Wednesday, July 15, 2009

ಗೊತ್ತಿಲ್ಲ ಮಗು

ಅಪ್ಪಾ..
ಏನು ಮಗು..?
ನಾನು.. ರಾಮು.. ಗೆಳೆಯರಾದ್ರೆ
ಏನಪ್ಪ ತಪ್ಪು...??
ಯಾರು ಹೇಳಿದ್ರು ತಪ್ಪು ಅಂತ..?
ಗೆ.. ಎಳೆಯರಾದ್ರೆ ತಪ್ಪಿಲ್ಲ
ಗೆ.. ಬೆಳೆದಮೇಲೆ ಸರಿಯಲ್ಲ..??
ಅದೇ ಗೇ...ಒಳ್ಳೆಯದಲ್ಲ
ನಮ್ಮ ಸಂಸ್ಕೃತಿ ಕಲಿಸಿದ್ದಲ್ಲ ಅಂತಾರಲ್ಲ?
ನಂಗೊತ್ತಿಲ್ಲ ಮಗು...


ಅಪ್ಪಾ...
ಹೇಳು ಮಗು
ಕೋಟಿ ಕೋಟಿ ಅಂತ ಅಕ್ರಮ ಆಸ್ತಿ
ಲೋಕಾಯುಕ್ತರು ಹಿಡೀತಿದಾರಲ್ಲ..?
ಇದೆಲ್ಲಾ ಲಂಚದ ಹಣಾ..ಆಸ್ತೀನೇ..??
ಹೌದಪ್ಪ ಅದಕ್ಕೇ ಅವರನ್ನ ಹಿಡಿಯೋದು..
ಮತ್ತೆ ಅವರಿಗೆ ಶಿಕ್ಷೆ ನಮಗೆ ಕೊಡೋಕೆ ಆಗೊಲ್ಲ
ಅಂತಾರಲ್ಲಾ ..ಮತ್ತೆ ಯಾರು..ಸರ್ಕಾರ ಕೊಡುತ್ತಾ..??

ಹೌದು ಮಗು ಸರ್ಕಾರಾನೇ ಕೊಡ್ಬೇಕು..
ಮತ್ತೇ..ಅಕ್ರಮ ಸಕ್ರಮ ಮಾಡ್ತೀವಿ ಅಂತಾರಲ್ಲ ಮಂತ್ರಿಗಳು...??
ನಂಗೊತ್ತಿಲ್ಲ ಮಗು.

25 comments:

  1. ಮಗುವಾಗಿದ್ದಾಗ ನಾವೂ ಇದೇ ರೀತಿ ಪ್ರಶ್ನಿಸುತ್ತಿದ್ದೆವೇನೋ... ಚೆನ್ನಾಗಿದೆ...
    ನನ್ನ ಟೂನ್ ತೂಫಾನ್ ಬ್ಲಾಗ್ ನ follower ಆಗಿದ್ದಕ್ಕೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ತುಂಬಾ thanks...
    ಕನ್ನಡದಲ್ಲೂ ವ್ಯಂಗ್ಯಚಿತ್ರ ರಚಿಸಿ ನನ್ನ ಕನ್ನಡ ಬ್ಲಾಗ್ ನಲ್ಲಿ post ಮಾಡಿದ್ದೇನೆ...ಯಾವಾಗಲಾದರೂ ಬಿಡುವಿದ್ದಾಗ ಭೇಟಿ ಕೊಡಿ...

    ದಿಲೀಪ್ ಹೆಗಡೆ

    ReplyDelete
  2. ಜಲನಯನ ಸರ್,

    ಮಗುವಿನ ರೀತಿಯಲ್ಲಿ ಪ್ರಶ್ನೆಯನ್ನು ಕೇಳಿಸುತ್ತೀರಿ...ನಂತರ ಗೊತ್ತಿಲ್ಲ ಅಂತ ನಮ್ಮನ್ನು ಬೆಸ್ತು ಬೀಳಿಸುತ್ತೀರಲ್ಲ ಸರ್, ಈ ಬಾರಿಯ ಎರಡು ವಿಚಾರಗಳು ಪ್ರಸ್ತುತವಾದವುಗಳೇ ಅಲ್ವ..!

    ReplyDelete
  3. ಶಿವು ಈಗ ನಿಮಗೇ ನಿಮ್ಮ ಮಗ ನಿಮಗೆ ಮುಜುಗರ ತರೋಹಾಗೆ ಕೇಳಿದರೆ..ಒಂದೋ ಅವನ್ನ ಗದರಿ ಕಳುಹಿಸುತ್ತೀರಿ ಇಲ್ಲ ನಂಗೊತ್ತಿಲ್ಲ ಎನ್ನುತ್ತೀರಿ ಅಲ್ಲವೇ..? ಎರಡನೆಯದನ್ನು ನಾನು ಆಯ್ಕೆ ಮಾಡಿದ್ದು...ಎಲ್ಲ ಬಲ್ಲವರಿಲ್ಲ ಅನ್ನೋದನ್ನ ಪ್ರತಿಪಾದಿಸೋಕೆ, ಮಕ್ಕಳನ್ನು ಗದರಿಸುವುದು..ಅವರ ಬೆಳೆವಣಿಗೆಗೆ ಮತ್ತು ನಮ್ಮ ಮನೋಧರ್ಮಕ್ಕೆ ಒಳ್ಳೆಯದಲ್ಲ ಹಾಗೇ..ಮಗುವಿಗೆ -ಹುಡುಕಾಟದ- (probing nature) ಬುದ್ಧಿ ಬೆಳೆಯುತ್ತೆ..
    ನಿಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ...ಸಲಾಂ

    ReplyDelete
  4. ಉತ್ತಮ ಪ್ರಶ್ನೆಗಳು ಇವು.

    ReplyDelete
  5. ಕ್ಷಮಿಸಿ ದಿಲೀಪ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..ನಿಮ್ಮ ಬ್ಲಾಗ್ ಕನ್ನಡಲ್ಲೂ ವ್ಯಂಗ್ಯಚಿತ್ರ ಮಾಲಿಕೆಯನ್ನು ತರುತ್ತಿದೆ ಎಂದು ತಿಳಿದು ಬಹಳ ಸಂತೋಷವಾಯಿತು..ಶುಭವಾಗಲಿ ನಿಮ್ಮ ಪ್ರಯತ್ನಕ್ಕೆ.

    ReplyDelete
  6. ಸುನಾಥ್ ಸರ್, thank you ಎನ್ನಲೇ..?
    ಹತ್ತಿರದವರಿಗೆ thanks sorry ಹೇಳ್ಬಾರದಂತೆ..?
    ನಂಗಿತ್ತಿಲ್ಲ ಮಗು...
    ಹಹಹಹ....

    ReplyDelete
  7. ತುಂಬಾ ತುಂಬಾ ಚೆನ್ನಾಗಿದೆ....

    ಮಗುವಿನ ಪ್ರಶ್ನೆಗಳು...
    ಪ್ರಸ್ತುತ ವಿದ್ಯಮಾನ....

    ಮುಂದುವರೆಸಿ...

    ReplyDelete
  8. ಮಕ್ಕಳ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸೋದು ಕಷ್ಟ. ಆಗ ಸಹಾಯಕ್ಕೆ ಬರೋದೇ "ನಂಗೊತ್ತಿಲ್ಲ" ಮಂತ್ರ!!
    ಚೆನ್ನಾಗಿದೆ ನಿಮ್ಮೀ ತಂದೆ ಮಗುವಿನ ಪ್ರಶ್ನೋತ್ತರ :)

    ReplyDelete
  9. ಈ ರೀತಿಯ ವಿಷಯ ಪ್ರಸ್ತಾಪ ಎಲ್ಲೋ ಮನದ ಮೂಲೆಯಲ್ಲಿತ್ತು...ಅದರಲ್ಲೂ Indian Express ನಲ್ಲಿ ತುಂಬಾ ಹಿಂದೆ ನನ್ನ ನೆಚ್ಚಿನ ಕಾಲಂ...I dont know son...ಓದುತ್ತಿದ್ದ ಕಾಲದಿಂದ.
    ನನ್ನ ಮಗಳು ಈ ಸುಪ್ತ ಯೋಚನೆ..ಯೋಜನೆಯಾಗಲು ಕಾರಣಳಾದಳು..... ಅವಳ ಚಿಕ್ಕ ವಯಸ್ಸಿನ ಬಹು ಮುಗ್ಧ ಪ್ರಶ್ನೆಗಳನ್ನು ಉತ್ತರಿಸಿದ್ದೆ..ಅವುಗಳಲ್ಲೂ ಕೆಲವಕ್ಕೆ...ಈ ಸೂತ್ರ ಉಪಯೋಗಿಸಬೇಕಾಯ್ತು..ಈಗಲೂ ಅದೇ..... ಪ್ರಕಾಶ್, ನಿಮಗೂ ಹೀಗೆ ಬಹಳ ಬಾರಿ ಅನಿಸಿರಬೇಕು..ಮಕ್ಕಳ ಪ್ರಶ್ನೆಗಳ ಮಧ್ಯೆ...ಅಲ್ಲವಾ...?

    ReplyDelete
  10. ರೂಪಶ್ರೀ ಮೇಡಂ...ನನ್ನ ಬ್ಲಾಗಿಗೆ ಬಂದಿರಿ ಸಂತೋಷ...ಪ್ರತಿಕ್ರಿಯಿಸಿದಿರಿ ಇನ್ನೂ ಸಂತೋಷ...ಈ ಹಿಂದೆಯೂ ಇದೇ...ನಂಗೊತ್ತಿಲ್ಲ ಮಗು...ಬ್ಲಾಗಿನಲ್ಲಿ ಹಾಕಿದ್ದೇನೆ..ಬಿಡುವಾದಾಗ ನೋಡಿ..

    ReplyDelete
  11. 'ನಂಗೊತ್ತಿಲ್ಲ ಮಗು' ಅಂತ ಉತ್ತರ ಕೋಡೋದನ್ನ ತಪ್ಪಿಸಿಕೊಳ್ಳೋ ಕೆಲಸ ಎಲ್ಲ ಅಪ್ಪಂಡಿರೂ ಮಾಡ್ತಾರೇನೋ ಅಲ್ವಾ?? :P

    ಪ್ರಸ್ತುತವನ್ನ ಪ್ರತಿಬಿಂಬಿಸಲು ನೀವು ಬಳಸಿಕೊಂಡಿರುವ ರೀತಿ ತುಂಬಾ ಚೆನ್ನಾಗಿದೆ. ನಾವು ಹಲವು ವಿಷಯಗಳಲ್ಲಿ ನಿಸ್ಸಹಾಯಕರು ಅನ್ನೋದನ್ನ ಒಪ್ಪಿಕೊಳ್ಳೋಕೆ ಕಷ್ಟವಾಗುತ್ತೆ.

    ReplyDelete
  12. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಸುಮನ ಮೇಡಂ, ನನಗಂತೂ ನನ್ನ ಮಗಳ ಕೆಲವು ಪ್ರಶ್ನೆ ಗಳಿಗೆ ಇದೇ ಉತ್ತರಕೊಟ್ಟು ತಪ್ಪಿಸ್ಕೋತೀನಿ...ಆದರೆ ಮತ್ತೆ ಅನ್ನಿಸುತ್ತೆ..ನಾನು ಅವಳ ಕುತೂಹಲಕ್ಕೆ ತಣ್ಣೀರೆರಚುತಿದ್ದೇನೇನೋ ಎಂದು....ಅವಳು ಹೆಚ್ಚು ವಿಳಂಬ ಮಾಡದೇ ಮತ್ತೆ ಒಂದು ಪ್ರಶ್ನೆ ಹಾಕಿದಾಗಲೇ..ಸಮಾಧಾನ...

    ReplyDelete
  13. ಪ್ರಕಾಶ್ ಯಾವಾಗ ಬಂದಿರಿ..ಯಾವಾಗ ಪ್ರತಿಕೆಯೆಕೊಟ್ಟು ಮಾಯವಾದಿರಿ..ಗೊತ್ತಾಗಲೇ ಇಲ್ಲ...thanks..ನಿಮ್ಮ ಮಾತಿಗೆ..

    ReplyDelete
  14. ಒಳ್ಳೊಳ್ಳೆ ಪ್ರಶ್ನೇ ಕೇಳುತ್ತೇರೀ ಮಗು... ಗೆಳೆಯರಾದರೆ ತಪ್ಪಿಲ್ಲ ಅದನ್ನೇ ಎಳೆದು ಗೇ..ಳೆಯರಾದರೇ... ತೊಂದ್ರೆ :)

    ReplyDelete
  15. ಪ್ರಭು...ಇದು ನಿಮ್ಮ ಎರವಲು ಉಪಯೋಗಗಳೇ...ಒಳ್ಳೆಯದನ್ನ ಅನುಸರಿಸುವುದು ತಪ್ಪಲ್ಲವಲ್ಲ...ನನ್ನಾk, ಹಾgay ಇತ್ಯಾದಿ...ಅಭಿನಂದನೆಗೆ ನೀವೂ ಪಾಲುದಾರರು...ನಿಮ್ಮ ಬೆನ್ನು ನಾನು ತಟ್ಟುತ್ತೇನೆ..ನನ್ನ ಬೆನ್ನನ್ನ ನೀವು....ಇದು..ಗೆಳೆತನ ಅಷ್ಟೆ..... Gayಎಳೆತನ ಅಲ್ಲ....ಹಹಹಹ

    ReplyDelete
  16. ತುಂಬ ಚೂಟಿಯಾದ ಪ್ರಶ್ನೆ... ಹಾಗೆ ಚುಟುಕಾದ ಉತ್ತರ.......
    ಚೆನ್ನಾಗಿ ಇದೆ ರೀ.....

    ReplyDelete
  17. ತಂದೆ-ಮಗು ನನ್ನ ಒಂದು ಬಹುಪ್ರಿಯ ವಿಷಯ, ಇಲ್ಲಿ ಸಮಾಜದ, ಜನತೆಯ, ವ್ಯವಸ್ಥೆಯ ಅಂಕುಡೊಂಕುಗಳನ್ನು..ಎತ್ತಿತೋರುವುದು ಸಹಜವೆನಿಸುತ್ತದೆ. Thanks ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  18. ಮಕ್ಕಳ ಪ್ರಶ್ನೆಗಳು ಸರಳವೆನಿಸಿದರೂ ಉತ್ತರಿಸುವುದು ಕೆಲವೊಮ್ಮೆ ಬಹಳ ಕಷ್ಟ.

    ReplyDelete
  19. ಚಂದಿನ, ನಿಮ್ಮ ಮಾತು ನಿಜ ಕೆಲವೊಂದು ಪ್ರಶ್ನೆ ಆ ಪುಟ್ಟ ಬಾಯಿಂದ ಹೊರಟರೆ ಎಂತಹ ಮೇಧಾವಿಗಳೂ ಒಮ್ಮೋಮ್ಮೆ ತಬ್ಬಿಬ್ಬಾಗಬಹುದು. ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  20. ನಂಗೊತ್ತಿಲ್ಲ ಮಗು... ವ್ಯವೆಸ್ಥೆಯೊಳಗಿದ್ದೂ ವ್ಯವಸ್ಥೆಯನ್ನು ಬದಲಿಸಲಾಗದ,ಉತ್ತರ ಗೊತ್ತಿದ್ದರೂ ಉತ್ತರಿಸಲಾಗದ ಪರಿಸ್ಥಿತಿ.. ಮಗುವಿನೆದಿರು ಮಗುವಿನಂತೆ ಅಸಹಾಯಕ ಸ್ಥಿತಿ! ಇಷ್ಟ ಆಯ್ತು.

    ReplyDelete
  21. ಅಕ್ಕನಿಗೆ ತಮ್ಮನ ಪ್ರಶ್ನೆ....ನನ್ನ ಹಳೆಯ ಪೋಸ್ಟ್ ಗಳನ್ನು ನೋಡಿದ್ರಾ..?
    ನೋಡಿದ್ರೇ...ಇಷ್ಟಾ ಆದ್ವಾ..?? ಅಥ್ವಾ ಅದ್ವಾನ ಅನ್ಸಿದ್ವಾ????
    ಜಯಕ್ಕ ಮತ್ತೆ.........
    ನಂಗೊತ್ತಿಲ್ಲ ಮಗು......ಅನ್ಬಾರ್ದು...!!!!!

    ReplyDelete
  22. ಈ ಲೇಖನ ತುಂಬಾ ಚೆನ್ನಾಗಿದೆ.
    ಮಗು ಕೇಳುವ ಪ್ರಶ್ನೆ ಗಳಿಂದ ತಂದೆಗೆ ಆಗುವ ಅಸಹಾಯಕತೆ ಮತ್ತು ಮಗುವಿನ ಮುಗ್ಧತೆಯ ಒಳ್ಳೇ ಚಿತ್ರಣ ನೀಡಿದ್ದೀರಿ...
    ಇನ್ನೂ ಬರೆಯಿರಿ ...

    ReplyDelete
  23. ದಿವ್ಯಾ, ತುಂಬಾ ಧನ್ಯವಾದಗಳು...ಪ್ರತಿಕ್ರಿಯೆಗೆ, ಮಕ್ಕಳ ಪ್ರಶ್ನೆ ಎಲ್ಲರಂತೆ ನಿಮಗೂ ಕೆಲವೊಮ್ಮೆ ಮುಜುಗರ ಇಲ್ಲವೇ ನಿರುತ್ತರಕ್ಕೆ ಕಾರಣವಾಗಿರಬಹುದು.

    ReplyDelete
  24. ತುಂಬಾ ಚೆನ್ನಾಗಿದೆ ಪ್ರಶ್ನೋತ್ತರಗಳು .. ತುಂಬಾ ಖುಷಿ ಕೊಡ್ತು .. ಚೆಂದದ ಲೇಖನ ಓದೋದಿಕ್ಕೆ ತಡ ಮಾಡಿದೆ ಅನ್ನಿಸ್ತು :)

    ReplyDelete
  25. ರಂಜೀತಾ, ತಡವಾಗಿಯಾದರೂ ಬಂದ್ರಲ್ಲ ಅದೇ ಸಂತೋಷ. ನಿಮ್ಮ ಚುಟುಕಗಳ ಪಂಚು ನನಗೆ ಇಷ್ಟವಾಯಿತು. ಬರುತ್ತಿರಿ..ಈದ್-ಕಾ-ಚಾಂದ್ ಮಾತ್ರ ಆಗಬೇಡಿ..ಸರೀನಾ...??

    ReplyDelete