Tuesday, October 6, 2009

ಗೊತ್ತಿಲ್ಲ ಮಗು



ಅಪ್ಪಾ
ಏನುಮಗು?
ಮಳೆ ಬರಲಿಲ್ಲ ಅಂತ
ಹೋಮ ಹವನ ಮಾಡಿದ್ರಲ್ಲಾ
ಹೌದು ಮಗು
ಮತ್ತೆ ಮಳೆ ಜಾಸ್ತಿ ನಿಲ್ಲಲಿ ಅಂತ
ಹೋಮ ಹವನಾನ ಅಪ್ಪಾ?
ಹೌದು ಮಗು...
ಈಗ ದೇವರುಗಳಿಗೆ ಕನ್ಪ್ಯೂಸ್
ಆಗೊಲ್ಲವೇ?
ಗೊತ್ತಿಲ್ಲ ಮಗು?

ಅಪ್ಪಾ..ಮುಂದಕ್ಕೆ ..
ಹೇಳಪ್ಪಾ ನೀನು..
ಟೀವಿ-ನೈನ್ನೋರಿಗೆ
ಹವಾಮಾನ ಅಂತ ಹೇಳೋಕೆ ಬರೊಲ್ಲವೇ?
ಬರುತ್ತೆ ಮಗು
ಮತ್ತೆ ಯಾಕೆ ? ಅವಮಾನ ಇಲಾಖೆ ಅಂತಾರೆ?
ತಾವು ಅತಿ ಮಳೆ ಮಾಹಿತಿ ಸರ್ಕಾರಕ್ಕೆ
ಕೊಟ್ಟಿದ್ದೀವಿ ಅಂತಾರೆ..ಆದ್ರೂ ಜನಹಾನಿ ಆಯ್ತು
ಅದಕ್ಕೇ ಸರ್ಕಾರ ಅವಮಾನ ಇಲಾಖೆ ಅಂತ
ಹೆಸರು ಬದಲಾಯಿಸ್ತೇ?
ನಿಜವಾಗ್ಲೂ ಗೊತ್ತಿಲ್ಲ ಮಗು

ಹೋಗ್ಲಿ ಬಿಡು ಅಪ್ಪ..
ಮತ್ತೇನೋ ತರ್ಲೆ ನಿಂದು..?
ಮಳೆ ಬರ್ತಾಯಿದ್ದು..ಜನ ಪಡಬಾರದ ಅವಸ್ಥೆ
ಮನಸ್ಸು ಆಳುತ್ತಲ್ಲಪ್ಪಾ
ಹೌದು ಮಗನೇ
ಮತ್ತೆ ಬೆಳೆ-ಮನೆ-ಜೀವ ಹನಿಯಾಗ್ತಿದ್ದರೂ
ಅಧಿಕಾರಿಗಳು ರಜ-ಮಜಾ ಮಾಡ್ತಿದ್ದರಂತೆ?
ಹೌದು..ಹಬ್ಬದ ರಜೆಗಳಿದ್ದವಲ್ಲಾ..?
ಮತ್ತೆ ಸರ್ಕಾರ ಚಿಂತನೇಲಿ ಇತ್ತಂತೆ..?
ಗೊತ್ತಿಲ್ಲ ಮಗು.

21 comments:

  1. ಅವಮಾನ ಇಲಾಖೆ - ಚೆನ್ನಾಗಿದೆ.

    ReplyDelete
  2. hahaha super sir, tumba chennagide..

    ReplyDelete
  3. ಗೋಪಾಲ್, ನನಗೆ ಟಿ.ವಿ.-9. ನೋಡಿದ್ರೆ ಅನ್ಸೊದು ಇದು ಕನ್ನಡ ಚಾನಲ್ಲಾ ಅಥ್ವಾ ತೆಲುಗೂನ ..ಅಂತ..ಚಾನಲ್ ನವರಿಗೆ ಗೂನ ಇರ್ಬೇಕು....ಹಹಹ..
    ಮತ್ತೆ ನೀವು ನನಗೆ ಗೊತ್ತಿಲ್ಲ ಅಜಾದ್ರೆ ಅನ್ನಬೇಡೀ,..?? ಹಹಹ

    ReplyDelete
  4. ಪರಾಂಜಪೆಯವರೇ..ಆ ದಿನ ೨-೩ ದಿನಕ್ಕೆ ಹಿಂದೆ...interview ನೋಡ್ದೆ ಟಿ.ವಿ. 9 ಪ್ರಸಾರ ಮಾಡಿದ್ದು...ನಮ್ಮ ಕನ್ನಡದ ಪ್ರವೀಣ ಕಾರ್ಯಕ್ರಮ ನಡೆಸಿಕೊಟ್ಟವರು ಹೇಳಿದ್ದು..
    ಸರ್ಕಾರಕ್ಕೆ ಅವಮಾನದ ಬಗ್ಗೆ ಗೊತ್ತೇ ಇಲ್ಲ ಅಂತ ಕಾಣುತ್ತೆ..ಆದ್ರೆ..ಅವಮಾನ ಇಲಾಕೆ ಸಲಾಕೇಲಿ ಚಿಚ್ಚಿದ ಆಗೆ ಏಳಿದೆ ಸರ್ಕಾರಕ್ಕೆ..ನಮ್ಮ ರಾಜ್ಯದ ಅವಮಾನದಲ್ಲಿ ಏರು ಪೇರು ಇರುತ್ತೆ..ನಿರೀಕ್ಷೆಗೂ ಮೀರಿ ಮಲೆಯಾಗುವ ಸಾದ್ಯತೆ ಇದೆ ಅಂತ.......ವಗೈರೆ..ವಗೈರೆ...ಉದ್ದಕ್ಕೂ ಅವಮಾನ..ಅವಮಾನ ಇಲಾಕೆ ಅಂತನೇ ಹೇಳ್ತಿದ್ರು...
    ಪ್ರಸಾರವಾಗೋ ಕನ್ನಡವೂ ಇಷ್ಟೊಂದು ಅಪಭ್ರಂಶವಾದರೆ..ನಮ್ಮ --ಅಕ್ಕ-ಪಕ್ಕ-ಕೆಳಗಿನವರು..ಕೇಕೆ ಹಾಕಿ ನಗೋದಂತು ಖಂಡಿತ..

    ReplyDelete
  5. ha ha ha,, tumbaa chennagide jalanayana avare..ella kannada vaahinigalalloo kannadada kole dinanitya aaguttiruvudantoo nija..

    ReplyDelete
  6. ಚೇತನಾರಿಗೆ ಧನ್ಯವಾದಗಳು, ಹೀಗಿದ್ದರೂ ನಮ್ಮ ಕನ್ನಡ-ಪರ ಹೋರಾಟಗಾರರು ಆಸ್ತಿ-ಪಾಸ್ತಿ ನಷ್ಟ ಮಾಡುವಲ್ಲಿ ಹೆಚ್ಚು ಆಸಕ್ತಿ ತೋರುವರೇ ಹೊರತು..ಇಂತಹುದರ ಬಗ್ಗೆ ಸರ್ಕಾರದ ಗಮನ ಸೆಳೆಯಲು ವಿಫಲರಾಗಿದ್ದಾರೆ..

    ReplyDelete
  7. ಅವಮಾನ ಇಲಾಖೆ ಹೊಸದಾಗಿ ಶುರು ಆಗಿದೆಯಾ ಸರ್....
    ಮಗು ಇನ್ನಷ್ಟು ಪ್ರಶ್ನೆ ಕೇಳು ಕಂದ....
    ಚೆನ್ನಾಗಿದೆ...

    ReplyDelete
  8. ತುಂಬಾನೇ ಅತಿ ಇತ್ತು ಅವತ್ತು..ಆ ಮನುಷ್ಯನಿಗೆ...ಅವಮಾನವೇ ಆಗ್ಲಿಲ್ಲ ಅನ್ಸುತ್ತೆ...ಹಹಹ..
    ಇದು ಸುಮಾರು ಎಲ್ಲಾ ಚಾನಲ್ ನಲ್ಲೂ ಇದೆ...ಪಿಡುಗು..ಇಂಥವರಿದ್ದರೆ..ಮಗು ಏನು ನಾವು ಕೇಳ್ಬೇಕಾಗಬಹುದು...ಅವ್ಮಾನ ಇಲಾಖೆ ಅಂತ ಹೊಸದಾಗಿ ಪ್ರಾರಂಭಿಸಿದ್ದಾರಂತಲ್ಲಾ ಅದು ಎಲ್ಲಿದೆ? ಅಂತ ...ಹಹಹ

    ReplyDelete
  9. ಜಲನಯನ,
    ಈ ಸಲದ ‘ಗೊತ್ತಿಲ್ಲ ಮಗು’ ಓದಿದಾಗ, ಮುಗುಳುನಗೆ ಹಾಗು ಕಣ್ಣೀರು ಜೊತೆಯಾಗಿಯೇ ಬಂದವು. ಕೈಲಾಸಂ ಬರೆದ ಹಾಗು ರಾಜರತ್ನಂ ಅನುವಾದಿಸಿದ ಪುಟ್ಟ ಕವನವೊಂದು ನೆನಪಿಗೆ ಬಂದಿತು:
    "ಕಿರಿಯಾಳದ ನಗೆನೀರಿನ ಮೇಲೆ
    ತಿರುಗಾಡುತ ಬಹು ವೇಳೆ
    ಕಣ್ಣೀರಿನ ಕಡಲಿನ ಪಾಲು
    ಹಾಸ್ಯದ ಹರಿಗೋಲು"

    ReplyDelete
  10. ಸುನಾಥ್ ಸರ್, ಆ ದಿನದ ಟಿ.ವಿ. ಸಂದರ್ಶನ ನೋಡಿದೆ..ನಮ್ಮ ಸಚಿವರು ನೀಡಿತ್ತಿದ್ದ ಉತ್ತರ...ನಾಚಿಕೆಗೇಡು...ಹವಾಮಾನ ಇಲಾಖೆ ಇಪ್ಪತ್ತೇಳರಿಂದಲೇ ಮುನ್ನೆಚ್ಚರಿಕೆ ಕೊಡು ತ್ತಾ ಬಂದಿದೆಯಂತೆ...ಆದರೆ ಸಚಿವರು...ಅವರು ಮುನ್ನೆಚ್ಚ್ರಿಕೆ ಕೊಟ್ರು...ಆದರೆ ಎಲ್ಲಿ ಎಷ್ಟೆಷ್ಟು ಬರುತ್ತೆ ಅಂತ ನಿಖರವಾಗಿ ಹೇಳ್ಲಿಲ್ಲ..!!! ಇದು ಯಾವ ವೈಜ್ಜಾನಿಕವಾಗಿ ಮುಂದುವರೆದ ದೇಶದಲ್ಲಿ ಸಾಧ್ಯವಿಲ್ಲದ್ದು...ನಿಮ್ಮ ಮಾತು ನಿಜ...ನಮಗೆ ನಮ್ಮ ಕಣ್ಣೀರಿನಲ್ಲಿ ನಗುವನ್ನು ಕಂಡುಕೊಳ್ಳಬೇಕೋ..ನಗುವಿನಲ್ಲಿ ಕಣ್ಣೀರನ್ನೋ ಅರಿಯಲಾಗದ ಅಯೋಮಯದಲ್ಲಿದ್ದೇವೆ....

    ReplyDelete
  11. ಹೋಮ ಹವನಗಳನ್ನು ಮಾಡಿ ಮಳೆ ಕರೆದಿದ್ದು ಸ್ವಲ್ಪ್ ಜಾಸ್ತಿಯೇ ಆಯಿತೇನೊ ಅನ್ನೊ ಹಾಗೆ ಆಗಿದೆ ಎನ್ ಮಾಡೊದು, ಅವಮಾನ ಬಗೆಗಿನ ಪ್ರಶ್ನೇ ಬಹಳೆ ಚೆನ್ನಾಗಿತ್ತು.

    ReplyDelete
  12. ಅವಮಾನ ಇಲಾಖೆ ಬಗ್ಗೆ ನಮ್ಮ ಪುಢಾರಿ ಗಳಿಗೆ ಗೊತ್ತಾಗೋದು ಬೇಡ ಮಾರಾಯ್ರೇ...
    ಮತ್ತೆ ಅವರೆಲ್ಲ ಆಮೇಲೆ ಆ ಇಲಾಖೆ ತನಗೇ ಬೇಕಂತ ಪಟ್ಟು ಹಿಡದ್ರೆ..??
    ಚೆನ್ನಾಗಿದೆ... ಮಗು ಕೇಳೋ ಪ್ರಶ್ನೆಗೆ ಉತ್ತರಿಸೋದು ಕಷ್ಟ... :D

    ReplyDelete
  13. ಪ್ರಭು ನಮ್ಮ ಅರಣ್ಯಪ್ರದೇಶದ ವಿಸ್ತೀರ್ಣ ಮತ್ತು ಗುಣಮಟ್ತದ ಕುಸಿತದ ಪರಿಣಾಮ...ಅರಣ್ಯಗಳು ಮಳೆಯ ಮೇಲೆ ನಮ್ಮ ಊಹೆಗೂ ನಿಲುಕದ ನಿಯಂತ್ರಣ ಹೊಂದಿವೆ. ಮೊದಲಿಗೆ ಕಾಲ-ಕಾಲಕ್ಕೆ ಮಳೆಗೆ ಅನುಕೂಲ ಎರಡನೇದಾಗಿ ಬಿದ್ದ ಮಳೆ ಸಸ್ಯ ಸಂಕುಲಕ್ಕೆ, ಅದರ ಬೇರುಗಳ ಮೂಲಕ ಆಂತರ್ಜಲಕ್ಕೆ, ಹಾಗೇ ಹರಿವ ರಭಸವನ್ನು ಹಿಡಿದಿಡಲು ಅಥವಾ ನಿಯಂತ್ರಿಸಲು ಇವು ಸಹಕಾರಿ...
    ನಿಮ್ಮ ಅನಿಸಿಕೆಗೆ ಧನ್ಯವಾದ

    ReplyDelete
  14. ದಿಲೀಪ್, ನನಗೆ ಗೊತ್ತಿಲ್ಲ ಮಗುಗೆ..ಪ್ರೇರಣೆ ನಾನು ವ್ಯಾಸಂಗದಲ್ಲಿದ್ದಾಗ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಬರುತ್ತಿದ್ದ I dont know son. ಅದು ನಿಜಕ್ಕೂ ನಮ್ಮಲ್ಲಿ ಕೆಲವೊಮ್ಮೆ ಮೂಡುವ ನಂಗೊತ್ತಿಲ್ಲ ಎನ್ನುವುದರ ಹಿನ್ನೆಲೆಗೆ ನಮ್ಮನ್ನು ತಳ್ಳಿ ಏಕೆ ಹೀಗೆ? ಎನ್ನುವಂತೆ ಮಾಡುತ್ತವೆ. ಧನ್ಯವಾದ

    ReplyDelete
  15. ಆಜಾದ್ ಸರ್,

    ಗೊತ್ತಿಲ್ಲ ಮಗು ಏಕೆ ಕೆಲವು ದಿನ ಕಾಣೆಯಾಗಿತ್ತು ಅಂದುಕೊಂಡಿದ್ದೆ. ಪ್ರತಿಯೊಬ್ಬರ ಬ್ಲಾಗಿನಲ್ಲೂ ಅವರದೇ ಆದ ಬಾಣವಿರುತ್ತೆ. ಇದು ನಿಮ್ಮ ಬಾಣ. ನಿಮ್ಮ ಬತ್ತಳಿಕೆಯಿಂದ ಹೊಸ ವಿಚಾರಗಳ ಸಾಣೆಯಿಡಿಸಿ ಬಿಡುತ್ತಿರಬೇಕು ಸರ್.
    ನಿಮ್ಮ ಗೊತ್ತಿಲ್ಲ ಮಗು ಓದಲು ನಾನು ಸದಾ ಕಾಯುತ್ತೇನೆ.
    ಧನ್ಯವಾದಗಳು.

    ReplyDelete
  16. ನಿಮ್ಮಂತಹ ಗೆಳೆಯರು ಮತ್ತು ಬೆನ್ನು ತಟ್ಟುವವರು ಇರುವುದರಿಂದಲೇ ನಾನು ಬ್ಲಾಗು ಲೋಕಕ್ಕೆ ಬಂದದ್ದು...ಧನ್ಯವಾದ

    ReplyDelete
  17. wah kyaa baat hai Azad bhaiyya
    Really good
    :-)
    malathi S

    ReplyDelete