
ನಮಸ್ಕಾರ ...ನಾನು ನುಂಗಣ್ಣ...ಗೊತ್ತಾಗ್ಲಿಲ್ವ...?? ನಿಮ್ಮನೇಲಿದ್ದೇ..ನೀವು ಕೊಟ್ಟ್ರೂ ಕೊಡದೇ ಇದ್ರೂ ..ನನ್ಗೆ ಬೇಕಾದಷ್ಟೇನು ತಲೆಮಾರುಗಳಿಗೆ ಆಗೊಸ್ಟನ್ನ ಗುಡ್ಡೆ ಹಾಕ್ತಾ ನುಂಗ್ತಾ ಇದ್ದೀನಿ...??!! ಗೊಅತ್ತಾಗ್ಲಿಲ್ಲ್ವ?? ಅಲ್ರೀ ..ಏನೋ ಒಂದ್ಸ್ವಲ್ಪ ತಿಂದಿದ್ದಕ್ಕೆ ಗುಂಜಣ್ನನ್ನ ತಿಂದ..ತಿಂದ..ಅಂತ ಗೋಳಾಡ್ಸಿದ್ರಿ..ಪತ್ರಿಕೇಲಿ ಬರೆಸಿದ್ರಿ..?? ಅದ್ಯಾರೋ ಲೋಕಕ್ಕೇ ಆಯುಕ್ತರಂತೆ...(ಮನೇಲಿ ಮಂಚದಲ್ಲಿ ವರ್ಷಗಳಿಂದ ಸೇರ್ಕೋಂಡು ಸ್ವಲ್ಪ..ಸ್ವಲ್ಪ..ತಿಳಿದೂ.ಏನೋ ಬಿಡು ಹೋಗ್ಲಿ ಅಂತ ಅನ್ಕೊಳ್ಳೋಹಾಗೆ ರಕ್ತ ಕುಡೀತಿರೋ ತಿಗಣೇನೇ ಏನೂ ಮಾಡಾಕಾಗ್ದೇ ಇರೋರು ಎಂಥ ಲೋಕಕ್ಕೆ..ಎಂಥ ಆಯುಕ್ತರು...!!!???) ಅವರನ್ನ ಬಿಟ್ಟು ಆಯ್ಕಂಡ್ ತಿನ್ನೋ ಕೋಳೀ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ..ಪಾಪ...ಗುಂಜಣ್ನ..ಎನೋ ವ್ಯವಸ್ಥೆಗೆ ಕಟ್ಟುಬಿದ್ದು..ಬೇಕಂತಲೋ...ಬೇಡ ಅಂತಲೋ..ಏನೋ ...ಸ್ವಲ್ಪ ತಿಂದದ್ದಕ್ಕೆ..ಇದ್ದ ಬದ್ದ ಮಾನ ಹೋಯ್ತು..ಅಂತ ಅಷ್ಟು ವರ್ಷ ಕೆಲಸ ಮಾಡ್ತಿದ್ದ ಕಛೇರಿಯಲ್ಲೇ ಹಗ್ಗಕ್ಕೆ ಕೊರಳ್ಕೊಟ್ಟು ಜೋತು ಬಿದ್ದ....ನಿಮಗೆ ತಾಕತ್ತಿದ್ದರೆ ನಮ್ಮಂಥ ನುಂಗಣ್ನಗಳ ಮೇಲೆ ಬಿಡ್ರಿ ನಿಮ್ಮ ಬ್ರಹ್ಮಾಸ್ತ್ರ..??!! ಅದ್ಕ್ಕೂ ತಾಕತ್ತು ..ಕಿಮ್ಮತ್ತು...ದಿಲ್ಲು...ದಮ್ಮು ಎಲ್ಲ ಬೇಕು. ಅಷ್ಟೆಲ್ಲಾ ಯಾಕೆ...ಐದು ವರ್ಷಕ್ಕೊಂದಾವರ್ತಿ ನಿಮ್ಮ ಹತ್ರ ಬಂದು..ಗೆದ್ದರೆ ನಿಮ್ಮ ಮಗನಿಗೆ ಆ ಕೆಲಸ ಕೊಡಿಸುತ್ತೀವಿ...ನಿಮ್ಮ ತಮ್ಮನಿಗೆ ಏಜೆನ್ಸಿ ಕೊಡಿಸ್ತೀವಿ..ನಿಮ್ಮ ಅಕ್ರಮ ಸೈಟನ್ನ ಸಕ್ರಮ ಮಾಡ್ತೀವಿ ಅಂತ ಬಂದು ನಿಮ್ಮ ಓಟು ಗಿಟ್ಟಿಸ್ಕೊಂಡು..ಮೆರೆಯೋ ಮಿನಿಸ್ಟ್ರು ಅವರಿಗೆ ಸಪೋರ್ಟ್ ಕೊಡೋ ಬಿಜಿನೆಸ್ ಟೈಕೂನುಗಳು..ಅವರಿಗೆ ಕುಮ್ಮಕ್ಕು ಕೊಡೋ ಆಫೀಸರುಗಳು..ಇವ್ರಿಗೆ ಎಂದಾದ್ರೂ ತಿಂದ ತಿಂದ ಅಂತ ಹೇಳಿದ್ದೀರಾ..?? ಗುಂಜಣ್ಣನ್ನ ಯಾಕ್ರೀ ಹೇಳ್ತೀರಾ..ತಿಂದ..ಗುಡ್ದೆ ಹಾಕ್ದ ಅಂತ..?? ಅವನೇನ್ರೀ ಗುಡ್ಡೆ ಹಾಕ್ದ..?? ಅಸಲು ಗುಡ್ಡೆ ಅಂದ್ರೆ ಏನು ಅಂತ್ಲೇ ಗೊತ್ತಿಲ್ಲ ಅವನಿಗೆ.
ನಾನು ಹೇಳ್ತೀನಿ ಕೇಳಿ...ಹಣ ಇದೆ ಅಂತ ರೈತ ಬೆಳೆದದ್ದನ್ನ ಆರು ಕಾಸಿಂದು ಮೂರ್ಕಾಸಿಗೆ ಕೊಂಡ್ಕೊಂಡು, ಅದ್ದಕ್ಕೆ ಕುಮ್ಮಕ್ಕು ಕೊಡೋಕೆ ಫುಡ್ ಇನ್ಸ್ ಪೆಕ್ಟರಿಗೆ ತಿನ್ಸಿ, ದೊಡ್ಡ ದೊಡ್ಡ ಗೋಡೌನು ಕಟ್ಸಿ ಅದನ್ನ ಕಟ್ಟೋದಕ್ಕೆ ಕಾರ್ಪೊರೇಶನ್ ಅಧಿಕಾರಿಗಳಿಗೆ ತಿನ್ಸಿ, ಸವಲತ್ತು ಅಂತ ವಿದ್ಯುತ್ ಇಲಾಖೆ ಆಫೀಸರಿಗೆ ತಿನ್ಸಿ, ಲಕ್ಷ ಲಕ್ಷ ಟನ್ ದವಸ ಗೋದಾಮುಗಳಲ್ಲಿ ತುಂಬಿಟ್ಟು..ಕೃತಕ ಅಭಾವ ಸೃಷ್ಠಿಸಿ ಒಪ್ಪೊತ್ತಿನ ಊಟಕ್ಕೇ ಪರದಾಡೋ ಎಷ್ಟೋ ಬಡವರು ಹಸಿವಿಂದ ಸಾಯೋ ಸ್ಥಿತಿಗೆ ತರ್ತಾರಲ್ಲ...ಭಾರಿ ಕಳ್ಳ ವರ್ತಕರು ಅವ್ರು ನಿಜವಾದ ನುಂಗಣ್ಣಗಳು...
ಸಾವಿರಾರು ವಾಹನ ಓಡಾಡೋ ಸೇತುವೆಗಳು, ಬೆಳೆಗೆ ಹನಿಸೋ- ದಾಹ ತಣಿಸೋ ನೀರು ಹರಿಸೋ ಕಾಲುವೆಗಳು, ಸಾರ್ವಜನಿಕ ಕಟ್ಟಡಗಳು, ರಸ್ತೆಗಳು ಹೀಗೆ ಎಲ್ಲದರಲ್ಲೂ ಗೋಲ್ ಮಾಲ್ ಮಾಡಿ ಗುಡ್ಡೆ ಹಾಕೋ ದೊಡ್ಡ ದೊಡ್ಡ ಖದೀಮ ಕಂಟ್ರಾಕ್ಟರುಗಳು ..ಅವ್ರು ನಿಜವಾದ ನುಂಗಣ್ಣಗಳು.
ಮಕ್ಕಳ ಊಟದಲ್ಲಿ ಅಕ್ರಮ, ರೋಗಿಗೆ ಕೊಡೋ ಔಷದಿಯಲ್ಲಿ ಕಲಬೆರಕೆ, ಸ್ವಾತಂತ್ರ್ಯ ಹೋರಾಟಗಾರರ. ವಯೋವೃದ್ಧರ ಮಾಶಾಸನದಲ್ಲಿ ಗೋಲ್ ಮಾಲ್, ಕಿಡ್ನಿ ಕದ್ದು ಮಾರೋ ಕಾಂಡ, ಹೆಣ್ಣುಮಕ್ಕಳ ಮಾರಾಟ, ಹೆಣ್ಣಿನ ಅಸಹಯಾಕತೆಯನ್ನ ಕ್ಯಾಶ್ ಮಾಡಿಕೊಳ್ಳೋ ಬಿಚೌಲಿಗಳ ಬಾಸುಗಳು ಇವ್ರು ನಿಜವಾದ ನುಂಗಣ್ಣಗಳು......
ಇವ್ರೆಲ್ಲರಿಗೆ...ಸುಪ್ರೀಂ..ನಾನು...ಸರ್ಕಾರದ ಭಾಗವಾಗಿದ್ದು ನಾನು ಮಾಡಿದ್ದೇ ಶಾಸನ, ನಾನು ಹೇಳಿದ್ದೇ ವೇದ ವಾಕ್ಯ...ನಿಮ್ಮ ಕೈಗೆ ಬಿಲ್ಲು ಕೊಡೋನೂ ನಾನೆ, ಬ್ರಹ್ಮಾಸ್ತ್ರ ದಯಪಾಲಿಸೋನೂ ನಾನೇ..ಇವೆಲ್ಲವುಗಳ ಸೂತ್ರ ನನ್ನ ಕೈಲಿ..ಒಂದು ಬಾರಿ ನಿಮ್ಮ ಭಿಕ್ಷೆ ಪಡೆದರೆ..ಐದು ವರ್ಷ ನನ್ನ ನೀವಲ್ಲ ...ನಿಮ್ಮಪ್ಪ ಅಲ್ಲ ..ಆ ಬ್ರಹ್ಮ ಬಂದ್ರೂ ಅಲುಗಾಡಿಸೋಕಾಗಲ್ಲ...
ಅಂಥ ಪರಮ ಮಹಾ ನುಂಗಣ್ಣ ...ನಾನು. ಗೊತ್ತಾಯ್ತೇ..??
ಈಗ್ಲೂ ಸಮಯ ಇದೆ ಎಚ್ಚೆತ್ತುಕೋ..... ಮನುಷ್ಯ ಸ್ವಭಾವ ಸದಭಿರುಚಿ ಸಂಸ್ಕಾರವಂತ ಆಗಿದ್ದು ನಿಜಕಾಳಜಿ ಮಾನವತೆಯಿದ್ದರೆ ಅವನಿಗೆ ಅಂಜಿಕೆಯಿರುತ್ತೆ..ಒಳಗೊಂದು ಹೊರಗೊಂದು ಇರದವರು ನಂಬಿಕಾರ್ಹರು. ವಿವೇಚನೆಯಿಂದ ಮತ ಯಾಚಿಸುವವರ ಮತ್ತು ಮತಕ್ಕಾಗಿ ಅಂಗಲಾಚುವವರ ನಡುವಿನ ಅಂತರ ತಿಳಿದುಕೋ.....ಯಾಕೆ ಗೊತ್ತೆ.?? ಹಾಗೊಮ್ಮೆ ನಿನ್ನ ಚುನಾಯಿತ ದೂರ್ಥನಾಗಿದ್ದು ಗೆದ್ದರೆ...ನಿನ್ನ ಮೇಲೆ ಸವಾರಿ ಮಾಡ್ತಾನೆ...ಅದೇ ನಿನ್ನ ಆಯ್ಕೆ ಅರ್ಹ ಅಭ್ಯರ್ಥಿ ಗೆಲುವಿಗೆ ಕಾರಣವಾದರೆ ನಿನ್ನ ಅಭಿಲಾಶೆಗಳ ಸವಾರಿ ನೀನು ಮಾಡಬಹುದು.
ನುಂಗಣ್ಣನ ಜಾತಕವನ್ನು ಚೆನ್ನಾಗಿ ಚಿತ್ರಿಸಿದ್ದೀರಿ.
ReplyDeleteThis comment has been removed by the author.
ReplyDeleteಹ ಹ ಹಾ.. ಸಖತ್ತಾಗಿದೇರಿ ! ಈ ಥರಾ ಪ್ರಚಾರ ಮಾಡೋದಕ್ಕೆ ಅವನ ಕಡೆಯಿಂದ ಎಷ್ಟು ನುಂಗಿದೀರ್ರೀ?
ReplyDeleteಸ್ವಾಮಿ,
ReplyDeleteಹೊರಗಡೆ ಬನ್ನಿ .....ನುಂಗಣ್ಣ ನೋಡ್ಕೊತ್ತಾನೆ ನಿಮ್ಮನ್ನಾ......ಸೂಟ್
ಕೇಸ್ ಕೊಟ್ರು ಕೊಡ್ಬೊದು...
ಚೆನ್ನಾಗಿ ನುಂಗ್ಸಿದ್ದೀರ...
ಸುನಾಥ್ ಸರ್ ಈಗತಾನೇ ನೋಡೀದ್ದೀವಿ..ನಮ್ಮ ಸುವರ್ಣ ಕರ್ನಾಟದಲ್ಲೂ ಹಂದಿ-ಹೆಗ್ಗಣಗಳ ಕೊರತೆಯೇನಿಲ್ಲ ಅಂತ. ಒಂದೇ ಗೋದಾಮಿನಿಂದ ಎಷ್ಟೋ ಲಕ್ಷ ಟನ್ ತೊಗರಿಯನ್ನ್ ಮುಟ್ಟುಗೋಲು ಹಾಕಲಾಯಿತು..ದೂರವಿದ್ದೇ ನಮಗೆ ನಾರುವ ನಾತ ಬಡಿದರೆ..ಅಲ್ಲಿದ್ದು ಅನುಭವಿಸುವ ನಮ್ಮ ವಿನಮ್ರ ಜನತೆ ಸ್ಥಿತಿ ಹೇಗಿರಬೇಡ?? ಅಲ್ಲವೇ..? ನನ್ನದೊಂದು ಸಣ್ಣ ಪ್ರಯತ್ನ ಅಷ್ಟೇ..ಮತದಾರ ವಿವೇಚನೆಯನ್ನ ಉಪಯೋಗಿಸದಿದ್ದರೆ..ಏನಾಗಬಹುದು ಎಂದು...ಥ್ಯಾಂಕ್ಸ್ ನಿಮ್ಮ ಸರ್ವಪ್ರಥಮ (ಎಂದಿನಂತೆ) ಪ್ರತಿಕ್ರಿಯೆಗೆ
ReplyDeleteರೀ ಚಿತ್ರಾವರೇ..ಯಾಕೋ ವಿಚಿತ್ರ ಅನ್ಸುತ್ತಲ್ಲ ನೀವು ಹೇಳೋದು..ಸಾರಿ..ಬರೆಯೋದು..!! ಅಲ್ಲ ಮೇಡಂ ನಾನು ಪ್ರಚಾರ ಮಾಡ್ತಾ ಇಲ್ಲ...ಅವನ ವಿರುದ್ಧ ಕತ್ತಿ ಮಸೆಯೋದಕ್ಕೆ ಅವನು ಯಾಕೆ ಕೊಡ್ತಾನೆ...?? ನಾನೇ ಹುಶಾರಾಗಿ ಓಡಾಡ್ಬೇಕಾಗುತ್ತೆ ಈ ಸರ್ತಿ ಬೆಂಗಳೂರಿಗೆ ಬಂದಾಗ.....ಅಲ್ವಾ..?? ನಿಜ ಹೇಳೋರಿಗೆ ಉಳಿಗಾಲ ಎಲ್ಲೈತೆ ಹೇಳಿ ಈಗ??
ReplyDeleteಚಿತ್ರಾ ಅವ್ರು ಒಂಥರಾ..ಜೋಕು ಮಾಡಿದ್ರೆ..ನೀವೇನು ಗುರು...??? ಇದು ತಕ್ಕೋತೀಯ ..ಅಲ್ಲ ಅದನ್ನ ತೂರಿಸಲಾ? ಅಂತ ಒಮ್ದು ಕೈಲಿ ಸೂಟ್ ಕೇಸ್ ಇನ್ನೋದು ಕೈಲಿ ಚೂರಿ ಚಿಕ್ಕಣ್ಣನ ಲಾಂಗ್ ಹಿಡ್ಕೊಂಡು ಹೊರಗಡೆ ನಿಂತಿರೋಹಾಗೆ ನನಗೆ ಆವಾಜು...???
ReplyDeleteಬಚಾವು..ಮಾಡೋಕೆ ನೀವಿದ್ದೀರಲ್ಲಾ...
ನ್ಯಾಯ ಎಲ್ಲಿದೆ............? ಈ ಕಲಿಗಾಲದಲ್ಲಿ, ನ್ಯಾಯ ಎಲ್ಲಿದೆ.............?!?
ReplyDeleteಸ್ವಾರ್ಥ ಜನಗಳೇ ತುಂಬಿ ತುಳುಕುತಿರುವ, ಈ ಭೂಮಿಯ ಮೇಲೆ ನ್ಯಾಯ ಎಲ್ಲಿದೆ???
ನ್ಯಾಯ ಎಲ್ಲಿದೆ??? million dollar ಕೊಶ್ನೆ...ಎಸ್ಸೆಸ್ಕೆ ಮೇಡಂ
ReplyDeleteಯಾಕೆ ಗೊತ್ತೆ ಎಲ್ಲಾ ಸ್ವಾರ್ಥಮಯ (ಸ್ವಾರ್ಥ-ತಮ್ಮಯ್ಯ ಅಂತಾರಲ್ಲ ನಮ್ಮ ಮಂತ್ರಿಗಳು ಹಾಗೆ). ಎಲ್ಲದರಲ್ಲೂ ಅಡ್ಜೆಸ್ಟ್ ಮೆಂಟು..ಅದಕ್ಕೆ ನ್ಯಾಯವಾಗಿ ನಡೆಯೋರಿಗೆ..ದಾರಿ ತಪ್ಪಸ್ತಾರೆ..ಇಲ್ಲ..ದಾರಿ ಕೊಡೊಲ್ಲ..
But..ಎಲ್ಲಾನೂ..ಹಾಗೇನಿಲ್ಲ..ಅದಕ್ಕೇ ನಾವು ನೀವು ಇದ್ದಿವಿ..ಅಲ್ಲವೇ..ನನಗೆ ಒಂದು ಪೈಸೆ ತಿನ್ನಿಸ್ದೇ Research Assistant ನೌಕರಿ ಸಿಕ್ತು ನಮ್ಮ ಬೆಂಗಳೂರಿನ ಕೃ.ವಿ.ವಿ. ಯಲ್ಲಿ, ನಂತರ scientist ಅಂಥಾ ನೌಕರಿ ಸಿಕ್ತು ಅದೂ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ, ನನ್ನ ತಮ್ಮನಿಗೆ ಸಿಕ್ತು (ಅವನ ಟ್ರಾನ್ಸ್ ಫರ್ ಗಾಗಿ ಈ rule break ಆಯ್ತು ಅನ್ನೋ ಮಾತು ಬೇರೆ)..ಅಲ್ಲವೇ...
ನಮ್ಮ ಮೇಲೆ ನಾವು ಭರವಸೆ ಇಟ್ಟುಕೊಳ್ಳೋಣ..ಬೇರೆಯವರನ ತಿದ್ದೋಕೆ ಪ್ರಯತ್ನಿಸೋಣ..ಅಲ್ಲವೇ..?? ನಿಮ್ಮ ಪ್ರತಿಕ್ರಿಯೆ ನನಗೆ ಮತ್ತೆ ಇಷ್ಟು ಯೋಚಿಸೋದಕ್ಕೆ ದಾರಿ ಮಾಡ್ತು...ಧನ್ಯವಾದ
ಜಲನಯನ ಸರ್...
ReplyDeleteಕಾರ್ಟೂನ್ ಚಿತ್ರ ಮತ್ತು ಬರಹ ಸೂಪರ್....
ಆಝಾದ್ ಸರ್...
ReplyDeleteಚೆನ್ನಾಗಿ ಜಾಲಾಡಿಸಿಬಿಟ್ಟಿದ್ದೀರಿ..
ನುಂಗಣ್ಣನನ್ನು...
ಅಸಹ್ಯ ಹುಟ್ಟಿಸುವ ಇಂಥವರ
ಕಾಟ ಯಾವಾಗ ಕೆನೆಯಾಗುವದು,...?
ಈ ನಡುವೆ ರಾಜಾ ರೋಷವಾಗಿ ಹೇಳಿಕೊಳ್ಳುತ್ತಾರೆ...
ನಿಮ್ಮ ಬ್ಲಾಗಿನ ಹೊಸತನ ಇಷ್ಟವಾಗುತ್ತದೆ...
ಅಭಿನಂದನೆಗಳು...
ತುಂಬಾ ನೋವಾಗೋ ವಿಷಯ ಇದು.. ಆದರೂ ನಾವು ಈ ಬಗ್ಗೆ ಒಂದು ತೀರ್ಮಾನ ಮಾಡಬೇಕು.. ನುಂಗಣ್ಣರಿಗೆ ತಿನ್ನಿಸುವ "ನಾವು" ಬದಲಾಗದಿದ್ದರೆ ನುಂಗಣ್ಣರು ಬೆಳೆಯುತ್ತಲೇ ಇರುತ್ತಾರೆ..
ReplyDeleteನಾನು ಇದೇ ರೀತಿಯ ಕೆಲವು ಬದಲಾವಣೆಗಳನ್ನು ಮಾಡಿಕೊಂಡಾಗ ನನ್ನ ಸುತ್ತಲಿನ ಜನ ನಿನ್ನೊಬ್ಬಳಿಂದ ದೇಶ ಉದ್ಧಾರವಾಗಲಾರದು ಎಂದು ನೀರೆರೆಚಿದ್ದರು..ಆದರೆ ಆರಂಭ ಎಂದಿಗೂ ಒಬ್ಬರಿಂದಲೇ ಎಂದು ನಾವೆಲ್ಲರೂ ಮನಗಾಣುವುದು ಯಾವಾಗ?
"ಬದಲಾವಣೆ ಕೇವಲ ನನ್ನಿಂದ ಸಾಧ್ಯ" ಎಂಬುದನ್ನು ನಾವೆಲ್ಲರೂ ಅರಿತು ಅದರಂತೆ ಪಾಲಿಸಿದರೆ ಖಂಡಿತ ಈ ನುಂಗಣ್ಣರು ಸಾಯುತ್ತಾರೆ.. ಇಲ್ಲವಾದಲ್ಲಿ ಈ ನುಂಗಣ್ಣರು ನಮ್ಮಲ್ಲಿ ಕೆಲವರನ್ನು ತಮ್ಮತ್ತ ಸೆಳೆಯುತ್ತಾರೆ.. ನಾವು ಎಚ್ಚರಗೊಳ್ಳಲೇ ಬೇಕು..
ಜಲನಯನ ಸರ್,
ReplyDeleteಇದೇನ್ ಸಾರ್ ಹೊಸ ಶೈಲಿ, ಓದಿಕೊಂಡು ಹೋಗುತ್ತಿದ್ದಂತೆ ನಿಜ ವಿಚಾರ ಗೊತ್ತಾಯಿತು. ನುಂಗಣ್ಣನನ್ನು ಚೆನ್ನಾಗಿ ಜಾಲಾಡಿಬಿಟ್ಟಿದ್ದೀರಿ...
ನಮ್ಮ ಪರಿಸ್ಥಿತಿ ಬದಲಾಗದಿರುವಂತ ಸ್ಥಿತಿಯಲ್ಲಿ ಒಂದು ಒಳ್ಳೇ ಲೇಖನವನ್ನು ಬರೆದಿದ್ದೀರಿ. ಲೇಖನದಲ್ಲಿನ ವ್ಯಂಗ್ಯ ತುಂಬಾ ಇಷ್ಟವಾಯಿತು.
ಸುಧೇಶ್ ಧನ್ಯವಾದ ನಿಮ್ಮ comment ಗೆ. ಕಾರ್-ಟೂನು (ಮಂತ್ರಿಗಳಿಗೆ ನನ್ನ ನಾಮಕರಣ) ನನ್ನ ಶೃಷ್ಠಿ ಅಲ್ಲ, ಅದು ವೆಬ್ ಮೂಲದ್ದು..ಬಬಲ್ ಮಾತ್ರ ಕನ್ನಡೀಕರಣ ಮಾಡಿದ್ದೇನೆ.
ReplyDeleteಪ್ರಕಾಶ್, ನಾಡಿಗೆ ಪ್ರಯಾಣದ ಸಮಯ ಹತ್ತಿರ ಬರ್ತಾಯಿದೆ ಅದಕ್ಕೆ ನನ್ನ ಸಂಶೋಧನೆಗೆ ಪರ್ಯಾಯ ವ್ಯವಸ್ಥೆನಾಡಿ ಬರಬೇಕು ಅದಕ್ಕೆ ಹೆಚ್ಚಾಗಿ ಬ್ಲಾಗ್ ಗಳನ್ನು ನೋಡಲಾಗುತ್ತಿಲ್ಲ. ನಿಮ್ಮ ಮಾತು ಬಹಳ ವಸ್ತುಸ್ಥಿತಿ..ನಿಮಗೆ ಇದರ ಅನುಭವ ಹೆಚ್ಚಾಗಿರುತ್ತೆ...ಬಹಳ ನುಂಗಣ್ಣಗಳ ನುಂಗುದೃಷ್ಠಿ ಎದುರಿಸಿರುತ್ತೀರಿ ಅಲ್ಲವೇ..? ಇದರ ಉಪಶಮನ ಜನ ಜಾಗೃತಿಯಿಂದ ಮಾತ್ರ ಸಾಧ್ಯ.
ReplyDeleteರೂಪಾಶ್ರಿ, ನಿಮ್ಮ ಹಾಗೆ ಪರತಿಯೋಬ್ಬರೂ ಥಿಂಕಿಸಿಸಿದರೆ....ಸಾರಿ....ಯೋಚಿಸಿದರೆ, ಅದನ್ನು ಕಾರ್ಯರೂಪಕ್ಕೆ ತಂದರೆ...ಒಂದು ದಿನ ಆ ದಿನ ನಮ್ಮದಾಗಬಹುದು ...ಹಮ್ ಹೋಂಗೇ ಕಾಮ್ಯಾಬ್ ಏಕ್ ದಿನ್ ಗೀತೆಯಲ್ಲಿ ಹೇಳೋಹಾಗೆ...thanks ಪ್ರತಿಕ್ರಿಯೆಗೆ
ReplyDeleteಕ್ಷಮಿಸಿ...ರೂಪಾಶ್ರೀ ...ಪ್ರತಿಯೊಬ್ಬರೂ....pra ಹೋಗಿ para ಆಗಿಬಿಡ್ತು...
ReplyDeleteಕ್ಷಮಿಸಿ...ರೂಪಾಶ್ರೀ ...ಪ್ರತಿಯೊಬ್ಬರೂ....pra ಹೋಗಿ para ಆಗಿಬಿಡ್ತು...
ReplyDeleteಶಿವು, ಏನಪ್ಪಾ ಹ್ಯಗೆ ನಡೆದಿದೆ ತಯ್ಯಾರಿ ಕೇರಳದ ಪ್ರಯಾಣಕ್ಕೆ...good luck. ನಿಮ್ಮ ಪ್ರತಿಕ್ರಿಯೆ ನಮಗೆ ಟಾನಿಕ್ಕು... ಅಂದ ಹಾಗೆ ಮಲ್ಲಿ ಕೇರಳದ ದೋಣಿ ಸಾಗಲಿ ಹಾಕಿದ್ದು ನೋಡಿ ನೀವು ಹೋಗಿ ಬಂದಾಯ್ತಾ..?!! ಅಂತ ಕನ್ ಪ್ಯೂಸ್ ಆಯ್ತು...ಶುಭ ಪ್ರಯಾಣಂ
ಲೇಖನ ಬಂಡಾಯ ಹೊರಹಾಕಿದೆ, ದೊಡ್ಡ ದೊಡ್ಡ ನುಂಗಣ್ಣಗಳು ಕಣ್ಣಮುಂದಿದ್ದರೂ ನುಂಗಲಾರದ ತುತ್ತಾಗಿದ್ದಾರೆ... ನಾವೇನೊ ಅಂತೀವೀ ಆದ್ರೆ ಈ ಲೋಕಾಯುಕ್ತರೂ ಅವರಿಂದಲೇ ನಿಯೋಜಿತರಲ್ಲವೇ, ಹೀಗಾಗಿ ಈ ನುಂಗಣ್ಣಗಳು ಅವರಿಂದ ನುಣುಚಿಕೊಳ್ಳುತ್ತಾರೆ.
ReplyDeleteಪ್ರಭೂ...ಸಹಜಂ ಪಲುಕಿದಿರಿ, ಪ್ರಜೆ ನಲುಗಿರಲು ಎಂತು ಸಹಿಸಲಿ ಈ ಪರಿ ದೂರ್ಥ ವಿಪರೀತವಂ....ಹಹಹ
ReplyDeleteಬಹಳ ದಿನವಾಯ್ತು ನಿಮ್ಮ ಪ್ರತಿಕ್ರಿಯೆ ನೋಡಿ..ಏನು ಹೊಸತು ನಿಮ್ಮ ಬ್ಲಾಗ್ ನಲ್ಲಿ...??ಬರುತ್ತೇನೆ ಬಂದು ಪ್ರತಿಸ್ಪಂದಿಸುತ್ತೇನೆ...
thanks..for the response
ಜಲನಯನ
ReplyDeleteನುಂಗಣ್ಣನ ಚರಿತ್ರೆ ಚೆನ್ನಾಗಿದೆ, ವ್ಯಂಗ್ಯ ಮಾತುಗಳ ಹೊಡೆತ ಇಷ್ಟವಾಯಿತು,
Dr. Guru
ReplyDeleteThanks for your comments. Kannadadalli typisalu tondare kaarana inglipeekruta kannada nimage ishtavaagade irabahudu.
thanks for comments
ನುಂಗಣ್ಣ ಸರ್..ಕ್ಷಮಿಸಿ ಜಲನಯನ ಸರ್...ನಮಸ್ತೆ. ಬೈಬೇಡಿ..ಇವಳು ಎಲ್ಲೋಗಿದ್ಳು ಅಂತ. ಇಲ್ಲೇ ಇದ್ರೂ ಕೆಲಸ ಜಾಸ್ತಿ. ಅದಕ್ಕೆ ಬ್ಲಾಗ್ ನೋಡಿಲ್ಲ. ನುಂಗಣ್ಣ ಪುರಾಣ ಸಕತ್ತಾಗಿದೆ. ಇದು ಯಾರು ನೀವೇನಾ? ನುಂಗಣ್ಣ. ಏನೆಲ್ಲ ನುಂಗಿದ್ರಿ?ಯಾರಿಂದ? ಎಲ್ಲಿಂದ ಅಂತ ಹೇಳದಿದ್ರೆ ನಿಮ್ಮ ನ್ನು......(ಏನು ಮಾಡ್ನಿನಿ ಅಂತ ಆಮೇಲೇ ಹೇಳ್ತೀನಿ)
ReplyDelete-ಧರಿತ್ರಿ
ಧರಿತ್ರಿ...
ReplyDeleteಏನ್ರಿ ನೀವು..? ನಾನು ನುಂಗಣ್ಣಗಳ ಕಥೆ ಹೇಳೋಕೆ ಹೊರಟರೆ ನನ್ನನ್ನೇ ನುಂಗಣ್ಣ ಮಾಡ್ಬಿಟ್ರಾ..??? ಸರಿ ಬಿಡಿ ಹೀಂಗಾದ್ರೂ ಸೇಡು ತೀರಿಸ್ಕೋಳ್ಳಿ...ಬೆಂಗಳೂರಿಗೆ ಬಂದಿದ್ದೆ...ನಿಮ್ಮ ಮನೆ ಪಕ್ಕನೇ ನಮ್ಮ ಮನೇನೂ..(ಲಕ್ಕಸಂದ್ರ) ನಿಮ್ಮನ್ನ ನೋಡ್ದೆ..!!! ಆದ್ರೆ ಮಾತ್ನಾಡ್ಸೋಕೆ ಧೈರ್ಯ ಸಾಕಾಗಲಿಲ್ಲ...ಪಕ್ಕದಲ್ಲೇ ಇರೋ ಆಸ್ಪತ್ರೆಗೆ ಫೋನ್-ಗೀನು ಘುಮಾಯೊಸಿದ್ರೆ ಕಷ್ಟ ಅಂತ...ಸದ್ಯ ಬದುಕಿತು ಬಡಜೀವ..ಈವಾಗ ಮತ್ತೆ ಮರಳಿಗೆ...ಅಂದರೆ ಕುವೈತಿಗೆ ಇವತ್ತೇ ಬಂದದ್ದು..ಸ್ವಲ್ಪ..ಭಯ ಸ್ವೈನ್ ಫ್ಲೂ ದು ಅಂದರೂ ತಪ್ಪಿಲ್ಲ..ಬರ್ತಾಇರಿ..ಮತ್ತೆ..
hahaha chenagide!!
ReplyDeleteಮನಸು ಮೇಡಂ
ReplyDeleteನನ್ನ ಬ್ಲಾಗ್ ಗೆ ಪುನಃ ಸ್ವಾಗತ, ಧನ್ಯವಾದ...ಪ್ರತಿಕ್ರಿಯೆಗೆ, ನಿನ್ನೆಯೇ ನಮ್ಮದೂ ವಾಪಸಾತಿ ಮರಳಿ ಮರಳಿಗೆ.
ನಿಮ್ಮ ಬ್ಲಾಗ್ ನಲ್ಲಿ ಕವನ ಚನ್ನಾಗಿ ಮೂಡಿ ಬಂದಿದೆ, ಪ್ರತಿಕ್ರಿಯೆಯನ್ನು ಟೈಪಿಸಿ ಪೋಸ್ಟ್ ಮಾಡಲು ಪ್ರಯತ್ನಿಸಿ ವಿಫಲನಾದೆ ಅದಕ್ಕೇ ಇಲ್ಲಿ ಪ್ರಸ್ತಾಪ.
ಮನಸು ಮೇಡಮ್ ನಿಮ್ಮ ಬ್ಲಾಗ್ ಗೆ ರೆಸ್ಪಾನ್ಸನ್ನು ಪೋಸ್ಟ್ ಮಾಡುವಲ್ಲಿ ವಿಫಲನಾಗುತ್ತಿದ್ದೇನೆ...ಏಕೆ ಅಂತ ಗೊತ್ತಿಲ್ಲ.
ReplyDelete