಪದೇ ನಮ್ಮ ಗೋಡಿಗೆ ಬರುವ ಮತ್ತು ಒಂದೆರಡು ಪ್ರೋತ್ಸಾಹದ ಪಾದ ಬರೆಯುವ ಮನೋಭಾವಕ್ಕೆ...ನಮನ...ಮನದಾಳದ ಮಾತುಗಳನ್ನು ಅದರಲ್ಲೂ ಪರದೇಶದಲ್ಲಿ...ಹೊರಹಾಕಬೇಕಾದ್ರೆ ಬ್ಲಾಗ್ ಬಹುಮುಖ್ಯ ಮಾಧ್ಯಮ..thanks ನಿಮ್ಮ ಭೇಟಿಗೆ ಮತ್ತು ಮಾತಿಗೆ..

    ReplyDelete
  8. ಸುನಾಥ್ ಸರ್,
    ನಿಮ್ಮಿಂದ ನಾನು ಇದಕ್ಕಿಂತ ಹೆಚ್ಚಿನದನ್ನೇ ನಿರೀಕ್ಷಿಸಿರುತ್ತೇನೆ...ನಿರೀಕ್ಷಿಸುತ್ತೇನೆ ಸಹಾ...ನಿಮ್ಮ ಟೀಕೆ ನನಗೆ ಸಹಕಾರಿ...ಪದ ಬಳಕೆಯಲ್ಲಿ ಸೂಚನೆ..ಮಾರ್ಪಾಡು ಇದ್ದರೆ ದಯಮಾಡಿ ತಿಳಿಸಿ...
    ನಿಮ್ಮ ಮಾತುಗಳಿಗೆ ನನ್ನ ಧನ್ಯವಾದಗಳು..

    ReplyDelete
  9. ಜಲನಯನ,
    ತುಂಬಾ ಭಾವನೆ ಇರೋ ಕವನ, ನಿಮ್ಮ ಕನಸು ನನಸಾಗುತ್ತೆ ಕಾಯ್ತಾ ಇರಿ, ಸರ್ವೇ ಜನ ಸುಖಿನೋ ಬವಂತು ಏನಂತಿರ?

    ReplyDelete
  10. ಡಾ. ಮೂರ್ತಿಯವರಿಗೆ ಸ್ವಾಗತ...ನಿಮ್ಮ ಹಾಗೆ ನಾನೂ ಹೊರನಾಡಿನಲ್ಲಿ...ನಿಮಗೂ ನನಗೂ ಇದೇ ವೇದಿಕೆ ಭಾವನೆಗಳನ್ನು ಹೊರಗೆಡವಲು.
    Thanks...ನಿಮ್ಮ ಪ್ರತಿಕ್ರಿಯೆಗೆ..

    ReplyDelete
  11. ಜಲನಯನ ಸರ್,

    ವಾಸ್ತವತೆಯನ್ನು ಎಷ್ಟು ಚೆನ್ನಾಗಿ ಕವನದಲ್ಲಿ ಬರೆದಿದ್ದೀರಿ...

    ReplyDelete
  12. ಶಿವು, thanks
    ಮತ್ತೆ ಯಾವುದೂ ಹೊಸ ಪ್ರವಾಸ..ಹೊಸ ಚಿತ್ರಗಳಗುಛ್ಚ...ಏನಿಲ್ಲವೇ..?? ನಿಮ್ಮ ಚಿತ್ರ ನಮಗೂ ಸ್ಪೂರ್ತಿಕೊಡುತ್ತೆ ದೊರೆ..ಇಲ್ಲ ಅಂದ್ರೆ ನಮ್ಮ ಕವನ-ಕವಿತೆ...ಯಾವ್ದೂ ಸಪ್ಪೇನೇ...

    ReplyDelete
  13. ಹಂತ ಹಂತವಾಗಿ ಬಂಡಾಯವನ್ನು ಕವನದಲ್ಲಿ ಬೆಳೆಸುತ್ತ ಹೋಗಿದ್ದೀರಿ, ಬಡವನ ಹತಾಷೆಯನ್ನು ತೀರ ಸರಳವಾಗಿ ಬರೆದಿದ್ದೀರಿ. ಚೆನ್ನಾಗಿದೆ..

    ReplyDelete
  14. ಜಲನಯನ ಸರ್,

    ಸದ್ಯದಲ್ಲಿಯೇ ಹೊಸ ಚಿತ್ರಗಳನ್ನು ಕೊಡುತ್ತೇನೆ...ಅದರ ಬಗ್ಗೆ[ಸ್ಪರ್ಧಾತ್ಮಕ ಚಿತ್ರಗಳು] ಕಾರ್ಯಗತನಾಗಿದ್ದೇನೆ..ನನ್ನ ಚಿತ್ರಗಳು ನಿಮ್ಮ ಬರಹಕ್ಕೆ ಸ್ಫೂರ್ತಿನೀಡುತ್ತವೆ ಅಂತ ಹೇಳಿರುವುದು ನನಗಂತೂ ಖುಷಿಯಾಗುತ್ತಿದೆ...ಧನ್ಯವಾದಗಳು.

    ReplyDelete
  15. ಪ್ರಭು, ನಿಮ್ಮ ತಪ್ಪದ ಪ್ರತಿಕ್ರಿಯೆಗೆ ಆಭಾರ ವ್ಯಕ್ತಪಡಿಸದೇ ಇರಲಾರೆ.
    ನನಗೆ ಬಂಡಾಯಕ್ಕಿಂತ ನಮ್ಮ ಅಸಹಾಯಕತೆ ಬಗ್ಗೆ ಹೆಚ್ಚು ಕೋಪ ಬರುತ್ತೆ...ಸಂಘಟಿತರಾದರೆ ಇದೇನೂ ದೊಡ್ಡದಲ್ಲ..ಆದರೆ ನಾವು ತಿಳಿದೋ ತಿಳಿಯದೆಯೋ ಜಾಗೃತರಾಗುತ್ತಿಲ್ಲ ಎನ್ನುವುದು ವಿಷಾದನೀಯ.
    ಧನ್ಯವಾದಗಳು

    ReplyDelete
  16. ಶಿವು...ಕಾತರತೆಯಿಂದ ಕಾಯುತ್ತಿದ್ದೇನೆ..ನನ್ನಹಾಗೆ ಇನ್ನೂ ನನ್ನ ಮಿತ್ರರೂ..ನಿಮ್ಮ ಚಿತ್ರ ಪ್ರೇಮಿಗಳೂ..!! ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ, ನಿಮಗೆ ಮೆಚ್ಚುಗೆಯಾಗಬಹುದೆಂದು ಆಶಿಸುತ್ತೇನೆ...ತಪ್ಪಾದರೆ ಕ್ಷಮಿಸಬೇಕು..ಮತ್ತೆ..??!!!

    ReplyDelete
  17. ಜಲನಯನ.....

    ಬೆಂಗಳೂರಲ್ಲಿ ಮಳೆ ಇಲ್ಲದಿದ್ದರೂ..
    ಟ್ರಾಫಿಕ್ ಸಮಸ್ಯೆ...
    ಇಲ್ಲಿಗೆ ಬರ್ಲಿಕ್ಕೆ ತಡ ಆಗಿದೆ....
    ಕ್ಷಮೆ ಇರಲಿ....

    ಭಾಷೆಯಲ್ಲಿ ಹಿಡಿತ...
    ಭಾವದ ತುಡಿತ...
    ಚೆನ್ನಾಗಿ ವ್ಯಕ್ತವಾಗಿದೆ....

    ಅಭಿನಂದನೆಗಳು...

    ReplyDelete
  18. ಪ್ರಕಾಶ್, ಎಲ್ಲಿಗೆ...??? ಊರಿಗೆ ಹೋಗಿದ್ದಿರಾ ಹೇಗೆ...?? ಭೇಟಿ ಕೊಟ್ರಲ್ಲಾ...ಅಷ್ಟು ಸಾಕು...ಮೇಲೆ..ಮುದವಾದ ಪ್ರತಿಕ್ರಿಯೆ...ಅದೇನೋ ಹೇಳ್ತಾರಲ್ಲಾ...ಸೋನೆಪೆ ಸುಹಾಗ..ಹಾಗೆ...thanks...ಬೆಂಗಳೂರಿಗೆ ನಾನು ಬರುವ ವೇಳೆಗೆ (ಆಗಸ್ಟ್ ನಲ್ಲಿ ೧೫ ದಿನದ ಭೇಟಿಯ ಇರಾದೆಯಿದೆ..) ಮಳೆ ಪ್ರಾರಂಭವಾಗಿರುತ್ತೆ...

    ReplyDelete
  19. ಜಲನಯನ,
    ಬಹಳ ಚೆನ್ನಾಗಿ ವಾಸ್ತವವನ್ನು ನಿಮ್ಮ ಕವನದಲ್ಲಿ ವಿವರಿಸಿದ್ದಿರ.....ನಿಮ್ಮ ಕನಸು ನನಸಾಗಲಿ ಬೇಗ ಅಂತ ಹಾರೈಸುತ್ತೇನೆ.

    ReplyDelete
  20. ಮಹೇಶಣ್ಣ...ಏನಣ್ಣ...ಪುಟ ತಿರ್ಗಿಸಿ..ಕಾಮೆಂಟ್ ಅಂಟ್ಸಿದೀರಾ..?? ನನ್ನದೇ ಅಲ್ಲ ನಿಮ್ಮದೂ ಅದೇ ಕನಸಲ್ಲವೇ...???

    ReplyDelete
  21. ವ್ಹಾ! ಚಿತ್ರ ಮತ್ತು ಕವನದ ಭಾವಾರ್ಥ ಎರಡೂ ಚೆನ್ನ.

    ReplyDelete
  22. ಜಯಕ್ಕ...ವಾವ್..!! ಇಲ್ಲೀವರೆಗೂ...ಪುಟ ಹಿಂದಕ್ಕೆ ಬಂದು ಬೆನ್ನು ತಟ್ಟಿದ್ದೀರಿ...ಥ್ಯಾಂಕ್ಸ್...ನನ್ನ ಸಂಶೋಧನೆಗಳ ಗೋಜಲುಗಲ ಮಧ್ಯೆ...ಈ ಬ್ಲಾಗು..ನಿಮ್ಮಂಥ ಹಿರಿ-ಕಿರಿಯರ ಪ್ರೋತ್ಸಾಹ..
    ನಿಜಕ್ಕೂ ನನ್ನ ಕೆಲಸದಲ್ಲಿ ಹೊಸ ಲವಲವಿಕೆ ಬಂದಿದೆ...

    ReplyDelete