ಕನಸು
ಕಣ್ಣು
ಮುಚ್ಚಿದಾಗ
ಕಾಣುವುದು
ಹೆಂಡತಿ
ತಾಳಿಕಟ್ಟಿದವಗೆ
ತಾಯಿ
ಇಳಿವಯಸ್ಸಿನಲ್ಲಿ
ಕವಿ
ಕಂಡರೂ
ಕಾಣದ್ದನ್ನು
ವಿವರಿಸಿದವ
ಕಣ್ಣೀರು
ನೋವಿಗೂ
ನಲಿವಿಗೂ
ಒಂದೇ ಉತ್ತರ
ತುಂಟಾಟ
ವಯಸ್ಸರಿಯದೇ
ಎಲ್ಲರೂ ಆಡುವ
ಆಟ
ರಾಜಕಾರಣಿ
ರೊಟ್ಟಿ ಜಗಳದಲ್ಲಿ
ಬೆಕ್ಕುಗಳಿಗೆ
ರೊಟ್ಟಿ ಹಂಚಿದವ
ಈಗಿನ ಮಕ್ಕಳು
ಬಾಲ್ಯದಲಿ- ಬೇಡಿ ಕಾಡುವರು
ಯವ್ವನದಲಿ - ಕಾಡಿ ಬೇಡುವರು
ಮದುವೆ ಮಕ್ಕಳಾದರೆ - ಕಾಡಿ ಕಾಡುವರು
ವೃದ್ಧಾಶ್ರಮಕೆ ಓಡಿಸುವರು
ಲಂಚ
ಕೊಂಚ
ಇನ್ನೂ ಕೊಂಚ
ಎಂದು ತಿಂದ
LUNCHಉ
ಜಲನಯನ,
ReplyDeleteಪ್ರತಿಯೊಂದು ಹನಿಯೂ ವಿಚಾರ, ವಿವೇಕ ಹಾಗೂ ವಿನೋದದಿಂದ ತುಂಬಿದ ಜೇನಹನಿಯಾಗಿದೆ. ತುಂಬಾ ಇಷ್ಟವಾದವು.
ಜಲನಯನ ಸರ್,
ReplyDeleteಪ್ರತಿಯೊಂದು ಚುಟುಕುಗಳು ಅದರದೇ ಆದ ರುಚಿಯನ್ನು ಹೊಂದಿದ್ದು...ಒಂದೊಂದನ್ನು ಮೆಲ್ಲುತ್ತಾ ಸವಿಯನ್ನು ಅನುಭವಿಸಿದಂತಾಯಿತು...
ಬ್ಲಾಗ್ ಪೋಸ್ಟ್ ಮಾಡುತ್ತಿದ್ದಂತೇ ಎಣಿಸಿದ್ದೆ...ಸುನಾಥ ಸರ್ ದೇ ಮೊದಲ ಪ್ರತಿಕ್ರಿಯೆ ಆಗಿರುತ್ತೆ ಅಂತ...ನೀವು ನನ್ನ ಎಣಿಕೆ ತಪ್ಪುಮಾಡಲಿಲ್ಲ...ಎಂದಿನಂತೆ ಪ್ರೋತ್ಸಾಹಕ ಪ್ರತಿಕ್ರಿಯೆ..ಧನ್ಯವಾದಗಳು...
ReplyDeleteಚುಟುಕು-ಗುಟುಕಾಗಿದ್ದು..ನನ್ನ ಸೃಜನಶೀಲ ‘ಎಣ್ಣೆ‘ ಸ್ನೇಹಿತ ಹೇಳೋತರಹ ಪೆಗ್ ಕೊಡೋ ಕಿಕ್ ಅಂತ..
ReplyDeleteಶಿವು..ನನ್ನ ಚುಟುಕಾನ ಇಷ್ಟಪಟ್ಟಿದ್ದಕ್ಕೆ ಮತ್ತು ತಪ್ಪದೇ ನನ್ನ ಪೋಸ್ಟ್ ಗಳಿಗೆ ಪ್ರತಿಕ್ರಿಯೆ ನೀಡುತ್ತಿರುವುದಕ್ಕೆ ಧನ್ಯವಾದಗಳು...
ಪ್ರತಿಯೊಂದು ಹನಿಗಳು...
ReplyDeleteಹೆಜ್ಜೇನು ತುಪ್ಪದ ಹನಿಗಳು...
ಮತ್ತೊಮ್ಮೆ, ಮಗದೊಮ್ಮೆ ಮೆಲುಕುಹಾಕುವಂತಿವೆ...
ಅನುಭವದ ಮುತ್ತುಗಳು...
ಸುಂದರವಾದ ಚುಟುಗಳಿಗೆ ಅಭಿನಂದನೆಗಳು..
ಆಝಾದ್ ಸರ್....
ವಾವ್...ಚುಟುಕಗಳು...!
ReplyDeleteಒ೦ದೊ೦ದು ಚಮತ್ಕಾರವಾಗಿ ಮೂಡಿ ಬ೦ದಿದೆ ಜಲನಯನ ಸಾರ್...
ಕವಿ
ಕಂಡರೂ
ಕಾಣದ್ದನ್ನು
ವಿವರಿಸಿದವ
ಹೌದಲ್ಲ:)
ಪ್ರಕಾಶ್
ReplyDeleteಬೆನ್ನುತಟ್ಟುವವರಿರುವರೆಗೆ
ಪೆನ್ನು ಬಿಡೆನದುವರೆಗೆ, thanks
ಸುಧೇಶ್ರೇ,
ReplyDeleteಚುಟುಕಕ್ಕೆ ಎಟುಕುವಂತೆ
ಮೊಟಕು ಶ್ಲಾಘನೆ, ಪ್ರತಿಕ್ರಿಯೆ ನೀಡಿದ್ದೀರಿ..
ಕವಿಯಾದರೆ..ನಾನು ಸೂರ್ಯನೆದುರಲಿ ಬೆಳದಿಂಗಳ ಹರಡಿ ಸವಿ ತಂಪನೆರೆವೆ...ಎನ್ನೋಣವೇ..?.
ಧನ್ಯವಾದಗಳು
ವಾಹ್ ..ಸಿಂಪ್ಲಿ ಸೂಪರ್...
ReplyDeleteಎಲ್ಲ ಕವನಗಳು ಅನುಭವದ ಮಾತಿನಂತಿದೆ....
"ಈಗಿನ ಮಕ್ಕಳು
ಬಾಲ್ಯದಲಿ- ಬೇಡಿ ಕಾಡುವರು
ಯವ್ವನದಲಿ - ಕಾಡಿ ಬೇಡುವರು
ಮದುವೆ ಮಕ್ಕಳಾದರೆ - ಕಾಡಿ ಕಾಡುವರು
ವೃದ್ಧಾಶ್ರಮಕೆ ಓಡಿಸುವರು"
ಎಷ್ಟು ಅರ್ಥ ಇದೆ..... :-) ಗುಡ್
ಲಂಚ್-ಲಂಚ ಬಗ್ಗೆ ಬರೆದ ಚುಟುಕ ಎಲ್ಲಕ್ಕಿಂತ ಸೂಪರ್...
ReplyDeleteಚುಟ್ಕಾನೋ ಗುಟ್ಕಾನೋ.....ಕಿಕ್ ಅಂತೂ ಇತ್ತು...ಒಂದೊಂದು ಪದದ ಜೋಡಣೆಯೂ ಸೂಪರ್.....ಮತ್ತಷ್ಟು ಬರಲಿ
ReplyDeleteಗುರು, ಧನ್ಯವಾದ...ಅನುಭವದ ಮಾತು..??!! ನಿಮ್ಮ ಮಾತು ೫೦:೫೦ ಸರಿ, ವೃದ್ಧಾಶ್ರಮದ ಮಾತು...ಖಂಡಿತಾ ಇಲ್ಲ,,
ReplyDeleteಅಪ್ಪ-ಅಮ್ಮನ್ನ ಚನ್ನಾಗೇ ನೋಡ್ಕೋತಿದ್ದೇವೆ....ನಾವು..ಹೊರಗೆ...ಹಾಗೇ ನೋಡಿದರೆ,...
ಲಂಚನ್ನ ಮಿತಿಯಲ್ಲದೇ ತಂದರೆ ಅಜೀರ್ಣ, ನಂತರ ಇನ್ನೂ ಮಿತಿಮೀರಿದರೆ ಖಾಯಿಲೆ...ಆದ್ರೆ ಈ ತಿಮಿಂಗಿಲಗಳು...ಏನು ತಿನ್ನುತ್ವೇ..?? ಲೋಕಾಯುಕ್ತರೇನು..ಬ್ರಹ್ಮಾಂಡಾಯುಕ್ತ ಬಂದರೂ ನಾಯಿ ಬಾಲ ಡೊಂಕೇ...??
ReplyDeleteಪ್ರಭು, ಚುಟುಕಗಳನ್ನ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದೀರಿ..ಧನ್ಯವಾದಗಳು...
ReplyDeleteಮಹೇಶ್, ಏನ್ರಪ್ಪಾ...ಕಿಕ್ ಜೋರಾಗಿದೆಯೇ ಇಲ್ಲವೇ? ಯಾವುದಕ್ಕೂ ಪಂಚ್ ಎನ್ನಿ..ಕಿಕ್ ಅನ್ನಿ ಜೋರಾಗಿರಬೇಕು...
ReplyDelete"ಕಣ್ಣೀರು
ReplyDeleteನೋವಿಗೂ
ನಲಿವಿಗೂ
ಒಂದೇ ಉತ್ತರ"
ಈ ಚುಟುಕು ಚೆನ್ನಾಗಿದೆ.
ಜಯಕ್ಕ ಕೊನೆಗೂ ಬಂದ್ರಲ್ಲ?? ಪ್ರತಿಕ್ರಿಯೆಗೆ...
ReplyDeleteನನ್ನ (practicle ನಡೆದದ್ದು ನಮ್ಮ ಲ್ಯಾಬ್ ನಲ್ಲೇ....) ಜೋಕ್ ಪೋಸ್ಟ್ ಇದೆ ಓದಿ ಬರೆಯಿರಿ..ನಗ್ತಾ.... ಪೋಸ್ಟ್ ಏನುಗೊತ್ತೇ...?? ‘ಹಾಡು ವಿಥ್ ಮ್ಯೂಜಿಕ್‘....ಜಲನಯನದಲ್ಲಿ ಬಹುಶಃ ಜೂನ್ ನಲ್ಲಿ ಪೋಸ್ಟ್ ಮಾಡಿದ್ದೇನೆ...ಆಯ್ತಾ...??
ಕಣ್ಣೀರು
ReplyDeleteನೋವಿಗೂ
ನಲಿವಿಗೂ
ಒಂದೇ ಉತ್ತರ s akkatta:gide